ISRO: ಮತ್ತೊಂದು ಮಹತ್ವದ ಯೋಜನೆಗೆ ಸಜ್ಜು! ಇಸ್ರೋ ತಾಕತ್ತಿನ ಬಗ್ಗೆ ವಿಶ್ವದೇಶಗಳ ಚರ್ಚೆ | ISRO Gearing up for another major
ಬಾಹ್ಯಾಕಾಶ ರಂಗದಲ್ಲಿ ವಿಶ್ವದ ದೊಡ್ಡ ದೊಡ್ಡ ದೇಶಗಳಿಗೆ ಈಗ ಭಾರತವನ್ನು (ISRO) ಕಂಡರೆ ನಡುಕ ಶುರುವಾಗಿದೆ. ಒಂದು ಬಾಹ್ಯಾಕಾಶ ಯೋಜನೆ ಅಂದ್ರೆ ಅಷ್ಟು ಸುಲಭವಲ್ಲ, ಆಧುನಿಕ ತಂತ್ರಜ್ಞಾನ, ಸಾವಿರಾರು ಮಂದಿ ವಿನ್ಞಾನಿಗಳ ಶ್ರಮ, ಎಲ್ಲದಕ್ಕೂ ಮೀರಿ ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ಮುಂದುವರಿದ ದೇಶಗಳಿಗೆ ಅಲ್ಲಿನ ಸರ್ಕಾರಗಳು ಸಾಕಷ್ಟು ಬಜೆಟ್ ಮೀಸಲಿಡುತ್ತವೆ.
ಆದರೆ ಇಸ್ರೋ ಹಾಗಲ್ಲ, ತುಂಬಾ ಕಡಿಮೆ ಬಜೆಟ್‌ನಲ್ಲಿ ತಮ್ಮ ಮಿಷನ್‌ಗಳನ್ನು ಪೂರ್ಣಗೊಳಿಸುವ ಅನಿವಾರ್ಯತೆ ಇದೆ. ಒಂದು ದೊಡ್ಡ ಮಿಷನ್ ವಿಫಲವಾದ್ರೆ ಇಸ್ರೋಗೆ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಆದ್ರೆ ಅಮೆರಿಕಾ, ಚಿನಾ, ರಷ್ಯಾ ದೇಶಗಳು ಹಾಗಲ್ಲ, ಮಿತಿಮೀರಿದ ಬಜೆಟ್‌ನೊಂದಿಗೆ ಒಂದು ವಿಫಲವಾದ್ರೂ ಮತ್ತೊಂದಕ್ಕೆ ಕೈಹಾಕಿ ಯೋಜನೆಗೆ ಬೇಕಾದ ಹಣವನ್ನು ನೀಡಲಾಗುತ್ತದೆ.

ಹಾಗಾಗಿ ಭಾರತಕ್ಕೆ ಹಣ ಅಮೂಲ್ಯವಾದ ಸಾಧನವಾಗಿದೆ. ಇತರ ದೇಶಗಳಂತಲ್ಲದೇ ಇರುವ ಬಜೆಟ್‌ನಲ್ಲಿ ನಮ್ಮ ವಿನ್ಞಾನಿಗಳು ಯಶಸ್ವಿಯಾಗಿ ಮಿಷನ್‌ಗಳನ್ನು ಮುಗಿಸುತ್ತಿದ್ದಾರೆ. ಹೀಗೆ ಮುಂದುವರಿದ್ರೆ ಚೀನಾ, ಅಮೆರಿಕಾ, ರಷ್ಯಾ ಬಾಹ್ಯಾಕಾಶ ಸಂಸ್ಥೆಗಳಂತೆ ಇಸ್ರೋ ಕೂಡ ಜಗತ್ತಿನಲ್ಲಿ ಪ್ರಬಲ ಬಾಹ್ಯಾಕಾಶ ಸಂಸ್ಥೆಯಾಗುವುದರಲ್ಲಿ ಸಂಶಯವಿಲ್ಲ. ಚಂದ್ರಾಯಾನ, ಸೂರ್ಯನ ಶಿಕಾರಿ, ಈಗ ಬಾಹ್ಯಾಕಾಶಕ್ಕೆ ಮನುಜರನ್ನು ಕಳುಹಿಸಲು ಇಸ್ರೋ ಯೊಜನೆ ರೂಪಿಸಿಕೊಂಡಿದೆ.
ಬಾಹ್ಯಾಕಾಶಕ್ಕೆ ಮಾನವ: ಇತ್ತೀಚಿನ ಆದಿತ್ಯ L1 ಉಡಾವಣೆಯ ಯಶಸ್ಸಿನ ನಂತರ ISRO ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಹೊಂದಿರುವ ಗಗನಯಾನ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಅಕ್ಬೋಬರ್‌ನಲ್ಲಿ ಈ ಯೋಜನೆ ನಿರ್ಣಾಯಕ ಹಂತ ತಲುಪಲಿದೆಯಂತೆ. ಪ್ರಸ್ತುತ ಈ ಕಾರ್ಯಾಚರಣೆಯ ಮೊದಲ ಹಂತದ ಪ್ರಯೋಗಗಳು ನಡೆಯುತ್ತಿವೆ.

ಗಗನಯಾನ್ ಯೋಜನೆಯ ಭಾಗವಾಗಿ, ಯೋಜನೆಯು ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಹೊಂದಿದೆ. ಸಂಶೋಧನೆ ನಡೆಸಿ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲಾಗುತ್ತದೆ. ಇದರ ಭಾಗವಾಗಿ ಮೂರು ಜನರನ್ನು ಭೂಮಿಯಿಂದ ಸುಮಾರು 400 ಕಿ.ಮೀ ಎತ್ತರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಮೂರು ದಿನಗಳ ಕಾಲ ಸಂಶೋಧನೆ ನಡೆಸಿ ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆತರಲಾಗುತ್ತದೆ.
ಆದರೆ ಮಾನವರನ್ನು ನೇರವಾಗಿ ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲು ಪ್ರಯೋಗಗಳನ್ನು ನಡೆಸಲು ಇಸ್ರೋ ಆಶಿಸುತ್ತಿದೆ. ರಾಕೆಟ್ ಅನ್ನು ಒಮ್ಮೆ ಪೇಲೋಡ್‌ಗಳಿಲ್ಲದೆ ಮತ್ತು ಎರಡು ಬಾರಿ ಪೇಲೋಡ್‌ಗಳೊಂದಿಗೆ ಉಡಾವಣೆ ಮಾಡಿದ ನಂತರ ಉತ್ತಮ ಫಲಿತಾಂಶಗಳ ನಂತರವೇ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ನಿರ್ಧರಿಸಿದೆ. ಮುಂದಿನ ತಿಂಗಳು ಈ ಪ್ರಯೋಗಗಳು ಪ್ರಾರಂಭವಾಗಲಿವೆಯಂತೆ.

ಗಗನಯಾನ್ ಯೋಜನೆಗೆ ಎಂಜಿನ್ ಸೇರಿದಂತೆ ಎಲ್ಲಾ ಘಟಕಗಳ ಪರೀಕ್ಷೆ ಪೂರ್ಣಗೊಂಡಿದೆ. ವಿಶೇಷ ಕ್ಯಾಪ್ಸುಲ್ ಅನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ. ಹ್ಯುಮನಾಯ್ಡ್ ರೋಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು ಮತ್ತು ಅಕ್ಟೋಬರ್‌ನಲ್ಲಿ ಅದನ್ನು ಸುರಕ್ಷಿತವಾಗಿ ಭೂಮಿಗೆ ತರುವುದು ಗುರಿಯಾಗಿದೆ. ಇಸ್ರೋ ಆರಂಭಿಕ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ 2025 ರ ವೇಳೆಗೆ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಹೊಂದಿದೆ.
ಚಂದ್ರಯಾನ-3 ಆಗಸ್ಟ್ 23 ರಂದು ಸಂಜೆ 6:04 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಇಳಿಯಿತು. ನಂತರ ಪ್ರಗ್ಯಾನ್ ರೋವರ್ ಸಂಜೆ ಅಲ್ಲಿ ಪ್ರಮುಖ ಸಂಶೋಧನೆ ನಡೆಸಿತು. ಚಂದ್ರನ ಮೇಲೆ ರಾತ್ರಿಯ ಆರಂಭದ ದೃಷ್ಟಿಯಿಂದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಸುರಕ್ಷಿತ ಪ್ರದೇಶದಲ್ಲಿ ನಿಲ್ಲಿಸಿ, ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿದೆ ಎಂದು ಇಸ್ರೋ ಬಹಿರಂಗಪಡಿಸಿತ್ತು.

ಸೆಪ್ಟೆಂಬರ್ 2 ರಂದು ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ L1 ಅನ್ನು ಪ್ರಾರಂಭಿಸಿದರು. ಈ ರಾಕೆಟ್‌ನ ಕಕ್ಷೆಯನ್ನು ಹೆಚ್ಚಿಸುವ ಪ್ರಕ್ರಿಯೆಯೂ ಯಶಸ್ವಿಯಾಗಿದೆ ಎಂದು ಇಸ್ರೋ ಬಹಿರಂಗಪಡಿಸಿದೆ. ಸುಮಾರು 125 ದಿನಗಳ ಪ್ರಯಾಣದ ನಂತರ, ಆದಿತ್ಯ L1 ಲಾಂಗ್ರಾಜ್ ಪಾಯಿಂಟ್ ತಲುಪುತ್ತದೆ. ಇದು ಸೌರ ಬಿರುಗಾಳಿಗಳು ಸೇರಿದಂತೆ ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications