ಐಷಾರಾಮಿ ಮೋಟಾರ್ ಹೋಮ್‌ನಲ್ಲಿ ಸುಖ ಪಯಣ

ಇಟಲಿಯ ಪಿಎಲ್ಎ ಜತೆ ತಾಂತ್ರಿಕ ಸಹಯೋಗ ಮಾಡಿಕೊಂಡಿರುವ ಬಸ್ ಬಾಡಿ ಬಿಲ್ಡರ್ ಜೆಸಿಬಿಎಲ್ ಲಿಮಿಟೆಡ್, ದೇಶಕ್ಕೆ ಅತಿ ನೂತನ ಐಷಾರಾಮಿ ಮೋಟಾರ್ ಹೋಮ್ ಪರಿಚಯಿಸಿದೆ.

ಒಂದು ಮನೆಯಲ್ಲಿ ದೊರಕಲಿರುವ ಎಲ್ಲ ಐಷಾರಾಮಿ ಸೌಲಭ್ಯಗಳು ಸಿಗಲಿದೆ ಎಂಬುದು ಈ ಮೋಟಾರ್ ಹೋಮ್‌ನ ವಿಶೇಷತೆಯಾಗಿದೆ. ಇದರಲ್ಲಿ ಲಗ್ಷುರಿ ಬೆಡ್ ರೂಂ, ಕಿಚನ್, ಬಾತ್ ರೂಂ ಸೇರಿದಂತೆ ಇತರ ಅನೇಕ ಸೌಲಭ್ಯಗಳು ಲಭ್ಯವಿರಲಿದೆ.

ಫಿಯೆಟ್ ಡುಕಟೊ ಚಾಸಿಸ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಈ ಮೋಟಾರ್ ಹೋಮ್, ಪ್ರಯಾಣದ ಸಂದರ್ಭದಲ್ಲಿ ಸಂಚಾರಿ ಮನೆ, ಆತಿಥಿ ಗೃಹ, ಆಫೀಸ್ ಅಥವಾ ಮನರಂಜನಾ ಪ್ರದೇಶದ ಅನುಭವ ನೀಡಲಿದೆ.

ಎಚ್‌ಎಸ್ 75 ಹಾಗೂ ಎಂ740ಗಳೆಂಬ ಎರಡು ಮಾದರಿಗಳಲ್ಲಿ ಜೆಸಿಬಿಎಲ್ ಮೋಟಾರ್ ಹೋಮ್ ಲಭ್ಯವಿದ್ದು, ದೆಹಲಿ ಆನ್ ರೋಡ್ ದರ 75ರಿಂದ 80 ಲಕ್ಷ ರುಪಾಯಿಗಳಾಗಿವೆ.

ಐಷಾರಾಮಿ ಬಸ್ ಇಷ್ಟಪಡುವ ಗ್ರಾಹಕರ ಅಗತ್ಯಕ್ಕಾನುಸಾರವಾಗಿ ಈ ಮೋಟಾರ್ ಹೋಮ್ ತಯಾರಿಸಲಾಗಿದೆ ಎಂದು ಜೆಸಿಬಿಎಲ್ ಗ್ರೂಪ್ ಸಿಎಂಡಿ ಆಗಿರುವ ರಾಜಿಂಧರ್ ಅಗ್ರವಾಲ್ ತಿಳಿಸಿದ್ದಾರೆ. ನಂಬಿಕೆ, ವಿಶ್ವಾಸಾರ್ಹತೆ ಹಾಗೂ ಶಕ್ತಿ, ಈ ಮೋಟಾರ್ ಹೋಮ್‌ನ ಹಾಲ್ಮಾರ್ಕ್ ಆಗಿದೆ ಎಂಬುದನ್ನು ಒತ್ತಿ ಹೇಳಿದರು.

ಅಂದ ಹಾಗೆ ಪ್ರಸಕ್ತ ಸಾಲಿನಲ್ಲೇ 100 ಯುನಿಟ್ ಜೆಸಿಬಿಎಲ್ ಮಾರಾಟವಾಗುವ ಇರಾದೆಯನ್ನು ಅಗ್ರವಾಲ್ ವ್ಯಕ್ತಪಡಿಸಿದ್ದಾರೆ.

