ವಿಶ್ವವೇ ತಿರುಗಿ ನೋಡಲಿದೆ: ISRO ಗಗನ್‌ಯಾನ್ ಪರೀಕ್ಷಾ ಹಾರಾಟಕ್ಕೆ ಮುಹೂರ್ತ ಫಿಕ್ಸ್, ಇದೇ ತಿಂಗಳ...

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೋಮವಾರ ತನ್ನ ಮಿಷನ್ ಗಗನ್‌ಯಾನ್‌ ಪರೀಕ್ಷಾ ಹಾರಾಟದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 21, 2023 ರಂದು ಬೆಳಿಗ್ಗೆ 7 ರಿಂದ 9ರ ನಡುವೆ ಶ್ರೀಹರಿಕೋಟಾದ SDSC-SHAR ನಿಂದ ಉಡಾವಣೆ ನಿಗದಿಪಡಿಸಲಾಗಿದ್ದು, ಇದು ಇಸ್ರೋಗೆ ನಿರ್ಣಾಯಕ ಪರೀಕ್ಷಾ ಹಾರಾಟವಾಗಿದೆ.

ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಇದಾಗಿದ್ದು ವಿಫಲವಾಗದಂತೆ ನೋಡಿಕೊಳ್ಳಲು ಕೆಲ ಪ್ರಯೋಗಗಳನ್ನು ಕಂಡಿತ ಮಾಡಬೇಕಿದೆ. ಇದಕ್ಕಾಗಿ ಮೊದಲು ಎರಡು ಮಾನವರಹಿತ ಪರೀಕ್ಷಾ ಉಡಾವಣೆಗಳನ್ನು ನಡೆಸಲು ಇಸ್ರೋ ಯೋಜಿಸಿದೆ. ಇದರ ಭಾಗವಾಗಿ, ಇಸ್ರೋ ಅಕ್ಟೋಬರ್ 21 ರಂದು ಕ್ಯಾಪ್ಸುಲ್‌ನ ದಕ್ಷತೆ ಮತ್ತು ತುರ್ತು ತಪ್ಪಿಸಿಕೊಳ್ಳುವ ವ್ಯವಸ್ಥೆಯನ್ನು (efficacy and emergency escape system) ಪರೀಕ್ಷಿಸಲಿದೆ.

isro-gaganyaan-mission-test-flight-schedule-details

ಎಲ್ಲವೂ ಅಂದುಕೊಂಡಂತೆ ಆದರೆ 2024 ರಲ್ಲಿ ಎರಡನೇ ಹಂತದ ಪರೀಕ್ಷೆ ಮತ್ತು 2024 ರ ಕೊನೆಯಲ್ಲಿ ಅಥವಾ 2025 ರ ಆರಂಭದಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಯತ್ನ ಖಚಿತವೆಂದೇ ಹೇಳಬಹುದು. ಯೋಜನೆಯ ಪ್ರಕಾರ, ಭೂಮಿಯಿಂದ ಸುಮಾರು 400 ಕಿ.ಮೀ ಎತ್ತರಕ್ಕೆ ಹೋಗಿ, ಮೂರು ದಿನಗಳ ಕಾಲ ಸಂಶೋಧನೆ ನಡೆಸಿ ನಂತರ ಸುರಕ್ಷಿತವಾಗಿ ಭೂಮಿಗೆ ಹಿಂತಿರುಗುವುದು ಇಸ್ರೋದ ಮುಖ್ಯ ಉದ್ದೇಶವಾಗಿದೆ.

