ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಕೈಲಾಶ ಯಾತ್ರೆಗೆ ಅನುಕೂಲವಾಗುವಂತೆ ಚೀನಾದ ಗಡಿಯಲ್ಲಿ ಹೊಸ ರಸ್ತೆಯನ್ನು ನಿರ್ಮಿಸಲಾಗಿದೆ. ಈ ರಸ್ತೆಗಳು ಕೈಲಾಶ್ ತೀರ್ಥಯಾತ್ರೆಯ ಹೊರತಾಗಿ ಭಾರತದ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಚೀನಾ ದೇಶವು ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವುದು ಸಾಮಾನ್ಯ ಸಂಗತಿಯಾಗಿದೆ.

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಈ ಕಾರಣಕ್ಕೆ ಗಡಿ ಭದ್ರತೆಯನ್ನು ಬಲಪಡಿಸಲು ಹಾಗೂ ಯುದ್ಧದ ಸಂದರ್ಭದಲ್ಲಿ ಸೈನ್ಯವನ್ನು ಗಡಿಗೆ ಕರೆತರಲು ಪ್ರಧಾನಿ ಮೋದಿರವರು ಗಡಿಯಲ್ಲಿನ ರಸ್ತೆ ಯೋಜನೆಗಳನ್ನು ತೀವ್ರಗೊಳಿಸಿದ್ದಾರೆ.ಚೀನಾದ ಗಡಿಯನ್ನು ಕೆಲವೇ ಗಂಟೆಗಳಲ್ಲಿ ತಲುಪುವಂತೆ ಈ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ನಿರ್ಮಿಸಲಾದ ಉದ್ದವಾದ ಸೇತುವೆಗಳು ಹಾಗೂ ರಸ್ತೆಗಳನ್ನು ತೆರೆಯಲಾಗುತ್ತಿದೆ.

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಚೀನಾದ ಗಡಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ರಸ್ತೆ ಭಾರತಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಚೀನಾದ ಗಡಿಯೊಳಗಿರುವ ಕೈಲಾಶ್ ಪರ್ವತಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಈ ರಸ್ತೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಲಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಗಡಿ ಭದ್ರತೆಗೆ ಹಾಗೂ ಯುದ್ಧದ ಪರಿಸ್ಥಿತಿಯಲ್ಲಿ ಈ ರಸ್ತೆ ಮಿಲಿಟರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಲಾಗಿದೆ. ಈ ಮೊದಲು ಸಿಕ್ಕಿಂ ಅಥವಾ ನೇಪಾಳ ಮೂಲಕ ಚೀನಾದ ಕೈಲಾಶ್ ಮಾನಸರೋವರ್ ತೀರ್ಥಯಾತ್ರೆಗೆ ತೆರಳಬೇಕಾಗಿತ್ತು. ಈ ಮಾರ್ಗಗಳು ಎತ್ತರದ ಪರ್ವತ ಶ್ರೇಣಿಗಳಾಗಿದ್ದವು. ಜೊತೆಗೆ ಯಾತ್ರಾರ್ಥಿಗಳಿಗೆ ಬಹಳ ಅಪಾಯಕಾರಿಯಾಗಿದ್ದವು.

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಹೊಸ ರಸ್ತೆ ಉತ್ತರಾಖಂಡದ ತಾರ್ಚುಲಾದಿಂದ ಚೀನಾದ ಗಡಿಯಲ್ಲಿರುವ ಲಿಪು ಲೇಕ್ ಪಾಸ್‌ವರೆಗೆ 80 ಕಿ.ಮೀ ದೂರದಲ್ಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರವರು ಕಳೆದ ಶುಕ್ರವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಈ ರಸ್ತೆಯನ್ನು ಉದ್ಘಾಟಿಸಿದರು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಹಿಂದೂಗಳು, ಬೌದ್ಧರು ಹಾಗೂ ಜೈನರು ಪ್ರತಿ ವರ್ಷ ಕೈಲಾಶ್-ಮಾನಸರೋವರ್‌ಗೆ ಯಾತ್ರೆ ಕೈಗೊಳ್ಳುತ್ತಾರೆ. ಸಿಕ್ಕಿಂ ಅಥವಾ ನೇಪಾಳದ ಮೂಲಕ ಸಾಗುತ್ತಿದ್ದ ಮಾರ್ಗವು 2 ರಿಂದ 3 ವಾರಗಳನ್ನು ತೆಗೆದುಕೊಳ್ಳುತ್ತಿತ್ತು. ಈ ಮಾರ್ಗದಲ್ಲಿ ವಯಸ್ಸಾದವರು ತಲುಪುವುದು ಕಷ್ಟಕರವಾಗಿತ್ತು.

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಈ ಹೊಸ ರಸ್ತೆಯು ಈ ಕಷ್ಟವನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ. ಹಲವು ಅಡೆತಡೆಗಳನ್ನು ನಿವಾರಿಸಿ ಈ ರಸ್ತೆಯನ್ನು ನಿರ್ಮಿಸಲಾಗಿದೆ. ರಸ್ತೆಯನ್ನು ಕೆಟ್ಟ ಹವಾಮಾನಕ್ಕೂ ಹೊಂದಿಕೊಳ್ಳುವಂತೆ ಕಡಿದಾದ ಬೆಟ್ಟ ಹಾಗೂ ಒರಟು ಬಂಡೆಗಳ ಮೇಲೆ ನಿರ್ಮಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಈ ಮೊದಲು ಕೈಲಾಶ್-ಮಾನಸರೋವರ್‌ಗೆ ಯಾತ್ರೆಗೆ ಹೋಗುವವರು 20% ಭಾರತದಲ್ಲಿ ಹಾಗೂ 80% ಚೀನಾದಲ್ಲಿ ಚಲಿಸಬೇಕಿತ್ತು. ಈಗ ಇದು ಉಲ್ಟಾ ಆಗಿದ್ದು, ಇನ್ನು ಮುಂದೆ ಭಾರತದಲ್ಲಿ 80% ಹಾಗೂ ಚೀನಾದಲ್ಲಿ 20% ಚಲಿಸಬೇಕಿದೆ.

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಕೈಲಾಶ್-ಮಾನಸರೋವರ್ ತೀರ್ಥಯಾತ್ರೆಗೆ ಹೋಗುವವರು ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ತಮ್ಮ ತೀರ್ಥಯಾತ್ರೆಯನ್ನು ಪೂರ್ಣಗೊಳಿಸಬಹುದು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಈ ಹೊಸ ರಸ್ತೆಯಲ್ಲಿ ವಾಹನಗಳು 75 ಕಿ.ಮೀವರೆಗೆ ಪ್ರಯಾಣಿಸಬಹುದು. ಉಳಿದ 5 ಕಿ.ಮೀ ಕಾಮಗಾರಿ ಪೂರ್ಣಗೊಂಡಿಲ್ಲದ ಕಾರಣಕ್ಕೆ ನಡೆದುಕೊಂಡು ಸಾಗಬೇಕು. ಈ ಹೊಸ ರಸ್ತೆಯಿಂದಾಗಿ ಸ್ಥಳೀಯ ಗ್ರಾಮಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ. ಇದರಿಂದಾಗಿ ಗ್ರಾಮೀಣ ಆರ್ಥಿಕತೆ ಸುಧಾರಿಸುವ ಸಾಧ್ಯತೆಗಳಿವೆ.

