ಪೊಲೀಸರ ವಶದಲ್ಲಿವೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 4,200 ವಾಹನಗಳು

ದೇಶದಲ್ಲಿ ಲಾಕ್‌ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಕರ್ನಾಟಕದಲ್ಲಿಯೂ ಸಹ ಲಾಕ್‌ಡೌನ್ ಮುಂದುವರೆದಿದ್ದು, ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಕರ್ನಾಟಕದಲ್ಲಿ ಕರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಯಾವುದೇ ವಿನಾಯಿತಿಯನ್ನು ನೀಡುತ್ತಿಲ್ಲ.

ಪೊಲೀಸರ ವಶದಲ್ಲಿವೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 4,200 ವಾಹನಗಳು

ಈ ಕಾರಣಕ್ಕೆ ಲಾಕ್‌ಡೌನ್ ಉಲ್ಲಂಘಿಸಿ ಮನೆಯಿಂದ ಹೊರಬರುವವರ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದ್ದು, ಬೆಂಗಳೂರು ಪೊಲೀಸರು ಸಹಸ್ರಾರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈಗ ರಾಜ್ಯದ ಇತರ ನಗರಗಳ ಪೊಲೀಸರು ಸಹ ಮನೆಯಿಂದ ಹೊರಬರುತ್ತಿರುವವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ.

ಪೊಲೀಸರ ವಶದಲ್ಲಿವೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 4,200 ವಾಹನಗಳು

ಕಲ್ಬುರ್ಗಿ ಪೊಲೀಸರು ಇದುವರೆಗೆ ಸುಮಾರು 4200 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಲ್ಬುರ್ಗಿ ನಗರದಲ್ಲಿ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಕಲ್ಬುರ್ಗಿ ನಗರದ ಡಿಸಿಪಿರವರು ಮಾಹಿತಿ ನೀಡಿದ್ದು, ಮೇ 3ರವರೆಗೆ ನಿಯಮ ಉಲ್ಲಂಘಿಸುವ ಮತ್ತಷ್ಟು ವಾಹನಗಳನ್ನು ವಶಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಪೊಲೀಸರ ವಶದಲ್ಲಿವೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 4,200 ವಾಹನಗಳು

ಆರಂಭದಲ್ಲಿ ಬೆಂಗಳೂರು ಪೊಲೀಸರು 7000ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದರು. ರಾಜ್ಯಾದ್ಯಂತ ಪೊಲೀಸರು ವಿನಾಕಾರಣ ಹೊರಬರುವ ವಾಹನಗಳ ಮೇಲೆ ನಿಗಾವಹಿಸಿದ್ದು, ಅಗತ್ಯವಿಲ್ಲದೇ ಹೊರಬರುವ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

ಪೊಲೀಸರ ವಶದಲ್ಲಿವೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 4,200 ವಾಹನಗಳು

ಕೇರಳದ ಹಲವು ಜಿಲ್ಲೆಗಳಲ್ಲಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದ್ದು, ವಾಹನಗಳ ಸಂಖ್ಯೆಯನ್ನು ಮಿತಿಗೊಳಿಸುವ ಕಾರಣಕ್ಕೆ ಬೆಸ-ಸಮ ನಿಯಮವನ್ನು ಜಾರಿಗೊಳಿಸಲಾಗಿದೆ. ಅಗತ್ಯವಿರುವ ಕೆಲಸಕ್ಕೆ ಮಾತ್ರ ಹೊರಬರುವಂತೆ ಜನರಿಗೆ ಸೂಚಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಪೊಲೀಸರ ವಶದಲ್ಲಿವೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 4,200 ವಾಹನಗಳು

ಕರ್ನಾಟಕದಲ್ಲಿ ಸಾರ್ವಜನಿಕ ವಾಹನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಅಗತ್ಯ ಸರಕು ಹಾಗೂ ಸೇವೆಗಳ ಸರಬರಾಜು ಮಾಡುವ ಸಲುವಾಗಿ ಸರ್ಕಾರಿ ವಾಹನಗಳನ್ನು ಬಳಸಲಾಗುತ್ತಿದೆ.

ಪೊಲೀಸರ ವಶದಲ್ಲಿವೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 4,200 ವಾಹನಗಳು

ವಾಹನಗಳ ಬಳಕೆಯನ್ನು ರದ್ದುಪಡಿಸಿರುವ ಕಾರಣಕ್ಕೆ ಜನರಿಗೆ ಅಗತ್ಯವಾಗಿರುವ ಔಷಧಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗಷ್ಟೇ ಬೆಂಗಳೂರು ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಆಕ್ಟಿವಾದಲ್ಲಿ 800 ಕಿ.ಮೀ ಪ್ರಯಾಣಿಸಿ ಕ್ಯಾನ್ಸರ್ ರೋಗಿಗೆ ಔಷಧಿಯನ್ನು ತಲುಪಿಸಿದ್ದರು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪೊಲೀಸರ ವಶದಲ್ಲಿವೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 4,200 ವಾಹನಗಳು

ಲಾಕ್‌ಡೌನ್ ಅನ್ನು ಯಶಸ್ವಿಯಾಗಿಸಲು ರಾಜ್ಯ ಪೊಲೀಸರು ಎಲ್ಲ ರೀತಿಯಲ್ಲೂ ನೆರವು ನೀಡುತ್ತಿದ್ದಾರೆ. ಇದರಿಂದಾಗಿ ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಲಾಕ್‌ಡೌನ್ ಅನ್ನು ಸಡಿಲಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Kalaburgi police seized 4200 vehicles for violating Corona virus lockdown ruels. Read in Kannada.
Story first published: Tuesday, April 21, 2020, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X