ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ದುಬಾರಿ ಕಾರುಗಳ ಮಾಲೀಕರು ಕಾರು ತಮ್ಮ ಕಾರು ಕಳ್ಳತನವಾಗಬಹುದು ಎಂಬ ಭಯವನ್ನು ಹೊಂದಿರುತ್ತಾರೆ. ಕಾರುಗಳ್ಳರು ಸಹ ದುಬಾರಿ ಬೆಲೆಯ ಕಾರುಗಳನ್ನೇ ಗುರಿಯಾಗಿಸಿಕೊಳ್ಳುತ್ತಾರೆ.

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಕಾರುಗಳಲ್ಲಿ ಎಷ್ಟೇ ಆಧುನಿಕ ಭದ್ರತಾ ಫೀಚರ್'ಗಳಿದ್ದರೂ ಕಾರುಗಳ್ಳರು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಕಾರುಗಳನ್ನು ಕದಿಯುತ್ತಾರೆ. ಇತ್ತೀಚಿಗೆಜಸರಾಜ್ ಸಿಂಗ್ ಎಂಬುವವರಿಗೆ ಸೇರಿದ ಕಾರು ಕಳ್ಳತನವಾಗಿದೆ.

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಜಸರಾಜ್ ಸಿಂಗ್ ತಮ್ಮ ಮನೆಯ ಹೊರಗೆ ನಿಲ್ಲಿಸಿದ್ದ ಜೀಪ್ ಕಂಪಾಸ್ ಎಸ್‌ಯುವಿಯನ್ನು ಕಾರುಗಳ್ಳರು ಕದ್ದೊಯ್ದಿದ್ದಾರೆ. ಈ ಘಟನೆ ಹೇಗೆ ಸಂಭವಿಸಿತು ಎಂಬುದು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಈ ಘಟನೆ ಫೆಬ್ರವರಿ 9ರಂದು ನಡೆದಿದೆ. ಈ ವೀಡಿಯೊದಲ್ಲಿ ಕಾರುಗಳ್ಳರು ಹ್ಯುಂಡೈ ಕ್ರೆಟಾ ಕಾರಿನಲ್ಲಿ ಬರುವುದನ್ನು ಕಾಣಬಹುದು. ನಂತರ ತಮ್ಮ ಹ್ಯುಂಡೈ ಕ್ರೆಟಾವನ್ನು ಜೀಪ್ ಕಂಪಾಸ್ ಬಳಿ ನಿಲ್ಲಿಸುತ್ತಾರೆ.

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಕ್ರೆಟಾ ಕಾರಿನಿಂದ ಕೆಳಗಿಳಿಯುವ ಖದೀಮನೊಬ್ಬ ಜೀಪ್ ಕಂಪಾಸ್ ಬಳಿ ತೆರಳುತ್ತಾನೆ. ಜೀಪ್ ಕಂಪಾಸ್ ಎಸ್‌ಯುವಿಯ ಡೋರ್ ತೆರೆಯಲು ಪ್ರಯತ್ನಿಸಿ ಸಾಧ್ಯವಾಗದ ಕಾರಣ ಮತ್ತೆ ಕ್ರೆಟಾ ಕಾರಿನಲ್ಲಿ ಕುಳಿತು ಮುಂದೆ ಸಾಗುತ್ತಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಈ ವೇಳೆ ಹಲವು ವಾಹನಗಳು ಆ ರಸ್ತೆಯಲ್ಲಿ ಸಂಚರಿಸುವುದನ್ನು ಕಾಣಬಹುದು. ಕೆಲವು ನಿಮಿಷಗಳ ನಂತರ ಅದೇ ಹ್ಯುಂಡೈ ಕ್ರೆಟಾ ಕಾರು ಆ ಸ್ಥಳಕ್ಕೆ ಬರುತ್ತದೆ. ಈ ಬಾರಿ ಕಾರುಗಳ್ಳರು ಜೀಪ್ ಕಂಪಾಸ್ ಕದಿಯಲು ಸಿದ್ಧರಾಗಿ ಬಂದಿದ್ದರು.

