ಎಪ್ರಿಲಿಯಾ ಬೈಕ್ ಜೊತೆ ಮತ್ತೆ ಮೋಡಿ ಮಾಡಿದ ಸ್ಟಾರ್ ನಟ: ಈ ಬಾರಿ ಫುಲ್ ಮಿಂಚಿಂಗ್!
ಬ್ರಾಂಡ್ ಅಂಬಾಸಿಡರ್ ಜಾನ್ ಅಬ್ರಹಾಂ (ಬಾಲಿವುಡ್ ನಟ) ಅವರೊಂದಿಗೆ ಎಪ್ರಿಲಿಯಾ ಇಂಡಿಯಾದ ಜಾಹೀರಾತು ಅಭಿಯಾನದ ಅದ್ಭುತ ಯಶಸ್ಸನ್ನು ಮುಂದುವರೆಸುತ್ತಾ, ಎಪ್ರಿಲಿಯಾ (Aprilia) ಇಂಡಿಯಾ ತನ್ನ ಬಹುನಿರೀಕ್ಷಿತ ಡಿಜಿಟಲ್ ಜಾಹೀರಾತು ಅಭಿಯಾನದ ಮೂರನೇ ಕಂತಿನ ಬಿಡುಗಡೆಯೊಂದಿಗೆ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಜಾಹೀರಾತಿನ ಮಿತಿಗಳನ್ನು ವಿಸ್ತರಿಸಿದೆ. ಈ ಸರಣಿಯ ಮೊದಲ ಎರಡು ಜಾಹೀರಾತುಗಳಾದ 'ಫನ್' ಮತ್ತು 'ಲಸ್ಟ್' ಡಿಜಿಟಲ್ ಮಾಧ್ಯಮಗಳಲ್ಲಿ 76.6 ಮಿಲಿಯನ್‌ಗಿಂತಲೂ ಹೆಚ್ಚು ನೋಡುಗರ ಮನಗೆದ್ದಿದೆ. ಇದು ಎಪ್ರಿಲಿಯಾ ಇಂಡಿಯಾ ವೆಬ್‌ಸೈಟ್ ಟ್ರಾಫಿಕ್‌ಗೆ ಶೇ100 ಕ್ಕಿಂತ ಹೆಚ್ಚು ಏರಿಕೆ ತಂದುಕೊಟ್ಟಿದೆ ಎಂದು ಕಂಪನಿ ಹೇಳಿದೆ.
ಇದೀಗ ಹೊಸದಾಗಿ ಬಿಡುಗಡೆಯಾದ ಮೂರನೇ ಜಾಹೀರಾತು ಎಪ್ರಿಲಿಯಾ ಆರ್ಎಸ್457 (Aprilia RS457) ಬೈಕಿನ ಅಪ್ರತಿಮ ಪರ್ಫಾಮೆನ್ಸ್ ಅನ್ನು ಎತ್ತಿತೋರಿಸಿದೆ. ಬ್ರಾಂಡ್ ಅಂಬಾಸಿಡರ್ ಜಾನ್ ಅಬ್ರಹಾಂ ಗರಿಷ್ಠ ವೇಗ ತಲುಪುವ ಉತ್ಸಾಹ, ಮೊಣಕಾಲು ಸ್ಕ್ರಾಪ್ ಮಾಡುವಾಗ ಅಪೆಕ್ಸ್ ಅನ್ನು ಏರಿಸುವುದು ಮತ್ತು ಅದರ MotoGP ಸರಣಿಯಿಂದ ಪಡೆದ ಸವಾರಿ ಅನುಭವವನ್ನು ಒದಗಿಸುವ ಆಕರ್ಷಕ ಜಾಹೀರಾತು ಇದಾಗಿದೆ.

