ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

By Nagaraja

ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ವಾಯುಪಡೆಯನ್ನು ಹೊಂದಿರುವ ಭಾರತೀಯ ವಾಯುಸೇನೆಯು 1932 ಅಕ್ಟೋಬರ್ 08ರಂದು ಅಸ್ತಿತ್ವಕ್ಕೆ ಬಂದಿತ್ತು. ಚೀನಾ, ಪಾಕಿಸ್ತಾನ ಸೇರಿದಂತೆ ಅನೇಕ ಯುದ್ಧಗಳಲ್ಲಿ ತನ್ನ ಬಲ ಪ್ರದರ್ಶನ ನಡೆಸಿರುವ ಭಾರತೀಯ ವಾಯುಸೇನೆ ಪ್ರಕೃತಿ ವಿಕೋಪಗಳಂತಹ ಅಪತ್ಕಾಲ ಪರಿಸ್ಥಿತಿಯಲ್ಲೂ ನೆರವಾಗಿದೆ. ಹೀಗೆ ಎಲ್ಲ ಹಂತದಲ್ಲೂ ಆಧುನಿಕ ಜಗತ್ತಿನಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ವಾಯುಪಡೆ ಎಂಬ ಪಟ್ಟ ಕಟ್ಟಿಕೊಂಡಿದೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಭಾರತೀಯ ವಾಯುಸೇನೆಯ ಮೊದಲ ಐದು ಪೈಲಟ್‍ಗಳು ಹೆ ಸಿ ಸರ್ಕಾರ್, ಸುಬ್ರೊತೊ ಮುಖರ್ಜಿ, ಭೂಪೇ೦ದ್ರ ಸಿ೦ಗ್, ಎ ಬ್ ಅವನ್ ಮತ್ತು ಅಮರ್ಜೀತ್ ಸಿ೦ಗ್ ಅವರಾಗಿದ್ದಾರೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಭಾರತೀಯ ವಾಯುಪಡೆಯ ಮೊದಲ 'ಚೀಫ್ ಆಫ್ ದಿ ಏರ್ ಸ್ಟಾಫ್' ಪದವಿಯನ್ನು ಏರ್ ಮಾರ್ಷಲ್ ಸುಬ್ರಟೊ ಮುಖರ್ಜಿ ಅವರು ಆಲಂಕರಿಸಿದ್ದರು. ಇವರನ್ನೇ 'ಭಾರತೀಯ ವಾಯುಪಡೆಯ ಜನಕ' ಎಂದು ಕರೆಯಲಾಗುತ್ತದೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಭಾರತೀಯ ವಾಯುಪಡೆ ದೇಶದ್ಯಾಂತ 60ಕ್ಕೂ ಹೆಚ್ಚು ವಾಯು ನೆಲೆಗಳನ್ನು ಹೊಂದಿದೆ. ಈ ಪೈಕಿ 16 ವಾಯು ನೆಲೆಗಳನ್ನು ಹೊಂದಿರುವ ಪಶ್ಚಿಮ ಏರ್ ಕಮಾಂಡ್ ದೇಶದ ಅತಿ ದೊಡ್ಡ ಏರ್ ಕಮಾಂಡ್ ಆಗಿದೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಭಾರತೀಯ ವಾಯುಪಡೆಯ ವಾಯು ನೆಲೆ ದೇಶದ ಹೊರಗೂ ಸ್ಥಿತಗೊಂಡಿದೆ ಎಂಬ ಸತ್ಯ ನಿಮಗೂ ಗೊತ್ತಿರಲಾರದು. ತಜಕಿಸ್ತಾನದ ಫಾರ್ಕೋರ್ ಪ್ರದೇಶದಲ್ಲೂ ವಾಯು ನೆಲೆ ಹೊಂದಿದೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಗ್ಲೇಸಿಯರ್ ಭಾರತೀಯ ವಾಯುಸೇನೆಯ ಅತ್ಯಂತ ಎತ್ತರದ ವಾಯುನೆಲೆಯಾಗಿದೆ. ಇದು ಸಮುದ್ರ ಮಟ್ಟಕ್ಕಿಂತ 22,000 ಅಡಿ (6,706 ಮೀಟರ್) ಎತ್ತರದಲ್ಲಿ ಸ್ಥಿತಗೊಂಡಿದೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

