ಬಹು ಕೋಟಿ BMW ಕಾರು ಖರೀದಿಸಿದ ರಾಜ್ಯ ಬಿಜೆಪಿ ನಾಯಕ: ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಪೂಜೆ
ಬಿಜೆಪಿ ಮುಖಂಡ, ಉಡುಪಿ - ಚಿಕ್ಕಮಗಳೂರು (Udupi - Chikmagalur) ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ಪ್ರಮೋದ್ ಮಧ್ವರಾಜ್ (Pramod Madhwaraj) ಅವರು, ದುಬಾರಿ ಬೆಲೆಯ ಐಷಾರಾಮಿ ಬಿಎಂಡಬ್ಲ್ಯೂ (BMW) ಕಾರನ್ನು ಖರೀದಿಸಿದ್ದಾರೆ. ಆ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹೊಸ ಕಾರನ್ನು ಬಿಎಂಡಬ್ಲ್ಯೂ ಶೋರೂಂ ಸಿಬ್ಬಂದಿ, ಪ್ರಮೋದ್ ಮಧ್ವರಾಜ್ ಅವರಿಗೆ ಹಸ್ತಾಂತರಿಸಿದ್ದು, ಆ ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ. ನಂತರ ಸುಪ್ರಸಿದ್ದ ಆನೆಗುಡ್ಡೆ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಈ ನೂತನ ಬಿಎಂಡಬ್ಲ್ಯೂ ಕಾರಿಗೆ ಪೂಜೆ ಮಾಡಿಸಿದ್ದಾರೆ. ಪ್ರಮೋದ್ ಮಧ್ವರಾಜ್ ಅವರು, ಖರೀದಿಸಿರುವ ಕಾರು ಬಿಎಂಡಬ್ಲ್ಯೂ ಎಕ್ಸ್ಎಂ (BMW XM) ಎಂದು ವರದಿಯಾಗಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಸಿಗುವ ಬಿಎಂಡಬ್ಲ್ಯೂ ಎಕ್ಸ್ಎಂ ಮಾದರಿ ರೂ.2.60 ಕೋಟಿ ಎಕ್ಸ್ ಶೋರೂಂ ದರವನ್ನು ಹೊಂದಿದೆ. ತೆರಿಗೆ ಎಲ್ಲವೂ ಸೇರಿದಂತೆ ಬೆಂಗಳೂರಿನಲ್ಲಿ ರೂ.3.28 ಕೋಟಿ ಆನ್ - ರೋಡ್ ಬೆಲೆಯಾಗುತ್ತದೆ. ಈ ಕಾರು, ಕೇವಲ 4.3 ಸೆಕೆಂಡುಗಳಲ್ಲಿ 0 -100 km/h ವೇಗವನ್ನು ಪಡೆಯಲಿದ್ದು, 249 kmph ಟಾಪ್ ಸ್ವೀಡ್ ಹೊಂದಿದೆ.
ಬಿಎಂಡಬ್ಲ್ಯೂ ಎಕ್ಸ್ಎಂ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 4.4 - ಲೀಟರ್ ಟ್ವಿನ್ ಟರ್ಬೊ ವಿ8 ಹೈಬ್ರಿಡ್ (ಎಲೆಕ್ಟ್ರಿಕ್ + ಪೆಟ್ರೋಲ್) ಎಂಜಿನ್ ಹೊಂದಿದ್ದು, 653 PS ಗರಿಷ್ಠ ಪವರ್ ಹಾಗೂ 800 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಈ ಎಸ್‌ಯುವಿ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದ್ದು, ಹೈಬ್ರಿಡ್ ಎಂಜಿನ್ ಹೊಂದಿರುವುದರಿಂದ 61.9 kmpl ಮೈಲೇಜ್ ನೀಡುತ್ತದೆ. 5 - 7 ಆಸನ ಆಯ್ಕೆಯನ್ನು ಹೊಂದಿದೆ. ಸುತ್ತಳತೆಯ ವಿಚಾರವಾಗಿ ಹೇಳುವುದಾದರೆ, 5,110 ಎಂಎಂ ಉದ್ದ, 2,210 ಎಂಎಂ ಅಗಲ ಮತ್ತು 3,105 ಎಂಎಂ ವೀಲ್‌ಬೇಸ್ ಹೊಂದಿದೆ. ಗ್ರೌಂಡ್ ಕ್ಲಿಯರೆನ್ಸ್ 220 ಎಂಎಂ ಇದೆ.
ನೂತನ ಬಿಎಂಡಬ್ಲ್ಯೂ ಎಕ್ಸ್ಎಂ ಮಾದರಿ ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 14.9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 12.3 - ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಆಂಬಿಯೆಂಟ್ ಲೈಟಿಂಗ್, 4-ಝೋನ್ ಕ್ಲೈಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್ಪ್ಲೇ, ಬೋವರ್ಸ್ & ವಿಲ್ಕಿನ್ಸ್ 1,500 - ವ್ಯಾಟ್ ಡೈಮಂಡ್ ಸರೌಂಡ್ ಸೌಂಡ್ ಸಿಸ್ಟಮ್ ಅನ್ನು ಪಡೆದಿದೆ.
ಸುರಕ್ಷತೆಗೂ ಈ ಕಾರು ಹೆಸರುವಾಗಿಯಾಗಿದ್ದು, 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), DSC (ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್), 360 - ಡಿಗ್ರಿ ಕ್ಯಾಮೆರಾ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬಿಎಂಡಬ್ಲ್ಯೂ ಎಕ್ಸ್ಎಂ ಮಾದರಿಗೆ ಲಂಬೋರ್ಗಿನಿ ಉರುಸ್, ಆಸ್ಟನ್ ಮಾರ್ಟಿನ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications