Just In
- 2 hrs ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 4 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- News
Breaking: ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?
- Sports
ಐಪಿಎಲ್ 2021: ಈ ಬಾರಿಯ ಆವೃತ್ತಿಯ ಕೆಲ ಗಮನಾರ್ಹ ಬದಲಾವಣೆಗಳು
- Movies
ದೀದಿ ಸಾಮ್ರಾಜ್ಯದಲ್ಲಿ ಕಮಲದ ಕೈ ಹಿಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಮಾನಗಳ ರೆಕ್ಕೆಗಳಲ್ಲಿರುವ ಬಣ್ಣದ ದೀಪಗಳ ಬಗೆಗಿನ ರೋಚಕ ಸಂಗತಿಗಳಿವು
ನೀವು ಎಂದಾದರೂ ವಿಮಾನದ ರೆಕ್ಕೆಗಳಲ್ಲಿರುವ ಬಣ್ಣದ ದೀಪಗಳನ್ನು ಗಮನಿಸಿದ್ದೀರಾ? ಕಮರ್ಷಿಯಲ್ ವಿಮಾನಗಳ ರೆಕ್ಕೆಗಳಲ್ಲಿ ಕೆಂಪು ಹಾಗೂ ಹಸಿರು ಬಣ್ಣದ ದೀಪಗಳನ್ನು ಅಳವಡಿಸಲಾಗಿರುತ್ತದೆ.

ವಿಮಾನದ ರೆಕ್ಕೆಗಳಲ್ಲಿ ಕೆಂಪು ಹಾಗೂ ಹಸಿರು ಬಣ್ಣದ ದೀಪಗಳನ್ನು ಏಕೆ ನೀಡಲಾಗಿರುತ್ತದೆ ಎಂಬುದು ಆಗಾಗ್ಗೆ ವಿಮಾನಗಳಲ್ಲಿ ಪ್ರಯಾಣಿಸುವವರಿಗೂ ಸಹತಿಳಿದಿರುವುದಿಲ್ಲ. ಈ ಲೇಖನದಲ್ಲಿ ವಿಮಾನದ ರೆಕ್ಕೆಗಳಲ್ಲಿ ಕೆಂಪು ಹಾಗೂ ಹಸಿರು ಬಣ್ಣದ ದೀಪಗಳು ಏಕಿರುತ್ತವೆ ಎಂಬುದನ್ನು ನೋಡೋಣ. ವಿಮಾನದ ರೆಕ್ಕೆಗಳ ಮೇಲಿರುವ ಕೆಂಪು ಹಾಗೂ ಹಸಿರು ದೀಪಗಳನ್ನು ನ್ಯಾವಿಗೇಷನ್ ದೀಪಗಳು ಎಂದು ಕರೆಯಲಾಗುತ್ತದೆ.

ರಾತ್ರಿ ವೇಳೆಯಲ್ಲಿ ವಿಮಾನಗಳು ಆಕಾಶದಲ್ಲಿ ಹಾರಾಟ ನಡೆಸುವಾಗ ಬೇರೆ ವಿಮಾನಗಳಿಗೆ ಮತ್ತೊಂದು ವಿಮಾನ ಹಾರಾಟ ನಡೆಸುತ್ತಿದೆ ಎಂಬುದು ತಿಳಿಯಲಿ ಎಂಬ ಉದ್ದೇಶದಿಂದ ಈ ನ್ಯಾವಿಗೇಷನ್ ದೀಪಗಳನ್ನು ಅಳವಡಿಸಲಾಗಿರುತ್ತದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಇದರಿಂದ ವಿಮಾನಗಳ ನಡುವೆ ನಡೆಯುವ ಅಪಘಾತಗಳನ್ನು ತಪ್ಪಿಸಬಹುದು. ಕಮರ್ಷಿಯಲ್ ಉದ್ದೇಶಕ್ಕಾಗಿ ಬಳಸುವ ಹೆಚ್ಚಿನ ವಿಮಾನಗಳು ಒಂದು ರೆಕ್ಕೆ ಮೇಲೆ ಕೆಂಪು ದೀಪ ಹಾಗೂ ಮತ್ತೊಂದು ರೆಕ್ಕೆ ಮೇಲೆ ಹಸಿರು ದೀಪವನ್ನು ಹೊಂದಿರುತ್ತವೆ.

