ಸೂಪರ್ ಬೈಕ್‌ಗಳ ಒಡೆಯನಿಗೆನೇ ಸೂಪರ್ ಮಾಡೆಲ್‌ಗಳನ್ನು ಕೊಟ್ಟು ಶಾಕ್ ನಿಡಿದ ಅಭಿಮಾನಿ
ಭಾರತದಲ್ಲಿ ಬೈಕ್ ಅಥವಾ ಕಾರು ಕ್ರೇಜ್‌ಗಳಿಗೇನೂ ಕಮ್ಮಿ ಇಲ್ಲ. ಸೆಲೆಬ್ರಿಟಿಗಳಿಗಂತೂ ಇದು ಜಾಸ್ತಿ ಎನ್ನಬಹುದು. ಬಾಲಿವುಡ್‌ನಿಂದ ಹಿಡಿದು ಸ್ಯಾಂಡಲ್‌ವುಡ್ ವರೆಗೂ ಇದರ ಪಟ್ಟಿ ಉದ್ದವಾಗುತ್ತಲೇ ಹೋಗುತ್ತಿದೆ. ದುಬಾರಿಯಾದ ಕಾರು ಮತ್ತು ಬೈಕ್‌ಗಳನ್ನು ನೋಡಬೇಕಾದರೆ ಸೆಲೆಬ್ರಿಟಿಗಳ ಬಳಿ ಹೋದರೆ ಸಾಕು ಎನ್ನುವಷ್ಟರ ಮಟ್ಟಿಗೆ ಬಂದಿದೆ ವಿಷಯಗಳು.
ಇನ್ನು ದುಬಾರಿ ಸೂಪರ್ ಬೈಕ್ಗಳು ಮತ್ತು ಕಾರುಗಳನ್ನು ಹೊಂದಿರುವವರ ಪಟ್ಟಿಯನ್ನು ತೆಗೆದು ನೊಡಿದರೆ ನಮಗಲ್ಲಿ ಮೊದಲು ಕಾಣಿಸುವ ಹೆಸರು ಬೇರಾವುದು ಅಲ್ಲ, ಜಾನ್ ಅಬ್ರಹಾಂ. ಧೂಮ್ ಚಿತ್ರ ಸರಣಿಗಳಿಂದ ಈಗಿನ 90's ಕಿಡ್ಸ್‌ಗಳಿಗೆ ಸೂಪರ್ ಬೈಕ್‌ಗಳ ಕನಸನ್ನು ಕಾಣುವಂತೆ ಮಾಡಿದ್ದು ಈ ನಟ ಎಂದರೆ ತಪ್ಪಾಗಲಾರದು.

ಇದೀಗ ನಟ ಜಾನ್ ಅಬ್ರಹಾಂ ಅನ್ನು ಅಭಿಮಾನಿಯೊಬ್ಬರು ಭೇಟಿಯಾಗಿದ್ದು, ತಮ್ಮ ಬೈಕ್ ಮೇಲೆ ಜಾನ್ ಅಬ್ರಹಾಂ ಅವರ ಆಟೋಗ್ರಾಫ್ ಹಾಕಿಸಿಕೊಂಡಿರುವುದು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ ಜಾನ್ ಅಬ್ರಹಾಂಗೆ ಆ ಅಭಿಮಾನಿ ಸೂಪರ್ ಬೈಕ್‌ಗಳ ಆಕರ್ಷಕ ಮಿನಿಯೇಚರ್ ಅನ್ನು ಸಹ ನೀಡಿದ್ದಾರೆ.
ಈ ವಿಡಿಯೋವನ್ನು ಅಭಿಮಾನಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಅಕ್ಷಯ್ ಕೇದಾದ್ರಿ ಎಂಬಾತ ಜಾನ್ ಅಬ್ರಹಾಂಗೆ ಸೂಪರ್ ಬೈಕ್‌ಗಳ ಆಕರ್ಷಕ ಮಿನಿಯೇಚರ್ ನೀಡುತ್ತಿರುವುದು ಎಂದು ತಿಳಿದು ಬಂದಿದೆ. ವಿಡಿಯೋ ನೋಡುವಾಗ ಮೊದಲು ಅದರಲ್ಲಿ ತನ್ನ ಬ್ಯಾಗ್‌ನಿಂದ ಅಕ್ಷಯ್ ಕೇದಾದ್ರಿ ಎಂಬಾತ ಯಮಾಹ YZR - M1, ಬೈಕ್‌ನ ಪುಟ್ಟ ಮಾಡೆಲ್ ಅನ್ನು ಜಾನ್ ಅಬ್ರಹಾಂ ಕೈಗಿಡುತ್ತಿದ್ದಾನೆ.

