ಕರ್ನಾಟಕದ ಟ್ರೆಡಿಷನ್ ಲುಕ್‍ನಲ್ಲಿ ನಟಿ ದೀಪಿಕಾ, ಅಪ್ಪ - ಅಮ್ಮನೊಂದಿಗೆ ನೂತನ ಹ್ಯುಂಡೈ ಕಾರು ಖರೀದಿ

'ಕುಲವಧು' ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯ ನಟಿಯಾಗಿರುವ ದೀಪಿಕಾ (Deepika), ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೊಚ್ಚ ಹೊಸ ಹ್ಯುಂಡೈ (Hyundai) ಕಾರನ್ನು ಖರೀದಿಸಿರುವ ಅವರು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಟಿ ದೀಪಿಕಾ, ಕರ್ನಾಟಕದ ಟ್ರೆಡಿಷನ್ ಡ್ರೆಸ್ ತೊಟ್ಟು ತಂದೆ - ತಾಯಿಯೊಂದಿಗೆ ನೂತನ ಹ್ಯುಂಡೈ ವೆರ್ನಾ ಎಸ್ಎಕ್ಸ್ ಕಾರನ್ನು ವಿತರಣೆ ಪಡೆದಿದ್ದಾರೆ. ದೇವಸ್ಥಾನಕ್ಕೆ ಹೋಗಿ, ಪೂಜೆಯನ್ನು ಮಾಡಿದ್ದಾರೆ. ಈ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, 'ಕನಸು ನನಸಾಯಿತು. ನನ್ನ ಅಪ್ಪ, ಅಮ್ಮ ಖುಷಿಯಾಗಿರುವದನ್ನು ನೋಡಿ, ಸಂತೋಷವಾಯಿತು' ಎಂಬ ಶೀರ್ಷಿಕೆ ಬರೆದಿದ್ದಾರೆ. ದೀಪಿಕಾ ಅವರಿಗೆ ಹಲವರು ಶುಭ ಕೋರಿದ್ದಾರೆ.

ಕರ್ನಾಟಕದ ಟ್ರೆಡಿಷನ್ ಲುಕ್‍ನಲ್ಲಿ ನಟಿ ದೀಪಿಕಾ ಅಪ್ಪ, ಅಮ್ಮನೊಂದಿಗೆ ನೂತನ ಹ್ಯುಂಡೈ ಕಾರು ಖರೀದಿ

ನಟಿ ದೀಪಿಕಾ ಖರೀದಿಸಿರುವ ಹ್ಯುಂಡೈ ವೆರ್ನಾ (Hyundai Verna) ಎಸ್ಎಕ್ಸ್ ರೂಪಾಂತರ ದೇಶೀಯ ಮಾರುಕಟ್ಟೆಯಲ್ಲಿ ರೂ.12.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಅಲ್ಲದೆ, ವೆರ್ನಾ ಕಾರಿನ ಇತರೆ ವೇರಿಯೆಂಟ್ಸ್, ರೂ.10.96 ಲಕ್ಷದಿಂದ ರೂ.17.38 ಲಕ್ಷ ದರದಲ್ಲಿ ಸಿಗುತ್ತವೆ. ಇವು 7 ಮೊನೊಟೋನ್ ಹಾಗೂ 2 ಡ್ಯೂಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತವೆ.

6ನೇ ತಲೆಮಾರಿನ ಹ್ಯುಂಡೈ ವೆರ್ನಾ ಸೆಡಾನ್, 2 ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಮೊದಲ 1.5 - ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್, 160 PS ಗರಿಷ್ಠ ಪವರ್ ಹಾಗೂ 253 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಮ್ಯಾನುವಲ್/ 7 ಸ್ವೀಡ್ DCT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಕರ್ನಾಟಕದ ಟ್ರೆಡಿಷನ್ ಲುಕ್‍ನಲ್ಲಿ ನಟಿ ದೀಪಿಕಾ ಅಪ್ಪ, ಅಮ್ಮನೊಂದಿಗೆ ನೂತನ ಹ್ಯುಂಡೈ ಕಾರು ಖರೀದಿ

ಮತ್ತೊಂದು, 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 115 PS ಪವರ್ ಮತ್ತು144 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 6 ಸ್ವೀಡ್ ಮ್ಯಾನುವಲ್ CVT ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಈ ಹ್ಯುಂಡೈ ವೆರ್ನಾ ರೂಪಾಂತರಗಳಿಗೆ ಅನುಗುಣವಾಗಿ, 18.6 - 20.6 kmpl ಮೈಲೇಜ್ ನೀಡುತ್ತದೆ. 528 ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದೆ.

ಹ್ಯುಂಡೈ ವೆರ್ನಾ ಪಡೆದುಕೊಂಡಿರುವ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವದಾದರೆ, ಇದು 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 8 ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಸ್ವಿಚ್ಏಬಲ್ ಕಂಟ್ರೊಲ್ಸ್, ಸಿಂಗಲ್ ಪೇನ್ ಸನ್‌ರೂಫ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟಿಂಗ್, ಮುಂಭಾಗ, ವೆಂಟಿಲೇಟೆಡ್ ಸೀಟ್ ಅನ್ನು ಪಡೆದಿದೆ.

ಕರ್ನಾಟಕದ ಟ್ರೆಡಿಷನ್ ಲುಕ್‍ನಲ್ಲಿ ನಟಿ ದೀಪಿಕಾ ಅಪ್ಪ, ಅಮ್ಮನೊಂದಿಗೆ ನೂತನ ಹ್ಯುಂಡೈ ಕಾರು ಖರೀದಿ

ಸುರಕ್ಷತೆಯ ದೃಷ್ಟಿಯಿಂದ ಹ್ಯುಂಡೈ ವೆರ್ನಾ ಅತ್ಯಾಧುನಿಕವಾಗಿದ್ದು, 6 ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಫ್ರಂಟ್ ಪಾರ್ಕಿಂಗ್ ಸೇನಾರ್ಸ್, ಆಲ್ ವೀಲ್ ಡಿಸ್ಕ್ ಬ್ರೇಕ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಪಡೆದಿದೆ.

ಮುಖ್ಯವಾಗಿ, ಹ್ಯುಂಡೈ ವೆರ್ನಾ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್) ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿದೆ. ಇದು, ಬ್ಲೈಂಡ್ ಸ್ಪಾಟ್ ಅಲರ್ಟ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ ಅನ್ನು ಒಳಗೊಂಡಿದೆ. ಈ ಕಾರಿಗೆ, ಭಾರತದ ಮಾರುಕಟ್ಟೆಯಲ್ಲಿ ಸಾಲು ಸಾಲು ಪ್ರತಿಸ್ಪರ್ಧಿಗಳೇ ಇದ್ದು, ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ಸ್ಲಾವಿಯಾ ಮತ್ತು ಪೋಕ್ಸ್‌ವ್ಯಾಗನ್ ವರ್ಟಸ್ ಗೆ ಟಫ್ ಫೈಟ್ ನೀಡಬೇಕಾಗಿದೆ.

ಇನ್ನು, ನಟಿ ದೀಪಿಕಾ ಅವರು, 'ಸೇವಂತಿ' ಎಂಬ ಧಾರಾವಾಹಿಯಲ್ಲಿ ಸದ್ಯ ನಟಿಸುತ್ತಿದ್ದು, ಕುಲವಧು ಧಾರಾವಾಹಿಯ ಅವರ 'ಧನ್ಯಾ' ಹೆಸರಿನ ಪಾತ್ರ ಎಲ್ಲೆಡೆ ಮನೆ ಮಾತಾಗಿತ್ತು. ದೀಪಿಕಾ ಅವರು, 2019ರಲ್ಲಿ ಸಹ ನಟ ಆಕರ್ಷ್ ಎಂಬುವವರನ್ನು ವಿವಾಹವಾಗಿದ್ದರು. ಈಗ ಹೊಸ ಹ್ಯುಂಡೈ ವೆರ್ನಾ ಕಾರನ್ನು ಖರೀದಿಸಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Article Published On: Thursday, August 24, 2023, 12:42 [IST]
English summary
Kannada serial actress deepika buy new hyundai verna car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+