Vande Bharat: ಕರ್ನಾಟಕದ 4ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರ ಸಂಚಾರ, 5 ಗಂಟೆ ಪ್ರಯಾಣ.. ಎಲ್ಲಿಂದ, ಎಲ್ಲಿಗೆ?

ಕರ್ನಾಟಕ ಶೀಘ್ರದಲ್ಲಿಯೇ 4ನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express) ರೈಲಿಗೆ ಸಾಕ್ಷಿಯಾಗಲಿದೆ. ಡಿಸೆಂಬರ್ (December) ಅಂತ್ಯದ ವೇಳೆಗೆ ಬೆಂಗಳೂರು (Bengaluru) - ಕೊಯಮತ್ತೂರು (Coimbatore) ನಡುವೆ ಈ ರೈಲು ಸಂಚಾರ ನಡೆಸಲಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕೆಎಸ್ಆರ್ ಬೆಂಗಳೂರು - ಕೊಯಮತ್ತೂರು ಜಂಕ್ಷನ್ ಮಧ್ಯೆ ಸೇಲಂ (Salem) ಮಾರ್ಗವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಓಡಾಟ ನಡೆಸಲು ರೈಲ್ವೆ ಅಧಿಕಾರಿಗಳು ತಾತ್ಕಾಲಿಕ ಒಪ್ಪಿಗೆ ನೀಡಿದ್ದಾರೆ. ಮೂಲಗಳ ಪ್ರಕಾರ, ಈ ರೈಲು 8 ಕೋಚ್‌ಗಳನ್ನು ಒಳಗೊಂಡಿರಲಿದೆ. ಇವೆರೆಡು ನಗರಗಳ ನಡುವೆ ಸೆಮಿ ಹೈ - ಸ್ವೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ನಡೆಸುವ ಸಂಬಂಧ ರೈಲ್ವೆ ಮಂಡಳಿ (Railway Board) ಕಾರ್ಯಸಾಧ್ಯತೆ ವರದಿಯನ್ನು ಕೇಳಿತ್ತು.

Vande Bharat: ಕರ್ನಾಟಕದ 4ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರ ಸಂಚಾರ, 5 ಗಂಟೆ ಪ್ರಯಾಣ.. ಎಲ್ಲಿಂದ, ಎಲ್ಲಿಗೆ?

ಇತ್ತೀಚೆಗೆ ವರದಿಯನ್ನು ಸಲ್ಲಿಸಲಾಗಿದ್ದು, ರೈಲ್ವೆ ಮಂಡಳಿಯ ಅಂತಿಮ ಅನುಮೋದನೆಗೆ ಕಾಯಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ವರದಿಗೆ ಅಧಿಕೃತ ಮುದ್ರೆ ಬಿದ್ದ ಬಳಿಕವೇ ಟಿಕೆಟ್ ದರ, ನಿಲುಗಡೆ ನಿಲ್ದಾಣ ಹಾಗೂ ಪ್ರಯಾಣದ ಸಮಯದ ಬಗ್ಗೆ ಎಲ್ಲ ವಿವರಗಳು ಲಭ್ಯವಾಗಲಿವೆ. ಸದ್ಯ, ಬೆಂಗಳೂರು - ಕೊಯಮತ್ತೂರು ನಡುವಿನ ಅಂತರವನ್ನು ಕ್ರಮಿಸಲು ಈ ಮಾರ್ಗದಲ್ಲಿ ವೇಗದ ರೈಲುಗಳು 6 ಗಂಟೆ 45 ನಿಮಿಷ ತೆಗೆದುಕೊಳ್ಳುತ್ತಿವೆ.

ಇವೆರೆಡು ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಶುರು ಮಾಡಿದ ಮೇಲೆ ಪ್ರಯಾಣದ ಅವಧಿಯು ಕೇವಲ 5 ಗಂಟೆಯಾಗಲಿದೆ. ಸದ್ಯ ಬೆಂಗಳೂರು - ಕೊಯಮತ್ತೂರು ಮಧ್ಯೆ 2 ರೈಲ್ವೆ ಮಾರ್ಗ (Railway Lines) ಇವೆ. ಅವುಗಳೆಂದರೆ, ಹೊಸೂರು ಹಾಗೂ ಸೇಲಂ (379 ಕಿ.ಮೀ), ಕುಪ್ಪಂ ಮತ್ತು ಸೇಲಂ (420 ಕಿ.ಮೀ).

