ಬಾಲಿವುಡ್ ಸ್ಟಾರ್‌ಗಳಿಗೆ ಸವಾಲು: 17 ಲಕ್ಷದ 'ಅಂಬಾರಿ' ಬೈಕ್ ಖರೀದಿಸಿದ ಕನ್ನಡದ ಖ್ಯಾತ ಸೀರಿಯಲ್ ನಟ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮೀ ಬಾರಮ್ಮ' ಧಾರವಾಹಿಯಲ್ಲಿ ಅಭಿನಯಿಸುವ ಮೂಲಕ ಶಮಂತ್ ಬ್ರೋ ಗೌಡ (Shamanth bro gowda) ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರು ನಟಿಸುತ್ತಿರುವ 'ವೈಷ್ಣವ್' ಪಾತ್ರ ವೀಕ್ಷಕರ ಮನ ಗೆದ್ದಿದೆ. ಬಿಗ್ ಬಾಸ್ ಕನ್ನಡದ ಸೀಸನ್ 8ನಲ್ಲಿಯೂ ಶಮಂತ್ ಬ್ರೋ ಗೌಡ ಭಾಗವಹಿಸಿದ್ದರು. ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಬಾಕಿಯಿರುವಾಗ ಶೋನಿಂದ ಹೊರ ನಡೆದಿದ್ದರು. ಗಾಯಕರಾಗಿ ಕೂಡ ಅವರು ಗುರುತಿಸಿಕೊಂಡಿದ್ದಾರೆ.

ಶಮಂತ್ ಬ್ರೋ ಗೌಡ ಅವರಿಗೆ ಕಾರು ಹಾಗೂ ಬೈಕ್‌ಗಳ ಮೇಲೆಯೂ ವಿಶೇಷವಾದ ಪ್ರೀತಿಯಿದೆ. ಈ ಹಿಂದೆ ಅವರು, ಬಿಎಂಡಬ್ಲ್ಯೂ 5 ಸೀರೀಸ್ (BMW 5 Series) ಕಾರನ್ನು ಖರೀದಿ ಮಾಡಿದ್ದರು. ಸದ್ಯ, ಇದೇ ಕಾರು ರೂ.72.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 10.9 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಈ ಕಾರು 5-ಆಸನಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

Kannada Big Boss Contestant Actor Shamanth Bro Gowda Buys Suzuki Hayabusa Motorcycle Details

ಇತ್ತೀಚೆಗೆ ನಟ ಶಮಂತ್ ಬ್ರೋ ಗೌಡ, ದುಬಾರಿ ಬೆಲೆಯ ಐಷಾರಾಮಿ ಸುಜುಕಿ ಹಯಾಬುಸಾ (Suzuki Hayabusa) ಮೋಟಾರ್‌ಸೈಕಲ್‌ನ್ನು ಕೊಂಡುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಅವರು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೂವಿನ ಹಾರ ಹಾಕಿ, ಪೂಜೆ ಮಾಡಿಸಿರುವ ನೂತನ ಬೈಕ್ ಮೇಲೆ ಕುಳಿತುಕೊಂಡು ಫೋಟೋವನ್ನು ಶೇರ್ ಮಾಡಿದ್ದಾರೆ.

ಶಮಂತ್ ಬ್ರೋ ಗೌಡ ಖರೀದಿಸಿದ್ದಾರೆ ಎನ್ನಲಾದ ಹೊಚ್ಚ ಹೊಸ ಸುಜುಕಿ ಹಯಾಬುಸಾ ಮೋಟಾರ್‌ಸೈಕಲ್‌ ವಿಶೇಷತೆ ಕುರಿತಂತೆ ಹೇಳುವುದಾದರೆ, ಇದು ರೂ.17 ಲಕ್ಷದಿಂದ ರೂ.17.80 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಮೆಟಾಲಿಕ್ ಥಂಡರ್ ಗ್ರೇ, ಕ್ಯಾಂಡಿ ಡೇರಿಂಗ್ ರೆಡ್ ಮತ್ತು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಾಗಲಿದೆ.

Kannada Big Boss Contestant Actor Shamanth Bro Gowda Buys Suzuki Hayabusa Motorcycle Details

ನೂತನ ಸುಜುಕಿ ಹಯಾಬುಸಾ ಮೋಟಾರ್‌ಸೈಕಲ್‌ 1340 ಸಿಸಿ ಲಿಕ್ವಿಡ್ ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದೆ. 9,700 ಆರ್‌ಪಿಎಂನಲ್ಲಿ 190 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ.

ಹೊಸ ಸುಜುಕಿ ಹಯಾಬುಸಾ ಬೈಕ್ 17 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 266 ಕೆಜಿ ತೂಕವಿರುವ ಈ ಮೋಟಾರ್‌ಸೈಕಲ್‌, 20 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ. ಸವಾರರ ಸುರಕ್ಷತೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಈ ಬೈಕ್‌ಗೆ ದುಬಾರಿ ಬೆಲೆಯ ಕವಾಸಕಿ ನಿಂಜಾ ಝಡ್ಎಕ್ಸ್-14ಆರ್, ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‌ಎಸ್ ಹಾಗೂ ಬಿಎಂಡಬ್ಲ್ಯು ಆರ್1250 ಆರ್‌ ಮೋಟಾರ್‌ಸೈಕಲ್‌ಗಳು ಪ್ರಬಲವಾದ ಪ್ರತಿಸ್ಫರ್ಧಿಯಾಗಿವೆ. ವಿಶೇಷವಾಗಿ ಕನ್ನಡದ ಹಲವು ಸ್ಟಾರ್ ನಟರು ಸಹ ಇದೇ 'ಸುಜುಕಿ ಹಯಾಬುಸಾ' ಮೋಟಾರ್‌ಸೈಕಲ್‌ನ ಮಾಲೀಕರಾಗಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 28, 2024, 12:43 [IST]
English summary
Kannada big boss contestant actor shamanth bro gowda buys suzuki hayabusa motorcycle details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+