ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ಫಾರ್ಮುಲಾ -1 ವಿಶ್ವದ ಪ್ರಮುಖ ಕಾರ್ ರೇಸ್ ಆಗಿದೆ. ಫಾರ್ಮುಲಾ -1 ಅನೇಕ ಸಾಧಕರನ್ನು ಕಂಡಿದೆ. ಆದರೆ ಕೆಲವರು ಮಾತ್ರ ಫಾರ್ಮುಲಾ -1ನ ಇತಿಹಾಸದಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಬಗ್ಗೆ ಹೇಳದೇ ಫಾರ್ಮುಲಾ -1 ಇತಿಹಾಸವನ್ನು ಬರೆಯಲು ಸಾಧ್ಯವಿಲ್ಲ.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ಎರಡನೇ ಮಹಾಯುದ್ಧದ ನಂತರ 1950ರಲ್ಲಿ ಪ್ರಾರಂಭವಾದ ಫಾರ್ಮುಲಾ -1 ರೇಸಿನಲ್ಲಿ ಭಾಗವಹಿಸುವುದು ವಿಶ್ವದ ಅನೇಕ ಕಾರು ರೇಸರ್ ಗಳ ಕನಸಾಗಿದೆ. ಫಾರ್ಮುಲಾ -1 ಸ್ಪರ್ಧೆಯ ಮೊದಲ ದಶಕವನ್ನು ನಿಯಂತ್ರಿಸಿದ ಆಟಗಾರನೆಂದರೆ ಜುವಾನ್ ಮ್ಯಾನುಯೆಲ್ ಫ್ಯಾಂಜಿಯೊ. ಫಾರ್ಮುಲಾ -1ನ ಅತ್ಯುತ್ತಮ ಸಾಧಕರಲ್ಲಿ ಒಬ್ಬರೆಂದು ಕರೆಯಲಾಗುವ ಫ್ಯಾಂಜಿಯೊರವರ ಬಗೆಗಿನ ಆಸಕ್ತಿದಾಯಕ ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ.

ಚಿತ್ರ ಕೃಪೆ:MVSRS/YouTube

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ಫ್ಯಾಂಜಿಯೊರವರು 1911ರಲ್ಲಿ ಅರ್ಜೆಂಟೀನಾದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ಅವರು ಓದಿನ ಜೊತೆಗೆ ಮೋಟಾರು ರೇಸಿಂಗ್ ಬಗ್ಗೆ ಉತ್ಸಾಹವನ್ನು ಹೊಂದಿದ್ದರು. ತಮ್ಮ 13ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದು ಆಟೋ ಮೆಕ್ಯಾನಿಕ್‌ ಒಬ್ಬರ ಬಳಿ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಅವರು ಬೌಲಿಂಗ್‌ನಲ್ಲೂ ಆಸಕ್ತಿ ಹೊಂದಿದ್ದರು.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ಕಾರ್ ಮೆಕ್ಯಾನಿಕ್ ರವರ ಬಳಿ ಕೆಲಸಕ್ಕೆ ಸೇರಿದ ನಂತರ, ಕಾರುಗಳನ್ನು ಓಡಿಸಲು ಪ್ರಾರಂಭಿಸಿದರು. ಸರ್ಕಾರದ ನಿಯಮಾವಳಿಗಳ ಪ್ರಕಾರ ಕಡ್ಡಾಯವಾಗಿ ಮಿಲಿಟರಿ ಸೇರಬೇಕಾದ ಕಾರಣಕ್ಕೆ, ಅಲ್ಲಿ ತರಬೇತಿಗೆ ಸೇರಿಕೊಂಡರು. ಅಲ್ಲಿದ್ದ ಕಮಾಂಡರ್ ಒಬ್ಬರು ಫ್ಯಾಂಜಿಯೊರವರ ಡ್ರೈವಿಂಗ್ ಕೌಶಲ್ಯವನ್ನು ಮೆಚ್ಚಿಕೊಂಡರು. ಅಲ್ಲಿಂದ ಹೊರಬಂದ ನಂತರ ಸ್ಥಳೀಯ ಕಾರು ರೇಸ್‌ಗಳಲ್ಲಿ ತಮ್ಮದೇ ಆದ ಮೆಕ್ಯಾನಿಕ್ ಶೆಡ್ ಅನ್ನು ಆರಂಭಿಸಿದರು.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಥಳೀಯ ಸ್ಪರ್ಧೆಗಳಲ್ಲಿ ಭಾವಹಿಸಿದ ನಂತರ ರಾಷ್ಟ್ರೀಯ ಕಾರು ರೇಸ್‌ಗಳಲ್ಲಿ ಭಾಗವಹಿಸಲು ಆರಂಭಿಸಿದರು. ತಮ್ಮ ಅಸಾಧಾರಣ ಪ್ರತಿಭೆಯಿಂದಾಗಿ, 1940, 1941ರಲ್ಲಿ ಅರ್ಜೆಂಟೀನಾದ ರಾಷ್ಟ್ರೀಯ ಮೋಟಾರ್ ರೇಸ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಇದಾದ ನಂತರ ಬೇರೆ ಬೇರೆ ದೇಶದ ಮೋಟಾರ್ ರೇಸ್‌ಗಳಲ್ಲಿ ಭಾಗವಹಿಸಲು ಆರಂಭಿಸಿದರು. ಕೊನೆಗೆ ಸತತ ಪ್ರಯತ್ನದ ನಂತರ ಫಾರ್ಮುಲಾ -1 ಸ್ಪರ್ಧೆಯಲ್ಲಿ ಭಾಗವಹಿಸಿದರು.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ಟ್ರಾಕ್ ನಲ್ಲಿ ಫ್ಯಾಂಜಿಯೊರವರು ಸಹ ಆಟಗಾರರೊಂದಿಗೆ ಸ್ನೇಹದಿಂದ ಇರುತ್ತಿದ್ದರು. ಬೇರೆಯವರು ಗೆದ್ದಾಗ ಅದನ್ನು ಸಂಭ್ರಮಿಸುತ್ತಿದ್ದರು. ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದ ಫ್ಯಾಂಜಿಯೊರವರು ರೇಸಿಂಗ್ ಗೆ ಕಾಲಿಟ್ಟ ತಕ್ಷಣ ಎದುರಾಳಿಗಳಿಗೆ ಸಿಂಹಸ್ವಪ್ನವಾಗುತ್ತಿದ್ದರು.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

