ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ಭಾರತದ ಆಟೋ ಮೊಬೈಲ್ ಇತಿಹಾಸದಲ್ಲಿ ಹಲವಾರು ವಿಶಿಷ್ಟ ಮಾದರಿಗಳ ವಾಹನಗಳು ಬಂದು ಹೋಗಿವೆ. ಅವುಗಳಲ್ಲಿ ಕೆಲವು ವಾಹನಗಳು ಜನಪ್ರಿಯವಾದರೆ, ಇನ್ನೂ ಕೆಲವು ವಾಹನಗಳು ಕೆಲವು ವರ್ಷಗಳ ನಂತರ ಸ್ಥಗಿತಗೊಂಡಿವೆ.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ಕಾರು ಎಂದಾಕ್ಷಣ ನೆನಪಿಗೆ ಬರುವುದು ಕಾರುಗಳಲ್ಲಿರುವ ನಾಲ್ಕು ಚಕ್ರಗಳು. ನಾಲ್ಕು ಚಕ್ರಗಳಿಲ್ಲದಿದ್ದರೆ ಕಾರು ಎಂಬ ಭಾವನೆಯೇ ಬರುವುದಿಲ್ಲ. 1975ರಲ್ಲಿ ಭಾರತೀಯ ಮೂಲದ ವಾಹನ ತಯಾರಕ ಕಂಪನಿಯೊಂದು ವಿಶಿಷ್ಟವಾದ ಮೂರು ಚಕ್ರಗಳನ್ನು ಹೊಂದಿರುವ ಕಾರ್ ಅನ್ನು ಉತ್ಪಾದಿಸಿತ್ತು.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ಬಾದಲ್ ಎಂಬ ಹೆಸರಿನ ಈ ಕಾರ್ ಅನ್ನು ಸಿಪಾನಿ ಕಂಪನಿ ಉತ್ಪಾದಿಸಿತ್ತು. ಭಾರತದ ಮೊದಲ ಮೂರು ಚಕ್ರಗಳ ಕಾರಿನ ಬಗೆಗಿನ ವೀಡಿಯೊವನ್ನು ಟಾಕಿಂಗ್ ಕಾರ್ಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ಈ ವೀಡಿಯೊದಲ್ಲಿ ಸಿಪಾನಿ ಕಂಪನಿಯು ಕಾರನ್ನು ಉತ್ಪಾದಿಸಿದ ವಿವರಗಳನ್ನು ತೋರಿಸಲಾಗಿದೆ. ಸಿಪಾನಿ ಕಂಪನಿಯನ್ನು ಈ ಹಿಂದೆ ಸನ್‌ರೈಸ್ ಆಟೋಮೋಟಿವ್ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ಆ ಸಮಯದಲ್ಲಿ ಹಿಂದೂಸ್ತಾನ್ ಮೋಟಾರ್ಸ್, ಪ್ರೀಮಿಯರ್, ಸ್ಟ್ಯಾಂಡರ್ಡ್ ಹಾಗೂ ಫಿಯೆಟ್‌ನಂತಹ ದಿಗ್ಗಜ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದ್ದವು. ಈ ವೇಳೆ ಸಿಪಾನಿ ಕಂಪನಿಯು ವಿಭಿನ್ನ ಮಾದರಿಯ ಅಗ್ಗದ ಕಾರ್ ಅನ್ನು ಬಿಡುಗಡೆಗೊಳಿಸಲು ಮುಂದಾಯಿತು.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ಸಣ್ಣ ಕಾರನ್ನು ಉತ್ಪಾದಿಸಲು ಪರವಾನಗಿ ಪಡೆದ ಸಿಪಾನಿ ಕಂಪನಿಯು ಬ್ರಿಟನ್ ಮೂಲದ ಕಾರು ತಯಾರಕ ಕಂಪನಿಯಾದ ರಿಲಯಂಟ್ ಜೊತೆ ಪಾಲುದಾರಿಕೆ ಮಾಡಿಕೊಂಡಿತು. ರಿಲಯಂಟ್ ಕಂಪನಿಯು ತಯಾರಿಸಿರುವ ರಾಬಿನ್ ಎಂಬ ಮೂರು ಚಕ್ರಗಳ ಕಾರು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿತ್ತು.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ರಿಲಯಂಟ್ ಕಂಪನಿಯ ರಾಬಿನ್ ಕಾರನ್ನು ನೋಡಿದ ನಂತರ ಸಿಪಾನಿ ಕಂಪನಿಯು ಈ ಕಾರಿನ ಮಾದರಿಯಲ್ಲಿಯೇ ಹೊಸ ಕಾರಿನ ಉತ್ಪಾದನೆಯನ್ನು ಆರಂಭಿಸಿತು. ಸಿಪಾನಿ ಕಂಪನಿಯು ಈ ರೀತಿ ಬಾದಲ್ ಕಾರಿನ ಉತ್ಪಾದನೆಯನ್ನು ಆರಂಭಿಸಿತು.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ಸಿಪಾನಿ ಕಂಪನಿಯು ರಿಲಯಂಟ್ ಮೋಟಾರ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದರೂ ಯಾವುದೇ ಭಾಗಗಳನ್ನು ರಾಬಿನ್‌ ಕಾರಿನಿಂದ ಪಡೆದಿಲ್ಲ ಎಂಬುದು ವಿಶೇಷ. ಸಿಪಾನಿ ಕಂಪನಿಯು ಬಾದಲ್ ಕಾರಿನಲ್ಲಿ ಆ ಕಾಲದಲ್ಲಿ ಸ್ಕೂಟರ್'ಗಳಲ್ಲಿ ಬಳಸಲಾಗುತ್ತಿದ್ದ 200 ಸಿಸಿ ಪೆಟ್ರೋಲ್ ಎಂಜಿನ್ ಅಳವಡಿಸಿತ್ತು.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ಈ ಎಂಜಿನ್ ಅನ್ನು ಕಾರಿನ ಹಿಂಭಾಗದಲ್ಲಿ ಇರಿಸಲಾಗಿತ್ತು. ರಿಲಯಂಟ್ ರಾಬಿನ್‌ ಕಾರಿಗೆ ಹೋಲಿಸಿದರೆ, ಸಿಪಾನಿ ಬಾದಲ್ ಕಾರು ಸಂಪೂರ್ಣ ವಿಭಿನ್ನವಾಗಿತ್ತು. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗದಿರಲು ಇದು ಸಹ ಕಾರಣವಾಗಿರಬಹುದು.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