1945ರಿಂದ 1950ರ ವರೆಗೆ ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂಬುದಾಗಿ ಗುರುತಿಸಿಕೊಂಡಿದ್ದ ಭಾರತೀಯ ವಾಯುಸೇನೆ ಭಾರತದ ಗಣರಾಜ್ಯೋತ್ಸದ ಬಳಿಕ ಇಂಡಿಯನ್ ಏರ್ ಫೋರ್ಸ್ ಎಂಬುದಾಗಿ ಪರಿವರ್ತನೆಗೊಂಡಿತ್ತು.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಎರಡನೇ ವಿಶ್ವ ಮಹಾಯುದ್ಧದಲ್ಲಿ ಅತಿ ದೊಡ್ಡ ಸ್ವಯಂಸೇವ ಪಡೆಯಾಗಿ ಭಾರತೀಯ ಸೈನ್ಯ ಭಾಗವಹಿಸಿತ್ತು. ಈ ಯುದ್ಧದಲ್ಲಿ ಭಾರತೀಯ ವಾಯುಸೇನೆಯೂ ಪಾಲ್ಗೊಂಡಿತ್ತು.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಭಾರತೀಯ ವಾಯುಪಡೆಯ ಬಾವುಟವನ್ನು 1951ರಲ್ಲಿ ರಚಿಸಲಾಗಿತ್ತು. ಆಕಾಶ ನೀಲಿ ಬಣ್ಣದಲ್ಲಿ ಭಾರತೀಯ ಧ್ವಜ ಇರಲಿದ್ದು, ಮತ್ತೊಂದು ಕಡೆ ವೃತ್ತಕಾರದಲ್ಲಿ ರಾಷ್ಟ್ರೀಯ ಧ್ವಜದ ಬಣ್ಣಗಳು ಕಾಣಿಸಲಿದೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಇದರ ಹೊರತಾಗಿ ಅಶೋಶ ಸ್ತಂಭ, ಗರುಡ ಒಳಗೊಂಡ ಲಾಂಛನವನ್ನು ಹೊಂದಿದ್ದು, ವಾಯುಸೇನೆಯನ್ನು ವಿಶಿಷ್ಟ ರಚನೆ ಹಾಗೂ ಘಟಕವನ್ನು ಗುರುತಿಸಲು ಇದನ್ನು ರಚಿಸಲಾಗಿದೆ. ಇದು ಶ್ರೇಷ್ಠ ಐತಿಹಾಸಿಕ ಮತ್ತು ಭಾವನಾತ್ಮಕ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ಯೋಧರಿಗೆ ಪ್ರೋತ್ಸಾಹ ಹಾಗೂ ಸ್ಪೂರ್ತಿಯನ್ನು ತುಂಬುತ್ತದೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಭಾರತೀಯ ವಾಯು ಸೇನೆಯು "ನಭ ಸ್ಪರ್ಶಂ ದೀಪ್ತಂ" (Touch the Sky with Glory) ಎಂಬ ಧ್ಯೇಯೋಕ್ತಿಯನ್ನು ಹೊಂದಿದೆ. ಇದನ್ನು ಭವದ್ಗೀತೆಯ ಏಳನೇ ಅಧ್ಯಾಯದಿಂದ ತೆಗೆಯಲಾಗಿದೆ. ಗೀತೆಯಲ್ಲಿ ಹೇಗೆ ಭಗವಾನ್ ಶ್ರೀಕೃಷ್ಣನು ತನ್ನ ಸರ್ವೋಚ್ಛ ದೈವಿಕ ರೂಪವನ್ನು ಅರ್ಜುನನಿಗೆ ತೋರಿಸುತ್ತಾನೋ ಅದೇ ರೀತಿ ಭಾರತೀಯ ವಾಯು ಸೇನೆಯು ರಾಷ್ಟ್ರದ ರಕ್ಷಣೆಗಾಗಿ ಎದುರಾಳಿಗಳನ್ನು ನಾಶ ಪಡಿಸಲಿದೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಭಾರತೀಯ ವಾಯುಸೇನೆಯ ಸಂಗ್ರಹಾಲಯವು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿದೆ. ಇಲ್ಲಿ ಭಾರತೀಯ ವೈಮಾನಿಕ ಪಡೆಯ ಹಳೆಯ ವಿಮಾನ ಹಾಗೂ ಯುದ್ಧ ಸಾಮಾಗ್ರಿಗಳಿದ್ದು, ಚರಿತ್ರೆಯನ್ನು ಮೆಲುಕು ಹಾಕಬಹುದಾಗಿದೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ರಾಷ್ಟ್ರಪತಿಯು ಭಾರತೀಯ ವಾಯುಸೇನೆ ಸೇರಿದಂತೆ ಎಲ್ಲ ಸೇನೆಗೂ ಸುಪ್ರೀಂ ಕಮಾಂಡರ್ (ಕಮಾಂಡರ್-ಇನ್-ಚೀಫ್) ಆಗಿರುತ್ತಾರೆ. ಇದರ ಕೆಳಗಡೆ ಏರ್ ಚೀಫ್ ಮಾರ್ಷಲ್ ಭಾರತೀಯ ವಾಯುಸೇನೆಯ ಪರಮೋಚ್ಛ ಕರ್ತವ್ಯವನ್ನು ನಿಭಾಯಿಸುತ್ತಾರೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಏರ್ ಚೀಫ್ ಮಾರ್ಷಲ್ (ಎಸಿಎಂ) ಭಾರತೀಯ ವಾಯುಪಡೆಯ ನಾಲ್ಕು ತಾರೆಗಳ ಪದವಿಯನ್ನು ಆಲಂಕರಿಸುತ್ತಾರೆ. ಆದರೆ 2002ರಲ್ಲಿ ರಾಷ್ಟ್ರಪತಿ ಅವರಿಂದ ಮಾರ್ಷಲ್ ಆಫ್ ದಿ ಏರ್ ಫೋರ್ಸ್ ರಾಂಕ್‌ಗೆ ಪಾತ್ರವಾಗಿರುವ ಅರ್ಜನ್ ಸಿಂಗ್, ಫೈವ್ ಸ್ಟಾರ್ ರಾಂಕ್ ಗೌರವಕ್ಕೆ ಪಾತ್ರವಾಗಿರುವ ಏಕಮಾತ್ರ ಐಎಎಫ್ ಅಧಿಕಾರಿಯಾಗಿದ್ದಾರೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

