ಟೀಕಿಸಿದ್ದ ದೇಶಗಳಿಗೆ ISRO ಸರಿಯಾದ ಉತ್ತರ! ಕೈಲಾಗದವರ ತಾಕತ್ತಿದು ಎಂಬಂತಿದೆ ಆದಿತ್ಯ L1 ಕಳುಹಿಸಿದ ಚಿತ್ರ

ಇಸ್ರೋ ಬಗ್ಗೆ ಯಾರಿಗೂ ತಿಳಿಯದ ವಿಷಯವೇನೆಂದರೆ ವಿಶ್ವದ ದೊಡ್ಡ ದೊಡ್ಡ ಬಾಹ್ಯಾಕಾಶ ಸಂಸ್ಥೆಗಳಲ್ಲಿನ ಜನಪ್ರಿಯ ವಿಜ್ಞಾನಿಗಳಷ್ಟೇ ಮೇಧಾಶಕ್ತಿಯುಳ್ಳ ವಿಜ್ಞಾನಿಗಳು ಇಸ್ರೋದಲ್ಲಿದ್ದಾರೆ. ಆದರೆ ಮೊದಲಿನಿಂದಲೂ ಬಜೆಟ್ ಕೊರತೆಯಿಂದಾಗಿ ಬೃಹತ್ ಯೋಜನೆಗಳನ್ನು ಕೈಗೊಳ್ಳಲು ತಡವಾಗುತ್ತಾ ಬಂದಿದೆ. ಆದ್ರೆ ಇದೀಗ ನಮ್ಮ ಇಸ್ರೋ ವಿಜ್ಞಾನಿಗಳ ತಾಕತ್ತು ಏನೆಂಬುದು ಎಲ್ಲರಿಗೂ ತಿಳಿದೇ ಇರುತ್ತೆ.

ಸಾಮಾಜಿಕ ಜಾಲತಾಣದಲ್ಲಿ ಇಸ್ರೋ (ISRO) ಮೊದಲು ಸೈಕಲ್ ಮೇಲೆ ರಾಕೆಟ್ ಅನ್ನು ಹೊತ್ತೊಯ್ಯುವ ಫೋಟೋವನ್ನು ಹಲವರು ನೋಡಿರಿತ್ತೀರಿ. ಆ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿದ ದೇಶಗಳಿಗಿಂತ ಟೀಕಿಸಿದ್ದ ದೇಶಗಳೇ ಹೆಚ್ಚು. ಅಂದಿನ ಕಾಲಕ್ಕೆ ದೊಡ್ಡ ದೇಶಗಳಂತೆ ಬಾಹ್ಯಾಕಾಶ ರಂಗದಲ್ಲಿ ಭಾರತ ಗುರ್ತಿಸಿಕೊಳ್ಳುವುದು ಕನಸು ಬಿಡಿ ಎಂದು ಹೀಯಾಳಿಸಿದ್ದ ದೇಶಗಳು ಇವೆ.

isro-shares-images-earth-moon-aditya-l1-takes-selfie

ಆದ್ರೆ ಈಗ ಅದೇ ದೇಶಗಳಿಗೆ ಭಾರತವನ್ನು ಕಂಡರೆ ನಡುಕ ಶುರುವಾಗಿದೆ. ಏಕೆಂದರೆ ಅತೀ ಕಡಿಮೆ ಬಜೆಟ್‌ನಲ್ಲಿ ನಾವು ಮಾಡುವ ಯೋಜನೆಗಳು ಯಶಸ್ವಿಯಾಗುತ್ತಿವೆ. ನಮಗಿಂತ ಹತ್ತುಪಟ್ಟು ಹೆಚ್ಚು ಬಜೆಟ್‌ನೊಂದಿಗೆ ಅತ್ಯಾಧುನಿಕ ಟೆಕ್ನಾಲಜಿಯಿದ್ದರೂ ಕೆಲ ಬಾಹ್ಯಾಕಾಶ ಸಂಸ್ಥೆಗಳ ಯೋಜನೆಗಳು ವಿಫಲವಾಗುತ್ತಿವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಷ್ಯಾದ ಇತ್ತೀಚಿನ ಲೂನಾರ್ 25 ಮಿಷನ್.

