ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂಬ ಸಂಚಾರಿ ನಿಯಮಗಳಲ್ಲಿ ಜಾರಿಯಲ್ಲಿ ಇರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಒಂದು ವೇಳೆ ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್​ ಧರಿಸಿಲ್ಲವಾದರೆ ಟ್ರಾಫಿಕ್​ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ ಕಾರು ಚಾಲಕರು ಹೆಲ್ಮೆಟ್​​ ಧರಿಸಬೇಕೆಂಬ ನಿಯಮವಿಲ್ಲ.

ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ಕಾರು ಚಾಲಕರು ಕಡ್ಡಾಯವಾಗಿ ಸೀಟ್​ ಬೆಲ್ಟ್​ ಧರಿಸಬೇಕೆಂಬ ನಿಯಮವಿದೆಯೇ ಹೊರತು, ಹೆಲ್ಮೆಟ್​ ಧರಿಸಬೇಕೆಂಬ ನಿಯಮ ಇಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಕಾರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲ್ಲವೆಂದು ದಂಡ ವಿಧಿಸಿದ ಪ್ರಕರಣವೊಂದು ವರದಿಯಾಗಿದೆ. ಈ ಘಟನೆಯು ಉತ್ತರ ಪ್ರದೇಶದ ಕಾನ್ಪುರದ ನಗರದಲ್ಲಿ ನಡೆದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಚಾಲಕನನ್ನು ಟ್ರಾಫಿಕ್ ಪೊಲೀಸರು ತಡೆದು ಎಲ್ಲಾ ದಾಖಲೆಗಳನ್ನು ಪರಿಶಿಲಿಸಿದ ಬಳಿಕ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಟ್ರಾಫಿಕ್ ಪೋಲಿಸ್ ಆತನಿಗೆ ರೂ.1,000 ಚಲನ್ ಅನ್ನು ನೀಡಿದರು.

ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ದಂಡವನ್ನು ಕಾರ್ ಚಾಲಕ ಕಡ್ಡಾಯವಾಗಿ ಪಾವತಿಸಬೇಕಾಯಿತು. ಈ ಘಟನೆಯು ಅತ್ಯಂತ ವಿಚಿತ್ರವಾಗಿದೆ, ಏಕೆಂದರೆ ಹೆಲ್ಮೆಟ್ ಎಂದರೆ ದ್ವಿಚಕ್ರ ವಾಹನ ಸವಾರರಿಗೆ (ಬೈಕ್ ಮತ್ತು ಸ್ಕೂಟರ್‌ಗಳೆರಡಕ್ಕೂ) ಸುರಕ್ಷತಾ ಕ್ರಮವಾಗಿದೆ. ಕಾರು ಚಾಲಕರಲ್ಲ. ಕಾರು ಚಾಲಕರಿಗೆ, ಸೀಟ್ ಬೆಲ್ಟ್ ಕಡ್ಡಾಯವಾದ ನಿಯಮವಾಗಿದೆ.

ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ಒಬ್ಬ ವ್ಯಕ್ತಿಯು ಕಾರನ್ನು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸಿರಬೇಕು. ಇಲ್ಲಿ ಕಾರು ಚಾಲಕನು ಅವನಿಗೆ ವಿಧಿಸಿದ ದಂಡದ ಬಗ್ಗೆ ಗೊಂದಲಕ್ಕೊಳಗಾಗಿದ್ದಾನೆ .ಸಾಮಾನ್ಯವಾಗಿ ಕಾರು ಚಾಲಕರಿಗೆ ಸೀಟ್ ಬೆಲ್ಟ್ ಧರಿಸದೇ, ನೋಂದಣಿ ಪ್ರಮಾಣಪತ್ರಗಳು, ವಿಮೆ ಮತ್ತು ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರಗಳಂತಹ ಅಗತ್ಯ ದಾಖಲೆಗಳನ್ನು ಹೊಂದಿಲ್ಲ, ಸರಿಯಾದ ನೋಂದಣಿ ಫಲಕಗಳನ್ನು ಹೊಂದಿಲ್ಲದಿರುವುದಕ್ಕೆ ದಂಡ ವಿಧಿಸಲಾಗುತ್ತದೆ.

ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ದ್ವಿಚಕ್ರ ವಾಹನ ಸವಾರರು ಕೂಡ ಇದೇ ಕಾರಣಗಳಿಗಾಗಿ ಚಲನ್ ಪಡೆಯುತ್ತಾರೆ, ಆದರೆ ಸೀಟ್ ಬೆಲ್ಟ್ ಬದಲಿಗೆ ಅವರು ಹೆಲ್ಮೆಟ್ ಧರಿಸಬೇಕು. ಈ ಸಂದರ್ಭದಲ್ಲಿ, ಉಲ್ಲೇಖಿಸಿದಂತೆ, ಕಾರು ಚಾಲಕನನ್ನು ಕಾನ್ಪುರದ ಟ್ರಾಫಿಕ್ ಪೋಲಿಸರು ತಪ್ಪಾಗಿ ದಂಡ ವಿಧಿಸಿದ್ದಾರೆ.

ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ಟ್ರಾಫಿಕ್ ಪೋಲಿಸ್ ಕಿರುಕುಳ ನೀಡುತ್ತಿರುವುದು ಇದೇ ಮೊದಲಲ್ಲ. ಕಾರು ಚಲಾಕರಿಗೆ ಹೆಲ್ಮೆಟ್​ ಹಾಕಿಲ್ಲವೆಂದು ದಂಡ ವಿಧಿಸಿದ ಪ್ರಕರಣಗಳು ಹಲವು ಉದಾಹರಣೆಗಳಿವೆ, ಇನ್ನು ಎಲ್ಲ ಅಗತ್ಯ ದಾಖಲೆಗಳು ಹೊಂದಿದ್ದರು ಇತರ ಯಾವುದು ಕಾರಣವನ್ನು ಹೇಳಿ ದಂಡ ವಸೂಲಿ ಮಾಡುವ ಹಲವು ಕಡೆಗಳಲ್ಲಿ ನಡೆಯುತ್ತಿದೆ.

ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ಇನ್ನು ಕಾರು ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವಿದೆ ಆದರೆ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಇಲ್ಲದಿದ್ದರೂ ಪೊಲೀಸರು ದಂಡ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಚಾಲಕ ಈಗ ದಿನವೂ ಹೆಲ್ಮೆಟ್ ಹಾಕಿಕೊಂಡೇ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಚಲಾಯಿಸುತ್ತಿದ್ದಾರೆ.

ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ದೇಶದಲ್ಲೆಡೆ ದಂಡ ವಿಧಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಲಕ್ಷದ ಹತ್ತಿರವರೆಗೂ ದಂಡ ವಿಧಿಸಿರುವ ಉದಾಹರಣೆಗಳಿವೆ. ಈ ಹೊಸ ನಿಯಮದಿಂದ ಸಂಚಾರಿ ನಿಯಮ ಉಲ್ಲಂಘಿಸುವವರ ಜೇಬಿಗೆ ಭಾರೀ ಪ್ರಮಾಣದಲ್ಲಿ ಕತ್ತರಿ ಬೀಳುತ್ತಿರುವುದು ನಿಜ.

ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ಈ ನಿಯಮ ಜಾರಿಗೆ ಬಂದ ಕೆಲವೇ ದಿನಗಳಲ್ಲಿ ಸಂಚಾರಿ ಪೊಲೀಸರು ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿ ದಂಡವನ್ನು ಸಂಗ್ರಹಿಸುತ್ತಿದ್ದಾರೆ. ಇನ್ನು ಮುಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ವಾಹನ ಸವಾರರಿಗೆ 15 ದಿನಗಳಲ್ಲಿ ಇ-ಚಲನ್ (ಎಲೆಕ್ಟ್ರಾನಿಕ್ ಚಲನ್) ಅನ್ನು ನೀಡಲಾಗುವುದು.

