ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ರೈಲುಗಳ ಪ್ರಯಾಣ ಅವಧಿಯನ್ನು ಕಡಿಮೆ ಮಾಡಲು ಹಾಗೂ ಪ್ರಯಾಣದ ಅನುಭವವನ್ನು ಹೆಚ್ಚಿಸಲು ಭಾರತೀಯ ರೈಲ್ವೆಯು ನಿರಂತರವಾಗಿ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ರಾಜಧಾನಿ ರೈಲುಗಳಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ.

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ಪುಶ್ ಪುಲ್ ಎಂದು ಕರೆಯಲ್ಪಡುವ ಎರಡು ಎಂಜಿನ್‌ಗಳನ್ನು ಹೊಂದಿರುವ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳನ್ನು ಚಾಲನೆ ಮಾಡುವ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಕಳೆದ ಜನವರಿಯಿಂದ ಪುಶ್ ಪುಲ್ ತಂತ್ರಜ್ಞಾನವನ್ನು ಹೊಂದಿರುವ ರಾಜಧಾನಿ ರೈಲುಗಳು ದೆಹಲಿ-ಮುಂಬೈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ.

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ಸಾಮಾನ್ಯವಾಗಿ ರೈಲುಗಳಲ್ಲಿ ಮುಂಭಾಗದಲ್ಲಿ ಮಾತ್ರ ಎಂಜಿನ್‌ ಜೋಡಿಸಲಾಗಿರುತ್ತದೆ. ಹೆಚ್ಚುವರಿ ಸಾಮರ್ಥ್ಯವನ್ನು ಒದಗಿಸಲು ಕೆಲವು ಗುಡ್ಡಗಾಡು ಮಾರ್ಗಗಳಲ್ಲಿ ಮಾತ್ರ ರೈಲು ಎಂಜಿನ್'ಗಳನ್ನು ಹಿಂಭಾಗದಲ್ಲಿ ಜೋಡಿಸಲಾಗಿರುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ಸರಕು ಸಾಗಣೆ ರೈಲುಗಳ ಹಿಂಭಾಗದಲ್ಲಿ ಎಂಜಿನ್ ಅಳವಡಿಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಈಗ ರಾಜಧಾನಿ ರೈಲುಗಳಲ್ಲಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಎರಡು ಎಂಜಿನ್ ಅಳವಡಿಸಲಾಗಿದ್ದು ಅವುಗಳನ್ನು ಪುಶ್ ಪುಲ್ ಮೋಡ್‌ಗೆ ಪರಿವರ್ತಿಸಲಾಗಿದೆ.

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ಹಿಂಭಾಗದಲ್ಲಿರುವ ಎಂಜಿನ್ ರೈಲನ್ನು ಮುಂದಕ್ಕೆ ತಳ್ಳಿದರೆ, ಮುಂಭಾಗದಲ್ಲಿರುವ ಎಂಜಿನ್ ರೈಲನ್ನು ಪುಲ್ ಮಾಡುತ್ತದೆ. ಈ ಎರಡು ಎಂಜಿನ್‌ಗಳು ಒಂದೇ ನಿಯಂತ್ರಣದಲ್ಲಿ ಚಲಿಸಲು ಪುಶ್ ಪುಲ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ಪುಶ್ ಪುಲ್ ತಂತ್ರಜ್ಞಾನವನ್ನು ಹೊಂದಿರುವ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳು ದೆಹಲಿ - ಮುಂಬೈ, ದೆಹಲಿ - ಕೋಲ್ಕತಾ ಸೇರಿದಂತೆ ಹಲವು ಮಾರ್ಗಗಳಲ್ಲಿ ಸಂಚರಿಸಲಿವೆ. ರೈಲ್ವೆ ಇಲಾಖೆಯ ಪ್ರಕಾರ, 12 ಪುಶ್ ಪುಲ್ ರಾಜಧಾನಿ ರೈಲುಗಳು ಸಂಚಾರಕ್ಕೆ ಸಿದ್ಧವಾಗಿವೆ.

