ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

ಕಡಿಮೆ ಬೆಲೆಯ ಕಾರುಗಳಿಂದ ಹಿಡಿದು ಬಹು-ಕೋಟಿ ಬೆಲೆಯ ಕಾರುಗಳವರೆಗೆ ಎಲ್ಲಾ ಕಾರುಗಳಲ್ಲಿ ಸೀಟ್ ಬೆಲ್ಟ್‌ಗಳು ಸುರಕ್ಷತಾ ಫೀಚರ್ ಗಳಾಗಿವೆ. ಸೀಟ್ ಬೆಲ್ಟ್‌ಗಳು ರಸ್ತೆ ಅಪಘಾತಗಳಲ್ಲಿ ಚಾಲಕರ ಪ್ರಾಣ ಉಳಿಸುತ್ತವೆ.

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

ಸೀಟ್ ಬೆಲ್ಟ್ ಗಳು ಗಾಯಗಳಿಂದ ಚಾಲಕರನ್ನು ರಕ್ಷಿಸುವ ಕಾರ್ಯವನ್ನು ಸಹ ಮಾಡುತ್ತವೆ. ಈ ಕಾರಣಕ್ಕೆ ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲಿ ಕಾರುಗಳಲ್ಲಿ ಸೀಟ್ ಬೆಲ್ಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಪ್ರಯಾಣ ಮಾಡುವಾಗ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಲೇಖನದಲ್ಲಿ ಸೀಟ್ ಬೆಲ್ಟ್‌ಗಳ ಇತಿಹಾಸದ ಬಗ್ಗೆ ನೋಡೋಣ.

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

ಸೀಟ್ ಬೆಲ್ಟ್‌ಗಳನ್ನು ಮೊದಲು ಜಾರ್ಜ್ ಗೇಲ್ ಕಂಡುಹಿಡಿದರು. ಇಂಗ್ಲೆಂಡ್‌ನ ಎಂಜಿನಿಯರ್ ಆಗಿದ್ದ ಅವರು 1800ರ ದಶಕದಲ್ಲಿ ಗ್ಲೈಡರ್‌ಗಳ ಒಳಗೆ ಪೈಲಟ್‌ಗಳನ್ನು ಸುರಕ್ಷಿತವಾಗಿಡಲು ಸೀಟ್ ಬೆಲ್ಟ್‌ಗಳನ್ನು ಅಭಿವೃದ್ಧಿಪಡಿಸಿದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

ಸೀಟ್ ಬೆಲ್ಟ್ ಗಳಿಗೆ ಮೊದಲ ಪೇಟೆಂಟ್ ಪಡೆದವರು ಎಡ್ವರ್ಡ್ ಜೆ. ಕ್ಲಾರ್ಕಾರ್ನ್. ಅವರು 1885ರ ಫೆಬ್ರವರಿ 10ರಂದು ಸೀಟ್ ಬೆಲ್ಟ್ ಅನ್ನು ಕಂಡುಹಿಡಿದರು. ನ್ಯೂಯಾರ್ಕ್ ನಗರಕ್ಕೆ ಬರುವ ಪ್ರವಾಸಿಗರು ಟ್ಯಾಕ್ಸಿಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಈ ಸೀಟ್ ಬೆಲ್ಟ್ ತಯಾರಿಸಲಾಯಿತು.

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

ನಂತರದ ದಿನಗಳಲ್ಲಿ ಪ್ರಯಾಣಿಕರು ಹಾಗೂ ಚಾಲಕರ ಸುರಕ್ಷತೆಗಾಗಿ ಕಾರುಗಳಲ್ಲಿ ಸೀಟ್ ಬೆಲ್ಟ್‌ಗಳು ಕಾಣಿಸಿಕೊಂಡವು. ಆದರೆ ಆ ಸಮಯದಲ್ಲಿ ಕಾರುಗಳಲ್ಲಿ ಪ್ರಯಾಣಿಸುವವರು ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರಲಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

ಇದನ್ನು 1800ರ ವೇಳೆಗೆ ಸೀಟ್ ಬೆಲ್ಟ್ ಅನ್ನು ಆವಿಷ್ಕರಿಸಲಾದರೂ ಸಹ 1930ರ ದಶಕದ ಮಧ್ಯಭಾಗದವರೆಗೆ ಕಾರು ತಯಾರಕ ಕಂಪನಿಗಳು ಕಾರುಗಳಲ್ಲಿ ಸೀಟ್ ಬೆಲ್ಟ್ ಗಳನ್ನು ಅಳವಡಿಸಲು ಹೆಚ್ಚು ಆಸಕ್ತಿ ತೋರಲಿಲ್ಲ.

