ಜನಪ್ರಿಯತೆಯ ಉತ್ತುಂಗದಲ್ಲಿದ್ದ ಟಾಟಾ ಸುಮೋ ಬಗೆಗಿನ ರೋಚಕ ಸಂಗತಿಗಳಿವು

1990ರ ದಶಕದ ಮಧ್ಯಭಾಗದಲ್ಲಿ ಟಾಟಾ ಸುಮೋ ಎಂಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಅಲ್ಪ ಅವಧಿಯಲ್ಲಿಯೇ ಈ ಕಾರು ದೇಶಾದ್ಯಂತ ಜನಪ್ರಿಯವಾಯಿತು.

ಜನಪ್ರಿಯತೆಯ ಉತ್ತುಂಗದಲ್ಲಿದ್ದ ಟಾಟಾ ಸುಮೋ ಬಗೆಗಿನ ರೋಚಕ ಸಂಗತಿಗಳಿವು

ಈ ಎಂಪಿವಿ ಬಿಡುಗಡೆಯಾದ ಕೇವಲ ಮೂರು ವರ್ಷಗಳಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾದವು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಈ ಎಂಪಿವಿ ಎಲ್ಲರ ನೆಚ್ಚಿನ ಕಾರ್ ಆಗಿತ್ತು. ಅಂದಿನಿಂದ ಇಂದಿನವರೆಗೆ ಬಹುತೇಕ ಕುಟುಂಬಗಳು ಪ್ರವಾಸ ಅಥವಾ ಬೇರೆಡೆಗಿನ ಪ್ರಯಾಣಕ್ಕಾಗಿ ಟಾಟಾ ಸುಮೋವನ್ನೇ ಬಳಸುತ್ತಿವೆ.

ಜನಪ್ರಿಯತೆಯ ಉತ್ತುಂಗದಲ್ಲಿದ್ದ ಟಾಟಾ ಸುಮೋ ಬಗೆಗಿನ ರೋಚಕ ಸಂಗತಿಗಳಿವು

ಹೊಸ ಸುರಕ್ಷತಾ ಮಾನದಂಡ ಹಾಗೂ ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಪ್‌ಡೇಟ್ ಮಾಡಲು ಸಾಧ್ಯವಾಗದ ಕಾರಣಕ್ಕೆ ಈ ಎಂಪಿವಿಯನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಯಿತು. ಜನರ ಮನಸ್ಸಿನಲ್ಲಿ ತನ್ನದೇ ಛಾಪನ್ನು ಹೊತ್ತಿರುವ ಈ ಎಂಪಿವಿಯ ಬಗೆಗಿನ ಆಸಕ್ತಿಕರ ಸಂಗತಿಗಳನ್ನು ಈ ಲೇಖನದಲ್ಲಿ ನೋಡೋಣ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಜನಪ್ರಿಯತೆಯ ಉತ್ತುಂಗದಲ್ಲಿದ್ದ ಟಾಟಾ ಸುಮೋ ಬಗೆಗಿನ ರೋಚಕ ಸಂಗತಿಗಳಿವು

1. ಹೆಸರು

ಟಾಟಾ ಕಂಪನಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಮೊಲ್ಗಾವ್ಕರ್ ಅವರ ಹೆಸರನ್ನು ಟಾಟಾ ಸುಮೋ ಎಂದು ಇಡಲಾಗಿದೆ. ಅವರ ಹೆಸರಿನ ಮೊದಲ ಎರಡು ಅಕ್ಷರಗಳನ್ನು ತೆಗೆದು ಈ ಕಾರಿಗೆ ಸುಮೋ ಎಂದು ಹೆಸರಿಡಲಾಯಿತು. ಈ ಕಾರು ಭಾರತದ ಆಟೋ ಮೊಬೈಲ್ ಜಗತ್ತಿನಲ್ಲಿ ಇಂದಿಗೂ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದೆ.

ಜನಪ್ರಿಯತೆಯ ಉತ್ತುಂಗದಲ್ಲಿದ್ದ ಟಾಟಾ ಸುಮೋ ಬಗೆಗಿನ ರೋಚಕ ಸಂಗತಿಗಳಿವು

2. ಉತ್ತರಾಧಿಕಾರಿ

1994ರಲ್ಲಿ ಟಾಟಾ ಸುಮೋವನ್ನು ಹತ್ತು ಸೀಟುಗಳ ಕಾರ್ ಆಗಿ ಬಿಡುಗಡೆಗೊಳಿಸಲಾಯಿತು. ಈ ಮಾದರಿಯನ್ನು ಟಾಟಾ ಮೋಟಾರ್ಸ್ ಕಂಪನಿಯ ಎಕ್ಸ್ 2 ಬಾಡಿ-ಆನ್-ಫ್ರೇಮ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿತ್ತು. ಟೆಲ್ಕೋಲಿನ್ ಪಿಕಪ್ ಟ್ರಕ್‌ಗಳಿಗೂ ಸಹ ಈ ಮಾದರಿಯನ್ನು ಬಳಸಲಾಗುತ್ತಿತ್ತು. ರೇರ್ ವ್ಹೀಲ್ ಡ್ರೈವ್ ಮಾದರಿಯನ್ನು ಸಾರ್ವಜನಿಕರಿಗೆ ಹಾಗೂ ಆಲ್ ವ್ಹೀಲ್ ಡ್ರೈವ್ ಮಾದರಿಯನ್ನು ಭಾರತೀಯ ಸೈನ್ಯಕ್ಕೆ ಮಾರಾಟ ಮಾಡಲಾಯಿತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಜನಪ್ರಿಯತೆಯ ಉತ್ತುಂಗದಲ್ಲಿದ್ದ ಟಾಟಾ ಸುಮೋ ಬಗೆಗಿನ ರೋಚಕ ಸಂಗತಿಗಳಿವು