5 ಬಾರಿ ಫಾರ್ಮುಲಾ 1 ಚಾಂಪಿಯನ್

ಫಾರ್ಮುಲಾ 1 ರೇಸ್‌ಗಳಲ್ಲಿ ಮೈಕೆಲ್ ಷೂಮಾಕರ್ 7 ಬಾರಿಯ ಚಾಂಪಿಯನ್ ಆಗಿದ್ದರೆ, ಲೂಯಿಸ್ ಹ್ಯಾಮಿಲ್ಟನ್ 6 ಬಾರಿ ಚಾಂಪಿಯನ್ ಆಗಿದ್ದಾರೆ. ಇವರ ನಂತರ ಫ್ಯಾಂಜಿಯೊ 5 ಬಾರಿ ಚಾಂಪಿಯನ್ ಆಗಿದ್ದಾರೆ. ಫ್ಯಾಂಜಿಯೊರವರು 1951, 1954, 1955, 1956 ಹಾಗೂ 1957ರಲ್ಲಿ ಚಾಂಪಿಯನ್ ಆಗಿದ್ದರು. ಭಾಗವಹಿಸಿದ್ದ 51 ಸ್ಪರ್ಧೆಗಳಲ್ಲಿ 29 ಬಾರಿ ಗೆದ್ದಿದ್ದರು.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

