ಈ ಹಳೆಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ 284 ಕೋಟಿ ಕೂಡಿಟ್ಟ ಉದ್ಯಮಿ

ಕಾನ್ಪುರ ಮೂಲದ ಸುಗಂಧ ದ್ರವ್ಯ ತಯಾರಕ ಪಿಯೂಷ್ ಜೈನ್ ಅವರ ಬಳಿಯಿಂದ 284 ಕೋಟಿ ರೂಪಾಯಿ ಹಣವನ್ನು ಕೇಂದ್ರೀಯ ತನಿಖಾ ದಳ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆದರೆ ಈ ಬಹುಕೋಟಿ ಉದ್ಯಮಿ ಪಿಯೂಷ್ ಜೈನ್ ಅವರು ತಮ್ಮ ಸ್ಕೂಟರ್ ಮತ್ತು ಕ್ವಾಲಿಸ್ ಮತ್ತು ಮಾರುತಿ ಸುಜುಕಿ 800 ನಂತಹ ಹಳೆಯ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು.

ಈ ಹಳೆಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ 284 ಕೋಟಿ ಕೂಡಿಟ್ಟ ಉದ್ಯಮಿ

ತೆರಿಗೆ ವಂಚನೆಗಾಗಿ ಕೇಂದ್ರ ಏಜೆನ್ಸಿಗಳು ಉದ್ಯಮಿ ಪಿಯೂಷ್ ಜೈನ್ ಅವರನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಅವರು ಕನೌಜ್‌ನ ಛಿಪೈಟಿ ಪ್ರದೇಶದಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿದಾಗಲೆಲ್ಲಾ ಅವರು ತಮ್ಮ ಹಳೆಯ ವಾಹನಗಳನ್ನು ಮಾತ್ರ ಬಳಸುತ್ತಿದ್ದರು. ಪಿಯೂಷ್ ಅವರು ಹಳೆಯ ಬಜಾಜ್ ಪ್ರಿಯಾ ಸ್ಕೂಟರ್ ಹೊಂದಿದ್ದಾರೆ ಮತ್ತು ಸರಳ ಜೀವನ ನಡೆಸುತ್ತಿದ್ದರು. ಅವರು ಎಂದಿಗೂ ಉನ್ನತ-ಮಟ್ಟದ ಕಾರುಗಳನ್ನು ಬಳಸಲಿಲ್ಲ ಮತ್ತು ಜನರ ಗಮನ ಸೆಳೆಯುವುದನ್ನು ತಪ್ಪಿಸಲು ಹಳೆಯ ಟೊಯೊಟಾ ಕ್ವಾಲಿಸ್ ಅನ್ನು ಬಳಸುತ್ತಿದ್ದರು

ಈ ಹಳೆಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ 284 ಕೋಟಿ ಕೂಡಿಟ್ಟ ಉದ್ಯಮಿ

ಅವರ ಸ್ಕೂಟರ್ ಅನ್ನು ಕನೌಜ್‌ನಲ್ಲಿರುವ ಅವರ ಮನೆಯಲ್ಲಿ ನಿಲ್ಲಿಸಿರುವುದು ಕಂಡುಬಂದಿದೆ, ಆದರೆ ಅವರ ಕ್ವಾಲಿಸ್ ಕಾಣಿಸಿಕೊಂಡಿಲ್ಲ. ಸರಳ ಜೀವನವನ್ನು ನಡೆಸುವ ಈ ವಿಧಾನವು ದೀರ್ಘಕಾಲದವರೆಗೆ ಕೆಲಸ ಮಾಡುತ್ತಿದ್ದರು. ಇದರಿಂದ ಅವರು ಅಂತಹ ಬೃಹತ್ ಮೊತ್ತದ ಹಣವನ್ನು ವಂಚಿಸಬಹುದು ಎಂದು ಯಾರೂ ಭಾವಿಸಿರಲಿಲ್ಲ ಎಂದು ಅವರ ನೆರಮನೆಯವರು ಹೇಳಿದ್ದಾರೆ ಎಂದು ವರದಿಗಳಾಗಿದೆ,

ಈ ಹಳೆಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ 284 ಕೋಟಿ ಕೂಡಿಟ್ಟ ಉದ್ಯಮಿ

