ಚೀನಾ ಕಂಪನಿಯ ಎಲೆಕ್ಟ್ರಿಕ್ ಕಾರು ಖರೀದಿಸಿದ ನಟಿ ತಾರಾ ಅನುರಾಧ: ಬೆಲೆ ಕೇಳಿದ್ರೆ ಬೆಚ್ಚಿಬೀಳ್ತಿರಾ!

ನಟಿ ತಾರಾ ಅನುರಾಧ (Tara Anooradha) ಜನಪ್ರಿಯ ನಟಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 1985ರಲ್ಲಿ ತೆರೆಕಂಡ ತುಳಸಿದಳ ಸಿನಿಮಾ ಮೂಲಕ ತಾರಾ ಆಕ್ಟಿಂಗ್ ಕೇರಿಯರ್ ಶುರು ಮಾಡಿದ್ದರು. ಉಂಡು ಹೋದ ಕೊಂಡು ಹೋದ, ಮಾಲಾಶ್ರೀ ಮಾಮಾಶ್ರೀ, ತುಂಬಿದ ಮನೆ, ಪ್ಯಾರಿಸ್ ಪ್ರಣಯ, ನಮ್ಮ ಬಸವ, ಹೆಬ್ಬೆಟ್ ರಾಮಕ್ಕ, ಟಗರು ಪಲ್ಯ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಚಿತ್ರರಂಗದಲ್ಲಿ ಫುಲ್ ಆಕ್ಟಿವ್ ಇದ್ದಾರೆ.

ಭಾನುವಾರ ನಟಿ ತಾರಾ ಅನುರಾಧ ಹೊಚ್ಚ ಹೊಸ ಬಿವೈಡಿ ಸೀಲ್ (BYD Seal) ಎಲೆಕ್ಟ್ರಿಕ್ ಸೆಡಾನ್‌ನ್ನು ಖರೀದಿಗೆ ಮಾಡಿದ್ದಾರೆ. ನೂತನ ಕಾರನ್ನು ಪತಿ ಹಾಗೂ ಖ್ಯಾತ ಛಾಯಾಗ್ರಾಹಕ ಹೆಚ್.ಡಿ ವೇಣು ಹಾಗೂ ಪುತ್ರನೊಂದಿಗೆ ವಿತರಣೆ ಪಡೆದಿದ್ದಾರೆ. ಜೊತೆಗೆ ಹಲವು ಫೋಟೋಗಳಿಗೂ ಪೋಸ್ ನೀಡಿದ್ದಾರೆ.

Kannada Famous Actress Tara Buys New Byd Seal Electric Sedan

ಈ ಬಗ್ಗೆ ಸ್ವತಃ ತಾರಾ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ 'ಬಹಳ ದಿನದಿಂದ ಕಾದ ಹೊಸ ಅತಿಥಿ ನಮ್ಮ ಮನೆಗೆ ಬಂದಾಯಿತು, ನಾವೆಲ್ಲರೂ ಮನಸಾರ ಮನೆ ತುಂಬಿಸಿಕೊಂಡಿದ್ದು ಆಯಿತು. ಆ ಭಗವಂತನ ದಯೆಯಿಂದ ಗುರು ಹಿರಿಯರ ಆಶೀರ್ವಾದದಿಂದ ನಿಮ್ಮೆಲ್ಲರ ಒಳ್ಳೆಯ ಮನಸ್ಸಿನ ಆರೈಕೆಯಿಂದ ಇದು ಸಾಧ್ಯವಾಗಿದೆ' ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಸದ್ಯ ನಟಿ ತಾರಾ ಅನುರಾಧ ಖರೀದಿ ಮಾಡಿರುವ ನೂತನ ಬಿವೈಡಿ ಸೀಲ್ ಎಲೆಕ್ಟ್ರಿಕ್ ಸೆಡಾನ್ ವಿಶೇಷತೆ ಬಗ್ಗೆ ಹೇಳುವುದಾದರೆ, ಚೀನಾ ಕಂಪನಿ ಒಡೆತನದ ಈ ಕಾರು, ರೂ.41 ಲಕ್ಷದಿಂದ ರೂ.53 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಡೈನಾಮಿಕ್ ರೇಂಜ್, ಪ್ರೀಮಿಯಂ ರೇಂಜ್ ಮತ್ತು ಪರ್ಪಾಮೆನ್ಸ್ ಎಂಬ 3 ರೂಪಾಂತರಗಳನ್ನು (ವೇರಿಯೆಂಟ್) ಹೊಂದಿದೆ. ಆರ್ಕ್ಟಿಕ್ ಬ್ಲೂ & ಅಟ್ಲಾಂಟಿಸ್ ಗ್ರೇ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ.

Kannada Famous Actress Tara Buys New Byd Seal Electric Sedan

ಈ ಕಾರು ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರ 61.44 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ & ಸಿಂಗಲ್ ಮೋಟಾರ್ 204 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 310 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 510 ಕಿಲೋಮೀಟರ್‌‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ.

ಮತ್ತೊಂದು 82.56 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹಾಗೂ ಸಿಂಗಲ್ ಮೋಟಾರ್ ಹೊಂದಿರುವ ಕಾರು, 313 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 360 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಭರ್ತಿ ಚಾರ್ಜ್‌ನಲ್ಲಿ 650 ಕಿಲೋಮೀಟರ್‌‌ವರೆಗೂ ಓಡುತ್ತದೆ.

ಇನ್ನೊಂದು 82.56 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಮತ್ತು ಡುಯಲ್-ಮೋಟಾರ್ ಪಡೆದಿರುವ ಕಾರು, 530 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) 670 ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುತ್ತದೆ. ಪೂರ್ತಿ ಚಾರ್ಜ್‌ನಲ್ಲಿ 580 ಕಿಲೋಮೀಟರ್‌‌ವರೆಗೂ ಕ್ರಮಿಸುತ್ತದೆ. ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಈ ಕಾರಿನ ಬ್ಯಾಟರಿ ಪ್ಯಾಕ್, 30 ರಿಂದ 80% ಚಾರ್ಜ್ ಆಗಲು ಕೇವಲ 26 ನಿಮಿಷ ತೆಗೆದುಕೊಳ್ಳುತ್ತದೆ.

ನೂತನ ಬಿವೈಡಿ ಸೀಲ್ ಸೆಡಾನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ (15.6-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (10.25-ಇಂಚು), ವೈರ್‌ಲೆಸ್ ಫೋನ್ ಚಾರ್ಜರ್‌ಗಳು ವೆಂಟಿಲೇಟೆಡ್ & ಹೀಟೆಡ್ ಫ್ರಂಟ್ ಸೀಟ್‌ಗಳು, 8-ವೇ ಪವರ್ಡ್ ಡ್ರೈವರ್ ಸೀಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಹೊಸ ಬಿವೈಡಿ ಸೀಲ್ ಸೆಡಾನ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 9 - ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಐಎಸ್ಒಎಫ್ಐಎಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ಹ್ಯುಂಡೈ ಐಯೋನಿಕ್ 5, ಕಿಯಾ ಇವಿ6, ಹಾಗೂ ವೋಲ್ವೋ ಸಿ40 ರೀಚಾರ್ಜ್ ಕಾರುಗಳು ಪ್ರಬಲವಾದ ಎದುರಾಳಿಯಾಗಿವೆ.

Article Published On: Tuesday, November 26, 2024, 11:01 [IST]
English summary
Kannada famous actress tara buys new byd seal electric sedan
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+