1950ರಿಂದ 1960ರವರೆಗೆ ನಡೆದಿದ್ದ ಫಾರ್ಮುಲಾ 1 ರೇಸಿಂಗ್‌ನಲ್ಲಿ, ಈಗ ಇರುವಷ್ಟು ಸುರಕ್ಷತಾ ತಂತ್ರಜ್ಞಾನಗಳಾಗಲಿ, ಪ್ರೋಟೋಕಾಲ್‌ಗಳಾಗಲಿ ಇರಲಿಲ್ಲ. ಆ ಸಮಯದಲ್ಲಿ, ಫಾರ್ಮುಲಾ-1 ಪಂದ್ಯಗಳಲ್ಲಿ ಹೆಚ್ಚಿನ ಸಾವುನೋವುಗಳು ಉಂಟಾಗುತ್ತಿದ್ದವು. ಆದರೂ ಫ್ಯಾಂಜಿಯೊ ತಮ್ಮ ಅಭಿಮಾನಿಗಳು ಹಾಗೂ ಸಹ ಸ್ಪರ್ಧಿಗಳನ್ನು ತಮ್ಮ ಪ್ಯಾಶನ್ ನಿಂದಾಗಿ ರಂಜಿಸಿದ್ದರು.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ರೇಸಿಂಗ್ ಟ್ರಾಕ್ ನಲ್ಲಿ ಫ್ಯಾಂಜಿಯೊರವರು ತಮ್ಮ ವರ್ತನೆ ಹಾಗೂ ತಂತ್ರಗಳಿಂದ ಸಹ ಆಟಗಾರರು ಹಾಗೂ ಸ್ಪರ್ಧಿಗಳ ಮೇಲೆ ಪ್ರಭಾವವನ್ನು ಬೀರಿದ್ದರು. ಈ ಕಾರಣಕ್ಕೆ ಆಲ್ಫಾ ರೋಮಿಯೋ, ಮಾಸೆರೋಟಿ, ಮರ್ಸಿಡಿಸ್ ಬೆಂಜ್ ಹಾಗೂ ಫೆರಾರಿ ತಂಡಗಳು ಅವರನ್ನು ತಮ್ಮ ತಂಡದ ಪರವಾಗಿ ಕಣಕ್ಕಿಳಿಸಿದ್ದವು. ಭಾಗವಹಿಸಿದ ಪ್ರತಿ ತಂಡಕ್ಕೂ ವಿಶ್ವ ಚಾಂಪಿಯನ್ ಗೆದ್ದುಕೊಟ್ಟಿದ್ದರು. ಈ ಸಾಧನೆಯನ್ನು ಮೈಕೆಲ್ ಷೂಮಾಕರ್ ಹಾಗೂ ಹ್ಯಾಮಿಲ್ಟನ್ ಅವರಿಗಿಂತ ವಿಶಿಷ್ಟ ಸಾಧನೆ ಎಂದು ಪರಿಗಣಿಸಲಾಗಿದೆ.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ಅಪಹರಣ

ಫೆಬ್ರವರಿ 23, 1958ರಂದು, ಫಿಡೆಲ್ ಕ್ಯಾಸ್ಟ್ರೊ ನೇತೃತ್ವದಲ್ಲಿದ್ದ ಕ್ಯೂಬಾದ ಬಂಡಾಯ ಪಡೆಗಳು ಫ್ಯಾಂಜಿಯೊರವರನ್ನು ಅಪಹರಿಸಿದ್ದವು. ಆ ಸಮಯದಲ್ಲಿ ಇದೊಂದು ದೊಡ್ಡ ವಿಷಯವಾಗಿತ್ತು.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ನೆಚ್ಚಿನ ತಂಡ

ಮಾಸೆರೋಟಿ ತಮ್ಮ ನೆಚ್ಚಿನ ತಂಡವೆಂದು ಅವರು ಹೇಳಿದ್ದರು. ತನ್ನ ತಾಯಿ, ತಂದೆ ಹಾಗೂ ಆತ್ಮೀಯರ ಜೊತೆ ಕಾಲ ಕಳೆಯುವ ಉದ್ದೇಶದಿಂದ ಫಾರ್ಮುಲಾ -1ಗೆ ವಿದಾಯ ಹೇಳಿದರು. ನಿವೃತ್ತಿಯ ನಂತರ, ಮರ್ಸಿಡಿಸ್ ಬೆಂಜ್ ಕಾರು ಅವರಿಗೆ ಆತಿಥ್ಯ ವಹಿಸಿತ್ತು. ಫ್ಯಾಂಜಿಯೊರವರು ರೇಸ್ ಕಾರುಗಳನ್ನು ಪ್ರೇಕ್ಷಕರ ಮುಂದೆ ಓಡಿಸಿದ್ದರು, ಜೊತೆಗೆ ವಿಶೇಷ ಅತಿಥಿಯಾಗಿದ್ದರು. ಫ್ಯಾಂಜಿಯೊರವರು ಮದುವೆಯಾಗಿರಲಿಲ್ಲ. ಆದರೆ ಆಂಡ್ರಿಯಾ ಬೈರುತ್ ಎಂಬ ಮಹಿಳೆಯ ಜೊತೆಗೆ ರಿಲೇಷನ್ ನಲ್ಲಿದ್ದರು. ಅವರಿಗೆ ಒಬ್ಬ ಮಗನಿದ್ದನು. 1960ರಲ್ಲಿ, ಆಂಡ್ರಿಯಾ, ಫ್ಯಾಂಜಿಯೊರವರನ್ನು ಬಿಟ್ಟು ಹೋದರು.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ಕಾರು ಹರಾಜು

ಅವರ ಸಲಹೆಯ ಮೇರೆಗೆ ತಯಾರಿಸಲಾಗಿದ್ದ ಫೆರಾರಿ 290 ಎಂಎಂ ಕಾರನ್ನು ಕೆಲವು ವರ್ಷಗಳ ಹಿಂದೆ 185 ಕೋಟಿಗೆ ಹರಾಜು ಹಾಕಲಾಯಿತು. ಫಾರ್ಮುಲಾ 1 ಫ್ಯಾಂಜಿಯೊರವರ ಮೇಲೆ ಗೌರವವನ್ನು ಹೊಂದಿದೆ. ಅವರ ಪಂದ್ಯಗಳನ್ನು ನೋಡಿ ಜನರು ರೋಮಾಂಚನಗೊಂಡಿದ್ದರು. ಮೂತ್ರಪಿಂಡ ವೈಫಲ್ಯ ಹಾಗೂ ಜ್ವರದಿಂದಾಗಿ ಅವರು 1995ನೇ ಇಸವಿಯಲ್ಲಿ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು. 1954, 1955 ರಲ್ಲಿ ಫ್ಯಾಂಜಿಯೊರವರು ಬಳಸಿದ್ದ ಮರ್ಸಿಡಿಸ್ ಬೆಂಜ್ ಡಬ್ಲ್ಯು 196 ಆರ್ ರೇಸ್ ಕಾರ್ ಅನ್ನು 2013ರಲ್ಲಿ ಇಂಗ್ಲೆಂಡ್ ನಲ್ಲಿ ಹರಾಜು ಹಾಕಲಾಯಿತು.

ಚಿತ್ರ ಕೃಪೆ:Agridecumantes/Wiki Commons

ಫ್ಯಾಂಜಿಯೊರವರ ಸಾಧನೆಗಳ ನೆನಪುಗಳಿಗಾಗಿ ನಿರ್ಮಿಸಿರುವ 'ಎ ಲೈಫ್ ಆಫ್ ಸ್ಪೀಡ್' ಎಂಬ ಸಾಕ್ಷ್ಯಚಿತ್ರ ವೀಡಿಯೋ ನೆಟ್‌ಫ್ಲಿಕ್ಸ್ ಸೈಟ್‌ನಲ್ಲಿ ಲಭ್ಯವಿದೆ. ಈ ಸಾಕ್ಷ್ಯಚಿತ್ರವು ಫಾರ್ಮುಲಾ -1ನಲ್ಲಿ ಅವರ ಸಾಧನೆ ಬಗ್ಗೆ, ವಿಶ್ವದ ಪ್ರಮುಖ ಸೆಲೆಬ್ರಿಟಿಗಳು ಫ್ಯಾಂಜಿಯೊ ಅವರನ್ನು ರೇಸಿಂಗ್ ಹಾಗೂ ಅದರಲ್ಲಿನ ಸವಾಲುಗಳ ಬಗ್ಗೆ ಸಂದರ್ಶನ ಮಾಡುವ ಅಂಶಗಳನ್ನು ಹೊಂದಿದೆ.

ಫಾರ್ಮುಲಾ 1 ದಂತಕಥೆ ಫ್ಯಾಂಜಿಯೊ ಬಗ್ಗೆ ನಿಮಗೆಷ್ಟು ಗೊತ್ತು?

ಫಾರ್ಮುಲಾ -1 ಹಾಗೂ ಮೋಟಾರು ರೇಸಿಂಗ್ ಉತ್ಸಾಹಿಗಳಿಗಾಗಿ ಈ ಸಾಕ್ಷ್ಯಚಿತ್ರವು ಅದ್ಭುತವೆಂದು ಹೇಳಬಹುದು. ಲಾಕ್ ಡೌನ್ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಫ್ಯಾಂಜಿಯೊ ಅವರ ದಿ ಲೈಫ್ ಆಫ್ ಸ್ಪೀಡ್ ಡಾಕ್ಯುಮೆಂಟರಿ ಅತ್ಯುತ್ತಮವಾದ ಸಂಗತಿ ಹಾಗೂ ಭಾವನೆಗಳನ್ನು ನೀಡುವುದರಲ್ಲಿ ಸಂಶಯವಿಲ್ಲ.

ಚಿತ್ರ ಕೃಪೆ: ವೀಕಿ ಕಾಮನ್ಸ್

Most Read Articles

Kannada
English summary
Interesting facts about Formula 1 legend Juan Manuel Fangio. Read in Kannada.
Story first published: Wednesday, April 1, 2020, 11:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X