ಎಪ್ರಿಲಿಯಾ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಜಾನ್ ಅಬ್ರಹಾಂ ಮಾತನಾಡಿ, "ಈ ಜಾಹೀರಾತು ನಿರೂಪಣೆಯು ಥ್ರಿಲ್ ಪರಿಕಲ್ಪನೆಯ ಸುತ್ತ ಹೆಣೆಯಲ್ಪಟ್ಟಿದೆ, ಇದು ಎಪ್ರಿಲಿಯಾ RS457 ನ ಅಸಾಧಾರಣ ಪರ್ಫಾಮೆನ್ಸ್, ನಿರ್ವಹಣೆ ಮತ್ತು ಶೈಲಿಯನ್ನು ಸವಾರಿ ಮಾಡುವುದರೊಂದಿಗೆ ಬರುವ ಉತ್ಸಾಹ ಮತ್ತು ಸಾಹಸದ ಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ನಾನು ಮಾಡಿದ ಅತ್ಯುತ್ತಮ ರೇಸಿಂಗ್ ಬೈಕ್ ಶೂಟ್‌ಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ಹೆಸರಾಂತ ನಿಗೆಲ್ ಸಿಂಪ್ಕಿಸ್ ನಿರ್ದೇಶಿಸಿದ ಈ ಸಿನಿಮೀಯ ಜಾಹೀರಾತು, ಆಳವಾದ ಹಂಬಲ ಮತ್ತು ಹೆಚ್ಚಿನ ಪರ್ಫಾಮೆನ್ಸ್ ಸವಾರಿಯ ರೋಮಾಂಚನವನ್ನು ಉಂಟುಮಾಡುವ ವೇಗದ ಗತಿಯ ದೃಶ್ಯಗಳನ್ನು ಪ್ರದರ್ಶಿಸುತ್ತದೆ. 'ಥ್ರಿಲ್' ವೀಕ್ಷಕರನ್ನು ಸ್ಪೋರ್ಟ್ಸ್ ಬೈಕ್‌ನ ಅನುಭವವನ್ನು ಹಂಬಲಿಸುವುದು ಎಂದರೆ ಏನು ಎಂಬುದನ್ನು ಹೃದಯಕ್ಕೆ ನಾಟುವಂತೆ ತೋರಿಸಲಾಗಿದೆ ಎಂದು ಕಂಪನಿ ಹೇಳಿದೆ.

ಜಾಹೀರಾತು ಚಿತ್ರವು ಸಾಂಪ್ರದಾಯಿಕ ಉತ್ಪನ್ನ ಪ್ರಚಾರವನ್ನು ಮೀರಿ ತನ್ನ ಪ್ರೇಕ್ಷಕರೊಂದಿಗೆ ಭಾವನಾತ್ಮಕ ಅನುರಣನವನ್ನು ಸೃಷ್ಟಿಸುತ್ತದೆ. ಈ ಮೂರನೇ ಜಾಹಿರಾತು ಬ್ರ್ಯಾಂಡ್ ಮತ್ತು ಅದರ ಉತ್ಸಾಹಭರಿತ ಸವಾರರ ಸಮುದಾಯದ ನಡುವೆ ಆಳವಾದ ಸಂಪರ್ಕವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಇದು ಸವಾರಿ ಅನುಭವದೊಂದಿಗೆ ಬರುವ ಸಂಕೀರ್ಣ ಭಾವನೆಗಳನ್ನು ನೆನಪಿಸುತ್ತದೆ ಎಂದು ಕಂಪನಿ ಹೇಳಿದೆ.
ಎಪ್ರಿಲಿಯಾ RS457 ಸವಾರಿ ಮಾಡುವ 'ಥ್ರಿಲ್' ಅನ್ನು ಪ್ರದರ್ಶಿಸುವ ಮೂಲಕ, ಸವಾರರು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ತಮ್ಮ ವೇಗದ ಮಿತಿಗಳನ್ನು ತಿಳಿದಿರಬೇಕು. ಈ ಸರಣಿಯ ನಮ್ಮ ಮೊದಲ ಎರಡು ಜಾಹೀರಾತು ಚಿತ್ರಗಳಾದ 'ಫನ್' ಮತ್ತು 'ಲಸ್ಟ್' ಉತ್ತಮ ಪ್ರತಿಕ್ರಿಯೆ ಪಡೆದಿವೆ ಮತ್ತು 'ಥ್ರಿಲ್' ಇಲ್ಲಿಯವರೆಗಿನ ಅತ್ಯಂತ ರೋಮಾಂಚಕಾರಿ ಜಾಹಿರಾತು ಎಂದು ನನಗೆ ಖಚಿತವಾಗಿದೆ ಎಂದು ಪಿಯಾಜಿಯೊ ವೆಹಿಕಲ್ಸ್‌ನ AVP ಅಪೂರ್ವ ಸೈಗಲ್ ಹೇಳಿದರು.
'ಥ್ರಿಲ್' ನೊಂದಿಗೆ, ಏಪ್ರಿಲಿಯಾ ಕೇವಲ ಪರ್ಫಾಮೆನ್ಸ್ ಮಾತ್ರವಲ್ಲದೆ, ಸವಾರನ ಆತ್ಮಕ್ಕೆ ಸ್ಪರ್ಶಿಸುವ ಸಂವೇದನಾ ಅನುಭವವನ್ನು ನೀಡುವ ಬದ್ಧತೆಯನ್ನು ಬಲಪಡಿಸುತ್ತದೆ. ಏಪ್ರಿಲಿಯಾ RS457 ಈ ವಿಶಿಷ್ಟ ಸಂಪರ್ಕದ ಸಂಕೇತವಾಗಿ ನಿಲ್ಲುವುದನ್ನು ಮುಂದುವರೆಸಿದೆ. ಮುಂಬರುವ ದಿನಗಳಲ್ಲಿ ನಮ್ಮ ಹೊಸ ಬೈಕ್ ಹಲವು ದಾಖಲೆಗಳನ್ನು ನಿರ್ಮಿಸಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








