ಹಗ್ಗದ ಮೇಲಿಂದಾಗಿ ಸಾಗಿ ನದಿ ದಾಟಿದ ಜಾಗ್ವಾರ್
ಇದು ಸಾಮಾನ್ಯ ಕಾರಲ್ಲ. ಅಸಾಮಾನ್ಯ ಕಾರು ಯಾಕೆ ಗೊತ್ತೇ? ಪ್ರಖ್ಯಾತ ಜಾಗ್ವಾರ್ ಕಾರಿಗೆ ಅಸಾಧ್ಯ ಎನ್ನಬಹುದಾದ ಸವಾಲೊಂದನ್ನು ಏರ್ಪಡಿಸಲಾಗಿತ್ತು. ಆದರೆ ಇಂತಹ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಟಾಟಾ ಮೋಟಾರ್ಸ್ ಮಾಲಿಕತ್ವದ ಬ್ರಿಟನ್ ಮೂಲದ ಜಾಗ್ವಾರ್ ಯಶಸ್ವಿಯಾಗಿದೆ.
ಹೌದು, ಇಂಗ್ಲೆಂಡ್ ನ ಥೇಮ್ಸ್ ನದಿಯ ಮೇಲೆ ಕಟ್ಟಿ ಹಾಕಲಾದ ಹಗ್ಗದ ಮೇಲಿಂದಾಗಿ ಸಾಗಿರುವ ಜಾಗ್ವಾರ್ ಎಕ್ಸ್ ಎಫ್ ನೀರಾಯಾಸವಾಗಿ ನದಿ ದಾಟುವಲ್ಲಿ ಯಶಸ್ವಿಯಾಗಿದೆ. ಈ ರೋಚಕ ವೀಡಿಯೋವನ್ನು ಸೆರೆ ಹಿಡಿಯಲು ಸಂಸ್ಥೆ ಯಶಸ್ವಿಯಾಗಿದೆ.
ಪ್ರಸ್ತುತ ವೀಡಿಯೋಗೆ ಯೂಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿರುವ ಜಾಗ್ವಾರ್ ಕಾರಿಗೆ ತನ್ನ ಸಾಮರ್ಥ್ಯ ತೋರ್ಪಡಿಸಲು ಇದು ಅತ್ಯುತ್ತಮ ವೇದಿಕೆ ಒದಗಿಸಿದೆ.
ವೀಡಿಯೋ ವೀಕ್ಷಿಸಿ


Click it and Unblock the Notifications