ಜೆಸಿಬಿಎಲ್ ಬಗ್ಗೆ ಒಂದಿಷ್ಟು...
ಸ್ವರಾಜ್ ಮಾಜ್ದಾ ಜತೆ ಪಾಲುದಾರಿಕೆ ಹೊಂದಿದ್ದ ಜೆಸಿಬಿಎಲ್ 1989ನೇ ಇಸವಿಯಲ್ಲಿ ಬಸ್ ಬಾಡಿ ನಿರ್ಮಾಣ ಕಾರ್ಯದಲ್ಲಿ ತೊಡಗಿತ್ತು. ಆ ಬಳಿಕ ತಮ್ಮ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಿದ್ದ ಕಂಪನಿ, ದೇಶದ ಹೆಸರಾಂತ ಟಾಟಾ ಮೋಟಾರ್ಸ್ ಹಾಗೂ ಅಶೋಕ್ ಲೇಲ್ಯಾಂಡ್‌ಗಳಂತಹ ಇತರ ಕಂಪನಿಗಳಿಗೂ ಬಾಡಿ ನಿರ್ಮಿಸಲು ಆರಂಭಿಸಿತ್ತು.

ಭಾರತ ಸರಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯ ಮಾನ್ಯತೆ ಪಡೆದುಕೊಂಡಿರುವ ಜೆಸಿಬಿಎಲ್ ಆ ಬಳಿಕ ಅಂಬುಲೆನ್ಸ್, ಬ್ಲಡ್ ಬ್ಯಾಂಕ್, ಮೊಬೈಲ್ ಹೋಮ್, ಮೊಬೈಲ್ ಆಫೀಸ್, ಡಿಸ್‌ಪ್ಲೇ ವ್ಯಾನ್, ಎಲೆಕ್ಷನ್ ಕ್ಯಾಂಪೈನ್ ವ್ಯಾನ್, ಬ್ಯಾಂಕ್ ಎಟಿಎಂ ವ್ಯಾನ್, ಹಿಂಸಾಚಾರ ನಿಯಂತ್ರಣ ವಾಹನ ಹಾಗೂ ಒಬಿ ವ್ಯಾನ್‌ಗಳಂದ ವಿಶೇಷ ಉದ್ದೇಶಿತ ವಾಹನಗಳನ್ನು ನಿರ್ಮಿಸುವುದರಲ್ಲಿ ನೆರವಾಗಿತ್ತು. ಪ್ರಸ್ತುತ ಕಂಪನಿಯು ಇಟಲಿಯ ಮೋಟಾರ್ ಹೋಮ್ ಆದ ಪಿಎಲ್‌ಎ ಜತೆ ಪಾಲುದಾರಿಕೆ ಹೊಂದಿದೆ.

JCBL PLA HS75

JCBL PLA HS75

ಪಿಎಲ್‌ಎ ಜತೆ ಪಾಲುದಾರಿಕೆ ಹೊಂದಿರುವ ಜೆಸಿಬಿಎಲ್, ಅತಿ ನೂತನ ಎಚ್‌ಎಸ್75 ಪ್ರೀಮಿಯಂ ಮೋಟಾರ್ ಹೋಮ್ ಪರಿಚಯಿಸಿದೆ. ಫಿಯೆಟ್ ಡುಕಾಟೊ ಫ್ಲಾಟ್‌ಫಾರ್ಮ್‌ನಲ್ಲಿ ಜೆಸಿಬಿಎಲ್ ಪಿಎಲ್‌ಎ ಎಚ್‌ಎಸ್ 75 ನಿರ್ಮಾಣವಾಗಿದ್ದು, ದೆಹಲಿ ಆನ್ ರೋಡ್ ದರ 75 ಲಕ್ಷ ರು.ಗಳಾಗಿವೆ.

