ವಿಮಾನಗಳ ಭದ್ರತೆಗೆ ನಿಯೋಜಿಸುವ ಏರ್ ಮಾರ್ಷಲ್‌ಗಳ ಬಗೆಗಿನ ಸಂಗತಿಗಳಿವು

ಕೆಲವು ವಿಮಾನಗಳಲ್ಲಿ ಭದ್ರತೆಗಾಗಿ ಏರ್ ಮಾರ್ಷಲ್‌ಗಳನ್ನು ನೇಮಿಸಲಾಗಿರುತ್ತದೆ. ಈ ವಿಮಾನಗಳಲ್ಲಿ ಪ್ರಯಾಣ ಮಾಡುವವರಿಗೆ ಏರ್ ಮಾರ್ಷಲ್‌ಗಳ ಬಗ್ಗೆ ತಿಳಿದಿರುತ್ತದೆ. ಏರ್ ಮಾರ್ಷಲ್‌ಗಳಿಗೆ ಸಂಬಂಧಿಸಿದ ಹಲವಾರು ಸಂಗತಿಗಳಿವೆ. ಆ ಸಂಗತಿಗಳನ್ನು ಈ ಲೇಖನದಲ್ಲಿ ನೋಡೋಣ.

ವಿಮಾನಗಳ ಭದ್ರತೆಗೆ ನಿಯೋಜಿಸುವ ಏರ್ ಮಾರ್ಷಲ್‌ಗಳ ಬಗೆಗಿನ ಸಂಗತಿಗಳಿವು

ಎಲ್ಲಾ ವಿಮಾನಗಳಲ್ಲಿ ಏರ್ ಮಾರ್ಷಲ್‌ಗಳು ಇರುತ್ತಾರೆಯೇ?

ಇಲ್ಲ. ಅಮೆರಿಕಾದ 1%ಗಿಂತ ಕಡಿಮೆ ವಿಮಾನಗಳು ಏರ್ ಮಾರ್ಷಲ್'ಗಳನ್ನು ಹೊಂದಿವೆ. ಅಮೆರಿಕಾದಲ್ಲಿ ಪ್ರತಿದಿನ ಸುಮಾರು ಹಲವಾರು ಕಮರ್ಷಿಯಲ್ ವಿಮಾನಗಳು ಹಾರಾಟ ನಡೆಸುತ್ತವೆ. ಈ ಎಲ್ಲಾ ವಿಮಾನಗಳಲ್ಲೂ ಏರ್ ಮಾರ್ಷಲ್‌ಗಳನ್ನು ನೇಮಿಸಿಕೊಳ್ಳುವುದು ಅಸಾಧ್ಯ.

ವಿಮಾನಗಳ ಭದ್ರತೆಗೆ ನಿಯೋಜಿಸುವ ಏರ್ ಮಾರ್ಷಲ್‌ಗಳ ಬಗೆಗಿನ ಸಂಗತಿಗಳಿವು

ಕೆಲವು ಅಂಶಗಳು ಯಾವ ವಿಮಾನವು ಏರ್ ಮಾರ್ಷಲ್‌ಗಳನ್ನು ಹೊಂದಿರಬೇಕು ಎಂಬುದನ್ನು ನಿರ್ಧರಿಸುತ್ತವೆ. ವಿಮಾನಕ್ಕೆ ಬೆದರಿಕೆ, ವಿಮಾನದ ನಿರ್ಗಮನ ನಗರ, ವಿಮಾನವು ಇಳಿಯುವ ನಗರ, ವಿಮಾನದ ಮಾರ್ಗಗಳ ಆಧಾರದ ಮೇಲೆ ಏರ್ ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲಾಗುತ್ತದೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ವಿಮಾನಗಳ ಭದ್ರತೆಗೆ ನಿಯೋಜಿಸುವ ಏರ್ ಮಾರ್ಷಲ್‌ಗಳ ಬಗೆಗಿನ ಸಂಗತಿಗಳಿವು

