007 ನಂಬರ್ ಪ್ಲೇಟ್‍ಗಾಗಿ ಹೊಸ ಕಾರಿನ ಬೆಲೆಯಷ್ಟೇ ಖರ್ಚು ಮಾಡಿದ ಜೇಮ್ಸ್ ಬಾಂಡ್ ಅಭಿಮಾನಿ

ಜೇಮ್ಸ್ ಬಾಂಡ್ ಸರಣಿಯ ಸಿನಿಮಾಗಳಿಗೆ ಜಗತ್ತಿನಾದ್ಯಂತ ಎಷ್ಟೆಲ್ಲಾ ಕ್ರೇಜ್ ಇದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಇನ್ನು ಚಿತ್ರರಂಗದಲ್ಲಿಯು ಕೂಡಾ ಬಾಂಡ್ ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್ ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ.

007 ನಂಬರ್ ಪ್ಲೇಟ್‍ಗಾಗಿ ಜೇಮ್ಸ್ ಬಾಂಡ್ ಅಭಿಮಾನಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಜೇಮ್ಸ್ ಬಾಂಡ್ ಚಿತ್ರಗಳಿಗೆ ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅದೇ ರೀತಿ ಭಾರತದಲ್ಲಿ ಒಬ್ಬ ತಾನೂ ಎಷ್ಟು ದೊಡ್ಡ ಅಭಿಮಾನಿ ಎಂದು ಲಕ್ಷ ಲಕ್ಷ ಖರ್ಚು ಮಾಡಿ ಸಾಬೀತು ಮಾಡಿದ್ದಾರೆ. 007 ಸಂಖ್ಯೆಯ ನಂಬರ್ ಪ್ಲೇಟ್‍ಗಾಗಿ ಬರೊಬ್ಬರಿ ರೂ.34 ಲಕ್ಷ ಖರ್ಚು ಮಾಡಿದ್ದಾರೆ. ಗುಜರಾತ್‌ನ ಅಹಮದಾಬಾದ್‌ ಮೂಲದ ಆಶಿಕ್ ಪಟೇಲ್ ಎಂಬವರು ಇಷ್ಟು ದೊಡ್ಡ ಮೊತ್ತ ಖರ್ಚು ಮಾಡಿ 007 ಸಂಖ್ಯೆಯ ನಂಬರ್ ಪ್ಲೇಟ್ ಅನ್ನು ಪಡೆದುಕೊಂಡಿದ್ದಾರೆ.

007 ನಂಬರ್ ಪ್ಲೇಟ್‍ಗಾಗಿ ಜೇಮ್ಸ್ ಬಾಂಡ್ ಅಭಿಮಾನಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಆಶಿಕ್ ಪಟೇಲ್ ಅವರು ತನ್ನ ಫಾರ್ಚೂನರ್ ಎಸ್‍ಯುವಿಗಾಗಿ ಬಾಂಡ್ ಸಂಖ್ಯೆಯ ನಂಬರ್ ಪ್ಲೇಟ್ ಅನ್ನು ಪಡೆದುಕೊಂಡಿದ್ದಾನೆ. ಈ ಟೊಯೊಟಾ ಫಾಚೂರ್ನರ್ ಎಸ್‍ಯುವಿಯ ಬೆಲೆಗೆ ಸಮನಾದ ಮೊತ್ತಕ್ಕೆ ನಂಬರ್ ಪ್ಲೇಟ್ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ.

007 ನಂಬರ್ ಪ್ಲೇಟ್‍ಗಾಗಿ ಜೇಮ್ಸ್ ಬಾಂಡ್ ಅಭಿಮಾನಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಆಶಿಕ್ ಪಟೇಲ್ ಅವರ ಟೊಯೊಟಾ ಫಾರ್ಚೂನರ್ ಎಸ್‍ಯುವಿಗೆ GJ01WA007 ಎಂಬ ನಂಬರ್ ಪ್ಲೇಟ್ ಅನ್ನು ಹರಾಜಿನಲ್ಲಿ ಪಡೆದಿದ್ದಾರೆ. ಇತ್ತೀಚೆಗೆ, 007 ಸಂಖ್ಯೆಗೆ ಆನ್‌ಲೈನ್ ಹರಾಜು ರೂ.25 ಸಾವಿರಗಳ ಆರಂಭಿಕ ಬೆಲೆಯೊಂದಿಗೆ ಪ್ರಾರಂಭವಾಯಿತ್ತು.

007 ನಂಬರ್ ಪ್ಲೇಟ್‍ಗಾಗಿ ಜೇಮ್ಸ್ ಬಾಂಡ್ ಅಭಿಮಾನಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಈ ಹರಾಜಿನ ಅನೇಕ ಜೇಮ್ಸ್ ಬಾಂಡ್ ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ಹರಾಜಿನಲ್ಲಿ ಅಭಿಮಾನಿಗಳು ರೂ.25 ಲಕ್ಷ ಗಳವರೆಗೆ ಬಿಡ್ ಮಾಡಿದರು. ಈ ವೇಳೆ ಆಶಿಕ್ ಪಟೇಲ್ ರೂ.34 ಲಕ್ಷಕ್ಕೆ ಬಿಡ್ ಕರೆದು ಉಳಿದ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದರು.

007 ನಂಬರ್ ಪ್ಲೇಟ್‍ಗಾಗಿ ಜೇಮ್ಸ್ ಬಾಂಡ್ ಅಭಿಮಾನಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ನಂತರ ಈ ಹರಾಜು ಪಕ್ರಿಯೆಯನ್ನು ಅಹಮದಾಬಾದ್ ಆರ್‌ಟಿಒ ಅಧಿಕಾರಿಗಳು ಪೂರ್ಣಗೊಳಿಸಿ. 007 ಸಂಖ್ಯೆಯ ನಂಬರ್ ಪ್ಲೇಟ್ ಅನ್ನು ರೂ.34 ಲಕ್ಷಕ್ಕೆ ಆಶಿಕ್ ಪಟೇಲ್ ಅವರಿಗೆ ನೀಡಿದರು. ಸಿಕ್ರೇಟ್ ಏಜೆಂಟ್ ಜೇಮ್ಸ್ ಬಾಂಡ್-007 ಎಂಬುವುದು ಅಭಿಮಾನಿಗಳ ಫೇವರೆಟ್ ಡೈಲಾಂಗ್ ಆಗಿದೆ.

007 ನಂಬರ್ ಪ್ಲೇಟ್‍ಗಾಗಿ ಜೇಮ್ಸ್ ಬಾಂಡ್ ಅಭಿಮಾನಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

007 ಸಂಖ್ಯೆಯ ನಂಬರ್ ಪ್ಲೇಟ್ ತನ್ನದಾಗಿಸಿದ ಬಳಿಕ ಆಶಿಕ್ ಪಟೇಲ್ ಮಾತನಾಡಿ, ಇಲ್ಲಿ ಹಣದ ವಿಚಾರವಲ್ಲ, ಆ ನಂಬರ್ ನನ್ನ ಪಾಲಿಗೆ ಲಕ್ಕಿ ನಂಬರ್, ಈ ನಂಬರ್ ನನ್ನ ಕಾರಿಗೆ ಸಿಕ್ಕಿರುವುದು ನನ್ನ ಭಾಗ್ಯವೆಂದು ಸಂತಸವನ್ನು ಹಂಚಿಕೊಂಡಿದ್ದಾರೆ.

007 ನಂಬರ್ ಪ್ಲೇಟ್‍ಗಾಗಿ ಜೇಮ್ಸ್ ಬಾಂಡ್ ಅಭಿಮಾನಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಅವರು ತಮ್ಮ ಟೊಯೊಟಾ ಫಾರ್ಚೂನರ್ ಎಸ್‍ಯುವಿಗಾಗಿ ಈ ನಂಬರ್ ಪ್ಲೇಟ್ ಅನ್ನು ಖರೀದಿಸಿದ್ದಾರೆ. ಟೊಯೊಟಾ ಕಂಪನಿಯ ಎಸ್‍ಯುವಿಗಳ ಸರಣಿಯಲ್ಲಿ ಫಾರ್ಚೂನರ್ ಜನಪ್ರಿಯ ಮಾದರಿಯಾಗಿದೆ.

007 ನಂಬರ್ ಪ್ಲೇಟ್‍ಗಾಗಿ ಜೇಮ್ಸ್ ಬಾಂಡ್ ಅಭಿಮಾನಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಇನ್ನು ಟೊಯೊಟಾ ಫಾರ್ಚೂನರ್ ಎಸ್‍ಯುವಿ ಬಗ್ಗೆ ಹೇಳುವುದಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಕಂಪನಿಯು ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

007 ನಂಬರ್ ಪ್ಲೇಟ್‍ಗಾಗಿ ಜೇಮ್ಸ್ ಬಾಂಡ್ ಅಭಿಮಾನಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಟೊಯೊಟಾ ಫಾರ್ಚೂನರ್ ತನ್ನ ಉತ್ತಮ ಸಾಮರ್ಥ್ಯದಿಂದ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಅಲ್ಲದೇ ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಎಸ್‍ಯುವಿಯಾಗಿದೆ.

Most Read Articles

Kannada
English summary
Fan of James Bond, Ahmedabad Man Pays Rs 34 lakh For 007 No Plate For Suv. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X