ಹೈ ಸ್ಪೀಡ್ ರೈಲು ಎಂಜಿನ್ - ಲೋಕೋಮೋಟಿವ್ ವ್ಯಾಪ್ 7
ಟನ್ ಗಟ್ಟಲೆ ಭಾರದ ಗುಜು ಗುಜು ಬಂಡಿಯನ್ನು ಸ್ಥಳದಿಂದ ಸ್ಥಳಕ್ಕೆ ಚಲಿಸುವುದರಲ್ಲಿ ರೈಲ್ವೆ ಲೋಕೋಮೋಟಿವ್ ಎಂಜಿನ್ ಗಳ ಪಾತ್ರ ನಿರ್ಣಾಯಕವೆನಿಸುತ್ತದೆ. ಕಾಲಕ್ರಮೇಣ ಲೋಕೋವೋಟಿವ್ ಎಂಜಿನ್ ಗಳಲ್ಲೂ ಗಮನಾರ್ಹ ಬದಲಾವಣಗಳು ಕಂಡುಬಂದಿವೆ.
ಲ್ಯಾಟಿನ್ ಪದವಾದ 'ಲೋಕೋ' ಮತ್ತು 'ಮೋಟಿವಸ್' ಎಂಬುದರಿಂದ ಲೋಕೋವೋಟಿವ್ ಉದಯಿಸಿದೆ. ಇಲ್ಲಿ ಲೋಕೋ ಅಂದರೆ 'ಒಂದು ಸ್ಥಳದಿಂದ' ಮತ್ತು ಮೋಟಿವಸ್ ಎಂಬುದು 'ಚಲನೆಯ ಕಾರಣ' ಎಂಬ ಅರ್ಥವನ್ನು ನೀಡುತ್ತದೆ. ಈ ಪದ 19ನೇ ಶತಮಾನದಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದಿತ್ತು.

ವ್ಯಾಪ್ 7 (WAP 7) ಪಶ್ಚಿಮ ಬಂಗಾಳದ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ ಅಭಿವೃದ್ಧಿಪಡಿಸಿದ ಹೈ ಸ್ಪೀಡ್ ಲೋಕೋಮೋಟಿವ್ ಎಂಜಿನ್ ಆಗಿದೆ.

ವ್ಯಾಪ್ 7 (WAP 7) ಪಶ್ಚಿಮ ಬಂಗಾಳದ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ ಅಭಿವೃದ್ಧಿಪಡಿಸಿದ ಹೈ ಸ್ಪೀಡ್ ಲೋಕೋಮೋಟಿವ್ ಎಂಜಿನ್ ಆಗಿದೆ.

ಉತ್ತರ ರೈಲ್ವೆ, ದಕ್ಷಿಣ ಕೇಂದ್ರ ರೈಲ್ವೆ, ದಕ್ಷಿಣ ರೈಲ್ವೆ, ಪೂರ್ವ ರೈಲ್ವೆ, ದಕ್ಷಿಣ ಪೂರ್ವ ಕೇಂದ್ರ ರೈಲ್ವೆ, ಕೇಂದ್ರ ರೈಲ್ವೆ ಹಾಗೂ ಪಶ್ಚಿಮ ಕೆಂದ್ರ ರೈಲ್ವೆಗಳು ವ್ಯಾಪ್ 7 ಲೋಕೋಮೋಟಿವ್ ಎಂಜಿನ್ ಗಳ ಸೇವೆಯನ್ನು ಬಳಕೆ ಮಾಡುತ್ತಿದೆ.

2015 ಸೆಪ್ಟೆಂಬರ್ ಲೆಕ್ಕಾಚಾರದ ಪ್ರಕಾರ 236 ಲೋಕೋಮೋಟಿವ್ ಎಂಜಿನ್ ಗಳು ಸೇವೆಯಲ್ಲಿದ್ದು, ಎಲೆಕ್ಟ್ರಿಕ್ ನಿಯಂತ್ರಿತ ಎಂಜಿನ್ ಇದಾಗಿದೆ.