ಈ ಉದ್ಯಮಿಯ ಮನೆ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ಅಧಿಕಾರಿಗಳು ದಾಳಿ ನಡೆಸಿದ್ದರು. ಪಿಯೂಷ್ ಜೈನ್​​ಗೆ ಸಂಬಂಧಪಟ್ಟ ಕಾನ್ಪುರ್ ಮನೆ ಮತ್ತು ಕನೌಜ್, ಮುಂಬೈ ಮತ್ತು ಗುಜರಾತ್‌ನಲ್ಲಿರುವ ಇತರ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಇದುವರೆಗೆ ಒಟ್ಟಾರೆ 284 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಬೆಲೆಪಟ್ಟಿಯ ಮೂಲಕ ಸರಕು ರವಾನೆ ಮಾಡಿ ಜಿಎಸ್​ಟಿ ಪೋರ್ಟಲ್​​ನಲ್ಲಿ ಅಪ್​ಲೋಡ್ ಮಾಡಬೇಕಾದ ಇ ವೇ ಬಿಲ್ ವಂಚನೆ ಮಾಡುವ ಮೂಲಕ ಸಂಪಾದಿಸಿದ್ದು ಎಂದು ಹೇಳಲಾಗುತ್ತಿದೆ.

ಈ ಹಳೆಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ 284 ಕೋಟಿ ಕೂಡಿಟ್ಟ ಉದ್ಯಮಿ

ಭಾರೀ ಪ್ರಮಾಣದಲ್ಲಿ ಹಣ ಪತ್ತೆಯಾದ ಹಿನ್ನಲೆಯಲ್ಲಿ ಸ್ಟೇಟ್‌ ಬ್ಯಾಂಕಿನಿಂದ 19 ನೋಟು ಎಣಿಕೆ ಯಂತ್ರಗಳನ್ನು ಪಡೆದುಕೊಂಡಿದ್ದರು. ಅವುಗಳನ್ನು 24 ಗಂಟೆ ಸತತ ಬಳಕೆ ಮಾಡಿ ಶನಿವಾರ ಹಿಂತಿರುಗಿಸಲಾಗಿದೆ. ಬರೀ ನಗದು ಮಾತ್ರವಲ್ಲದೆ, ಪಿಯುಷ್​ ಜೈನ್​ ಕನೌಜ್​ ಮನೆಯಿಂದ 250 ಕೆಜಿ ಬೆಳ್ಳಿ, 25 ಕೆಜಿ ಚಿನ್ನವನ್ನು ಕೂಡ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲದೇ 40 ಕಂಪನಿಗಳ ಮಾಲೀಕ ಈತ. ಕನೌಜ್‌ನ ಸುಗಂಧ ದ್ರವ್ಯ ಮತ್ತು ಸಂಯುಕ್ತ ಉದ್ಯಮಿ ಪಿಯೂಷ್ ಜೈನ್ ಪ್ರಪಂಚದ ಸುಮಾರು 50 ದೇಶಗಳಲ್ಲಿ ವ್ಯಾಪಾರ ಹೊಂದಿದ್ದರೆಂಬ ವಿಚಾರ ಬೆಳಕಿಗೆ ಬಂದಿದೆ.

ಈ ಹಳೆಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ 284 ಕೋಟಿ ಕೂಡಿಟ್ಟ ಉದ್ಯಮಿ

ಪಿಯೂಷ್ ಜೈನ್​ ಮನೆ, ಮತ್ತಿತರ ಪ್ರದೇಶಗಳ ಒಟ್ಟು 40 ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರಿಗೆ ಸೇರಿದ ನಾಲ್ಕು ಮನೆಗಳಿಂದ ಒಟ್ಟು 300 ಕೀಗಳನ್ನು ಜಪ್ತಿ ಮಾಡಲಾಗಿತ್ತು. ಮನೆಗಳಲ್ಲಿರುವ ಕೆಲವು ಕೋಣೆಗಳ ಬಾಗಿಲನ್ನು ತೆಗೆಯಲು ಬಾರದ ಕಾರಣ ಬೀಗ ತೆಗೆಯುವವರನ್ನೂ ಕೂಡ ಕರೆಸಲಾಗಿತ್ತು.ಈ ಉದ್ಯಮಿಯ ಬಳಿ ಡ್ರಮ್​ಗಟ್ಟಲೆ ಶ್ರೀಗಂಧದ ಎಣ್ಣೆಯೂ ಕೂಡ ಸಿಕ್ಕಿದೆ. ರಟ್ಟಿನ ಬಾಕ್ಸ್​ಗಳಲ್ಲೂ 2000 ರೂಪಾಯಿ ನೋಟಿ ಬಂಡಲ್​​ಗಳು ಪತ್ತೆಯಾಗಿವೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ ಇತಿಹಾಸದಲ್ಲೇ ಇದು ಅತಿದೊಡ್ಡ ನಗದು ಜಪ್ತಿಯಾಗಿದೆ ಎಂದು ವರದಿಯಾಗಿದೆ.

