ಹರಾಜಿಗಿದೆ ಚಿನ್ನ ಲೇಪಿತ ಜೇಮ್ಸ್ ಬಾಂಡ್ ಆಸ್ಟನ್ ಮಾರ್ಟಿನ್ ಕಾರು
ಜೇಮ್ಸ್ ಬಾಂಡ್ 'ಗೋಲ್ಡ್‌ಫಿಂಗರ್' ಚಿತ್ರ ತೆರೆಗೆ ಅಪ್ಪಳಿಸಿ 50ರ ಹರೆಯಲ್ಲಿದೆ. ಹಾಗಿರುವಾಗ ಈ ಸಂಭ್ರಮವನ್ನು ಸಹಾಯರ್ಥ ಸಂಸ್ಥೆಯ ಜೊತೆಗೆ ಕೊಂಡಾಡಲು ನಿರ್ಧರಿಸಿರುವ ಆಯೋಜಕರು, ಮೊದಲ ಜೇಮ್ಸ್ ಬಾಂಡ್ ಚಿತ್ರವಾಗಿರುವ ಗೋಲ್ಡ್‌ಫಿಂಗರ್‌ನಲ್ಲಿ ಕಾಣಿಸಿಕೊಂಡಿರುವ ಆಸ್ಟನ್ ಮಾರ್ಟಿನ್ ಡಿಬಿ5 ಚಿನ್ನದ ಲೇಪನದ ತದ್ರೂಪ ಕಾರನ್ನು ಹರಾಜು ಮಾಡಲು ನಿರ್ಧರಿಸಿದ್ದಾರೆ.
ಈಗಾಗಲೇ 2014 ಸಪ್ಟೆಂಬರ್ 8ರಂದು ಆರಂಭವಾಗಿರುವ ಈ ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 17ರಂದು ಕೊನೆಗೊಳ್ಳಲಿದೆ. ಆಸಕ್ತರು ಎಕ್ಸ್‌ಕ್ಲೂಸಿವ್ ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. (ಇಲ್ಲಿ ಭೇಟಿ ಕೊಡಿ)

ಜೇಮ್ಸ್ ಬಾಂಡ್ ಗೋಲ್ಡನ್ ಫಿಂಗರ್ ಚಿತ್ರದಲ್ಲಿ ಬಳಕೆಯಾಗಿರುವ ಆಸ್ಟನ್ ಮಾರ್ಡಿನ್ ಡಿಬಿ5 ಚಿನ್ನದ ತದ್ರೂಪ ಕಾರು ಹರಾಜಿನಲ್ಲಿ ಲಭ್ಯವಾಗುವ ದುಡ್ಡನ್ನು ಎನ್‌ಎಸ್‌ಪಿಸಿಸಿ ಸಹಾಯಾರ್ಥ ಸಂಸ್ಥೆಗೆ ನೀಡಲಾಗುವುದು. ಆಯೋಜಕರು ಭಾರಿ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿದ್ದಾರೆ.

ನೈಜ ಆಸ್ಟನ್ ಮಾರ್ಟಿನ್ ಕ್ಲಾಸಿಕ್ ಕಾರಾಗಿರುವ ಡಿಬಿ5 ಮಾದರಿಯ ಮೂರನೇ ಒಂದು ರೂಪವಾಗಿರುವ ಇದನ್ನು 24 ಕ್ಯಾರೆಟ್ ಚಿನ್ನ ಲೇಪನದಿಂದ ನಿರ್ಮಿಸಲಾಗಿದೆ.

1964ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ ಜೇಮ್ಸ್ ಬಾಂಡನ್ ಮೂರನೇ ಗೋಲ್ಡ್ ಫಿಂಗರ್ ಚಲನಚಿತ್ರದಲ್ಲಿ ಆಸ್ಟನ್ ಮಾರ್ಟಿನ್ ಡಿಬಿ5 ಕಾರಿನ ಮೊದಲ ಮಾದರಿಯನ್ನು ಬಳಕೆ ಮಾಡಲಾಗಿತ್ತು. ಇದು ಆಗಷ್ಟೇ 1963ರಲ್ಲಿ ಬಿಡುಗಡೆಯಾಗಿತ್ತು.

ಬುಲೆಟ್ ಫ್ರೂಫ್‌ಗಳಂತಹ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದ್ದ ಆಸ್ಟನ್ ಮಾರ್ಟಿನ್ ಡಿಬಿ5, ಗೋಲ್ಡ್ ಫಿಂಗರ್ ಚಿತ್ರದಲ್ಲಿ ನೈಜ ಬಾಂಡ್ ಕಾರೆನಿಸಿಕೊಂಡಿತ್ತು.

ವಿಶೇಷವೆಂದರೆ ಈ ಚಿತ್ರದ ಯಶಸ್ಸಿನ ಬಳಿಕ ಜೇಮ್ಸ್ ಬಾಂಡ್ ಪತ್ತೇದಾರಿ ಸಿನೆಮಾ ಸರಣಿಯ ಮುಂದಿನ ಚಿತ್ರಗಳಾದ ಥಂಡರ್ ಬಾಲ್ (1965), ಟುಮೊರೊ ನೆವರ್ ಡೈಸ್ (1997), ಕ್ಯಾಸಿನೊ ರಾಯಲ್ (2006) ಮತ್ತು ಸ್ಕೈಫಾಲ್ (2012) ಚಿತ್ರಗಳಲ್ಲೂ ಆಸ್ಟನ್ ಮಾರ್ಟಿನ್‌ನ ಇದೇ ಐಕಾನಿಕ್ ಕಾರು ಕಾಣಿಸಿಕೊಂಡಿತ್ತಲ್ಲದೆ ಅದೇ ಹಳೆಯ ಬಿಎಂಟಿ 216ಎ ರಿಜಿಸ್ಟ್ರೇಷನ್ ನಂಬರ್ ಬಳಕೆ ಮಾಡಲಾಗಿತ್ತು.

ಅಂದ ಹಾಗೆ ತಾಜಾ ತ್ರಿಡಿ ಪ್ರಿಟಿಂಗ್ ತಂತ್ರಗಾರಿಕೆಯ ನೆರವಿನೊಂದಿಗೆ ಗೋಲ್ಡ್ ಫಿಂಗರ್ ಆಸ್ಟನ್ ಮಾರ್ಟಿನ್ ಡಿಬಿ5 ಕಾರಿನ ತದ್ರೂಪವನ್ನು ರಚಿಸಲಾಗಿದೆ.


Click it and Unblock the Notifications