ಲೋಕೋ ವ್ಯಾಪ್9 ಎಂಜಿನ್‌ಗಳ ಪರಿಷ್ಕೃತ ಆವೃತ್ತಿಯಾಗಿರುವ ವ್ಯಾಪ್ 7 ಲೋಕೋಮೋಟಿವ್ ಎಂಜಿನ್ ಗಳನ್ನು ಪ್ರಯಾಣಿಕ ಸಂಚಾರಕ್ಕಾಗಿ ಅತಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ಲೋಕೋ ವ್ಯಾಪ್9 ಎಂಜಿನ್‌ಗಳ ಪರಿಷ್ಕೃತ ಆವೃತ್ತಿಯಾಗಿರುವ ವ್ಯಾಪ್ 7 ಲೋಕೋಮೋಟಿವ್ ಎಂಜಿನ್ ಗಳನ್ನು ಪ್ರಯಾಣಿಕ ಸಂಚಾರಕ್ಕಾಗಿ ಅತಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ಅಂದರೆ 1400ರಿಂದ 1500 ಟನ್ ಭಾರವನ್ನು ಗಂಟೆಗೆ 140 ಕೀ.ಮೀ. ವೇಗದಲ್ಲಿ ಸರಾಗವಾಗಿ ಎಳೆದೊಯ್ಯಲಿದೆ. ಅಲ್ಲದೆ ವ್ಯಾಪ್ 4 ರ ಬಳಿಕ ಅತ್ಯಂತ ಯಶಸ್ವಿ ಪ್ರಯಾಣಿಕ ರೈಲು ಎಂಜಿನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ದೇಶದ ಹೆಸರಾಂತ ಪ್ರೀಮಿಯಂ ರೈಲುಗಳಾದ ರಾಜಧಾನಿ ಎಕ್ಸ್ ಪ್ರೆಸ್, ಶತಾಬ್ದಿ ಎಕ್ಸ್ ಪ್ರೆಸ್ ಗಳಲ್ಲೂ ಇದೇ ಲೋಕೋಮೋಟಿವ್ ಎಂಜಿನ್ ಗಳು ಬಳಕೆಯಾಗುತ್ತಿದೆ.

ಇನ್ನು ದೈನಂದಿನ ಓಡಾಡುತ್ತಿರುವ ಹೈದರಾಬಾದ್- ನವದೆಹಲಿ, ನಿಜಾಮುದ್ದೀನ್-ತಿರುವನಂತಪುರ, ನಿಜಾಮುದ್ದೀನ್-ಚೆನ್ನೈ, ನಿಜಾಮುದ್ದೀನ್-ಬೆಂಗಳೂರು, ನವದೆಹಲಿ-ಸೀಲ್ದಾ, ನವದೆಹಲಿ-ಮುಂಬೈ ರಾಜಧಾನಿ ಎಕ್ಸ್ ಪ್ರೆಸ್ ಮತ್ತು ನಿಜಾಮುದ್ದೀನ್-ಎರ್ನಾಕುಲಂ ರೈಲುಗಳಲ್ಲೂ ವ್ಯಾಪ್ 7 ಎಂಜಿನ್ ಬಳಕೆಯಾಗುತ್ತಿದೆ.

ಬರೋಬ್ಬರಿ 6000 ಅಶ್ವಶಕ್ತಿ ಉತ್ಪಾದಿಸಬಲ್ಲ ವ್ಯಾಪ್ 7 ಲೋಕೋಮೋಟಿವ್ ಎಂಜಿನ್‌ನಲ್ಲಿ ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಯು ಇದೆ. ಅಂತೆಯೇ ಮೈಕ್ರೋಪ್ರೊಸೆಸರ್ ಆಧಾರಿತ ಇನ್ ಬಿಲ್ಟ್ ಡಯಾಗ್ನಾಸ್ಟಿಕ್ ಸಿಸ್ಟಂ ಕೂಡಾ ಇದೆ.


Click it and Unblock the Notifications