ಏರ್ ಮಾರ್ಷಲ್'ಗಳ ಕೆಲಸ

ಭಯೋತ್ಪಾದಕ ದಾಳಿಯಂತಹ ಘಟನೆಗಳನ್ನು ಪತ್ತೆ ಹಚ್ಚುವುದು ಏರ್ ಮಾರ್ಷಲ್‌ಗಳ ಮುಖ್ಯ ಕಾರ್ಯವಾಗಿದೆ. ಭಯೋತ್ಪಾದಕ ದಾಳಿಗಳು ನಡೆಯುವ ಸಾಧ್ಯತೆಗಳನ್ನು ತಡೆಯಲು ವಿಮಾನವು ನಿರ್ಗಮಿಸುವ ಮೊದಲು ವಿವಿಧ ತನಿಖೆ ನಡೆಸುವ ಜವಾಬ್ದಾರಿಯನ್ನು ಏರ್ ಮಾರ್ಷಲ್‌ಗಳು ಹೊಂದಿರುತ್ತಾರೆ.

ವಿಮಾನಗಳ ಭದ್ರತೆಗೆ ನಿಯೋಜಿಸುವ ಏರ್ ಮಾರ್ಷಲ್‌ಗಳ ಬಗೆಗಿನ ಸಂಗತಿಗಳಿವು

ಇದರ ಜೊತೆಗೆ ಏರ್ ಮಾರ್ಷಲ್‌ಗಳಿಗೆ ಇನ್ನೂ ಹಲವಾರು ಕಾರ್ಯಗಳಿರುತ್ತವೆ. ಉದಾಹರಣೆಗೆ ಯಾರಾದರೂ ಪ್ರಯಾಣಿಕರು ಬೇರೆ ಪ್ರಯಾಣಿಕರೊಂದಿಗೆ ಕಾದಾಟಕ್ಕಿಳಿದರೆ ಅಂತಹವರನ್ನು ನಿಯಂತ್ರಿಸುವ ಕಾರ್ಯವನ್ನು ಏರ್ ಮಾರ್ಷಲ್‌ಗಳು ಮಾಡುತ್ತಾರೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ವಿಮಾನಗಳ ಭದ್ರತೆಗೆ ನಿಯೋಜಿಸುವ ಏರ್ ಮಾರ್ಷಲ್‌ಗಳ ಬಗೆಗಿನ ಸಂಗತಿಗಳಿವು

ಏರ್ ಮಾರ್ಷಲ್‌ಗಳ ಗುರುತನ್ನು ಏಕೆ ರಹಸ್ಯವಾಗಿಡಲಾಗುತ್ತದೆ?

ಏರ್ ಮಾರ್ಷಲ್‌ಗಳ ಗುರುತನ್ನು ಯಾವಾಗಲೂ ರಹಸ್ಯವಾಗಿಡಲಾಗುತ್ತದೆ. ಏರ್ ಮಾರ್ಷಲ್‌ಗಳು ಯಾರೆಂದು ಭಯೋತ್ಪಾದಕರಿಗೆ ತಿಳಿದರೆ ಅವರು ತಮ್ಮ ಯೋಜನೆಗಳನ್ನು ಕಾರ್ಯಗತ ಗೊಳಿಸುವ ಮುನ್ನ ಏರ್ ಮಾರ್ಷಲ್‌ಗಳನ್ನು ನಿಯಂತ್ರಿಸಲು ಪ್ರಯತ್ನಿಸುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಏರ್ ಮಾರ್ಷಲ್‌ಗಳ ಗುರುತನ್ನು ರಹಸ್ಯವಾಗಿಡಲಾಗುತ್ತದೆ.

ವಿಮಾನಗಳ ಭದ್ರತೆಗೆ ನಿಯೋಜಿಸುವ ಏರ್ ಮಾರ್ಷಲ್‌ಗಳ ಬಗೆಗಿನ ಸಂಗತಿಗಳಿವು

ಮತ್ತೊಂದು ಕಾರಣವೆಂದರೆ ಏರ್ ಮಾರ್ಷಲ್‌ಗಳು ಬಂದೂಕುಗಳನ್ನು ಇಟ್ಟು ಕೊಂಡಿರುತ್ತಾರೆ. ಯಾರಾದರೂ ಪ್ರಯಾಣಿಕರು ಈ ಬಂದೂಕುಗಳನ್ನು ಕಸಿದುಕೊಂಡು ಸಹ ಪ್ರಯಾಣಿಕರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೂ ಏರ್ ಮಾರ್ಷಲ್‌ಗಳ ಗುರುತನ್ನು ರಹಸ್ಯವಾಗಿಡಲಾಗುತ್ತದೆ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ವಿಮಾನಗಳ ಭದ್ರತೆಗೆ ನಿಯೋಜಿಸುವ ಏರ್ ಮಾರ್ಷಲ್‌ಗಳ ಬಗೆಗಿನ ಸಂಗತಿಗಳಿವು

ಏರ್ ಮಾರ್ಷಲ್‌ಗಳ ಬಗ್ಗೆ ಫ್ಲೈಟ್ ಅಟೆಂಡೆಂಟ್‌ಗಳಿಗೆ ತಿಳಿದಿರುತ್ತದೆಯೇ?

