ಕಮರ್ಷಿಯಲ್ ಪೈಲಟ್ ಆಗುವ ಮೂಲಕ ಬಾಲ್ಯದ ಕನಸು ನನಸು ಮಾಡಿಕೊಂಡ ಕುಗ್ರಾಮದ ಯುವತಿ

ಹಲವರಿಗೆ ಪೈಲಟ್ ಆಗಿ ವಿಮಾನದಲ್ಲಿ ಹಾರಾಡಬೇಕೆಂಬ ಕನಸಿರುತ್ತದೆ. ಕೆಲವರು ಪೈಲಟ್ ಆಗುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಕನಸು ನನಸಾಗುವುದೇ ಇಲ್ಲ.

ಕಮರ್ಷಿಯಲ್ ಪೈಲಟ್ ಆಗುವ ಮೂಲಕ ಬಾಲ್ಯದ ಕನಸು ನನಸು ಮಾಡಿಕೊಂಡ ಕುಗ್ರಾಮದ ಯುವತಿ

ಭಾರತದಲ್ಲಿ ಪುರುಷರಂತೆ ಮಹಿಳೆಯರು ಸಹ ಪೈಲಟ್'ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಕೇರಳದ ತಿರುವನಂತಪುರ ಬಳಿಯ ಕೊಚುತುರಾ ಗ್ರಾಮದ ಜೆನ್ನಿ ಜೆರೋಮ್ ಸಹ ಒಬ್ಬರು. ಈ ಯುವತಿ ಕೇರಳದ ಮೊದಲ ಕಮರ್ಷಿಯಲ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಮರ್ಷಿಯಲ್ ಪೈಲಟ್ ಆಗುವ ಮೂಲಕ ಬಾಲ್ಯದ ಕನಸು ನನಸು ಮಾಡಿಕೊಂಡ ಕುಗ್ರಾಮದ ಯುವತಿ

ಈ ಹಿನ್ನೆಲೆಯಲ್ಲಿ ಕೇಂದ್ರದ ಹಾಗೂ ರಾಜ್ಯದ ಎಲ್ಲ ರಾಜಕಾರಣಿಗಳು ಅವರಿಗೆ ಭವ್ಯ ಸ್ವಾಗತ ನೀಡಿದ್ದಾರೆ. ಜೆನ್ನಿ ಜೆರೋಮ್ ತಮ್ಮ 23ನೇ ವಯಸ್ಸಿನಲ್ಲಿಯೇ ಪೈಲಟ್ ಆಗುವ ಮೂಲಕ ಹಲವಾರು ಯುವತಿಯರಿಗೆ ಆದರ್ಶವಾಗಿದ್ದಾರೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕಮರ್ಷಿಯಲ್ ಪೈಲಟ್ ಆಗುವ ಮೂಲಕ ಬಾಲ್ಯದ ಕನಸು ನನಸು ಮಾಡಿಕೊಂಡ ಕುಗ್ರಾಮದ ಯುವತಿ

ಹೊಸ ಇತಿಹಾಸ ನಿರ್ಮಿಸಿದ ಕಾರಣಕ್ಕೆ ಕೇರಳದ ಎಲ್ಲಾ ರಾಜಕಾರಣಿಗಳು ಜೆನ್ನಿ ಜೆರೋಮ್'ರವರನ್ನು ಅಭಿನಂದಿಸುತ್ತಿದ್ದಾರೆ. ಜೆನ್ನಿ ಜೆರೋಮ್ ಕಳೆದ ಭಾನುವಾರತಮ್ಮ ಮೊದಲ ಕಮರ್ಷಿಯಲ್ ವಿಮಾನ ಹಾರಾಟವನ್ನು ಯಶಸ್ವಿಯಾಗಿ ಮುಗಿಸಿದರು.