1947ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಭಾರತೀಯ ವಾಯುಪಡೆಯು ಇದುವರೆಗೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 1940ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿಟ್ ಸಿಂಗ್ ಸೆಖೋನ್ ಅವರು ದೇಶದ ಸೇನಾ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿ 'ಪರಮ ವೀರ ಚಕ್ರ' ಗೌರವಾನ್ವಿತ ಪದವಿಗೆ ಭಾಜನರಾದ ಭಾರತೀಯ ವಾಯುಪಡೆಯ ಏಕಮಾತ್ರ ಅಧಿಕಾರಿಯಾಗಿದ್ದಾರೆ.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಪದ್ಮಾವತಿ ಬಂಧೋಪಾದ್ಯಾಯ ಅವರು ಭಾರತೀಯ ವಾಯುಪಡೆಯ ಮೊದಲ ಮಹಿಳಾ ಏರ್ ಮಾರ್ಷಲ್ ಪದವಿ ಆಲಂಕರಿಸಿದ್ದರು.

ಭಾರತೀಯ ವಾಯುಪಡೆಯ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾದ ರೋಮಾಂಚಕ ಸತ್ಯಗಳು!

ಏರ್ ಮಾರ್ಷಲ್ ಸರ್ ಥಾಮಸ್ ಎಲ್ಮಿರ್ಸ್ಟ್ (Elmhirst) ಅವರು ಮೊದಲ ಕಮಾಂಡರ್ ಇನ್ ಚೀಫ್ ಆಗಿದ್ದಾರೆ. ಅವರು 1947 ಅಗಸ್ಟ್ 15ರಿಂದ 1950 ಫೆಬ್ರವರಿ 21ರ ವರೆಗೆ ಸೇವೆ ಸಲ್ಲಿಸಿದ್ದರು.

More from DriveSpark

Article Published On: Saturday, October 8, 2016, 14:47 [IST]
English summary
Interesting Facts About Indian Air Force
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+