ವಲಸೆ ಕಾರ್ಮಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಖದೀಮರು

ನಿಮ್ಮ ಸೈಕಲ್ ಅನ್ನು 3,000 ಸಾವಿರ ರೂಪಾಯಿಗೆ ಮಾರಾಟ ಮಾಡಿ, ನೀವು ಸೈಕಲ್‌ನಲ್ಲಿಯೇ ಮುಂದೆ ಹೋದರೆ ಪೊಲೀಸರು ನಿಮ್ಮ ಸೈಕಲ್ ಅನ್ನು ವಶಪಡಿಸಿಕೊಳ್ಳುತ್ತಾರೆ. ಈ ರೀತಿ ಹೆದರಿಸಿ ವಲಸೆ ಕಾರ್ಮಿಕರನ್ನು ಸುಲಿಗೆ ಮಾಡಲಾಗುತ್ತಿದೆ.

ವಲಸೆ ಕಾರ್ಮಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಖದೀಮರು

ಅಂದ ಹಾಗೆ ಜಾರ್ಖಂಡ್‌ನಿಂದ ಆಂಧ್ರಪ್ರದೇಶದ ಕಡೆಗೆ ಸೈಕಲ್‌ನಲ್ಲಿ ಹೋಗುತ್ತಿರುವ ವಲಸೆ ಕಾರ್ಮಿಕರನ್ನು ಈ ರೀತಿ ಹೆದರಿಸುತ್ತಿರುವ ಖದೀಮರು ಅವರ ಬಳಿಯಿರುವ ಸೈಕಲ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಗ್ರ್ಯಾಂಡ್ ನಾರ್ದರ್ನ್ ಟ್ರಂಕ್ (ಜಿಎನ್‌ಟಿ) ರಸ್ತೆಯಲ್ಲಿ ಹೋಗುವ ವಲಸೆ ಕಾರ್ಮಿಕರಿಗೆ ಈ ರೀತಿ ಬೆದರಿಸಿ ಅವರ ಬಳಿಯಿರುವ ಸೈಕಲ್‌ಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

ವಲಸೆ ಕಾರ್ಮಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಖದೀಮರು

ಕೆಲವು ಮಾಹಿತಿಗಳ ಪ್ರಕಾರ, ಖದೀಮರ ಗುಂಪೊಂದು ಜಿಎನ್‌ಟಿ ರಸ್ತೆಯ ಪಂಜೆಟ್ಟಿ ಬಳಿ ಜಾರ್ಖಂಡ್‌ನಿಂದ ವಲಸೆ ಬಂದ ಕಾರ್ಮಿಕರೊಂದಿಗೆ ಈ ರೀತಿಯಾಗಿ ವ್ಯವಹಾರ ಕುದುರಿಸುತ್ತಿದೆ. ಈ ಬಗ್ಗೆ ಸಂಜಯ್ ಮಹತೋ ಎಂಬ ವಲಸೆ ಕಾರ್ಮಿಕ ಮಾಹಿತಿ ನೀಡಿದ್ದಾನೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ವಲಸೆ ಕಾರ್ಮಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಖದೀಮರು

ಈ ಬಗ್ಗೆ ಮಾತನಾಡಿರುವ ಆತ ನಮ್ಮ ಊರಿಗೆ ತಲುಪಲು ರೂ.5,000 ನೀಡಿ ಸೈಕಲ್ ಖರೀದಿಸಿದ್ದೇನೆ. ಆದರೆ ವ್ಯಕ್ತಿಯೊಬ್ಬ ನನ್ನನ್ನು ತಡೆದು ನನ್ನ ಸೈಕಲ್ ಅನ್ನು ರೂ.3,000ಕ್ಕೆ ಮಾರಾಟ ಮಾಡುವಂತೆ ಕೇಳಿದ ಎಂದು ಹೇಳಿದ್ದಾನೆ.

ವಲಸೆ ಕಾರ್ಮಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಖದೀಮರು

ಶೋಲವರಂನ ಸಬ್ ಇನ್ಸ್‌ಪೆಕ್ಟರ್ ನಮ್ಮ ಸೈಕಲ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬರುತ್ತಿದ್ದಾರೆ ಎಂದು ಹೇಳುವ ಆ ಗುಂಪು ಪೊಲೀಸರು ಬರುವ ಮೊದಲು ನಮ್ಮ ಸೈಕಲ್‌ಗಳನ್ನು ಮಾರಾಟ ಮಾಡಬೇಕೆಂದು ಹೇಳುತ್ತಾರೆ ಎಂದು ಆತ ಹೇಳಿದ್ದಾನೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ತಿರುವಳ್ಳೂರು ಜಿಲ್ಲಾಡಳಿತವು ಕಾರ್ಮಿಕರನ್ನು ರಕ್ಷಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವಲಸೆ ಕಾರ್ಮಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಖದೀಮರು

ಜಿಲ್ಲಾಡಳಿತವು ಈ ವಲಸೆ ಕಾರ್ಮಿಕರನ್ನು ಪಾಡಿಯಾನಲ್ಲೂರಿನಲ್ಲಿ ನಿರ್ಮಿಸಿರುವ ನಿರಾಶ್ರಿತ ಮನೆಗಳಿಗೆ ಕರೆದೊಯ್ಯಿದೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು ಈ ಕಾರ್ಮಿಕರನ್ನು ಶೀಘ್ರದಲ್ಲೇ ಅವರ ಮನೆಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.

ವಲಸೆ ಕಾರ್ಮಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಖದೀಮರು

ಪೊನ್ನರಿಯ ಎಎಸ್‌ಪಿ ಪವನ್ ಕುಮಾರ್ ರೆಡ್ಡಿರವರು ಮಾತನಾಡಿ, ಖದೀಮರು ಕಾರ್ಮಿಕರಿಗೆ ಮೋಸ ಮಾಡುವುದನ್ನು ತಪ್ಪಿಸಲು ಪೊಲೀಸ್ ಪಡೆಯು ಹೈವೇಯಲ್ಲಿ ಗಸ್ತು ತಿರುಗಲಿದೆ ಎಂದು ಹೇಳಿದರು.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Most Read Articles

Kannada
English summary
Jharkhand Migrants tricked by scamsters to sell off their cycles. Read in Kannada.
Story first published: Saturday, May 23, 2020, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X