ಕಮರ್ಷಿಯಲ್ ಪೈಲಟ್ ಆಗುವ ಮೂಲಕ ಬಾಲ್ಯದ ಕನಸು ನನಸು ಮಾಡಿಕೊಂಡ ಕುಗ್ರಾಮದ ಯುವತಿ

ಅವರು ಏರ್ ಅರೇಬಿಯಾ ಜಿ 9449 ವಿಮಾನವನ್ನು ಚಾಲನೆ ಮಾಡಿದರು. ಶಾರ್ಜಾದಿಂದ ಹಾರಾಟವನ್ನು ಆರಂಭಿಸಿದ ಈ ವಿಮಾನವು ತಿರುವನಂತಪುರದಲ್ಲಿ ಲ್ಯಾಂಡಿಂಗ್ ಆಯಿತು. ಈ ಯಶಸ್ವಿ ಪ್ರಯಾಣದ ನಂತರ ಜೆನ್ನಿ ಜೆರೋಮ್'ರವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕಮರ್ಷಿಯಲ್ ಪೈಲಟ್ ಆಗುವ ಮೂಲಕ ಬಾಲ್ಯದ ಕನಸು ನನಸು ಮಾಡಿಕೊಂಡ ಕುಗ್ರಾಮದ ಯುವತಿ

ಎರಡನೇ ಬಾರಿಗೆ ಕೇರಳದ ಮುಖ್ಯಮಂತ್ರಿ ಗಾದಿಯನ್ನು ಅಲಂಕರಿಸಿರುವ ಪಿಣರಾಯಿ ವಿಜಯನ್ ಹಾಗೂ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೇರಿದಂತೆ ಹಲವಾರು ಮಂತ್ರಿಗಳು ಜೆನ್ನಿ ಜೆರೋಮ್'ರವರನ್ನು ಅಭಿನಂದಿಸಿದ್ದಾರೆ.

ಕಮರ್ಷಿಯಲ್ ಪೈಲಟ್ ಆಗುವ ಮೂಲಕ ಬಾಲ್ಯದ ಕನಸು ನನಸು ಮಾಡಿಕೊಂಡ ಕುಗ್ರಾಮದ ಯುವತಿ

ಜೆನ್ನಿ ಜೆರೋಮ್'ರವರ ಸಾಧನೆಯ ಬಗ್ಗೆ ಟ್ವೀಟ್ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಜೆನ್ನಿ ಜೆರೋಮ್'ರವರ ಸಾಧನೆಯು ಯುವತಿಯರಿಗೆ ಹಾಗೂ ಸಾಮಾನ್ಯ ಜನರಿಗೆ ಉತ್ತಮ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕಮರ್ಷಿಯಲ್ ಪೈಲಟ್ ಆಗುವ ಮೂಲಕ ಬಾಲ್ಯದ ಕನಸು ನನಸು ಮಾಡಿಕೊಂಡ ಕುಗ್ರಾಮದ ಯುವತಿ

ಜೆನ್ನಿ ಜೆರೋಮ್'ರವರ ಕನಸನ್ನು ನನಸು ಮಾಡಲು ಬೆಂಬಲ ನೀಡಿದ ಅವರ ಕುಟುಂಬವು ಸಮಾಜಕ್ಕೆ ಆದರ್ಶಪ್ರಾಯವಾಗಿದೆ. ಜೆನ್ನಿ ಜೆರೋಮ್ ತಮ್ಮ ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇವೆ ಎಂದು ಅವರು ಹೇಳಿದ್ದಾರೆ.

ಕಮರ್ಷಿಯಲ್ ಪೈಲಟ್ ಆಗುವ ಮೂಲಕ ಬಾಲ್ಯದ ಕನಸು ನನಸು ಮಾಡಿಕೊಂಡ ಕುಗ್ರಾಮದ ಯುವತಿ

ಕುಗ್ರಾಮದಿಂದ ಬಂದು ಮಹತ್ತರ ಸಾಧನೆ ಮಾಡಿರುವ ಜೆನ್ನಿ ಜೆರೋಮ್‌ರವರನ್ನು ತಿರುವನಂತಪುರಂ ಸಂಸದರಾದ ಶಶಿ ತರೂರ್ ಕೂಡ ಕೊಂಡಾಡಿ ತಮ್ಮ ಟ್ವಿಟರ್ ಖಾತೆಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಮೀನುಗಾರಿಕೆಯೇ ಪ್ರಧಾನ ಕಸುಬಾಗಿರುವ ಹಳ್ಳಿಯ ಯುವತಿಯೊಬ್ಬಳು ಪೈಲಟ್ ಆಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಮೂಲಕ ಅವರು ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅವರ ಈ ಸಾಧನೆ ಎಲ್ಲರಿಗೂ ಸ್ಫೂರ್ತಿ ನೀಡಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Most Read Articles

Kannada
English summary
Jeni Jerome becomes the first woman commercial pilot of Kerala. Read in Kannada.
Story first published: Thursday, May 27, 2021, 12:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X