ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸುರಂಗ ಮಾರ್ಗದ ಬಗೆಗಿನ ಆಸಕ್ತಿಕರ ಸಂಗತಿಗಳಿವು

ವಿಶ್ವದ ಅತಿ ಉದ್ದದ ಸುರಂಗವಾದ ಅಟಲ್ ಸುರಂಗವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು. ಈ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿರವರು ಉದ್ಘಾಟಿಸಿದ್ದರು. ಸುಮಾರು 8.8 ಕಿ.ಮೀ ಉದ್ದದ ಈ ಸುರಂಗವು ಮನಾಲಿಯಿಂದ ಲಡಾಖ್‌ಗೆ ಸಂಪರ್ಕ ಕಲ್ಪಿಸುತ್ತದೆ.

ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸುರಂಗ ಮಾರ್ಗದ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಈಗ ಇದೇ ರೀತಿಯ ಮತ್ತೊಂದು ಸುರಂಗ ಮಾರ್ಗವು ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. ಈ ಸುರಂಗ ಮಾರ್ಗವು ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗ ಮಾರ್ಗದ ಬಗೆಗಿನ ಐದು ಆಸಕ್ತಿದಾಯಕ ಸಂಗತಿಗಳನ್ನು ಈ ಲೇಖನದಲ್ಲಿ ನೋಡೋಣ.

ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸುರಂಗ ಮಾರ್ಗದ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಜಮ್ಮು - ಶ್ರೀನಗರದ ನಡುವೆ ಸಂಪರ್ಕ

ಈ ಸುರಂಗವು ದಕ್ಷಿಣ ಕಾಶ್ಮೀರದ ಬನಿಹಾಲ್ ಹಾಗೂ ಕಾಜಿಕುಂಡ್'ಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈಗ ಹವಾಮಾನಕ್ಕೆ ಅನುಗುಣವಾಗಿ ಬನಿಹಾಲ್ ಹಾಗೂ ದಕ್ಷಿಣ ಕಾಶ್ಮೀರವನ್ನು ಸಂಪರ್ಕಿಸುವ ಮಾರ್ಗವನ್ನು ಕೆಲವೊಮ್ಮೆ ಮುಚ್ಚಲಾಗುತ್ತದೆ.

ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸುರಂಗ ಮಾರ್ಗದ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಹೊಸ ಸುರಂಗ ಮಾರ್ಗವು ಬಳಕೆಗೆ ಬಂದ ನಂತರ ಈ ಪರಿಸ್ಥಿತಿ ತಪ್ಪಲಿದೆ. ಭಾರೀ ಹಿಮಪಾತ ಹಾಗೂ ಭೂಕುಸಿತದಿಂದ ಉಂಟಾಗುವ ರಸ್ತೆ ತಡೆಯನ್ನು ಈ ಸುರಂಗ ಮಾರ್ಗವು ಸಂಪೂರ್ಣವಾಗಿ ತಪ್ಪಿಸಲಿದೆ.

ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸುರಂಗ ಮಾರ್ಗದ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಪ್ರಯಾಣದ ಅವಧಿಯಲ್ಲಿ ಕಡಿತ

ಹೊಸ ಸುರಂಗ ಮಾರ್ಗವು ಬಳಕೆಗೆ ಬಂದ ನಂತರ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಈ ಸುರಂಗ ಮಾರ್ಗದ ಮೂಲಕ ಜಮ್ಮುವಿನಿಂದ ಶ್ರೀನಗರಕ್ಕೆ ಕೇವಲ 1ರಿಂದ 1.5 ಗಂಟೆಗಳಲ್ಲಿ ಸಂಚರಿಸಬಹುದು. ಈ ಮಾರ್ಗವು ಈಗ ಇರುವ ಅಂತರಕ್ಕಿಂತ 16 ಕಿ.ಮೀ ಕಡಿಮೆಯಾಗಲಿದೆ.

ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸುರಂಗ ಮಾರ್ಗದ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಚಿತ್ರಕೃಪೆ: ಬಸಿತ್ ಜಾರ್ಗರ್ / ಟ್ವಿಟರ್

ಸುರಂಗದ ಉದ್ದ

8.5 ಕಿ.ಮೀ ಉದ್ದವಿರುವ ಈ ಸುರಂಗ ಮಾರ್ಗದ ನಿರ್ಮಾಣಕ್ಕಾಗಿ ರೂ.2,100 ಕೋಟಿ ನಿಗದಿಪಡಿಸಲಾಗಿದೆ. 2011ರಲ್ಲಿ ಆರಂಭವಾಗಿರುವ ಈ ಸುರಂಗ ಮಾರ್ಗದ ನಿರ್ಮಾಣ ಕಾಮಗಾರಿಯು ಶೀಘ್ರದಲ್ಲೇ ಮುಕ್ತಾಯಗೊಳ್ಳುವ ನಿರೀಕ್ಷೆಗಳಿವೆ.

ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸುರಂಗ ಮಾರ್ಗದ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಕರೋನಾ ವೈರಸ್ ಬಿಕ್ಕಟ್ಟಿನಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಇದರ ಜೊತೆಗೆ ಇನ್ನಷ್ಟು ಅಡಚಣೆಗಳಾಗಿವೆ ಎಂದು ಹೇಳಲಾಗಿದೆ. ಎಲ್ಲಾ ಅಡಚಣೆ ಹಾಗೂ ತೊಂದರೆಗಳನ್ನು ಮೀರಿ ಈ ಸುರಂಗವು ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ.

ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸುರಂಗ ಮಾರ್ಗದ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಸುಗಮ ಸಾರಿಗೆ

ಸುಗಮ ಸಾರಿಗೆಗಾಗಿ ರಚನೆ, ಕಾರ್ಯ ಹಾಗೂ ಪ್ರಸರಣದ ಆಧಾರದ ಮೇಲೆ ಈ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಈ ಸುರಂಗ ಮಾರ್ಗದ ಒಳಗೆ 124 ಜೆಟ್ ಫ್ಯಾನ್‌, 234 ಸಿಸಿಟಿವಿ ಕ್ಯಾಮೆರಾ ಹಾಗೂ ಅಗ್ನಿಶಾಮಕ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ.

ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸುರಂಗ ಮಾರ್ಗದ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಪ್ರತಿ 500 ಮೀಟರ್‌ಗಳಿಗೆ ಒಂದರಂತೆ ತುರ್ತು ನಿರ್ಗಮನ ಪಥವಿರಲಿದೆ. ಈ ಸುರಂಗ ಮಾರ್ಗದಲ್ಲಿ ಸಾಗುವಾಗ ಮಧ್ಯದಲ್ಲಿ ಏನಾದರೂ ತೊಂದರೆ ಕಂಡು ಬಂದರೆ ಈ ತುರ್ತು ಪಥಗಳ ಮೂಲಕ ಸುಲಭವಾಗಿ ನಿರ್ಗಮಿಸಬಹುದು.

ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸುರಂಗ ಮಾರ್ಗದ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಜವಾಹರ್ ಸುರಂಗ

ಜವಾಹರ್ ಸುರಂಗ ಮಾರ್ಗದಿಂದ 400 ಮೀಟರ್ ಕೆಳಗೆ ಈ ಹೊಸ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಈ ಹೊಸ ಸುರಂಗ ಮಾರ್ಗವು ಸಮುದ್ರ ಮಟ್ಟದಿಂದ 2,194 ಮೀಟರ್ ಎತ್ತರದಲ್ಲಿದೆ.

Most Read Articles

Kannada
English summary
Interesting things about new tunnel connecting Jammu To Srinagar. Read in Kannada.
Story first published: Monday, June 14, 2021, 12:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X