ಅತಿವೇಗದಲ್ಲಿ ಚಲಿಸಿ ರಸ್ತೆ ವಿಭಜಕಕ್ಕೆ ಗುದ್ದಿದ ಐಪಿಎಲ್ ಕ್ರಿಕೆಟರ್

ಲಾಕ್‌ಡೌನ್ ಅವಧಿಯಲ್ಲಿ ಹಲವಾರು ರಸ್ತೆ ಅಪಘಾತಗಳು ಸಂಭವಿಸಿವೆ. ಐಪಿಎಲ್ ಕ್ರಿಕೆಟಿಗ ಹಾಗೂ ಉತ್ತರ ಪ್ರದೇಶ ಅಂಡರ್ -19 ತಂಡದ ಉಪನಾಯಕ ಆಕಾಶ್‌ದೀಪ್ ನಾಥ್‌ರವರಿಗೂ ಸಹ ರಸ್ತೆ ಅಪಘಾತ ಸಂಭವಿಸಿದೆ. ಆಕಾಶ್‌ದೀಪ್‌ರವರು ಚಾಲನೆ ಮಾಡುತ್ತಿದ್ದ ಫೋರ್ಡ್ ಮಸ್ಟಾಂಗ್ ಕಾರು ಅಪಘಾತಕ್ಕೀಡಾಗಿದೆ.

ಅತಿವೇಗದಲ್ಲಿ ಚಲಿಸಿ ರಸ್ತೆ ವಿಭಜಕಕ್ಕೆ ಗುದ್ದಿದ ಐಪಿಎಲ್ ಕ್ರಿಕೆಟರ್

ಫ್ಲೈಓವರ್‌ ಮೇಲೆ ಅತಿ ವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಆಕಾಶ್‌ದೀಪ್ ಕಾರಿನ ಮೇಲೆ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಲಕ್ನೋದ ಕುಕ್ರೈಲ್ ಫ್ಲೈಓವರ್‌ ಮೇಲೆ ಈ ಅಪಘಾತ ಸಂಭವಿಸಿದೆ ಎಂದು ವರದಿಗಳು ಹೇಳಿವೆ.

ಅತಿವೇಗದಲ್ಲಿ ಚಲಿಸಿ ರಸ್ತೆ ವಿಭಜಕಕ್ಕೆ ಗುದ್ದಿದ ಐಪಿಎಲ್ ಕ್ರಿಕೆಟರ್

ಈ ಫ್ಲೈಓವರ್ ಅನ್ನು ಕಳೆದ ವರ್ಷವಷ್ಟೇ ಉದ್ಘಾಟಿಸಲಾಗಿತ್ತು. 5.8 ಕಿ.ಮೀ ಉದ್ದದ ಈ ಫ್ಲೈಓವರ್‌ನಲ್ಲಿ ಒಂದೇ ಒಂದು ಸ್ಪೀಡ್ ಬ್ರೇಕರ್ ಇಲ್ಲ. ಈ ಕಾರಣದಿಂದಾಗಿ ಈ ಫ್ಲೈಓವರ್ ವೇಗವಾಗಿ ವಾಹನ ಚಾಲನೆ ಮಾಡುವ ವಾಹನ ಚಾಲಕರಿಗೆ ಆಕರ್ಷಣೆಯ ಕೇಂದ್ರವಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಅತಿವೇಗದಲ್ಲಿ ಚಲಿಸಿ ರಸ್ತೆ ವಿಭಜಕಕ್ಕೆ ಗುದ್ದಿದ ಐಪಿಎಲ್ ಕ್ರಿಕೆಟರ್

ಈ ಘಟನೆ ನಡೆದಾಗ ಆಕಾಶ್‌ದೀಪ್‌ರವರೇ ಕಾರನ್ನು ಚಾಲನೆ ಮಾಡುತ್ತಿದ್ದರು. ಅಪಘಾತ ಸಂಭವಿಸಿದಾಗ ಕಾರಿನ ವೇಗ ಎಷ್ಟಿತ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲದಿದ್ದರೂ ಕಾರಿನ ಸ್ಥಿತಿಯನ್ನು ನೋಡಿದಾಗ, ಅತಿ ವೇಗದಲ್ಲಿ ಚಲಿಸಿರುವುದು ಖಚಿತವಾಗಿದೆ.

ಅತಿವೇಗದಲ್ಲಿ ಚಲಿಸಿ ರಸ್ತೆ ವಿಭಜಕಕ್ಕೆ ಗುದ್ದಿದ ಐಪಿಎಲ್ ಕ್ರಿಕೆಟರ್

ಮೂಲಗಳ ಪ್ರಕಾರ, ಆಕಾಶ್‌ದೀಪ್‌ರವರ ಮಸ್ಟಾಂಗ್ ಕಾರು ಮೊದಲು ಮಾರುತಿ 800 ಕಾರಿಗೆ ನಂತರ, ಹ್ಯುಂಡೈ ಎಲೈಟ್ ಐ 20 ಕಾರುಗಳಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಮಸ್ಟಾಂಗ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಏರ್‌ಬ್ಯಾಗ್ ತೆರೆದುಕೊಂಡಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಅತಿವೇಗದಲ್ಲಿ ಚಲಿಸಿ ರಸ್ತೆ ವಿಭಜಕಕ್ಕೆ ಗುದ್ದಿದ ಐಪಿಎಲ್ ಕ್ರಿಕೆಟರ್

ಈ ಅಪಘಾತದಲ್ಲಿ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಆಕಾಶ್‌ದೀಪ್ ಅವರ ಕಾರಿನಲ್ಲಿ 5 ಜನರಿದ್ದರು. ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಎಲ್ಲರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಕಾಶ್‌ದೀಪ್ ಈ ಕಾರನ್ನು ಕಳೆದ ವರ್ಷವಷ್ಟೇ ಖರೀದಿಸಿದ್ದರು.

ಅತಿವೇಗದಲ್ಲಿ ಚಲಿಸಿ ರಸ್ತೆ ವಿಭಜಕಕ್ಕೆ ಗುದ್ದಿದ ಐಪಿಎಲ್ ಕ್ರಿಕೆಟರ್

ಫೋರ್ಡ್ ಮಸ್ಟಾಂಗ್‌ ಕಾರಿನಲ್ಲಿ 5.0 ಲೀಟರಿನ ವಿ 8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 396 ಬಿಹೆಚ್‌ಪಿ ಪವರ್ ಹಾಗೂ 515 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಭಾರತದಲ್ಲಿ, ಈ ಕಾರನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.

Article Published On: Tuesday, June 2, 2020, 15:43 [IST]
English summary
IPL cricketer Akashdeep Nath crashes his Ford Mustang GT. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+