ಕೇಂದ್ರ ರಸ್ತೆ ಸಾರಿಗೆ ಇಲಾಖೆಯು ಚಲನ್ ಹಾಗೂ ದಂಡಗಳಿಗೆ ಸಂಬಂಧಿಸಿದ ಪ್ರಕರಣಗಳ ಮೇಲೆ ತ್ವರಿತ ಕ್ರಮಗಳನ್ನು ತೆಗೆದು ಕೊಳ್ಳುವ ಸಲುವಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಎಲೆಕ್ಟ್ರಾನಿಕ್ ಮೇಲ್ವಿಚಾರಣೆ ಮತ್ತು ನಿಯಮಗಳ ಜಾರಿಗಾಗಿ ಇಲಾಖೆಯು ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದೆ.

ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ಹೊಸ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಇನ್ನು ಮುಂದೆ ಟ್ರಾಫಿಕ್ ಮಾನಿಟರಿಂಗ್ ಸಾಧನಗಳಾದ ಪೊಲೀಸ್ ಸ್ಪೀಡ್ ಕ್ಯಾಮೆರಾ, ಕ್ಲೋಸ್ಡ್-ಸರ್ಕ್ಯೂಟ್ ಕ್ಯಾಮೆರಾ, ಸ್ಪೀಡ್ ಗನ್‌, ಬಾಡಿ ವೇರಬಲ್ ಕ್ಯಾಮೆರಾ, ಡ್ಯಾಶ್‌ಬೋರ್ಡ್ ಕ್ಯಾಮೆರಾ, ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಗುರುತಿಸುವಿಕೆ (ಎಎನ್‌ಪಿ‌ಆರ್), ತೂಕದ ಯಂತ್ರಗಳನ್ನು ಬಳಸಬಹುದು. ಒಂದು ದಶ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರಮುಖ ನಗರಗಳಲ್ಲಿ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಸಾಧನಗಳನ್ನು ಸಾಗಿಸಲಾಗಿದೆಯೆ ಎಂಬುದನ್ನು ಖಚಿತ ಪಡಿಸಿಕೊಳ್ಳುವಂತೆ ಕೇಂದ್ರ ಸಾರಿಗೆ ಇಲಾಖೆಯು ರಾಜ್ಯ ಸರ್ಕಾರಗಳನ್ನು ಈಗಾಗಲೇ ಕೇಳಿದೆ.

ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿದ ಪೊಲೀಸರು: ಕಾರು ಚಾಲಕ ಪ್ರತಿಭಟನೆ ನಡೆಸಿದ್ದು ಹೀಗೆ

ದೇಶಾದ್ಯಂತ ಸಂಚಾರ ಉಲ್ಲಂಘನೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸಾರಿಗೆ ಇಲಾಖೆಯು ತನ್ನ ಅಧಿಸೂಚನೆಯಲ್ಲಿ 132 ನಗರಗಳನ್ನು ಸೇರಿಸಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಹದಿನೈದು ದಿನಗಳಲ್ಲಿ ಇ ಚಲನ್ ಅನ್ನು ಸಂಬಂಧಿಸಿದ ವಾಹನ ಸವಾರರಿಗೆ ಕಳುಹಿಸಲಾಗುವುದು. ಹಾಗೂ ಎಲೆಕ್ಟ್ರಾನಿಕ್ ಕಣ್ಗಾವಲಿನ ಮೂಲಕ ಸಂಗ್ರಹಿಸಿದ ಎಲೆಕ್ಟ್ರಾನಿಕ್ ದಾಖಲೆಗಳನ್ನು ಚಲನ್ ವಿಲೇವಾರಿ ಆಗುವವರೆಗೂ ಸಂಗ್ರಹಿಸಲಾಗುವುದು ಎಂದು ಸಾರಿಗೆ ಇಲಾಖೆಯು ಹೇಳಿದೆ.

Most Read Articles

Kannada
English summary
Kanpur man begins wearing helmet after getting fined for driving car without helmet details
Story first published: Saturday, September 11, 2021, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X