ಗೋವಾ ಪೊಲೀಸ್ ಪಡೆ ಸೇರಿದ ಕಬೀರ ಎಲೆಕ್ಟ್ರಿಕ್ ಬೈಕ್‌ಗಳು

ಗೋವಾ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾದ ಕಬೀರ ಮೊಬಿಲಿಟಿ ತನ್ನ ಕೆಎಂ3000 ಮತ್ತು ಕೆಎಂ4000 ಎಲೆಕ್ಟ್ರಿಕ್ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಕಬೀರ ಕೆಎಂ3000 ಮತ್ತು ಕೆಎಂ4000 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್‌ಗಳಾಗಿವೆ.

ಗೋವಾ ಪೊಲೀಸ್ ಪಡೆ ಸೇರಿದ ಕಬೀರ ಎಲೆಕ್ಟ್ರಿಕ್ ಬೈಕ್‌ಗಳು

ಕಬೀರಾ ಮೊಬಿಲಿಟಿ ತಮ್ಮ ಎಲೆಕ್ಟ್ರಿಕ್ ಬೈಕ್‌ಗಳನ್ನು ಭಾರತದಾದ್ಯಂತ ವಿವಿಧ ರಾಜ್ಯ ಪೊಲೀಸ್ ಇಲಾಖೆಗಳಿಗೆ ನೀಡುವುದಾಗಿ ಘೋಷಿಸಿತು. ಮೊದಲ ಹಂತವಾಗಿ ಗೋವಾ ಪೊಲೀಸರಿಗೆ ಕೆಎಂ3000 ಮತ್ತು ಕೆಎಂ4000 ಎಲೆಕ್ಟ್ರಿಕ್ ಬೈಕ್‌ಗಳನ್ನು ಹಸ್ತಾಂತರಿಸಲಾಗಿದೆ. ಗೋವಾದಲ್ಲಿ ಪ್ರತಿವರ್ಷ ಖರೀದಿಸುವ ಒಟ್ಟು ವಾಹನಗಳಲ್ಲಿ ದ್ವಿಚಕ್ರ ವಾಹನಗಳು 50% ಕ್ಕಿಂತ ಹೆಚ್ಚು. ರಾಜ್ಯದಲ್ಲಿ ಎಂಟು ಲಕ್ಷ ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ ಎಂದು ಕಬೀರ ಕಂಪನಿ ಹೇಳಿದೆ.

ಗೋವಾ ಪೊಲೀಸ್ ಪಡೆ ಸೇರಿದ ಕಬೀರ ಎಲೆಕ್ಟ್ರಿಕ್ ಬೈಕ್‌ಗಳು

ರಾಜ್ಯ ಪೊಲೀಸರು ಇ-ಬೈಕ್‌ಗಳನ್ನು ಅಳವಡಿಸಿಕೊಳ್ಳುವುದು ಪರಿಸರ ಸ್ನೇಹಿ ಚಲನಶೀಲತೆ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಸಾರ್ವಜನಿಕರನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಕಬೀರ ಹೇಳಿದೆ. ಬೈಕ್‌ಗಳನ್ನು ಗೋವಾ ಪೊಲೀಸ್ ಡಿಜಿಪಿ ಮುಖೇಶ್ ಕುಮಾರ್ ಮೀನಾ ಅವರಿಗೆ ಕಬೀರಾ ಮೊಬಿಲಿಟಿ ಸಿಇಒ ಜೈಬೀರ್ ಸಿವಾಚ್ ಮತ್ತು ಶ್ರೀ ನಿತಿನ್ ಕುಂಕೋಲಿಕರ್ ಅವರಿಗೆ ಹಸ್ತಾಂತರಿಸಲಾಯಿತು.

ಗೋವಾ ಪೊಲೀಸ್ ಪಡೆ ಸೇರಿದ ಕಬೀರ ಎಲೆಕ್ಟ್ರಿಕ್ ಬೈಕ್‌ಗಳು

ಈ ಕಬೀರ ಕೆಎಂ3000 ಎಲೆಕ್ಟ್ರಿಕ್ ಬೈಕಿನಲ್ಲಿ 4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಮತ್ತು 6 ಕಿಲೋವ್ಯಾಟ್ ಬಿಎಲ್‌ಡಿಸಿ (ಬ್ರಷ್‌ಲೆಸ್ ಡಿಸಿ ಎಲೆಕ್ಟ್ರಿಕ್ ಮೋಟರ್) ಮೋಟಾರ್ ಅನ್ನು ಹೊಂದಿದೆ.

ಗೋವಾ ಪೊಲೀಸ್ ಪಡೆ ಸೇರಿದ ಕಬೀರ ಎಲೆಕ್ಟ್ರಿಕ್ ಬೈಕ್‌ಗಳು

ಈ ಕಬೀರ ಕೆಎಂ3000 ಎಲೆಕ್ತ್ರಿಕ್ ಬೈಕ್ ಇಕೋ ಮೋಡ್‌ನಲ್ಲಿ 120 ಕಿ,ಮೀ,ವರೆಗೂ ಚಲಿಸುತ್ತದೆ. ಇನ್ನು ಸ್ಪೋರ್ಟ್ ಮೋಡ್‌ನಲ್ಲಿ ಈ ಬೈಕ್ 60 ಕಿ.ಮೀ.ಮೈಲೇಜ್ ಅನ್ನು ನೀಡುತ್ತದೆ ಮತ್ತು ಇದು 100 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಗೋವಾ ಪೊಲೀಸ್ ಪಡೆ ಸೇರಿದ ಕಬೀರ ಎಲೆಕ್ಟ್ರಿಕ್ ಬೈಕ್‌ಗಳು

ಇನ್ನು ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕಿನಲ್ಲಿ 4.4 ಕಿಲೋವ್ಯಾಟ್ ಬ್ಯಾಟರಿ ಮತ್ತು 8 ಕಿಲೋವ್ಯಾಟ್ ಮೋಟರ್ ಅನ್ನು ಹೊಂದಿದ್ದು, ಇದು ಎಲೆಕ್ಟ್ರಿಕ್ ಬೈಕ್ ಇಕೋ ಮೋಡ್‌ನಲ್ಲಿ 150 ಕಿ,ಮೀ ರೇಂಜ್ ಅನ್ನು ಹೊಂದಿದೆ

ಗೋವಾ ಪೊಲೀಸ್ ಪಡೆ ಸೇರಿದ ಕಬೀರ ಎಲೆಕ್ಟ್ರಿಕ್ ಬೈಕ್‌ಗಳು

ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕ್ 120 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕ್ ಸ್ಪೋರ್ಟ್ ಮೋಡ್‌ನಲ್ಲಿ 90 ಕಿ.ಮೀ ಚಲಿಸುತ್ತದೆ.ಇನ್ನು ಕಬೀರ ಕೆಎಂ3000 ಎಲೆಕ್ಟ್ರಿಕ್ ಬೈಕ್ 3.3 ಸೆಕೆಂಡುಗಳಲ್ಲಿ 0 ದಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಕಬೀರ ಕೆಎಂ4000 ಎಲೆಕ್ಟ್ರಿಕ್ ಬೈಕ್ 3.1 ಸೆಕೆಂಡುಗಳಲ್ಲಿ 0 ದಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಗೋವಾ ಪೊಲೀಸ್ ಪಡೆ ಸೇರಿದ ಕಬೀರ ಎಲೆಕ್ಟ್ರಿಕ್ ಬೈಕ್‌ಗಳು

ಕಬೀರ ಕೆಎಂ3000 ಮತ್ತು ಕೆಎಂ4000 ಎಲೆಕ್ಟ್ರಿಕ್ ಬೈಕ್‌ಗಳ ಬ್ಯಾಟರಿ ಪ್ಯಾಕ್‌ಗಳನ್ನು 2 ಗಂಟೆಗಳ 50 ನಿಮಿಷಗಳಲ್ಲಿ ಇಕೋ ಚಾರ್ಜ್ ಮೂಲಕ ಮತ್ತು 50 ನಿಮಿಷದಲ್ಲಿ ಜಾರ್ಚ್ ಮಾಡಬಹುದಾಗಿದೆ. ಇಕೋ ಜಾರ್ಚ್ ನಲ್ಲಿ 6 ಗಂಟೆ 30 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಜಾರ್ಚ್ ಮಾಡಬಹುದು.

ಗೋವಾ ಪೊಲೀಸ್ ಪಡೆ ಸೇರಿದ ಕಬೀರ ಎಲೆಕ್ಟ್ರಿಕ್ ಬೈಕ್‌ಗಳು

ಕಬೀರ ಕೆಎಂ3000 ಎಲೆಕ್ಟ್ರಿಕ್ ಬೈಕ್ 2100 ಎಂಎಂ ಉದ್ದ, 760 ಅಗಲ ಮತ್ತು 1200 ಎತ್ತರವನ್ನು ಹೊಂದಿದೆ. ಇನ್ನು 430 ಎಂಎಂ ವೀಲ್ ಬೇಸ್ ಮತ್ತು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಕೆಎಂ3000 ಎಲೆಕ್ಟ್ರಿಕ್ ಬೈಕ್ 138 ಕೆಜಿ ತೂಕವನ್ನು ಹೊಂದಿದೆ.

Most Read Articles

Kannada
English summary
Kabira Electric Motorcycles Delivered To Goa Police. Read In Kannada.
Story first published: Tuesday, July 20, 2021, 19:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X