JCBL PLA HS75

JCBL PLA HS75

ಫಿಯೆಟ್ ಡುಕಾಟೊ ಫ್ಲಾಟ್‌ಫಾರ್ಮ್‌ನಲ್ಲಿ (Fiat Ducato platform) ಜೆಸಿಬಿಎಲ್ ಎಚ್‌ಎಸ್75 ನಿರ್ಮಿಸಲಾಗಿದೆ. ಇದರ 3.0 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್, 400 ಎನ್‌ಎಂ ಟರ್ಕ್ಯೂನಲ್ಲಿ 180 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

JCBL PLA HS75

JCBL PLA HS75

ಜೆಸಿಬಿಎಲ್ ಪಿಎಲ್‌ಎ ಎಚ್‌ಎಸ್75 ನಾಲ್ಕು ಅಧಿಕೃತ ಪ್ರಯಾಣಿಕ ಸೀಟ್‌ಗಳನ್ನು ಹೊಂದಿದೆ. ಹಾಗಿದ್ದರೂ ಐದನೇ ಸೀಟ್ ಆಪ್ಷನಲ್ ಆಯ್ಕೆಯನ್ನು ಕೂಡಾ ಹೊಂದಿದೆ.

JCBL PLA HS75

JCBL PLA HS75

ಐಷಾರಾಮಿ ಡೈನಿಂಗ್ ಹಾಗೂ ಸಿಟ್ಟಿಂಗ್ ವ್ಯವಸ್ಥೆ

JCBL PLA HS75

JCBL PLA HS75

ಮನೆಯಲ್ಲಿ ಲಭ್ಯವಿರುವಂತೆಯೇ ಕಿಚನ್ ಸೌಲಭ್ಯ

JCBL PLA HS75

JCBL PLA HS75

ದೊಡ್ಡದಾದ ಸ್ಟೋರೇಜ್ ಕ್ಯಾಬಿನ್

JCBL PLA HS75

JCBL PLA HS75

ಇನ್ನು ಫ್ರೆಶ್ ಆಗಬೇಕು ಅನ್ನಿಸಿದಾಗ ವಾಶ್ ರೂಂ ಜತೆ ಪ್ರತ್ಯೇಕ ಶವರ್ ಕೂಡಾ ಲಗತ್ತಿಸಲಾಗಿದೆ.

JCBL PLA HS75

JCBL PLA HS75

ಟ್ವಿನ್ ಸ್ಲೀಪಿಂಗ್ ವ್ಯವಸ್ಥೆ ಸಂಚಾರದ ಸಂದರ್ಭದಲ್ಲೂ ಸುಖ ನಿದ್ರೆಯನ್ನು ಒದಗಿಸಲಿದೆ.

JCBL PLA HS75

JCBL PLA HS75

ಇದರ ಮಾಸ್ಟರ್ ಬೆಡ್ ಮೂರು ಜನರಿಗೆ ಮಲಗುವ ವ್ಯವಸ್ಥೆ ಕಲ್ಪಿಸುತ್ತಿದೆ.

JCBL PLA HS75

JCBL PLA HS75

ಸಿಟ್ಟಿಂಗ್ ಹಾಗೂ ಡೈನಿಂಗ್ ಪ್ರದೇಶದಲ್ಲಿ ಎಲೆಕ್ಟ್ರಿಕಲಿ ಹಿಂತೆಗೆದುಕೊಳ್ಳಬಹುದಾಗ ಡಬಲ್ ಬೆಡ್ ಸೇವೆ ಕೂಡಾ ಲಭ್ಯವಿದೆ.

JCBL PLA HS75

JCBL PLA HS75

ಲೆಥರ್ ಹಾಸಿಗೆ, ಎಬಿಎಸ್, ಇಎಸ್‌ಪಿ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಗೇರ್ ಬಾಕ್ಸ್, ರೂಫ್ ರ‌್ಯಾಕ್‌ಗಳಂತಹ ಇತರ ಅನೇಕ ವೈಶಿಷ್ಟ್ಯಗಳನ್ನು ಜೆಸಿಬಿಎಲ್ ಮೋಟಾರ್ ಹೋಮ್ ಹೊಂದಿದೆ. ಇವೆಲ್ಲವೂ ಸುಖ ಪ್ರಯಾಣಕ್ಕೆ ನೆರವು ಮಾಡಲಿದೆ.

ಇದೀಗ ಈ ಐಷಾರಾಮಿ ಮೋಟಾರ್ ಹೋಮ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Friday, March 1, 2013, 11:18 [IST]
English summary
JCBL in association with PLA has introduced the HS75 premium motorhome in the country. The JCBL PLA HS75 is based on the Fiat Ducato platform and has been priced at Rs 75 lakh (on-road New Delhi)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+