1970ರ ದಶಕದ ಉತ್ತರಾರ್ಧದಲ್ಲಿ ಈ ಕಾರಿನ ಉತ್ಪಾದನೆಯನ್ನು ಆರಂಭಿಸಿ ಕೇವಲ 150 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಯಿತು. ನಂತರ ಈ ಕಾರಿನ 300ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಲಾಯಿತು.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ರಿಲಯಂಟ್ ರಾಬಿನ್ ಕಾರಿಗೆ ಹೋಲಿಸಿದರೆ ಸಿಪಾನಿ ಬಾದಲ್ ಕಾರು ತನ್ನದೇ ಆದ ಮಿತಿಗಳನ್ನು ಹೊಂದಿತ್ತು. ಸಿಪಾನಿ ಬಾದಲ್ ಕಾರು ಇಳಿಜಾರಿನಲ್ಲಿ ಚಲಿಸುವಾಗ ಈ ಕಾರಿನ ತೂಕವು ಮುಂಭಾಗದ ಚಕ್ರಗಳ ಮೇಲೆ ಬೀಳುತ್ತಿತ್ತು. ಇದರಿಂದ ಹಲವು ಭಾರಿ ಅನಾಹುತಗಳಾಗಿದ್ದವು.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ಮುಂಭಾಗದಲ್ಲಿ ಒಂದು ಚಕ್ರ ಮಾತ್ರ ಇದ್ದ ಕಾರಣ ಕಾರು ಸರಿಯಾಗಿ ಬ್ಯಾಲೆನ್ಸ್ ಆಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಸಿಪಾನಿ ಬಾದಲ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಯಶಸ್ಸನ್ನು ಕಾಣಲು ವಿಫಲವಾಯಿತು.

ಸಿಪಾನಿ ಕಂಪನಿಯು ಸೆಲೆಬ್ರಿಟಿಗಳ ಮೂಲಕ ಈ ಕಾರಿನ ಬಗ್ಗೆ ಪ್ರಚಾರ ಮಾಡಲು ಪ್ರಯತ್ನಿಸಿದರೂ ಎಲ್ಲಾ ಪ್ರಯತ್ನಗಳು ವಿಫಲವಾದವು. ಸಿಪಾನಿ ಬಾದಲ್ ಕಾರನ್ನು ನಾಲ್ಕು ಸೀಟುಗಳ ಕಾರಿನಂತೆ ವಿನ್ಯಾಸಗೊಳಿಸಲಾಗಿದ್ದರೂ ಒಳಭಾಗದಲ್ಲಿ ಯಾವುದೇ ಫೀಚರ್'ಗಳಿರಲಿಲ್ಲ.

ಭಾರತದ ಮೊದಲ ತ್ರಿಚಕ್ರ ಕಾರಿನ ಹಿಂದಿದೆ ರೋಚಕ ಕಹಾನಿ

ಪ್ರಯಾಣಿಕರು ಎರಡನೇ ಸಾಲಿನ ಸೀಟುಗಳಿಗೆ ಪ್ರವೇಶಿಸಲು ಈ ಕಾರಿನಲ್ಲಿ ಮುಂಭಾಗದಲ್ಲಿ ಎರಡು ಡೋರ್ ಹಾಗೂ ಹಿಂಭಾಗದಲ್ಲಿ ಒಂದು ಡೋರ್ ನೀಡಲಾಗಿತ್ತು. ಭಾರತದ ಗ್ರಾಹಕರು ಮೂರು ಚಕ್ರಗಳ ಕಾರಿಗೆ ಸಿದ್ಧರಾಗಿರಲಿಲ್ಲ. ಈಗಲೂ ಸಹ ಭಾರತೀಯ ಗ್ರಾಹಕರು ಮೂರು ಚಕ್ರಗಳನ್ನು ಹೊಂದಿರುವ ಕಾರುಗಳನ್ನು ಸ್ವೀಕರಿಸುವುದು ಅನುಮಾನವಾಗಿದೆ.

ಚಿತ್ರ ಕೃಪೆ: ಟಾಕಿಂಗ್ ಕಾರ್ಸ್

Most Read Articles

Kannada
English summary
Interesting story about India's first three wheeled car. Read in Kannada.
Story first published: Monday, June 28, 2021, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X