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

1930ರ ದಶಕದ ಮಧ್ಯಭಾಗದಲ್ಲಿ ಅಮೆರಿಕಾದ ಅನೇಕ ವೈದ್ಯರು ಲ್ಯಾಬ್ ಗಳಲ್ಲಿ ಈ ಬೆಲ್ಟ್ ಗಳನ್ನು ಪರೀಕ್ಷಿಸಿದರು. ಫಲಿತಾಂಶಗಳು ಸಕಾರಾತ್ಮಕವಾಗಿದ್ದ ಕಾರಣ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಸೀಟ್ ಬೆಲ್ಟ್ ಅಳವಡಿಸಿಕೊಳ್ಳಲು ಮುಂದಾದವು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

1954ರಲ್ಲಿ ಅಮೆರಿಕನ್ ಸ್ಪೋರ್ಟ್ಸ್ ಕಾರ್ ಕ್ಲಬ್ ಎಲ್ಲಾ ಚಾಲಕರು ಸೀಟ್ ಬೆಲ್ಟ್ ಧರಿಸಬೇಕು ಎಂದು ಆದೇಶಿಸಿತು. 1955 ರಲ್ಲಿ ಆಟೋಮೊಬೈಲ್ ಎಂಜಿನಿಯರ್‌ಗಳ ಸಂಘವು ಮೋಟಾರು ವಾಹನ ಸೀಟ್ ಬೆಲ್ಟ್ ಸಮಿತಿಯನ್ನು ನೇಮಿಸಿತು.

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

ಸೀಟ್ ಬೆಲ್ಟ್ ಇತಿಹಾಸದ ನಿಜವಾದ ತಿರುವು 1958ರಲ್ಲಿ ಸಂಭವಿಸಿತು. ಆ ವರ್ಷ, ಸ್ವೀಡಿಷ್ ಎಂಜಿನಿಯರ್ ನೈಲ್ಸ್ ಬೋಲಿನ್ ಆಧುನಿಕ ಮೂರು-ಪಾಯಿಂಟ್ ಗಳ ಸೀಟ್‌ಬೆಲ್ಟ್ ಅನ್ನು ಕಂಡುಹಿಡಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

ಅಲ್ಲಿಯವರೆಗೆ ಕಾರುಗಳಲ್ಲಿ ಎರಡು-ಪಾಯಿಂಟ್ ಲ್ಯಾಪ್ ಬೆಲ್ಟ್‌ಗಳನ್ನು ಬಳಸಲಾಗುತ್ತಿತ್ತು. ಇಂದು ನಾವು ಬಳಸುತ್ತಿರುವ ಸೀಟ್ ಬೆಲ್ಟ್‌ಗಳನ್ನು ಅಭಿವೃದ್ಧಿಪಡಿಸಿದವರು ನಿಲ್ಸ್ ಬೊಹ್ಲಿನ್.

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

ಅವರು ಕಂಡುಹಿಡಿದ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಪ್ರಯಾಣಿಕರನ್ನು ಹಾಗೂ ಚಾಲಕರನ್ನು ಅಪಘಾತಗಳಿಂದ ರಕ್ಷಿಸುತ್ತಿವೆ. ಮೂರು-ಪಾಯಿಂಟ್ ಸೀಟ್ ಬೆಲ್ಟ್ ಅನ್ನು ದೇಹದ ಮೇಲಿನ ಹಾಗೂ ಕೆಳಗಿನ ಭಾಗಗಳನ್ನು ರಕ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರು ಪ್ರಯಾಣಿಕರ ಜೀವ ರಕ್ಷಕ ಸೀಟ್ ಬೆಲ್ಟ್ ಬಗೆಗಿನ ರೋಚಕ ಸಂಗತಿಗಳಿವು

ಈ ಸೀಟ್ ಬೆಲ್ಟ್ ಬಿಡುಗಡೆಯಾದ ನಾಲ್ಕು ದಶಕಗಳಲ್ಲಿ 10 ದಶಲಕ್ಷಕ್ಕೂ ಹೆಚ್ಚು ಜನರ ಜೀವವನ್ನು ಉಳಿಸಿದೆ ಎಂದು ಅಂದಾಜಿಸಲಾಗಿದೆ. ಸೀಟ್ ಬೆಲ್ಟ್‌ಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಸಹ ಕಾರಿನಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Interesting facts about passenger life saver car seat belts. Read in Kannada.
Story first published: Friday, October 30, 2020, 16:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X