Vande Bharat: ಕರ್ನಾಟಕದ 4ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರ ಸಂಚಾರ, 5 ಗಂಟೆ ಪ್ರಯಾಣ.. ಎಲ್ಲಿಂದ, ಎಲ್ಲಿಗೆ?

ಕೆಎಸ್ಆರ್ ಬೆಂಗಳೂರು - ಕೊಯಮತ್ತೂರು ಜಂಕ್ಷನ್ ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ಯಾವ ಮಾರ್ಗದಲ್ಲಿ ಚಲಿಸುತ್ತದೆ ಎಂಬುದರ ಕುರಿತು ಹೆಚ್ಚಿನ ವಿವರಗಳಿಲ್ಲ. ಕುಪ್ಪಂ ಮತ್ತು ಸೇಲಂ ಮಾರ್ಗ ದ್ವಿಪಥವಾಗಿದ್ದು, ವಿದ್ಯುದ್ದೀಕರಿಣಗೊಳಿಸಲಾಗಿದೆ. ಹೊಸೂರು ಮತ್ತು ಸೇಲಂ ಮಾರ್ಗದಲ್ಲಿ ಸಿಂಗಲ್ ಲೈನ್ ಇದ್ದು, ಬೈಯಪ್ಪನಹಳ್ಳಿ - ಕಾರ್ಮೆಲಾರಂ ಹಾಗೂ ಹೀಲಳಿಗೆ - ಹೊಸೂರು ಭಾಗಗಳಲ್ಲಿ ಡಬಲ್ ಲೈನ್ ಕಾಮಗಾರಿ ನಡೆಯುತ್ತಿದೆ.

ಬೆಂಗಳೂರು - ಕೊಯಮತ್ತೂರು ನಡುವೆ ಓಡಾಟ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ದಕ್ಷಿಣ ರೈಲ್ವೆ (Southern Railway)ಯ ಸೇಲಂ ವಿಭಾಗವು ನಿರ್ವಹಿಸುವ ನೀರಿಕ್ಷೆಯಿದೆ. ಈ ರೈಲು ಬೆಳಗ್ಗೆ ಕೊಯಮತ್ತೂರಿನಿಂದ ಹೊರಟು ಮಧ್ಯಾಹ್ನ ಬೆಂಗಳೂರಿಗೆ ಬರಲಿದೆ. ಕೆಆರ್ ಪುರಂ ಮತ್ತು ಬಂಗಾರಪೇಟೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿಲುಗಡೆ ಮಾಡಬೇಕೆಂದು ಅಲ್ಲಿನ ಸ್ಥಳೀಯರ ಒತ್ತಾಯವಾಗಿದೆ.

ಪ್ರಸ್ತುತ ಕರ್ನಾಟಕದ 3 ಮಾರ್ಗದಲ್ಲಿಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ನಡೆಸುತ್ತಿವೆ. ಬೆಂಗಳೂರು - ಹುಬ್ಬಳ್ಳಿ - ಧಾರವಾಡ, ಚೆನ್ನೈ - ಬೆಂಗಳೂರು - ಮೈಸೂರು, ಹೈದರಾಬಾದ್ ಹಾಗೂ ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಾಟ ನಡೆಸುತ್ತಿದೆ. ಬೆಂಗಳೂರು - ಧಾರವಾಡ ನಡುವೆ ಸಂಚರಿಸುವ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಲಾಗಿದೆ. ಆದರೆ, ಎಂದಿನಿಂದ ಓಡಾಟ ಆರಂಭಿಸಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಮಂಗಳೂರು - ಗೋವಾ ನಡುವೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶಿಘ್ರದಲ್ಲೆಯೇ ಸಂಚಾರವನ್ನು ಶುರು ಮಾಡಲಿದೆ. ಈ ರೈಲುಗಳು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿವೆ. ಆರಾಮದಾಯಕ ಆಸನಗಳು, ಸಂಪೂರ್ಣ ಎಸಿ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಜೈವಿಕ ಶೌಚಾಲಯ, ವೈಫೈ ವ್ಯವಸ್ಥೆ, ಅಗ್ನಿ ನಿರೋಧಕ ಸಾಧನಗಳನ್ನು ಒಳಗೊಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, December 19, 2023, 10:05 [IST]
English summary
Karnataka 4 vande bharat express bengaluru coimbatore start december end 5 hour journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+