ವಿಮಾನದ ಎಡ ರೆಕ್ಕೆಗಳಲ್ಲಿ ಕೆಂಪು ದೀಪವನ್ನು ಅಳವಡಿಸಿದರೆ, ವಿಮಾನದ ಬಲ ಭಾಗದ ರೆಕ್ಕೆಗಳಲ್ಲಿ ಹಸಿರು ದೀಪವನ್ನು ಅಳವಡಿಸಲಾಗುತ್ತದೆ. ಇನ್ನು ವಿಮಾನದ ಟೇಲ್ ಬಳಿ ಬಣ್ಣದ ದೀಪವನ್ನು ಅಳವಡಿಸಲಾಗಿರುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ರೆಕ್ಕೆಗಳ ಮೇಲೆ ಕೆಂಪು ಹಾಗೂ ಹಸಿರು ದೀಪಗಳನ್ನು ಬಳಸುವುದಕ್ಕೆ ಮೊದಲ ಕಾರಣವೆಂದರೆ ಈ ದೀಪಗಳಿಂದ ವಿಮಾನಗಳನ್ನು ಸುಲಭವಾಗಿ ನೋಡಬಹುದು. ವಿಮಾನದ ರೆಕ್ಕೆಗಳಲ್ಲಿ ಕೇವಲ ಕೆಂಪು ದೀಪ ಅಥವಾ ಕೇವಲ ಹಸಿರು ದೀಪಗಳನ್ನು ಮಾತ್ರ ನೀಡಿದರೆ ಇತರ ವಿಮಾನಗಳ ಪೈಲಟ್‌ಗಳು ಅವುಗಳ ಬಗ್ಗೆ ತಪ್ಪಾಗಿ ತಿಳಿಯಬಹುದು.

ಯಾವುದಾದರೂ ಒಂದು ಬಣ್ಣದ ದೀಪಗಳಿದ್ದರೆ ಅವುಗಳನ್ನು ವಿಮಾನಗಳ ಬದಲು ಡ್ರೋನ್‌ಗಳೆಂದು ಭಾವಿಸುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ವಿಮಾನಗಳಲ್ಲಿ ಕೆಂಪು ಹಾಗೂ ಹಸಿರು ಬಣ್ಣದ ದೀಪಗಳ ಸಂಯೋಜನೆಯನ್ನು ಬಳಸಲಾಗುತ್ತದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇದರಿಂದಾಗಿ ಅವುಗಳು ಆಕಾಶದಲ್ಲಿ ಹಾರಾಟ ನಡೆಸುವಾಗ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಮುಂಚೆ ದೋಣಿಗಳಲ್ಲಿದ್ದ ಕೆಂಪು ಹಾಗೂ ಹಸಿರು ಬೆಳಕಿನ ಸಂಯೋಜನೆಯನ್ನು ವಿಮಾನಗಳಲ್ಲಿಯೂ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ.

19ನೇ ಶತಮಾನದಲ್ಲಿ ದೋಣಿಗಳಲ್ಲಿ ಕೆಂಪು ಹಾಗೂ ಹಸಿರು ಬಣ್ಣದ ದೀಪಗಳನ್ನು ಬಳಸುವುದರ ಮೂಲಕ ಅಪಘಾತಗಳನ್ನು ತಪ್ಪಿಸಬಹುದು ಎಂಬುದನ್ನು ನಾವಿಕರು ಕಂಡುಹಿಡಿದರು. ನಂತರ ವಾಯುಯಾನ ಕ್ಷೇತ್ರದ ತಜ್ಞರು ಸಹ ಈ ಮಾರ್ಗವನ್ನು ಅನುಸರಿಸಿದರು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕೆಂಪು ಹಾಗೂ ಹಸಿರು ಬಣ್ಣದ ದೀಪಗಳ ಸಂಯೋಜನೆಯು ವಿಮಾನಗಳನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿ ಆಕಾಶದಲ್ಲಿ ಘರ್ಷಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸುರಕ್ಷಿತ ಪ್ರಯಾಣವನ್ನು ಖಾತ್ರಿಗೊಳಿಸುತ್ತದೆ.

ಕೆಂಪು ಹಾಗೂ ಹಸಿರು ಬಣ್ಣವನ್ನು ಸುಲಭವಾಗಿ ಗ್ರಹಿಸಬಹುದು ಎಂಬುದು ಗಮನಾರ್ಹ. ಈ ಮೂರು ಬಣ್ಣದ ದೀಪಗಳ ಸಂಯೋಜನೆ ವಿಮಾನಗಳು ಯಾವ ದಿಕ್ಕಿನಲ್ಲಿ ಚಲಿಸುತ್ತಿವೆ ಎಂದು ಇತರ ಪೈಲಟ್‌ಗಳಿಗೆ ತಿಳಿಸಲು ನೆರವಾಗುತ್ತವೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬೇರೆ ವಿಮಾನದ ಪೈಲಟ್ ರಾತ್ರಿ ವೇಳೆ ತನ್ನ ಬಲಭಾಗದಲ್ಲಿ ಕೆಂಪು ಹಾಗೂ ಬಿಳಿ ದೀಪಗಳನ್ನು ನೋಡಿದರೆ ವಿಮಾನವು ಬಲದಿಂದ ಎಡಕ್ಕೆ ಚಲಿಸುತ್ತಿದೆ ಎಂದರ್ಥ.ಪೈಲಟ್ ಹಸಿರು ಹಾಗೂ ಬಿಳಿ ದೀಪಗಳನ್ನು ನೋಡಿದರೆ ವಿಮಾನವು ಎಡದಿಂದ ಬಲಕ್ಕೆ ಸಾಗುತ್ತಿದೆ ಎಂದರ್ಥ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.