3. ಭಾರತೀಯ ಸೇನೆಯೊಂದಿಗೆ ಸಂಬಂಧ

ಭಾರತೀಯ ಸೇನೆಯು, ಬಲಶಾಲಿಯಾದ ಬಾಡಿ, ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಹಾಗೂ ವಿವಿಧ ಸೀಟು ಆಯ್ಕೆಗಳನ್ನು ಹೊಂದಿರುವ ಟಾಟಾ ಸುಮೋ ಎಂಪಿವಿಯನ್ನು ಹಲವಾರು ವರ್ಷಗಳಿಂದ ಬಳಸುತ್ತಿದೆ. ಟಾಟಾ ಸುಮೋವನ್ನು ಆಂಬ್ಯುಲೆನ್ಸ್ ಆಗಿಯೂ ಸಹ ಬಳಸಲಾಗುತ್ತಿದೆ.

ಜನಪ್ರಿಯತೆಯ ಉತ್ತುಂಗದಲ್ಲಿದ್ದ ಟಾಟಾ ಸುಮೋ ಬಗೆಗಿನ ರೋಚಕ ಸಂಗತಿಗಳಿವು

4. ನವೀಕರಣ

ಟಾಟಾ ಸುಮೋ ಎಂಪಿವಿಯನ್ನು ಹಲವಾರು ಬಾರಿ ನವೀಕರಿಸಲಾಗಿದೆ. ಹಲವು ಬಾರಿ ಮರುಹೆಸರಿಡಲಾಗಿದೆ. ಮೊದಲ ಫೇಸ್‌ಲಿಫ್ಟ್‌ನಲ್ಲಿ ಸುಮೋ ಸ್ಪೆಸಿಯೊ ಎಂದು ಹೆಸರಿಡಲಾಗಿತ್ತು. ನಂತರ ಸುಮೋ ವಿಕ್ಟಾ, ಸುಮೋ ಗೋಲ್ಡ್ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಕೊನೆಗೆ 2019ರಲ್ಲಿ ಸ್ಥಗಿತಗೊಳಿಸಲಾಯಿತು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಜನಪ್ರಿಯತೆಯ ಉತ್ತುಂಗದಲ್ಲಿದ್ದ ಟಾಟಾ ಸುಮೋ ಬಗೆಗಿನ ರೋಚಕ ಸಂಗತಿಗಳಿವು

5. ವಿವಿಧ ಮಾದರಿಗಳು

ಟಾಟಾ ಸುಮೋ ಎಂಪಿವಿಯನ್ನು 2008ರಲ್ಲಿ ಟಾಟಾ ಸುಮೋ ಗ್ರಾಂಡೆ ಹೆಸರಿನಲ್ಲಿ ಹೊಸ ಅವತಾರದೊಂದಿಗೆ ಬಿಡುಗಡೆಗೊಳಿಸಲಾಯಿತು. ಇದರ ಜೊತೆಗೆ ಕಂಪನಿಯು ಟಾಟಾ ಸುಮೋ ವಿಕ್ಟಾ ಮಾರಾಟವನ್ನು ಮುಂದುವರೆಸಿತು. ಸುಮೋದ ಜನಪ್ರಿಯತೆಯ ಹಿನ್ನೆಲೆಯಲ್ಲಿ ಮೊವಸ್‌ಗೆ ಸುಮೋ ಗ್ರಾಂಡೆ ಎಂಬ ಹೆಸರನ್ನಿಡಲಾಯಿತು.

ಜನಪ್ರಿಯತೆಯ ಉತ್ತುಂಗದಲ್ಲಿದ್ದ ಟಾಟಾ ಸುಮೋ ಬಗೆಗಿನ ರೋಚಕ ಸಂಗತಿಗಳಿವು

ಈ ಕಾರ್ ಅನ್ನು 2016ರಲ್ಲಿ ಸ್ಥಗಿತಗೊಳಿಸಲಾಯಿತು. ಟಾಟಾ ಸುಮೋ ಗೋಲ್ಡ್ ಅನ್ನು ಕಳೆದ ವರ್ಷ ನಿಲ್ಲಿಸಲಾಯಿತು. ಈಗ ಟಾಟಾ ಕಂಪನಿಯು ತನ್ನ ಹೊಸ ವಾಹನಗಳನ್ನು ಹೊಸ ಪ್ಲಾಟ್‌ಫಾರ್ಮ್‌ನೊಂದಿಗೆ ಬಿಡುಗಡೆಗೊಳಿಸುತ್ತಿದೆ. ಈ ಎಂಪಿವಿಯನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Interesting facts about Tata Sumo origin name update and other details. Read in Kannada.
Story first published: Wednesday, June 17, 2020, 9:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X