ಈ ಹಳೆಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ 284 ಕೋಟಿ ಕೂಡಿಟ್ಟ ಉದ್ಯಮಿ

ಅದೇ ಇಷ್ಟು ಹಣ ಎಲ್ಲಿಂದ ಬಂತು ಎಂದು ಕೇಳಿದ್ದಕ್ಕೆ ಉದ್ಯಮಿ ಪಿಯೂಷ್ ಜೈನ್​ ನನ್ನ ಪೂರ್ವಜರ ಕಾಲದಿಂದಲೂ ಸುಮಾರು 400 ಕೆಜಿಯಷ್ಟು ಚಿನ್ನ ಇತ್ತು. ಅದನ್ನೆಲ್ಲ ಮಾರಾಟ ಮಾಡಿದ ಹಣ ಇದು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಉದ್ಯಮಿ ಪಿಯೂಷ್ ಜೈನ್ ಕನೌಜ್ ಮತ್ತು ಕಾನ್ಪುರದ ದೊಡ್ಡ ಸುಗಂಧ ದ್ರವ್ಯ ವ್ಯಾಪಾರಿ. ಪಿಯೂಷ್ ಕನೌಜ್‌ನಲ್ಲಿ ಜನಿಸಿದ್ದರು ಅಲ್ಲಿಯೂ ಮನೆ ಹೊಂದಿದ್ದಾರೆ.ಈ ಪಿಯೂಷ್ ಜೈನ್ ಅವರ ಅಜ್ಜ ಫೂಲ್ ಚಂದ್ ಜೈನ್ ಅವರು ಬಟ್ಟೆಗಳನ್ನು ಮುದ್ರಿಸುವ ವ್ಯವಹಾರದಲ್ಲಿದ್ದರು. ಪಿಯೂಷ್ ಜೈನ್ ಕಾನ್ಪುರ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪಿಯೂಷ್ ಜೈನ್ ಅವರು ಮುಂಬೈನ ಕಂಪನಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.

ಈ ಹಳೆಯ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ 284 ಕೋಟಿ ಕೂಡಿಟ್ಟ ಉದ್ಯಮಿ

ಕನ್ನೌಜ್‌ನಲ್ಲಿ ಪಿಯೂಷ್ ಜೈನ್‌ನ ಸುಗಂಧ ದ್ರವ್ಯ ಕಾರ್ಖಾನೆಯೊಂದಿಗೆ ಕೋಲ್ಡ್ ಸ್ಟೋರೇಜ್ ಮತ್ತು ಪೆಟ್ರೋಲ್ ಪಂಪ್‌ಗಳು ಕೂಡ ಒಳಗೊಂಡಿವೆ. ಪಿಯೂಷ್ ಜೈನ್​ ಮುಂಬೈನಲ್ಲಿ ತಮ್ಮ ಕಂಪನಿಗಳ ಮುಖ್ಯ ಕಚೇರಿಯನ್ನು ಮಾಡಿಕೊಂಡಿದ್ದಾರೆ ಮತ್ತು ಇಲ್ಲಿಂದ ಅವರ ಕಂಪನಿಯ ಸುಗಂಧ ದ್ರವ್ಯವನ್ನು ವಿದೇಶಕ್ಕೆ ರಫ್ತು ಮಾಡುತಿದ್ದರು. ಕೆಲವು ವರದಿಗಳ ಪ್ರಕಾರ ಇವರು ಮುಂಬೈನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಹೆಚ್ಚಿನ ಭ್ರಷ್ಟರು ಅಕ್ರಮ ಹಣದಲ್ಲಿ ಅತ್ಯಂತ ಶ್ರೀಮಂತ ಜೀವನಶೈಲಿಯನ್ನು ನಡೆಸುತ್ತಾರೆ. ಹೀಗಾಗಿಯೇ ಹೆಚ್ಚಿನವರು ಸಿಕ್ಕಿಬೀಳುತ್ತಾರೆ. ಆದರೆ ಹೊಸ ವಸ್ತುಗಳನ್ನು ಖರೀದಿಸುವ ಬದಲು ಹಣವನ್ನು ಇರಿಸಿಕೊಳ್ಳಲು ಪಿಯೂಷ್ ಅವರ ಆಯ್ಕೆಯು ವಿಭಿನ್ನ ವಿಧಾನವಾಗಿದೆ. ಸದ್ಯ ಆತನನ್ನು 14 ದಿನಗಳ ಬಂಧನದಲ್ಲಿ ಇರಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಮತ್ತು ಕೇಂದ್ರೀಯ ಸಂಸ್ಥೆಗಳು ಆತನನ್ನು ವಿಚಾರಣೆ ನಡೆಸುತ್ತಿವೆ.

Most Read Articles

Kannada
English summary
Kanpur based businessman piyush jain used to ride this scooter details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X