ಮತ್ತೆ ಹರಾಜಿಗೆ ಬಂದ ಜೆಟ್ ಮಾದರಿಯ ಲಿಮೋಸಿನ್ ವಾಹನ
ವಿಭಿನ್ನ ಶೈಲಿಯ ಲಿಮೋಸಿನ್ ವಾಹನವನ್ನು ಮತ್ತೆ ಹರಾಜಿಗೆ ಇಡಲಾಗಿದೆ. ಈ ಹಿಂದೆ ಈ ವಾಹನವನ್ನು ಹರಾಜಿಗಿಟ್ಟಾಗ ನಿರೀಕ್ಷೆಯಂತೆ ಹರಾಜಾಗಿರಲಿಲ್ಲ. ಈ ಕಾರಣಕ್ಕೆ ಈ ವಾಹನದ ಹರಾಜನ್ನು ಘೋಷಿಸಿದ ಮೆಕೂಮ್ ಆಕ್ಷನ್ಸ್ ಹರಾಜು ಪ್ರಕ್ರಿಯೆಯನ್ನು ಹಿಂಪಡೆದಿತ್ತು.

ಈಗ ಒಂದು ವರ್ಷದ ನಂತರ ಈ ವಾಹನವನ್ನು ಮತ್ತೆ ಹರಾಜಿಗೆ ಇಡಲಾಗಿದೆ. ಈ ವಾಹನವು 42 ಅಡಿ ಉದ್ದ ಹಾಗೂ 8 ಅಡಿ ಅಗಲವಿದೆ. ಈ ಜೆಟ್ ವಿಮಾನದ ಮಾದರಿಯ ವಾಹನದ ಸಹಾಯದಿಂದ ಅದ್ಭುತವಾದುದನ್ನು ಮಾಡಬಹುದು. ಈ ವಾಹನವನ್ನು ಕ್ಯಾಂಡಿ ರೆಡ್ ಲಿಮೋ-ಜೆಟ್ ಅಥವಾ ಲಿಯರ್ಮೋಸಿನ್ ಎಂದೂ ಸಹ ಕರೆಯಲಾಗುತ್ತದೆ.

ಜೆಟ್‌ಗಳಿಗೆ ಸ್ಥಳಾವಕಾಶ ಕಲ್ಪಿಸಲು ಇದುವರೆಗೂ ಅನೇಕ ವಾಹನಗಳನ್ನು ತಯಾರಿಸಲಾಗಿದೆ. ಆದರೆ ಈ ವಾಹನ ಮೂಲ ಜೆಟ್ ಅನ್ನು ಹೋಲುವಂತಿದೆ. ಈ ವಾಹನದಲ್ಲಿರುವ ಸ್ಪೈಕ್, ಎಂಜಿನ್ ಹಾಗೂ ಟೇಲ್'ಗಳನ್ನು ಜೆಟ್ ಅನ್ನು ಹೋಲುವ ರೀತಿಯಲ್ಲಿ ನೀಡಲಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗಮನಿಸಬೇಕಾದ ಸಂಗತಿಯೆಂದರೆ ಈ ವಾಹನವನ್ನು ವಿಮಾನದ ಚಿತ್ರಣಕ್ಕೆ ಹೊಂದಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಈ ವಾಹನಕ್ಕೆ ಹಾರಲು ಸಾಧ್ಯವಿಲ್ಲ. ಈ ವಾಹನವನ್ನು ರಸ್ತೆಯಲ್ಲಿ ಮಾತ್ರ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಉದ್ದೇಶಕ್ಕಾಗಿ ಈ ವಾಹನದಲ್ಲಿ, ಮುಂಭಾಗದಲ್ಲಿ ಎರಡು ವ್ಹೀಲ್, ಹಿಂಭಾಗದಲ್ಲಿ ಎರಡು ವ್ಹೀಲ್ ಸೇರಿದಂತೆ ಒಟ್ಟು ನಾಲ್ಕು ವ್ಹೀಲ್'ಗಳನ್ನು ನೀಡಲಾಗಿದೆ. ಈ ವಾಹನವನ್ನು ಮೆಕೂಮ್ ಆಕ್ಷನ್ಸ್ ಮತ್ತೆ ಹರಾಜು ಮಾಡಲು ಮುಂದಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ವಾಹನದ ಆನ್‌ಲೈನ್ ಹರಾಜು ಪ್ರಕ್ರಿಯೆ ಮೇ 14ರಿಂದ 22ರವರೆಗೆ ನಡೆಯಲಿದೆ. ವಿಶ್ವದ ಹಲವು ಶ್ರೀಮಂತರು ಈಗಾಗಲೇ ಈ ವಾಹನವನ್ನು ಬಿಡ್ ಮಾಡಲು ಕಾಯುತ್ತಿದ್ದಾರೆ. 2020ರಲ್ಲಿ ಈ ವಾಹನಕ್ಕಾಗಿ 600,000 ಅಮೆರಿಕನ್ ಡಾಲರ್'ಗಳವರೆಗೆ ಹರಾಜು ನಡೆಸಲಾಗಿತ್ತು.

ಹರಾಜು ಮೌಲ್ಯವನ್ನು ತೀರಾ ಕಡಿಮೆಯಾಯಿತು ಎಂಬ ಕಾರಣಕ್ಕೆ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು. ಈಗ ಒಂದು ವರ್ಷದ ನಂತರ ಮತ್ತೆ ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸುಮಾರು 40,000 ಗಂಟೆಗಳ ಕಾಲ ಪರಿಶ್ರಮದ ನಂತರ ಅಮೆರಿಕಾದ ಒರೆಗಾನ್ ಮೂಲದ ಡಾನ್ ಹ್ಯಾರಿಸ್ ಎಂಬುವವರು ಈ ವಾಹನವನ್ನು ನಿರ್ಮಿಸಿದ್ದಾರೆ. ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಿಂದ ಈ ವಾಹನವನ್ನು ವಿನ್ಯಾಸಗೊಳಿಸಿ, ನಿರ್ಮಿಸಿದ್ದಾರೆ.

ಅವರೇ ಸ್ವತಃ ಈ ವಾಹನದ ಬಾಡಿ ಹಾಗೂ ಚಾಸಿಸ್'ಗಳನ್ನು ವಿನ್ಯಾಸಗೊಳಿಸಿದ್ದಾರೆ. ಈ ವಾಹನದಲ್ಲಿ ಶೆವ್ರೊಲೆಟ್ 8.1 ಲೀಟರ್ ವೋರ್ಟೆಕ್ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಟ್ರಕ್‌ಗಳಲ್ಲಿ ಅಳವಡಿಸಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಎಂಜಿನ್ 400 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ವಾಹನವು ಪ್ರತಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಲಿಮೋಸಿನ್ ಮಾದರಿಯಲ್ಲಿರುವುದರಿಂದ ಈ ವಾಹನವು ಹಲವಾರು ಐಷಾರಾಮಿ ಫೀಚರ್'ಗಳನ್ನು ಹೊಂದಿದೆ.

ಈ ವಾಹನದ ಕ್ಯಾಬಿನ್ ಪ್ರದೇಶವು ಮಿನಿ ಸ್ಟಾರ್ ಹೋಟೆಲ್'ನಂತೆ ಕಾಣುತ್ತದೆ. ಈ ವಾಹನದಲ್ಲಿ ಹೈ ಸೀಟ್, ಸ್ಕ್ರೀನ್, ಕಲರ್ ಲೈಟ್, ಸೌಂಡ್ ಸಿಸ್ಟಂನಂತಹ ವಿವಿಧ ಪ್ರೀಮಿಯಂ ಹಾಗೂ ಐಷಾರಾಮಿ ಫೀಚರ್'ಗಳನ್ನು ನೀಡಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ವಾಹನವು ಶೀತ , ತಂಪು ಪಾನೀಯಗಳನ್ನು ನಿಭಾಯಿಸಬಲ್ಲ ಮಿನಿ ಫ್ರಿಜ್'ನಂತಹ ಕೆಲವು ವಿಶಿಷ್ಟ ಫೀಚರ್'ಗಳನ್ನು ಹೊಂದಿದೆ. ಇದರ ಜೊತೆಗೆ ಸೆಲ್ ಫೋನ್ ಚಾರ್ಜಿಂಗ್ ಪಾಯಿಂಟ್, 17,000 ವ್ಯಾಟ್ ಆಡಿಯೋ ಹಾಗೂ ವೀಡಿಯೊ ಸಿಸ್ಟಂ ಅನ್ನು ಹೊಂದಿದೆ.
ಚಿತ್ರ ಕೃಪೆ: ಮೆಕೂಮ್ ಆಕ್ಷನ್ಸ್


Click it and Unblock the Notifications