ಕಾಕ್‌ಪಿಟ್‌ನಲ್ಲಿರುವ ಪೈಲಟ್‌ಗಳಿಗೆ ಹಾಗೂ ಫ್ಲೈಟ್ ಅಟೆಂಡೆಂಟ್‌ಗಳಿಗೆ ಏರ್ ಮಾರ್ಷಲ್‌ಗಳ ಬಗ್ಗೆ ತಿಳಿದಿರುತ್ತದೆ. ಫ್ಲೈಟ್ ಅಟೆಂಡೆಂಟ್‌ಗಳು, ಏರ್ ಮಾರ್ಷಲ್‌ಗಳು ಎಲ್ಲಿ ಕುಳಿತುಕೊಳ್ಳಬೇಕು ಎಂಬುದನ್ನು ತಿಳಿಸುತ್ತಾರೆ.

ವಿಮಾನಗಳ ಭದ್ರತೆಗೆ ನಿಯೋಜಿಸುವ ಏರ್ ಮಾರ್ಷಲ್‌ಗಳ ಬಗೆಗಿನ ಸಂಗತಿಗಳಿವು

ವಿಮಾನದಲ್ಲಿ ಎಷ್ಟು ಜನ ಏರ್ ಮಾರ್ಷಲ್‌ಗಳಿರುತ್ತಾರೆ?

ವಿಮಾನದ ಆಧಾರದ ಮೇಲೆ ಏರ್ ಮಾರ್ಷಲ್‌ಗಳನ್ನು ನೇಮಿಸಲಾಗುತ್ತದೆ. ದೇಶಿಯ ವಿಮಾನಗಳಾದರೆ ಒಬ್ಬರು ಇಲ್ಲವೇ ಇಬ್ಬರು ಏರ್ ಮಾರ್ಷಲ್‌ಗಳಿರುತ್ತಾರೆ. ಅಂತರರಾಷ್ಟ್ರೀಯ ವಿಮಾನಗಳಾದರೆ ಗರಿಷ್ಠ ನಾಲ್ಕು ಏರ್ ಮಾರ್ಷಲ್‌ಗಳಿರುತ್ತಾರೆ.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ವಿಮಾನಗಳ ಭದ್ರತೆಗೆ ನಿಯೋಜಿಸುವ ಏರ್ ಮಾರ್ಷಲ್‌ಗಳ ಬಗೆಗಿನ ಸಂಗತಿಗಳಿವು

ಏರ್ ಮಾರ್ಷಲ್‌ಗಳನ್ನು ಪತ್ತೆ ಹಚ್ಚುವುದು ಹೇಗೆ?

ಕೆಲವು ಸಂಗತಿಗಳಿಂದ ಏರ್ ಮಾರ್ಷಲ್‌ಗಳನ್ನು ಪತ್ತೆ ಹಚ್ಚಬಹುದು. ಅವರು ಒಬ್ಬಂಟಿಯಾಗಿ ಪ್ರಯಾಣಿಸುತ್ತಾರೆ. ಏರ್ ಮಾರ್ಷಲ್‌ಗಳು ಕೊನೆಯವರಾಗಿ ವಿಮಾನ ಹತ್ತುತ್ತಾರೆ. ದೂರದ ಪ್ರಯಾಣದಲ್ಲಿಯೂ ಸಹ ಅವರು ನಿದ್ರೆ ಮಾಡುವುದಿಲ್ಲ. ಈ ಸಂಗತಿಗಳಿಂದ ಏರ್ ಮಾರ್ಷಲ್‌ಗಳನ್ನು ಪತ್ತೆ ಹಚ್ಚಬಹುದು.

Most Read Articles

Kannada
English summary
Interesting things about air marshals in aero planes. Read in Kannada.
Story first published: Tuesday, April 27, 2021, 20:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X