ಇದು ಅಲ್ಲದೇ ಚಂದ್ರನ ಮೇಲೆ ಮನುಷ್ಯರನ್ನೇ ಕಳುಹಿಸಿದ ಅಮೆರಿಕಾಗೆ ದಕ್ಷಿಣ ಧೃವಕ್ಕೆ ಕಾಲಿಡಲು ಆಗಲಿಲ್ಲ. ಆದ್ರೆ ಇದನ್ನು ಭಾರತ ಮಾಡಿ ತೋರಿಸಿದೆ, ಒಂದೊಮ್ಮೆ ಯೋಚನೆ ಮಾಡಿ ನಾಸಾಗೆ ನೀಡುವ ಬಜೆಟ್ ಇಸ್ರೋಗೆ ಸಿಕ್ಕರೆ ಇನ್ನೆಷ್ಟು ಅದ್ಬುತಗಳನ್ನು ಮಾಡಬಹುದು. ಆದ್ರೂ ಇಸ್ರೋ ತನ್ನ ಕಡೆಮೆ ಬಜೆಟ್‌ನಲ್ಲೇ ಹಲವು ಸಾಧನೆಗಳನ್ನು ಮಾಡುತ್ತಿದೆ ಬಿಡಿ.

isro-shares-images-earth-moon-aditya-l1-takes-selfie

ಇದೀಗ ಇಸ್ರೋ ಇತ್ತೀಚೆಗೆ ಉಡಾವಣೆ ಮಾಡಿದ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯು ತನ್ನ ಗಮ್ಯಸ್ಥಾನದತ್ತ ಯಶಸ್ವಿ ಪ್ರಯಾಣವನ್ನು ಮುಂದುವರಿಸಿದೆ. ಕೆಲವೇ ತಿಂಗಳುಗಳಲ್ಲಿ ಅದು ತನ್ನ ಗುರಿಯನ್ನು ತಲುಪುತ್ತದೆ. ಈಗ ಪ್ರಯಾಣದ ಮಾರ್ಗಮಧ್ಯೆ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ತೆಗೆದ ಕೆಲವು ವಿಶೇಷ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ. ಇವು ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಒಳಗೊಂಡಿರುವ ಚಿತ್ರಗಳಾಗಿವೆ.

ಸದ್ಯ ಈ ಚಿತ್ರಗಳು ಎಕ್ಸ್ (ಟ್ವಿಟರ್) ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಸದ್ಯ ಆದಿತ್ಯ L1 ಬಾಹ್ಯಾಕಾಶ ನೌಕೆಯು ಸೂರ್ಯನನ್ನು ಅಧ್ಯಯನ ಮಾಡಲು ಭೂಮಿ ಮತ್ತು ಸೂರ್ಯನ ನಡುವಿನ L1 ಕಕ್ಷೆಯಲ್ಲಿದೆ. ಇಸ್ರೋ ಪ್ರಕಾರ, ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯು ಇಸ್ರೋ ನಿರ್ಧರಿಸಿರುವ ಪಾಯಿಂಟ್ ತಲುಪಲು ಸುಮಾರು 4 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.

isro-shares-images-earth-moon-aditya-l1-takes-selfie

ಈ 15 ಲಕ್ಷ ಕಿ.ಮೀ ಭೂಮಿ ಮತ್ತು ಸೂರ್ಯನ ನಡುವಿನ ಒಟ್ಟು ಅಂತರದಲ್ಲಿ ಕೇವಲ ಶೇ1 ರಷ್ಟು ಮಾತ್ರ ಎಂಬುದನ್ನು ಗಮನಿಸಬೇಕು. ಏಕೆಂದರೆ ಸೂರ್ಯನು ಭೂಮಿಯಿಂದ ಸುಮಾರು 15 ಮಿಲಿಯನ್ ಕಿ.ಮೀ ದೂರದಲ್ಲಿದ್ದಾನೆ. ಸೂರ್ಯನನ್ನು ಅನ್ವೇಷಿಸಲು ಆದಿತ್ಯ L1 ಬಾಹ್ಯಾಕಾಶ ನೌಕೆಯಲ್ಲಿ ಐದು ವಿಭಿನ್ನ ಪೇಲೋಡ್ ಉಪಕರಣಗಳನ್ನು ಹೊಂದಿದೆ.

ಇವುಗಳ ಮೂಲಕ, ನಾವು ಸೂರ್ಯನಲ್ಲಿ ನ್ಯೂಕ್ಲಿಯರ್ ಸಮ್ಮಿಳನದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಬಹುದು. ಆದಿತ್ಯ L1 ಬಾಹ್ಯಾಕಾಶ ನೌಕೆಯು ಸುಮಾರು 5 ವರ್ಷಗಳ ಕಾಲ ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಇದು ಸೂರ್ಯನ ಮುಖ್ಯ ಪದರಗಳಾದ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅನ್ವೇಷಿಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Friday, September 8, 2023, 18:20 [IST]
English summary
Isro shares images earth moon aditya l1 takes selfie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+