ಯಮಾಹ YZR - M1 ಜೊತೆಗೆ ಮೋಟೋ ಜಿಪಿಯಲ್ಲಿ ಪಾಲ್ಗೊಂಡಿದ್ದ ಯಮಹಾ ರೇಸಿಂಗ್ ಟೀಂನ ಬೈಕ್‌ಗಳ ಮಿನಿಯೇಚರ್‌ಗಳನ್ನು ಅಕ್ಷಯ್ ಕೇದಾದ್ರಿ ನೀಡಿದ್ದಾರೆ. ಇದರ ಜೊತೆಗೆ ಮತ್ತೊಂದು ಆಕರ್ಷಕ ಸೂಪರ್ ಬೈಕಾದ ಕವಾಸಕಿ ನಿಂಜಾ H2R ಬೈಕ್‌ನ ಮಿನಿಯೇಚರ್ ಅನ್ನು ಸಹ ನೀಡಿದ್ದಾನೆ.
ಇದರ ಜೊತೆಗೆ ಕೊನೆಯದಾಗಿ ಸುಜುಕಿಯ ಮಾನ್ಸ್ಟರ್ ಆಗಿರುವ ಹಯಾಬುಸಾ ಬೈಕ್‌ನ ಮಿನಿಯೇಚರ್. ಜಾನ್ ಅಬ್ರಹಾಂ ಅವರಿಗೆ ಈ ಹಯಾಬುಸಾ ಬೈಕ್‌ನ ಮಿನಿಯೇಚರ್ ಕೊಂಚ ಅಧಿಕ ಸ್ಪೆಷಲ್ ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಅಬ್ರಹಾಂ ಬಳಿಯು ಸಹ ಸುಜುಕಿಯ ಈ ಹಯಾಬುಸಾ ಬೈಕ್ ಇದೆ ಎಂಬುದು. ಇದನ್ನು ಜಾನ್ ಅಬ್ರಾಂ ಅವರಿಗಾಗಿಯೇ ಸ್ಪೆಷಲ್ ಆಗಿ ಆರ್ಡರ್ ಕೊಟ್ಟು ತರಿಸಲಾಗಿದೆ ಎಂದು ತಿಳಿದು ಬಂದಿದೆ.

ಜಾನ್ ಅಬ್ರಹಾಂ ಅವರು ಇತ್ತೀಚೆಗಷ್ಟೇ ಹೊಸ ಮೂರನೇ ತಲೆಮಾರಿನ ಸುಜುಕಿ ಹಯಾಬುಸಾ ಬೈಕ್ ಅನ್ನು ಕೊಂಡುಕೊಂಡಿದ್ದರು. ಈಗಾಗಲೆ ಮೇಲೆ ತಿಳಿಸಿದಂತೆ ಧೂಮ್ ಚಿತ್ರಗಳ ಮೂಲಕ ಪ್ರಸಿದ್ದಿಗೆ ಬಂದಿದ್ದ ಜಾನ್ ಅಬ್ರಹಾಂ, ನಿಜ ಜೀವನದಲ್ಲಿಯೂ ಆ ಚಿತ್ರದಲ್ಲಿನ ಪಾತ್ರದ ಒಂದು ಗುಣವಾದ ಸೂಪರ್ ಬೈಕ್‌ನ ಸಂಗ್ರಹವನ್ನು ಹೊಂದಿದ್ದಾರೆ. ಭಾರತದಲ್ಲಿ ಸುಜುಕಿಯ ಈ ಹಯಾಬುಸಾ ಬೈಕ್‌ಗೆ ಅದರದ್ದೇ ಆದ ಅಭಿಮಾನಿಗಳ ಬಳಗವಿದೆ.
ಇನ್ನು ಮಾಹಿತಿಗಳ ಪ್ರಕಾರ ಜಾನ್ ಅಬ್ರಹಾಂ ಅವರ ಬಳಿ ಯಮಹಾ V-MAX, ಕವಾಸಾಕಿ ನಿಂಜಾ ಝಡ್‌ಎಕ್ಸ್ 14-R, ಎಪ್ರಿಲಿಯಾ ಆರ್‌ಎಸ್‌ವಿ4 ಆರ್‌ಎಫ್, ಯಮಹಾ ಆರ್‌೧, BMW S1000RR ಮಾತ್ರವಲ್ಲದೇ ಇದೇ ರೀತಿಯ ಇನ್ನೂ ಹಲವಾರು ದುಬಾರಿ ಬೈಕ್‌ಗಳ ಸಂಗ್ರಹವಿದೆ ಎಂಬುದು ಎಲ್ಲರಿಗೂ ತಿಳಿದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications