Jaguar: ದೋಷಪೂರಿತ ಕಾರು ಮಾರಾಟ: ಎಂಜಿನ್ 2 ಬಾರಿ ಸೀಜ್: ನ್ಯಾಯಾಲಯದ ಆದೇಶ ಸೂಪರ್!

ಒಮ್ಮೆ ಯೋಚಿಸಿ ನಿಮ್ಮ ಹೊಸ ಕಾರು ಆರಂಭದಲ್ಲಿ ಉತ್ತಮವಾಗಿದ್ದು, ಕೇವಲ ಒಂದೇ ವರ್ಷದಲ್ಲಿ ಎಂಜಿನ್ ಸೀಜ್ ಆದರೆ ಹೇಗಿರುತ್ತೆ? ಡೀಲರ್ ಕೂಡ ನಮಗೆ ಸಂಬಂಧವಿಲ್ಲ ಎಂದರೆ ಏನು ಮಾಡುವಿರಿ? ಹೌದು ಇದಕ್ಕೆ ನ್ಯಾಯ ಸಿಗುವುದು ಕೇವಲ ಗ್ರಾಹಕ ನ್ಯಾಯಾಲಯದಲ್ಲಿ ಮಾತ್ರ. ಇಂತಹದೇ ಘಟನೆ ಇದೀಗ ಬೆಳಕಿಗೆ ಬಂದಿದೆ.

ಘಟನೆಯು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದ್ದು, ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಗ್ರಾಹಕರೊಬ್ಬರಿಗೆ ದೋಷಪೂರಿತ ಎಂಜಿನ್ ಹೊಂದಿರುವ ಜಾಗ್ವಾರ್ ಎಕ್ಸ್ ಎಫ್ (Jaguar XF) ಸೆಡಾನ್ ಕಾರು ಮಾರಾಟ ಮಾಡಿದ್ದಾರೆ. ಪರಿಣಾಮ ಎರಡು ಬಾರಿ ಎಂಜಿನ್ ಸೀಜ್ ಆಗಿದ್ದು, ಕಾರು ಮಾಲೀಕ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೂ ಗ್ರಾಹಕ ನ್ಯಾಯಾಲಯ ಮಾಲೀಕನಿಗೆ ನ್ಯಾಯ ದೊರಕಿಸಿದೆ.

jaguar-xf-engine-seized-twice-court-favoured-for-customer

ಕಾರು ಮಾಲೀಕ ಜನಪ್ರಿಯ ಉದ್ಯಮಿ: ಪೋಥಿಸ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್ ರಮೇಶ್ ಅವರು 2016 ರಲ್ಲಿ ರೂ. 61 ಲಕ್ಷ ಬೆಲೆಯ ಜಾಗ್ವಾರ್ ಎಕ್ಸ್‌ಎಫ್‌ನ 3.0-ಲೀಟರ್ ಡೀಸೆಲ್ ಕಾರನ್ನು ಖರೀದಿಸಿದ್ದರು. ನಂತರ ಮಾರ್ಚ್ 2018 ರಲ್ಲಿ, ರಮೇಶ್ ವೈಯಕ್ತಿಕ ಪ್ರವಾಸದಲ್ಲಿದ್ದಾಗ, ಕಾರು ಕೆಟ್ಟುನಿಂತಿದೆ. ಸುಮಾರು 22,400 ಕಿ.ಮೀ ಓಡಿದ್ದರಿಂದ ಕಾರು ಇನ್ನೂ ವಾರಂಟಿಯಲ್ಲಿತ್ತು.

ಎಂಜಿನ್ ಸೀಜ್ ಆಗಿದ್ದರಿಂದ ರಮೇಶ್ ನಡುರಸ್ತೆಯಲ್ಲೇ ಸಿಲುಕಿದ್ದರು. ಅಲ್ಲಿಂದ ಕಾರನ್ನು ಹತ್ತರಿದ ಬೆಂಗಳೂರಿನ ಶೋರೂಮ್‌ಗೆ ಎಳೆದು ತರಬೇಕಿತ್ತು. ಹೇಗೂ ಕಾರನ್ನು ತಂದು ಪರಿಶೀಲಿಸಿದ ಸೇವಾ ಕೇಂದ್ರದ ಸಿಬ್ಬಂದಿ ಕಾರು ಇನ್ನೂ ವಾರಂಟಿಯಲ್ಲಿದ್ದ ಕಾರಣ, ಉಚಿತವಾಗಿ ಎಂಜಿನ್ ಅನ್ನು ಬದಲಾಯಿಸಿತು. ಎಲ್ಲವೂ ಸರಿಹೋಯಿತು ಎಂದುಕೊಂಡವರಿಗೆ ಮತ್ತೆ ಸಮಸ್ಯೆ.

jaguar-xf-engine-seized-twice-court-favoured-for-customer

ಎರಡನೇ ಬಾರಿ ಎಂಜಿನ್ ಸೀಜ್: ಮೊದಲ ಬಾರಿಗೆ ಎಂಜಿನ್ ಬದಲಿ ನಂತರ ರಮೇಶ್ ಒಂದು ವರ್ಷ ಕಾರನ್ನು ಬಳಸಿದ್ದರು. ಆದರೆ ಈ ಸಮಯದಲ್ಲಿ ಮತ್ತೊಮ್ಮೆ ಎಂಜಿನ್ ಸೀಜ್ ಆಗಿದೆ. ಈ ಬಾರಿ VST & ಸನ್ಸ್ ಅದನ್ನು ಬದಲಿಸಲು ನಿರಾಕರಿಸಿತ್ತು. ಮಾಲೀಕನಿಗೆ ವಾರಂಟಿ ಇಲ್ಲ ಎಂದು ಹೇಳಿದೆ. ಅಲ್ಲದೇ ಕಾರು ಒಂದು ವರ್ಷದಿಂದ ಸೇವಾ ಕೇಂದ್ರದಲ್ಲೇ ನಿಂತಿದ್ದು, ಅಧಿಕಾರಿಗಳು ಕಾರನ್ನು ಹಿಂತಿರುಗಿಸಿರಲಿಲ್ಲ.

ಇದರಿಂದ ಬೇಸತ್ತ ಮಾಲೀಕರು, 'ಅಂತರ್ಗತವಾಗಿ ದೋಷಪೂರಿತ' ಕಾರನ್ನು ಮಾರಾಟ ಮಾಡಿದ್ದಕ್ಕಾಗಿ ಚೆನ್ನೈ (ದಕ್ಷಿಣ) ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಬ್ರ್ಯಾಂಡ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಆರೋಪಗಳಿಗೆ ಪ್ರತಿಕ್ರಿಯೆಯಾಗಿ, VST & ಸನ್ಸ್ ಕಾರು ಅತಿಯಾದ ಬಳಕೆಯನ್ನು ಎದುರಿಸಿದೆ. ವಾಣಿಜ್ಯ ಚಟುವಟಿಕೆಗಳಿಗೆ ಬಳಸಲ್ಪಟ್ಟಿದೆ ಎಂದು ಹೇಳಿಕೊಂಡಿದೆ.

jaguar-xf-engine-seized-twice-court-favoured-for-customer

ಕಾರನ್ನು ತಡವಾಗಿ ನೀಡಲು ಕಾರಣವೆಂದರೆ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಕಾರನ್ನು ಹಿಂತಿರುಗಿಸುವಲ್ಲಿ ವಿಳಂಬವಾಗಿದೆ ಎಂದು ಉಲ್ಲೇಖಿಸಿದ್ದರು. ಮಾಲೀಕ ತನಗೆ ಉತ್ಪಾದನಾ ದೋಷಗಳಿರುವ ಕಾರನ್ನು ನೀಡಲಾಗಿದೆ ಎಂಬುದನ್ನು ಸಾಭೀತು ಪಡಿಸಲು ಸರಿಯಾದ ಪುರಾವೆಗಳನ್ನು ಒದಗಿಸಿಲ್ಲ, ಜೊತೆಗೆ ಗ್ರಾಹಕರಿಗೆ ಎಂಜಿನ್ ಬದಲಾವಣೆಯ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ಸಹ ನೀಡಲಾಗಿದೆ.

ಆದರೆ ಗ್ರಾಹಕನ ಬೇಡಿಕೆಯು ಹೊಸ ಕಾರಿನ ಮೇಲಿದೆ ಎಂದು ಬ್ರ್ಯಾಂಡ್ ತಿಳಿಸಿದೆ. ವಿಚಾರಣೆಯ ನಂತರ ಆಯೋಗವು ಬ್ರ್ಯಾಂಡ್‌ನ ದೋಷವನ್ನು ಪತ್ತೆಹಚ್ಚಿದೆ. ಜಾಗ್ವಾರ್ ಎಕ್ಸ್‌ಎಫ್‌ನ ಎಂಜಿನ್ ಅನ್ನು ಬದಲಾಯಿಸಿ ಅಥವಾ ಎಂಜಿನ್ ಬದಲಾವಣೆಗೆ ತಗಲುವ ವೆಚ್ಚವನ್ನು ಭರಿಸುವಂತೆ ಬ್ರ್ಯಾಂಡ್‌ಗೆ ಆದೇಶಿಸಿದೆ. ಹೆಚ್ಚುವರಿಯಾಗಿ, ನ್ಯಾಯಾಲಯವು ರೂ. 55,000 ಸಾವಿರ ಪಾವತಿಸಲು ಆದೇಶಿಸಿದೆ.

ವರದಿಗಳ ಪ್ರಕಾರ, ಈ ಕಾರಿನ ಎಂಜಿನ್ ಅನ್ನು ಬದಲಾಯಿಸಲು ಸುಮಾರು 42 ಲಕ್ಷ ರೂಪಾಯಿ ವೆಚ್ಚವಾಗಿದೆ. ರಮೇಶ್ 2016ರಲ್ಲಿ ಈ ಕಾರನ್ನು ಖರೀದಿಸಿದಾಗ ಇದರ ಬೆಲೆ 61 ಲಕ್ಷ ರೂಪಾಯಿ ಎಂಬುದು ಇಲ್ಲಿ ಗಮನಾರ್ಹ. ಇಂತಹ ಘಟನೆಗಳು ನಿಮಗೂ ಎದುರಾಗಿದ್ದರೆ ಕಮೆಂಟ್‌ನಲ್ಲಿ ತಿಳಿಸಿ. ಹೆಚ್ಚಿನ ಆಟೋ ಸುದ್ದಿಗಳಿಗಾಗಿ ಡ್ರೈವ್‌ಸ್ಪಾರ್ಕ್‌ನೊಂದಿಗೆ ಸಂಪರ್ಕದಲ್ಲಿರಿ.

Source: Cartorq
Link: https://www.cartoq.com/consumer-court-to-jaguar-pay-42-lakh-to-customer-whose-jaguar-xf-engine-seized-2-times/

Article Published On: Sunday, November 19, 2023, 12:00 [IST]
English summary
Jaguar xf engine seized twice court favoured for customer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+