ಮಾನವನ ಸಹಾಯವಿಲ್ಲದೆ ರಣಭೂಮಿಗಿಳಿಯುವ ಯುದ್ಧ ಟ್ಯಾಂಕರ್
ಯುದ್ಧ ಭೂಮಿಯಲ್ಲಿ ಟ್ಯಾಂಕರ್ ಗಳ ಪಾತ್ರ ನಿರ್ಣಾಯಕವೆನಿಸುತ್ತದೆ. ಒಂದು ರೀತಿಯಲ್ಲಿ ಸೈನ್ಯವನ್ನು ಮುನ್ನಡೆಸುವುದು ಯುದ್ಧ ಟ್ಯಾಂಕರ್ ಗಳಾಗಿರುತ್ತದೆ. ಹಾಗಾಗಿ ಯುದ್ಧ ಟ್ಯಾಂಕರ್ ಗಳನ್ನು ಮುನ್ನಡೆಸುವ ಸೈನಿಕರಿಗೆ ಪ್ರಾಣಾಪಾಯ ಸಂಭವಿಸುವ ಭೀತಿಯು ಜಾಸ್ತಿಯಿರುತ್ತದೆ.
ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ), 'ರೊ ಬ್ಯಾಟಲ್' ಎಂಬ ಆರು ಚಕ್ರಗಳ ಮಾನವರಹಿತ ಗ್ರೌಂಡ್ ಯುದ್ಧ ಟ್ಯಾಂಕರನ್ನು (unmanned ground vehicle) ಅಭಿವೃದ್ಧಿಪಡಿಸಿದೆ.

ರಣರಂಗದಲ್ಲಿ ಯಾವುದೇ ರೀತಿ ಅಡೆತಡೆಗಳು ಎದುರಾದರೂ ಸಮರ್ಥವಾಗಿ ಎದುರಿಸಲಿದ್ದು, ಬಹಳ ಬುದ್ಧಿವಂತಿಕೆಯಿಂದ ಕಾರ್ಯಾಚರಣೆಯನ್ನು ನಡೆಸಲಿದೆ.

ಕದನ ನಡೆಯುತ್ತಿರುವಾಗ ಸೈನ್ಯಕ್ಕೆ ನೆರವಾಗುವ ರೀತಿಯಲ್ಲಿ ಇದರ ನೆರವನ್ನು ಪಡೆಯಬಹುದಾಗಿದೆ. ಹಲವಾರು ಯುದ್ಧ ಕಾರ್ಯಾಚರಣೆಗಳು ಸ್ವಯಂಚಾಲಿತವಾಗಿ ಕೆಲಸ ಮಾಡಲಿದೆ.

ಸಂಪೂರ್ಣ ಸ್ವತಂತ್ರವಾದ ಸಸ್ಪೆನ್ಷನ್ ವ್ಯವಸ್ಥೆಯನ್ನು ಹೊಂದಿರುವ ಈ ಯುದ್ಧ ಟ್ಯಾಂಕರ್ ನ ಎಲ್ಲ ಚಕ್ರಗಳಿಗೂ ಶಕ್ತಿ ವರ್ಗಾವಣೆಯಾಗುತ್ತಿದ್ದು, ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಲಿದೆ.

ಸಶಸ್ತ್ರ ಬೇಹುಗಾರಿಕೆ, ಹೊಂಚು ದಾಳಿ ಮತ್ತು ಪ್ರತಿದಾಳಿಗಳಿಗಾಗಿ ಇದರ ಸಹಾಯವನ್ನು ಪಡೆಯಬಹುದಾಗಿದೆ. ಇನ್ನು ಬೇಕಿದ್ದರೆ ಮಾನವ ಸಹಾಯದಿಂದಲೂ ನಿಯಂತ್ರಿಸಬಹುದಾಗಿದೆ.

ಪಿಟ್ ಬುಲ್ ರಿಮೋಟ್ ವೆಪನ್ ಸ್ಟೇಷನ್ ವ್ಯವಸ್ಥೆಯ ಜೊತೆಗೆ ನೈಟ್ ಓಪ್ಟಿಕಲ್ ಸೆನ್ಸಾರ್, ರಿಮೋಟ್ ದಾಳಿ ಮೆಷಿನ್ ಗನ್ ಸಹ ಇದರಲ್ಲಿದೆ. ಪಿಟ್ ಬುಲ್ ಸೆನ್ಸಾರ್ ಮುಖಾಂತರ ಶತ್ರು ಸಾನಿಧ್ಯವನ್ನು ಗುರುತಿಸಿ ಸ್ವಯಂಚಾಲಿತವಾಗಿ ಗುಂಡು ಹಾರಿಸಲು ಸಾಧ್ಯವಾಗಲಿದೆ.

ಫ್ರಾನ್ಸ್ ಪ್ರದರ್ಶನ ಮೇಳದಲ್ಲೂ ರೊ ಬ್ಯಾಟಲ್ ತನ್ನ ಶಕ್ತಿ ಪ್ರದರ್ಶನವನ್ನು ನಡೆಸಲಿದೆ. ಇದು ಆಧುನಿಕ ಯುದ್ಧ ಟ್ಯಾಂಕರ್ ಗಳಿಗೆ ಹೊಸ ಆಯಾಮವನ್ನು ತುಂಬಿರುದಂತೂ ನಿಜ.

ಸರಿ ಸುಮಾರು ಏಳು ಟನ್ ಭಾರವನ್ನು ಹೊಂದಿರುವ ರೊ ಬ್ಯಾಟಲ್ ಮೂರು ಟನ್ ಗಳಷ್ಟು ಭಾರವನ್ನು ಹೊತ್ತೊಯ್ಯುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಎಲ್ಲ ವಿಧದ ಭೂಪ್ರದೇಶದಲ್ಲೂ ಕಾರ್ಯಾಚರಣೆ ನಡೆಸಲಿದೆ.

ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಇದರಲ್ಲಿ ಕಟ್ಟಿಂಗ್ ಎಡ್ಜ್ ತಂತ್ರಗಾರಿಕೆಯನ್ನು ಆಳವಡಿಸಿದ್ದು, ಆಧುನಿಕ ರೊಬೊಟಿಕ್ ಕಿಟ್ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪಡೆದಿದೆ.


Click it and Unblock the Notifications








