ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ವಿಶ್ವದ ಅತಿದೊಡ್ಡ ರೈಲ್ವೇ ಮಾರ್ಗಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ನಿತ್ಯ ಕೋಟ್ಯಾಂತರ ಜನರು ಭಾರತೀಯ ರೈಲ್ವೇ ಸೇವೆಯನ್ನು ಪಡೆಯುತ್ತಿದ್ದಾರೆ. ಜೊತೆಗೆ ಲಕ್ಷಾಂತರ ಮಂದಿಗೆ ರೈಲ್ವೇ ಇಲಾಖೆ ಉದ್ಯೋಗ ಕಲ್ಪಿಸಿದೆ. ಆದರೆ ರೈಲ್ವೇ ಇಲಾಖೆಯು ಸ್ಟೇಷನ್‌ಗಳಲ್ಲಿ ಆಯಾ ಊರುಗಳ ಹೆಸರುಗಳನ್ನು ಹಳದಿ ಬೋರ್ಡ್‌ನಲ್ಲೇ ಬರಿಯಲು ಕಾರಣ ನಿಮಗೆ ಗೊತ್ತಾ?

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ಹಾಗಾಗದರೆ ಬನ್ನಿ ಹಳದಿ ಬೋರ್ಡ್‌ಗಳ ಹಿಂದೆ ಅಡಗಿರುವ ಕುತೂಹಲಕಾರಿ ಮಾಹಿತಿಯನ್ನು ನಾವು ತಿಳಿಸಿಕೊಡುತ್ತೇವೆ. ಭಾರತೀಯ ರೈಲ್ವೇಯು ಏಷ್ಯಾ ಖಂಡದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದೆ. ಭಾರತದಾದ್ಯಂತ ಪ್ರತಿದಿನ ಸಾವಿರಾರು ರೈಲುಗಳು ಓಡುತ್ತವೆ. ಈ ರೈಲುಗಳಲ್ಲಿ ಕೋಟ್ಯಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ.

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ಭಾರತದಾದ್ಯಂತ 7,000ಕ್ಕೂ ಹೆಚ್ಚು ರೈಲು ನಿಲ್ದಾಣಗಳಿವೆ. ಈ ಎಲ್ಲಾ ರೈಲು ನಿಲ್ದಾಣಗಳಲ್ಲಿ ಸಾಮ್ಯತೆ ಇರುವುದನ್ನು ನೀವು ಗಮನಿಸಿರಬಹುದು. ಆ ಸಾಮ್ಯತೆ ಏನೆಂದರೆ ಎಲ್ಲಾ ರೈಲು ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ನ ಮೇಲೆ ಕಪ್ಪು ಅಕ್ಷರಗಳಲ್ಲಿ ಸಂಬಂಧಪಟ್ಟ ರೈಲು ನಿಲ್ದಾಣಗಳ ಹೆಸರುಗಳನ್ನು ಬರೆಯಲಾಗಿರುತ್ತದೆ. ಇದನ್ನು ನಾವು ಭಾರತದ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲೂ ಕಾಣಬಹುದು.

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ನೀವು ಆಗಾಗ್ಗೆ ರೈಲುಗಳಲ್ಲಿ ಪ್ರಯಾಣಿಸುವವರಾಗಿರಲಿ ಅಥವಾ ಸಾಂದರ್ಭಿಕ ಪ್ರಯಾಣಿಕರಾಗಿರಲಿ, ಹಳದಿ ಬೋರ್ಡ್‌ನಲ್ಲಿ ರೈಲ್ವೆ ನಿಲ್ದಾಣದ ಹೆಸರನ್ನು ಬರೆದಿರುವುದನ್ನು ನೀವು ಗಮನಿಸಿರಬಹುದು. ಹಾಗಾದರೆ ಎಲ್ಲಾ ರೈಲು ನಿಲ್ದಾಣಗಳಲ್ಲಿ ಹಳದಿ ಬೋರ್ಡ್ ಮೇಲೆಯೇ ಬರೆಯಲು ಕಾರಣವೇನು? ಎಂಬ ಅನುಮಾನ ನಿಮಗಿರಬಹುದು.

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ಇದರ ಹಿಂದಿನ ಕಾರಣವೇನೆಂದರೆ ಹಳದಿ ಸೂರ್ಯನ ಪ್ರಕಾಶಮಾನವಾದ ಬೆಳಕನ್ನು ಆಧರಿಸಿದೆ. ಜೊತೆಗೆ ಆದರ ಶಕ್ತಿಯೊಂದಿಗೆ ಹಳದಿ ಬಣ್ಣಕ್ಕೂ ಸಾಮ್ಯತೆ ಇದೆ. ಹಳದಿ ಕೂಡ ಸಂತೋಷ ಮತ್ತು ಜಾಣ್ಮೆಗೆ ಪ್ರತೀಕವಾಗಿರುತ್ತದೆ. ಜನನಿಬಿಡ ಪ್ರದೇಶಗಳಲ್ಲಿ, ಹಳದಿ ಹಿನ್ನೆಲೆಯು ಇತರ ಬಣ್ಣಗಳಿಗೆ ಹೋಲಿಸಿದರೆ ಉತ್ತಮವಾಗಿ ಕಾಣುತ್ತದೆ.

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ಅಂದರೆ ಹಳದಿ ಹಿನ್ನೆಲೆಯಲ್ಲಿ ಕಪ್ಪು ಬಣ್ಣ ಎದ್ದು ಕಾಣುವುದರಿಂದ ನೋಡುಗರಿಗೆ ಸುಲಭವಾಗಿ ಅಕ್ಷರಗಳು ಗೋಚರವಾಗುತ್ತವೆ, ಬರಿಗಣ್ಣಿಗೆ ಸುಲಭವಾಗಿ ಗೋಚರಿಸುತ್ತದೆ. ದೂರದಿಂದಲೂ ಸ್ಪಷ್ಟವಾಗಿ ಕಾಣುತ್ತದೆ. ಹಳದಿ ಬೋರ್ಡ್‌ನಲ್ಲಿ ರೈಲ್ವೆ ನಿಲ್ದಾಣಗಳ ಹೆಸರನ್ನು ಕಪ್ಪು ಅಕ್ಷರಗಳಲ್ಲಿ ಬರೆಯಲು ಇದು ಮುಖ್ಯ ಕಾರಣವಾಗಿದೆ.

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ಸಾಮಾನ್ಯವಾಗಿ ಹಳದಿ ಬಣ್ಣವು ತುಂಬಾ ಪ್ರಕಾಶಮಾನವಾಗಿರುತ್ತದೆ. ದೂರದಿಂದ ನೋಡಿದಾಗಲೂ ಈ ಬಣ್ಣವು ರೈಲು ಲೋಕೋ ಪೈಲಟ್‌ಗಳಿಗೆ, ಅಂದರೆ ರೈಲು ಚಾಲಕರಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ರೈಲುಗಳ ಲೋಕೋ ಪೈಲಟ್‌ಗಳು ದೂರದಿಂದಲೇ ತಿಳಿಯುವುದರಿಂದ ಬಹಳ ಜಾಗರೂಕತೆಯಿಂದ ಕಾರ್ಯನಿರ್ವಹಿಸಬಹುದು.

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ಸಾಮಾನ್ಯವಾಗಿ ಎಲ್ಲಾ ರೈಲು ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ರೈಲುಗಳು ಕೆಲವು ರೈಲು ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತವೆ. ಈ ಹಳದಿ ಹಿನ್ನೆಲೆಯಲ್ಲಿ ಕಪ್ಪು ಬಣ್ಣದಲ್ಲಿ ಬರೆಯಲಾದ ಚಿಹ್ನೆಗಳು ಲೋಕೋ ಪೈಲಟ್‌ಗಳಿಗೆ ತಡೆರಹಿತ ರೈಲು ನಿಲ್ದಾಣಗಳ ಪ್ರವೇಶದಿಂದ ನಿರ್ಗಮಿಸುವವರೆಗೆ ಹಾರ್ನ್ ಮಾಡಲು ಸಹಾಯ ಮಾಡುತ್ತದೆ.

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ಇದು ಸಂಬಂಧಪಟ್ಟ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಸೇರಿದಂತೆ ಎಲ್ಲರಿಗೂ ಎಚ್ಚರಿಕೆ ನೀಡುತ್ತದೆ. ಲೋಕೋ ಪೈಲಟ್‌ಗಳು ರೈಲು ನಿಲ್ದಾಣವನ್ನು ದಾಟುವಾಗ ಜಾಗರೂಕತೆಯಿಂದ ವರ್ತಿಸಲು ಸಾಧ್ಯವಾಗುತ್ತದೆ, ಏಕೆಂದರೆ ಹಳದಿ ಬಣ್ಣವು ದೂರದಿಂದ ಕಾಣುತ್ತದೆ. ಈ ಬಣ್ಣದ ಸಂಯೋಜನೆಯು ಪೈಲಟ್‌ಗಳಿಗೆ ಮಾತ್ರವಲ್ಲದೆ ಪ್ರಯಾಣಿಕರಿಗೂ ಸಾಕಷ್ಟು ಸಹಾಯ ಮಾಡುತ್ತದೆ.

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ರೈಲು ಸಾಮಾನ್ಯವಾಗಿ ಯಾವ ರೈಲು ನಿಲ್ದಾಣದಲ್ಲಿ ನಿಂತಿದೆ? ಎಂಬ ಗೊಂದಲ ಹಲವರಿಗೆ ಮಾಮೂಲು. ಹಳದಿ ಹಿನ್ನೆಲೆಯಲ್ಲಿ ಕಪ್ಪು ಬಣ್ಣದಲ್ಲಿ ಬರೆದ ಬೋರ್ಡ್‌ಗಳು ಈ ಗೊಂದಲವನ್ನು ನಿವಾರಿಸಲು ಸಹಾಯ ಮಾಡುತ್ತವೆ. ಈ ಅನುಭವ ನಿಮ್ಮಲ್ಲಿ ಹಲವರಿಗೆ ಆಗಿರಬಹುದು, ದೂರದಿಂದಲೇ ತಿಳಿಯುವುದರಿಂದ ಪ್ರಯಾಣಿಕರು ಆರಾಮವಾಗಿ ಇಳಿಯಬಹುದು.

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ಇಂದು ರೈಲುಗಳು ಎಲ್ಲಿಗೆ ಹೋಗುತ್ತಿವೆ? ಇದು ಯಾವ ರೈಲು ನಿಲ್ದಾಣದಲ್ಲಿದೆ? ಕಂಡುಹಿಡಿಯಲು ಸಾಕಷ್ಟು ತಾಂತ್ರಿಕ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ಆದರೂ ಈ ತಂತ್ರಜ್ಞಾನಗಳ ಪರಿಚಯವಿಲ್ಲದ ಮತ್ತು ಅವುಗಳನ್ನು ಹೇಗೆ ಬಳಸಬೇಕೆಂದು ತಿಳಿದಿಲ್ಲದ ಅನೇಕ ಪ್ರಯಾಣಿಕರು ಇನ್ನೂ ಇದ್ದಾರೆ. ಅವರಿಗೆಲ್ಲ ಈ ಹಳದಿ ಬೋರ್ಡ್‌ಗಳೇ ಸಹಕಾರಿಯಾಗಿರುತ್ತವೆ.

ರೈಲ್ವೇ ನಿಲ್ದಾಣಗಳಲ್ಲಿ ಹಳದಿ ಬೋರ್ಡ್‌ಗಳನ್ನೇ ಬಳಸುವ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ...

ಹಳದಿ ಬಣ್ಣವು ಕೆಂಪು ಬಣ್ಣದ ನಂತರ ಹೆಚ್ಚಿನ ತರಂಗಾಂತರವನ್ನು ಹೊಂದಿರುವ ಬಣ್ಣಗಳಲ್ಲಿ ಒಂದಾಗಿದೆ. ಹಾಗೆಯೇ ಮಳೆ ಮತ್ತು ಹಿಮದಂತಹ ಎಲ್ಲಾ ಸಂದರ್ಭಗಳಲ್ಲಿ ಹಳದಿ ಬಣ್ಣವನ್ನು ಸುಲಭವಾಗಿ ಗುರುತಿಸಬಹುದು. ಇಂತಹ ಕಾರಣಗಳಿಂದಲೇ ರೈಲ್ವೆ ನಿಲ್ದಾಣಗಳ ನಾಮಫಲಕಗಳನ್ನು ಹಳದಿ ಹಿನ್ನೆಲೆಯಲ್ಲಿ ಹಾಕಲಾಗಿದೆ.

Most Read Articles

Kannada
English summary
Interesting fact about railway station yellow boards
Story first published: Thursday, May 12, 2022, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X