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಲಿಪು ಸರೋವರದ ಮೂಲಕ ಭಾರತ ಮತ್ತು ಚೀನಾ ನಡುವೆ ವ್ಯಾಪಾರ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ರಸ್ತೆ ಎರಡೂ ದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಚೀನಾದೊಂದಿಗೆ ವ್ಯಾಪಾರ ಮಾಡುವುದಾಗಿ ಹೇಳಿಕೊಂಡು ಕೇಂದ್ರ ಸರ್ಕಾರವು ಮಿಲಿಟರಿ ಬಳಕೆಗಾಗಿ ಈ ರಸ್ತೆಯನ್ನು ನಿರ್ಮಿಸಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಈ ರಸ್ತೆ ನಿರ್ಮಾಣಕ್ಕೆ ಚೀನಾವು ವಿರೋಧವನ್ನು ವ್ಯಕ್ತಪಡಿಸಿತ್ತು. ಈ ರಸ್ತೆ ನಿರ್ಮಾಣವು ಭಾರತಕ್ಕೆ ರಾಜತಾಂತ್ರಿಕವಾಗಿ ಭಾರತಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ರಸ್ತೆ ನಿರ್ಮಾಣದ ಮೂಲಕ ಭಾರತವು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಿದೆ.

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಈ ರಸ್ತೆಯಿಂದಾಗಿ ಭಾರತೀಯ ಸೈನಿಕರು ವೇಗವಾಗಿ ಚೀನಾದ ಗಡಿಯನ್ನು ತಲುಪಬಹುದು. ಲಿಪು ಲೇಕ್ ಪಾಸ್ ಭಾರತ, ಚೀನಾ ಮತ್ತು ನೇಪಾಳ ದೇಶಗಳ ನಡುವಿರುವ ಪ್ರಮುಖ ಗಡಿ ಭಾಗವಾಗಿದೆ. ಈ ರಸ್ತೆ ನಿರ್ಮಾಣಕ್ಕೆ ನೇಪಾಳ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಆದರೆ ಭಾರತವು ಈಗಾಗಲೇ ಯಾತ್ರಾರ್ಥಿಗಳು ಬಳಸುತ್ತಿರುವ ಈ ಮಾರ್ಗವನ್ನು ಐತಿಹಾಸಿಕ ದಾಖಲೆಗಳನ್ನು ಆಧಾರದ ಮೇಲೆ ನವೀಕರಿಸಲಾಗಿದೆ ಎಂದು ಹೇಳಿದೆ. ಸಿಕ್ಕಿಂ ಮೂಲಕ ತಲುಪುವ ಮಾರ್ಗ ಸುಮಾರು 2,780 ಕಿ.ಮೀಗಳಾಗುತ್ತದೆ. ಈ ಪೈಕಿ ದೆಹಲಿಯಿಂದ 1,115 ಕಿ.ಮೀ ನಂತರ ರಸ್ತೆ ಮೂಲಕ 1,665 ಕಿ.ಮೀ ಚಲಿಸಬೇಕು. ನೇಪಾಳದ ಮೂಲಕ 1,940 ಕಿ.ಮೀ ಪ್ರಯಾಣಿಸಬೇಕು.

ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!

ಆದರೆ ಈಗ ದೆಹಲಿಯಿಂದ ಲಿಪುಲೆಕ್‌ಗೆ ಹೋಗುವ ರಸ್ತೆಯನ್ನು ಎರಡು ದಿನಗಳಲ್ಲಿ ತಲುಪಬಹುದು. ಈ ರಸ್ತೆಯ ಮೂಲಕ ವಿಮಾನ ಅಥವಾ ಹೆಲಿಕಾಪ್ಟರ್ ಪ್ರಯಾಣವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ಬಾಕಿಯಿರುವ 5 ಕಿ.ಮೀ ಪೂರ್ಣಗೊಂಡರೆ ಇನ್ನೂ ವೇಗವಾಗಿ ಕೈಲಾಶ್ ಪರ್ವತಕ್ಕೆ ತೀರ್ಥಯಾತ್ರೆಗೆ ತೆರಳಬಹುದು.

Article Published On: Tuesday, May 12, 2020, 14:01 [IST]
English summary
Interesting things about new road for Kailash Mansarovar. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+