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ದೇಶದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ರಾಜಧಾನಿ ರೈಲುಗಳನ್ನು ಈ ವ್ಯವಸ್ಥೆಗೆ ಪರಿವರ್ತಿಸಲಾಗುವುದು. ಮುಂಬರುವ ದಿನಗಳಲ್ಲಿ ಶತಾಬ್ದಿ ರೈಲುಗಳನ್ನು ಸಹ ಈ ವ್ಯವಸ್ಥೆಗೆ ಬದಲಿಸಲು ರೈಲ್ವೆ ಇಲಾಖೆಯು ಚಿಂತನೆ ನಡೆಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ರೈಲುಗಳು ನಿಂತು ನಿರ್ಗಮಿಸುವಾಗ ಅಥವಾ ಬ್ರೇಕ್‌ ಹಾಕಿದಾಗ ರೈಲು ಗಾಡಿಗಳನ್ನು ಸಂಪರ್ಕಿಸುವ ಹುಕ್ ಸಿಸ್ಟಂನಲ್ಲಿರುವ ಸಣ್ಣ ಗ್ಯಾಪ್, ಈ ಪುಶ್ ಪುಲ್ ಸಿಸ್ಟಂನಲ್ಲಿರುವ ಪ್ರಮುಖ ಲಕ್ಷಣವಾಗಿದೆ.

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ರೈಲಿನಲ್ಲಿ ಮಲಗುವ ಪ್ರಯಾಣಿಕರು ರೈಲುಗಳ ವೈಬ್ರೆಷನ್'ನಿಂದ ಬೆಚ್ಚಿಬೀಳುವ ಸಾಧ್ಯತೆಗಳಿರುತ್ತವೆ. ಆದರೆ ಪುಶ್ ಪುಲ್ ಸಿಸ್ಟಂ ಹೊಂದಿರುವ ರಾಜಧಾನಿ ರೈಲುಗಳು ಯಾವುದೇ ವೈಬ್ರೆಷನ್ ಆಗಲಿ ಅಥವಾ ಅಲುಗಾಟವನ್ನಾಗಿ ಮಾಡುವುದಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ಇದರಿಂದ ಪ್ರಯಾಣಿಕರು ಐಷಾರಾಮಿ ಪ್ರಯಾಣದ ಅನುಭವವನ್ನು ಪಡೆಯಬಹುದು. ಎರಡು ಎಂಜಿನ್‌ಗಳನ್ನು ಹೊಂದಿರುವುದರಿಂದ ರೈಲು ನಿಲ್ದಾಣಗಳಲ್ಲಿ ಎಂಜಿನ್ ಬದಲಿಸುವುದರಿಂದ ಆಗುವ ವಿಳಂಬವನ್ನು ತಪ್ಪಿಸಬಹುದು.

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ಇದರಿಂದಾಗಿ ಪುಶ್ ಪುಲ್ ಎಂಜಿನ್‌ಗಳು ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತವೆ. ಈ ಪುಶ್ ಪುಲ್ ತಂತ್ರಜ್ಞಾನದಿಂದಾಗಿ ರೈಲುಗಳು ಪ್ರತಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಲು ಸಾಧ್ಯವಾಗಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ರೈಲ್ವೆ ಇಲಾಖೆಯ ಅಧಿಕಾರಿಗಳ ಪ್ರಕಾರ ಪುಶ್ ಪುಲ್ ತಂತ್ರಜ್ಞಾನದಿಂದಾಗಿ ಮುಂಬೈ-ದೆಹಲಿ ಮಾರ್ಗದಲ್ಲಿನ ಪ್ರಯಾಣದ ಅವಧಿ ಒಂದೂವರೆ ಗಂಟೆಗಳಷ್ಟು ಕಡಿಮೆಯಾಗಲಿದೆ.

ರೈಲು ಪ್ರಯಾಣವನ್ನು ಆರಾಮದಾಯಕವಾಗಿಸುವ ಪುಶ್ ಪುಲ್ ತಂತ್ರಜ್ಞಾನದ ಬಗೆಗಿನ ಸಂಗತಿಗಳಿವು

ಇದರಿಂದ ರಾಜಧಾನಿ ರೈಲುಗಳಲ್ಲಿ ಜನರೇಟರ್‌ಗಳನ್ನು ಕನೆಕ್ಟ್ ಮಾಡುವುದು ಸಹ ತಪ್ಪಲಿದೆ. ಇದರಿಂದಾಗಿ ಇಂಧನ ಹಾಗೂ ನಿರ್ವಹಣೆ ಮೇಲೆ ಮಾಡುವ ವೆಚ್ಚಗಳುಗಮನಾರ್ಹವಾಗಿ ಕಡಿಮೆಯಾಗುತ್ತವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Most Read Articles

Kannada
English summary
Interesting things about push pull technology which makes journey more comfortable. Read in Kannada.
Story first published: Saturday, March 13, 2021, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X