ಹಾರುವ ಕಾರುಗಳ ಯಶಸ್ವಿ ಪರೀಕ್ಷೆ ನಡೆಸಿದ ಜಪಾನ್ ಕಂಪನಿ
ಪ್ರಪಂಚದ ಹಲವು ದೇಶಗಳಲ್ಲಿ ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಹಾರುವ ಕಾರುಗಳಲ್ಲಿ ಪ್ರಯಾಣಿಸಬೇಕೆನ್ನುವ ಮನುಷ್ಯರ ಕನಸು ಇನ್ನೂ ನನಸಾಗಿಲ್ಲ. ಜಪಾನಿನ ಕಂಪನಿಯೊಂದು ಈ ಕನಸನ್ನು ನನಸಾಗಿಸಲು ಮತ್ತೊಂದು ಹೆಜ್ಜೆಯನ್ನಿಟ್ಟಿದೆ.

ಇತ್ತೀಚೆಗೆ ಈ ಕಂಪನಿಯು ತನ್ನ ಹಾರುವ ಕಾರನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಹಾರುವ ಕಾರನ್ನು ಜಪಾನ್‌ನ ಸ್ಕೈಡ್ರೈವ್ ಇಂಕ್ ಎಂಬ ಕಂಪನಿಯು ತಯಾರಿಸಿದೆ. ವ್ಯಕ್ತಿಯೊಬ್ಬನನ್ನು ಕಾರಿನೊಳಗೆ ಇರಿಸಿ ಈ ಹಾರುವ ಕಾರನ್ನು ಪರೀಕ್ಷಿಸಲಾಗಿದೆ. ರೆಕ್ಕೆಗಳನ್ನು ಹೊಂದಿರುವ ಬೈಕ್ ರೀತಿಯಲ್ಲಿ ಕಾಣುವ ಈ ವಾಹನವು ಸುಮಾರು 1-2 ಮೀಟರ್ ಮೇಲಕ್ಕೇರಿ ಸುಮಾರು 4 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಾಟ ನಡೆಸಿದೆ.

ಇನ್ನೂ ಆರಂಭಿಕ ಹಂತದಲ್ಲಿರುವ ಈ ಪರೀಕ್ಷೆಯು ದೊಡ್ಡ ಯಶಸ್ಸನ್ನು ಕಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸ್ಕೈಡ್ರೈವ್‌ನ ಉದ್ಯೋಗಿ ಟೊಮೊಹಿರೊ ಈ ಹಾರುವ ಕಾರು 2023ರಲ್ಲಿ ಸಿದ್ಧವಾಗಬಹುದು ಎಂದು ಹೇಳಿದರು. ಅದನ್ನು ಸುರಕ್ಷಿತವಾಗಿರಿಸುವುದು ಸವಾಲಿನ ಕೆಲಸವಾಗಿದೆ ಎಂದು ಅವರು ಹೇಳಿದರು.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಪ್ರಪಂಚದಾದ್ಯಂತ 100ಕ್ಕೂ ಹೆಚ್ಚು ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅವುಗಳಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಹಾರಾಟ ನಡೆಸಬಲ್ಲ. ಅನೇಕ ಜನರು ಹಾರುವ ಕಾರುಗಳಲ್ಲಿ ಸುರಕ್ಷಿತವಾಗಿ ಚಲಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಅವರು ಹೇಳಿದರು.

ಈ ವಾಹನವು ಕೇವಲ ಐದರಿಂದ ಹತ್ತು ನಿಮಿಷಗಳವರೆಗೆ ಮಾತ್ರ ಗಾಳಿಯಲ್ಲಿ ಹಾರಬಲ್ಲದು. ಸುಮಾರು 30 ನಿಮಿಷಗಳವರೆಗೆ ಹಾರಾಟ ನಡೆಸಿದರೆ ಹೆಚ್ಚು ಬೇಡಿಕೆ ಬರಬಹುದು. ಚೀನಾ ಸೇರಿದಂತೆ ಹಲವು ಸ್ಥಳಗಳಿಗೆ ರಫ್ತು ಮಾಡಬಹುದು ಎಂದು ಟೊಮೊಹಿರೊ ಹೇಳಿದ್ದಾರೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ವಿಮಾನಗಳು ಅಥವಾ ಹೆಲಿಕಾಪ್ಟರ್‌ಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ ಅನುಕೂಲಕರವಾಗಿದ್ದು, ಅವುಗಳು ಪಾಯಿಂಟ್-ಟು-ಪಾಯಿಂಟ್ ಪ್ರಯಾಣವನ್ನು ಸುಲಭಗೊಳಿಸುತ್ತವೆ. ಬ್ಯಾಟರಿ ಗಾತ್ರ, ವಾಯು ಸಂಚಾರ ನಿಯಂತ್ರಣ ಹಾಗೂ ಇತರ ಮೂಲಸೌಕರ್ಯಗಳು ಅವುಗಳನ್ನು ಕಮರ್ಷಿಯಲ್ ಮಾಡುವಾಗ ಮುಖ್ಯವಾಗುತ್ತವೆ.
ಸ್ಕೈಡ್ರೈವ್ ಕಂಪನಿಯು 2012ರಲ್ಲಿ ಕಾರ್ಟಿವೇಟರ್ ಹೆಸರಿನಲ್ಲಿ ಈ ಯೋಜನೆಯನ್ನು ಆರಂಭಿಸಿತು. ಟೊಯೋಟಾ ಮೋಟಾರ್, ಪ್ಯಾನಾಸೋನಿಕ್ ಕಾರ್ಪೊರೇಷನ್ ಹಾಗೂ ವಿಡಿಯೋ ಗೇಮ್ ತಯಾರಕ ಬಂದೈ ನಾಮ್ಕೊ ಮುಂತಾದ ಕಂಪನಿಗಳು ಈ ಯೋಜನೆಗೆ ಧನಸಹಾಯ ಮಾಡಿವೆ. ಮೂರು ವರ್ಷಗಳ ಹಿಂದೆ ಇದೇ ರೀತಿಯ ಪರೀಕ್ಷೆಯನ್ನು ನಡೆಸಲಾಗಿತ್ತದರೂ ಆ ಪರೀಕ್ಷೆ ವಿಫಲವಾಗಿತ್ತು.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಈ ಹಿಂದೆ ಕಾರು ಹಾಗೂ ವಿಮಾನಗಳ ಆವಿಷ್ಕಾರದ ಸಮಯದಲ್ಲಿ ಜನರಲ್ಲಿ ಉತ್ಸಾಹ ಕಂಡು ಬಂದಿತ್ತು. ಈಗ ಜನರು ಅದೇ ರೀತಿಯ ಉತ್ಸಾಹವನ್ನು ಹಾರುವ ಕಾರುಗಳ ಬಗೆಯೂ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಕಂಪನಿಯು ಈ ಕಾರನ್ನು ಇನ್ನೂ ಉತ್ತಮ ರೂಪದಲ್ಲಿ ಹಾಗೂ ಸಮಂಜಸವಾದ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು.


Click it and Unblock the Notifications