15 ಜನರ ಸಾವಿಗೆ ಕಾರಣವಾದ ರೈಲು ಅಪಘಾತಕ್ಕೆ ಸಿಗ್ನಲ್ ಓವರ್ ಶಾಟ್ ಕಾರಣವೇ?
ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದ ಬಳಿ ಸೀಲ್ಡಾಗೆ ತೆರಳುತ್ತಿದ್ದ ಕಾಂಚನ್ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 15 ಜನರು ಸಾವನ್ನಪ್ಪಿದ್ದು, 60 ಜನರು ಗಾಯಗೊಂಡಿದ್ದಾರೆ. ನ್ಯೂ ಜಲ್ಪೈಗುರಿಯಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ರಂಗಪಾಣಿ ನಿಲ್ದಾಣದ ಬಳಿ ಡಿಕ್ಕಿ ಸಂಭವಿಸಿದ್ದು, ಹಿಂದಿನ ಎರಡು ಬೋಗಿಗಳು ಹಳಿ ತಪ್ಪಿವೆ. ರೈಲ್ವೆ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ವೈದ್ಯರು ಮತ್ತು ವಿಪತ್ತು ಘಟಕಗಳು ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸಿಲಿಗುರಿಯಲ್ಲಿ ಬೆಳಿಗ್ಗೆಯಿಂದ ಭಾರಿ ಮಳೆಯಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ. ಉತ್ತರ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಸುಮಾರು 30 ಕಿ.ಮೀ ದೂರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸುವ ಮುನ್ನ ರೈಲು ಅಗರ್ತಲಾದಿಂದ ಸೀಲ್ಡಾಗೆ ಪ್ರಯಾಣಿಸುತ್ತಿತ್ತು. ಇದರ ಪರಿಣಾಮವಾಗಿ, ದೂರದ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದು ಈ ವರ್ಷ ಭಾರತದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತವಾಗಿದೆ. ಈ ರೈಲು ಅಪಘಾತಕ್ಕೆ ನಿಖರ ಕಾರಣವನ್ನು ಇಲ್ಲಿ ನೋಡೋಣ.
ಅಪಘಾತದ ಚಿತ್ರಗಳನ್ನು ನೋಡಿದರೆ, ಎಕ್ಸ್‌ಪ್ರೆಸ್ ರೈಲಿನ ಬೋಗಿ ಗೂಡ್ಸ್ ರೈಲಿನ ಎಂಜಿನ್ ಮೇಲೆ ನಿಂತಿದೆ. ಎಕ್ಸ್ ಪ್ರೆಸ್ ರೈಲಿನ ಹಿಂದೆ ಬರುತ್ತಿದ್ದ ಗೂಡ್ಸ್ ರೈಲಿನಿಂದ ಅಪಘಾತ ಸಂಭವಿಸಿದೆ ಎಂಬುದು ಸ್ಪಷ್ಟವಾಗಿದೆ. ಗೂಡ್ಸ್ ರೈಲಿನ ಲೊಕೊ ಪೈಲಟ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಪಘಾತ ಸಂಭವಿಸಿದ ಪ್ರದೇಶವು ಸ್ವಯಂಚಾಲಿತ ಸಿಗ್ನಲಿಂಗ್ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ರೈಲು ಚಲಿಸಲು ಯಾವುದೇ ಮಾನವ ಹಸ್ತಕ್ಷೇಪದ ಅಗತ್ಯವಿಲ್ಲ. ಸಿಗ್ನಲಿಂಗ್ ಅನ್ನು ಆಟೋಮ್ಯಾಟಿಕ್ ಮೋಡ್‌ನಲ್ಲಿ ಇಡಲಾಗುತ್ತದೆ. ಈ ನಿರ್ದಿಷ್ಟ ರೈಲು ಅಪಘಾತವನ್ನು ನೋಡಿದ್ರೆ ಗೂಡ್ಸ್ ರೈಲು ಸಿಗ್ನಲ್ ಅನ್ನು ಓವರ್ಶಾಟ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ರೈಲನ್ನು ನಿಲ್ಲಿಸಲು ರೆಡ್ ಸಿಗ್ನಲ್ ಇದ್ದರೂ ರೈಲಿನ ಚಾಲಕ ಸಿಗ್ನಲ್ ಮೀರಿ ಮುಂದುವರಿದಾಗ ಓವರ್ ಶಾಟ್ ಸಂಭವಿಸಿರಬಹುದು. ಈ ಸಂದರ್ಭದಲ್ಲಿ, ಕಾಂಚನ್ಜುಂಗಾ ರೈಲು ಹಳಿಗಳ ಮೇಲೆ ಹಾದುಹೋಗುತ್ತಿತ್ತು, ಹಿಂದಿನ ಗೂಡ್ಸ್ ರೈಲಿಗೆ ರೆಡ್ ಸಿಗ್ನಲ್ ನೀಡಿದ್ರು ಗೂಡ್ಸ್ ರೈಲಿನ ಚಾಲಕ ಅದನ್ನು ನಿರ್ಲಕ್ಷಿಸಿ ಮುಂದುವರಿಸಿರಬಹುದು. ಈ ಕಾರಣದಿಂದಾಗಿ ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿರುವ ಸಾಧ್ಯತೆಯಿದೆ.

ಈ ವಿಭಾಗವು ಸಂಪೂರ್ಣ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆಯಾಗಿರುವುದರಿಂದ, ಇದರಲ್ಲಿ ಸಿಗ್ನಲ್ ವೈಫಲ್ಯದ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಅಪಘಾತ ಸಂಭವಿಸಿದ ಪ್ರದೇಶವು ಕಡಿಮೆ ಗೋಚರತೆಯ ಪ್ರದೇಶವಾಗಿದೆ. ಈ ಕಾರಣದಿಂದಲೂ ಚಾಲಕನಿಗೆ ರೈಲು ಇರುವುದು ತಿಳಿದಿಲ್ಲದಿರಬಹುದು ಎಂದು ಸಹ ಹೇಳಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