ವಿವರವಾಗಿ ಹೇಳುವುದಾದ್ರೆ ಗಗನ್‌ಯಾನ್ ಮಿಷನ್ ಮೂರು ಸದಸ್ಯರನ್ನು ಒಳಗೊಂಡಿರುತ್ತದೆ, ಇವರು ಮೂರು ದಿನಗಳ ಕಾಲ 400 ಕಿ.ಮೀ ಎತ್ತರದಲ್ಲಿ ಭೂಮಿಯನ್ನು ಸುತ್ತುತ್ತಾರೆ. ನಂತರ ಅವರಿರುವ ಮಾಡ್ಯೂಲ್ ಅನ್ನು ಸುರಕ್ಷಿತವಾಗಿ ಭಾರತೀಯ ಸಮುದ್ರದಲ್ಲಿ ಇಳಿಸಲಾಗುತ್ತದೆ. ಸದ್ಯ ಸಿಬ್ಬಂದಿ ಬೆಂಗಳೂರಿನಲ್ಲಿರುವ ಗಗನಯಾತ್ರಿ ತರಬೇತಿ ಸೌಲಭ್ಯದಲ್ಲಿ ಸಿಮ್ಯುಲೇಶನ್, ದೈಹಿಕ ಸಾಮರ್ಥ್ಯ ಮತ್ತು ಮಿಷನ್‌ಗೆ ಸಂಬಂಧಿಸಿದ ಶೈಕ್ಷಣಿಕ ಕೋರ್ಸ್‌ಗಳ ತರಬೇತಿ ಪಡೆಯುತ್ತಿದ್ದಾರೆ.

isro-gaganyaan-mission-test-flight-schedule-details

ಇದಕ್ಕೂ ಮುನ್ನ ಕಡಿಮೆ ಎತ್ತರಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆ ಕೂಡ ಇದೆ. ಈ ವರ್ಷದ ಅಂತ್ಯದ ವೇಳೆಗೆ ಇಸ್ರೋ ಮೂವರು ಗಗನಯಾತ್ರಿಗಳನ್ನು ಕಡಿಮೆ-ಭೂಮಿಯ ಕಕ್ಷೆಗೆ (low-earth orbit) ಕಳುಹಿಸಲು ಕೂಡ ಯೋಜಿಸಿದೆ. ಇವೆಲ್ಲವೂ ಸಫಲವಾಗಬೇಕಾದ್ರೆ ಇದೇ ಅಕ್ಟೋಬರ್ 21 ರಂದು ನಡೆಯುವ ಮೊದಲ ಹಂತದ ಪರೀಕ್ಷೆ ಯಶಸ್ವಿಯಾಗಬೇಕಿದೆ.

"ಮಿಷನ್ ಗಗನ್ಯಾನ್:" TV-D1 ಪರೀಕ್ಷಾ ಹಾರಾಟವನ್ನು ಅಕ್ಟೋಬರ್ 21, 2023 ರಂದು ಬೆಳಿಗ್ಗೆ 7 ರಿಂದ 9 ರೊಳೆಗೆ ಶ್ರೀಹರಿಕೋಟಾದ SDSC-SHAR ನಿಂದ ನಿಗದಿಪಡಿಸಲಾಗಿದೆ ಎಂದು ಇಸ್ರೋ X (ಟ್ವಿಟರ್)ನಲ್ಲಿ ಹೇಳಿಕೊಂಡಿದೆ. ಇಸ್ರೋ ಸಿಬ್ಬಂದಿ ಮಾಡ್ಯೂಲ್ (CM) ನ ಚಿತ್ರಗಳನ್ನು ಸಹ ಹಂಚಿಕೊಂಡಿದೆ. ಈ ಚಿತ್ರಗಳಲ್ಲಿ ಕಾಣುವ ದೈತ್ಯ ಯಂತ್ರವೇ ಮುಂಬರುವ ಮಿಷನ್‌ಗಳಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಒಯ್ಯುತ್ತದೆ.

ಈ ಮಾಡ್ಯೂಲ್ ಬಗ್ಗೆ ತಿಳಿಸಿ, ನಿಗದಿತ ಪರೀಕ್ಷಾ ಹಾರಾಟದ ಸಮಯದಲ್ಲಿ ಸಿಎಂ ಒತ್ತಡಕ್ಕೊಳಗಾಗುವುದಿಲ್ಲ ಮತ್ತು ಕ್ರಯೋಜೆನಿಕ್, ದ್ರವ ಮತ್ತು ಘನ ಹಂತಗಳೊಂದಿಗೆ ಸ್ಥಳೀಯ LVM-3 ರಾಕೆಟ್ ಬಳಸಿಕೊಂಡು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗುತ್ತದೆ. ಪರೀಕ್ಷೆಯ ಭಾಗವಾಗಿ, ಇಸ್ರೋ CMನ ವಿವಿಧ ಘಟಕಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಇದರಲ್ಲಿ ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಕೂಡ ಸೇರಿದೆ ಎಂದು ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 17, 2023, 11:50 [IST]
English summary
Isro gaganyaan mission test flight schedule details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+