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಕ್ರೆಟಾ ಕಾರಿನಿಂದ ಕೆಳಗಿಳಿಯುವವನೊಬ್ಬ ಜೀಪ್ ಕಂಪಾಸ್ ಎಸ್‌ಯುವಿಯ ಡೋರ್ ತೆರೆಯಲು ಪ್ರಯತ್ನಿಸುತ್ತಾನೆ. ಇತರ ವಾಹನಗಳು ಬಂದಾಗ ಅನುಮಾನಬಾರದಿರಲಿ ಎಂಬ ಕಾರಣಕ್ಕೆ ಸುಮ್ಮನೆ ನಿಲ್ಲುತ್ತಾನೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಕೆಲ ಸಮಯದ ನಂತರ ಆ ಖದೀಮ ಕಂಪಾಸ್ ಎಸ್‌ಯುವಿಯ ಡೋರ್ ತೆರೆಯುತ್ತಾನೆ. ಜೀಪ್ ಕಂಪಾಸ್ ಎಸ್‌ಯುವಿಯ ಪಾಕಿಂಗ್ ಲೈಟ್ ಆನ್ ಆಗುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಕಂಪಾಸ್ ಎಸ್‌ಯುವಿಯ ಡೋರ್ ತೆರೆದ ನಂತರ ಆತ ಹ್ಯುಂಡೈ ಕ್ರೆಟಾ ಕಾರಿನ ಬಳಿ ಹೋಗಿ ಒಳಗಿದ್ದವರೊಂದಿಗೆ ಮಾತನಾಡುತ್ತಾನೆ. ಹ್ಯುಂಡೈ ಕ್ರೆಟಾ ಕಾರಿನಲ್ಲಿದ್ದನು ಅಲ್ಲಿಂದ ತೆರಳಿದ ನಂತರ ಈ ಖದೀಮ ಜೀಪ್ ಕಂಪಾಸ್ ಎಸ್‌ಯುವಿಯನ್ನು ಸ್ಟಾರ್ಟ್ ಮಾಡಿ ಅಲ್ಲಿಂದ ಪರಾರಿಯಾಗುತ್ತಾನೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಅಂದ ಹಾಗೆ ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ. ಕಳುವಾದ ಜೀಪ್ ಕಂಪಾಸ್ ಎಸ್‌ಯುವಿ 2017ರ ಮಾದರಿಯದಾಗಿದೆ. ಡಿಎಲ್ 12 ಸಿಎಂ 1188 ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಈ ಕಾರು ಸಿಲ್ವರ್ ಬಣ್ಣದಲ್ಲಿದೆ.

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಕಳುವಾದ ಜೀಪ್ ಕಂಪಾಸ್ ಎಸ್‌ಯುವಿಯ ವಿವರಗಳನ್ನು ಅದರ ಮಾಲೀಕರು ಸಾಮಾಜಿಕ ಜಾಲತಾಣಗಳಲ್ಲಿ ನೀಡಿ ತನ್ನ ಕಾರಿನ ಬಗ್ಗೆ ಅಥವಾ ಕಾರುಗಳ್ಳರ ಬಗ್ಗೆ ಮಾಹಿತಿಯನ್ನು ನೀಡುವಂತೆ ಸಾರ್ವಜನಿಕರನ್ನು ಕೇಳಿಕೊಂಡಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ತಮ್ಮ ಕಾರನ್ನು ಮರುಪಡೆಯಲು ಸಹಾಯ ಮಾಡುವವರಿಗೆ ರೂ.2 ಲಕ್ಷ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿದ್ದರೂ ಮನೆಯ ಮುಂದೆ ಪಾರ್ಕ್ ಮಾಡಲಾಗಿದ್ದ ಕಾರ್ ಅನ್ನು ಕದ್ದಿರುವುದು ನಿಜಕ್ಕೂ ದುರದೃಷ್ಟಕರ.

ಕ್ರೆಟಾ ಕಾರಿನಲ್ಲಿ ಬಂದು ಜೀಪ್ ಕಂಪಾಸ್ ಕಾರು ಕದ್ದ ಖದೀಮರು

ಈ ರಸ್ತೆಯಲ್ಲಿ ಹಲವು ಕಾರುಗಳಿದ್ದರೂ ದುಬಾರಿ ಬೆಲೆಯ ಜೀಪ್ ಕಂಪಾಸ್ ಎಸ್‌ಯುವಿಯನ್ನೇ ಕಳುವು ಮಾಡಲಾಗಿದೆ.

Most Read Articles

Kannada
English summary
Jeep compass SUV parked outside owner's house stolen in Delhi. Read in Kannada.
Story first published: Tuesday, February 16, 2021, 18:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X