ಜಪಾನ್‌ನಲ್ಲೊಂದು ಭಯಾನಕ, ಅಸಾಮಾನ್ಯ ಮೇಲ್ಸೇತುವೆ
ಸಾಮಾನ್ಯವಾಗಿ ಮೇಲ್ಸೇತುವೆಗಳನ್ನು ಅತ್ಯಂತ ಸೂಕ್ಷ್ಮತೆಯಿಂದ ಬಹಳ ಅಚ್ಚುಕಟ್ಟಾಗಿ ನಿರ್ಮಿಸಲಾಗುತ್ತದೆ. ಆದರೆ ಇವೆಲ್ಲಕ್ಕಿಂತಲೂ ವಿಪರೀತವಾಗಿ ತಂತ್ರಗಾರಿಕೆಯಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಜಪಾನ್ ಅತ್ಯಂತ ವಿಶಿಷ್ಟ ರಸ್ತೆ ಮೇಲ್ಸೇತುವೆಯೊಂದನ್ನು ನಿರ್ಮಿಸಿದೆ.
ಇಲ್ಲಿ ನಿಮಗೆ ಸಾಮಾನ್ಯ ರಸ್ತೆ ಮೇಲ್ಸೇತುವೆಗಿಂತ ವಿಭಿನ್ನವಾಗಿ ಮೋಜಿನ ಅನುಭವ ದೊರಕಲಿದೆ. ಆದರೆ ಅಷ್ಟೇ ಭಯಾನಕವೆನಿಸಿದ್ದು, ಅಪಾಯ ಕಟ್ಟಿಟ್ಟ ಬುತ್ತಿ. ಇಂತಹದೊಂದು ಸೃಷ್ಟಿಗೆ ಜಪಾನ್ ಎಂಜಿನಿಯರ್ ಗಳ ಪ್ರಯತ್ನವನ್ನು ನಾವು ಮೆಚ್ಚಲೇಬೇಕು.

ಜಪಾನ್ ನ ಈ ಅತ್ಯಾದ್ಭುತ ಮೇಲ್ಸೇತುವೆ ಹೆಸರು ಇಶಿಮಾ ಒಹಶಿ (Eshima Ohashi bridge) ಈ ವಿಭಾಗದಲ್ಲಿ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಮೇಲ್ಸೇತುವೆ ಎನಿಸಿಕೊಂಡಿದೆ.

ನಕೌಮಿ (Nakaumi) ಸರೋವರದ ಮೇಲ್ಬಾಗದಲ್ಲಿ ಕಟ್ಟಲಾಗಿರುವ ಈ ಮೇಲ್ಸೇತುವೆ ಜಪಾನ್ ನ ಎರಡು ಪ್ರಮುಖ ನಗರಗಳನ್ನು (Matsue and Sakaiminato) ಬಂಧಿಸುತ್ತದೆ.

ಇಂತಹದೊಂದು ಮೇಲ್ಸೇತುವೆ ನಿರ್ಮಾಣದ ಹಿಂದೆ ಪ್ರಮುಖ ಗುರಿಯೊಂದಿದೆ. ಇದರ ಕೆಳಭಾಗದಲ್ಲಿ ಹಡಗುಗಳು ಸುಗಮವಾಗಿ ಹಾದು ಹೋಗುವ ನಿಟ್ಟಿನಲ್ಲಿ ಇಂತಹದೊಂದು ವಿಶಿಷ್ಟ ವಿನ್ಯಾಸಗಾರಿಕೆಗೆ ಮೊರೆ ಹೋಗಲಾಗಿದೆ.

ಇದು ಶಿಮಾನೆ ಕಡೆಯಿಂದ ಶೇಕಡಾ 6.1 ಹಾಗೂ ಟೆಟ್ಟೊರಿ ಕಡೆಯಿಂದ ಶೇಕಡಾ 5.1 ರಷ್ಟು ಕಡಿದಾದ ಇಳಿಜಾರು ಪ್ರಮಾಣವನ್ನು ಪಡೆದುಕೊಂಡಿದೆ.

ಈ ಎರಡು ಲೇನ್ ಗಳ ಕಾಂಕ್ರೀಟ್ ಮೇಲ್ಸೇತುವೆ 1.7 ಕೀ.ಮೀ. ದೂರವನ್ನು ಹೊಂದಿದ್ದು, 11.4 ಮೀಟರ್ ಅಗಲವನ್ನು ಪಡೆದುಕೊಂಡಿದೆ.

ಅಷ್ಟೇ ಯಾಕೆ ತನ್ನ ಮಿನಿವ್ಯಾನ್ ನ ಬಾಳ್ವಿಕೆಯನ್ನು ಪರೀಕ್ಷಿಸಲು ಜಪಾನ್ ನ ದೈಹಟ್ಸು ಮೋಟಾರು ಸಂಸ್ಥೆಯು ಇದೇ ಅಸಾಮಾನ್ಯ ಮೇಲ್ಸುತೆಯನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.

1997ನೇ ಇಸವಿಯಲ್ಲಿ ನಿರ್ಮಾಣವಾಗಿದ್ದ ಈ ಮೇಲ್ಸುತೆಯನ್ನು ಸಾರ್ವಜನಿಕ ಸಂಚಾರಕ್ಕೆ 2004ರಲ್ಲಿ ಬಿಟ್ಟು ಕೊಡಲಾಗಿತ್ತು.

ಜಪಾನ್ ನ ಇಶಿಮಾ ಒಹಶಿ ನೀವು ನೋಡಿರದ ಜಗತ್ತಿನ ಅತ್ಯಂತ ಕಡಿದಾದ ಇಳಿಜಾರು ಮೇಲ್ಸೇತುವೆಗಳಲ್ಲಿ ಒಂದಾಗಿದೆ..

ಪ್ರಸ್ತುತ ಜಪಾನ್ ನ ಪ್ರಮುಖ ಪ್ರವಾಸಿ ಆಕರ್ಷಣೆಯ ಕೇಂದ್ರಗಳಲ್ಲಿ ಒಂದಾಗಿ ಮಾರ್ಪಾಡುಗೊಂಡಿರುವ ಇಶಿಮಾ ಮೇಲ್ಸೇತುವೆಯಲ್ಲಿ ಅಪಘಾತವನ್ನು ತಪ್ಪಿಸಲು ವೇಗ ಮಿತಿ ವಿಧಿಸಲಾಗಿದ್ದು, 40 ಕೀ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ನೀವು ಸಂಚರಿಸುವಂತಿಲ್ಲ!

ಒಟ್ಟಿನಲ್ಲಿ ನೀವು ಅನೇಕ ರೀತಿಯ ಟ್ರಕ್ಕಿಂಗ್ ಅಥವಾ ಹಿಮಾಲಯನ್ ರೈಡಿಂಗ್ ನಲ್ಲಿ ಭಾಗವಹಿಸಿರಬಹುದು. ಆದರೆ ಇಷ್ಟು ಭಯಾನಕವಾದ ಮೇಲ್ಸುತೆಯಲ್ಲಿ ಸಾಹಸ ಚಾಲನೆ ಮಾಡುವ ಧೈರ್ಯ ನಿಮ್ಮಲ್ಲಿದೆಯೇ? ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಉತ್ತರಿಸಿರಿ.


Click it and Unblock the Notifications








