ಕರ್ನಾಟಕ ಸಿಎಂ; ಇನ್ನು ನೇರ-ನಡೆ-ನುಡಿಯ ಸಿದ್ದು 'ಕಾರುಬಾರು'
ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ಧರಾಮನಹುಂಡಿಯ ಸಿದ್ದರಾಮಯ್ಯ ಅವರು ಇಂದು (ಸೋಮವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ವಿರೋಧಿ ರಾಜಕಾರಣದಿಂದಲೇ ರಾಜಕೀಯ ರಂಗ ಪ್ರವೇಶ ಮಾಡಿದ್ದ ಸಿದ್ದು ಇದೀಗ ಕಾಂಗ್ರೆಸ್‌ನಿಂದಲೇ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿರುವುದು ಇದೀಗ ಇತಿಹಾಸ.
ನೇರ-ನಡೆ-ನುಡಿಯ ವ್ಯಕ್ತಿಯೆಂದೆ ಹೆಸರುವಾಸಿಯಾಗಿರುವ ಸಿದ್ದು, ರಾಜಕೀಯ ಜೀವನದಲ್ಲಿ ಎರಡು ಬಾರಿ ಉಪಮುಖ್ಯಂತ್ರಿ ಹಾಗೂ ಮೂರು ಬಾರಿ ಹಣಕಾಸು ಸಚಿವರಾಗಿ ಉತ್ತಮವಾದ ಆಯ-ವ್ಯಯವನ್ನು ಕೊಟ್ಟಿರುತ್ತಾರೆ.
ಸಿದ್ಧರಾಮಯ್ಯ ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿ. ಇವರ ತವರು ಜಿಲ್ಲೆ ಮೈಸೂರು. ತಮ್ಮ 35 ವರ್ಷಗಳ ರಾಜಕೀಯ ಜೀವನದಲ್ಲಿ ಜಾತ್ಯತೀತ ಸಮಾಜ, ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು.
1996 ಹಾಗೂ 2004ನೇ ಇಸವಿಯಲ್ಲಿ ಸಿಎಂ ಹುದ್ದೆ ಕೈತಪ್ಪಿ ಹೋದರೂ ಇದೀಗ ಮೂರನೇ ಪ್ರಯತ್ನದಲ್ಲಿ ಸಿಎಂ ಖುರ್ಚಿಯಲ್ಲಿ ಆಸೀನರಾಗಲು ಸಜ್ಜಾಗಿ ನಿಂತಿದ್ದಾರೆ. ಸಿದ್ದರಾಮಯ್ಯ ಮಾತು ಆಹಂಕಾರದ ಶೈಲಿ ಎಂಬ ಟೀಕೆಗಳಿವೆ. ಆದರೆ ಹೇಳಬೇಕಾದ್ದನ್ನು ನೇರವಾಗಿ ಹೇಳಿಬಿಡುವುದು ಅವರ ಹುಟ್ಟುಗುಣವಾಗಿದೆ.
ದಕ್ಷಿಣ ಭಾರತದಲ್ಲಿ ಮಗದೊಮ್ಮೆ ಬಿಜೆಪಿ ವಾಶ್ ಔಟ್ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿದ್ದರಾಮಯ್ಯ ತಮ್ಮ ಮತ ಪ್ರಚಾರವನ್ನು ಅತಿ ಹೆಚ್ಚು ಗಂಭೀರತೆಯಿಂದ ನಿಭಾಯಿಸಿದ್ದರು. ಅಂದ ಹಾಗೆ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಆಡಿ, ಕ್ರೀಡಾ ಯುಟಿಲಿಟಿ ವಾಹನದಲ್ಲಿ ಅವರು ಸಂಚರಿಸುತ್ತಾರೆ.
ಇದರಂತೆ ಇನ್ನು ಮುಂದಿನ ಐದು ವರ್ಷಗಳ ಕಾಲ ರಾಜ್ಯದಲ್ಲಿ ಸಿದ್ದು ಕಾರುಬಾರು ನಡೆಯಲಿದ್ದು, ಉತ್ತಮವಾದ ಆಡಳಿತ ಕೊಡಲು ಸಾಧ್ಯವಾಗಲಿ ಎಂದು ಡ್ರೈವ್ ಸ್ಪಾರ್ಕ್ ಶುಭ ಹಾರೈಸುತ್ತಿದೆ.

ದೇಶದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಐಷಾರಾಮಿ SUV ಅಂದ್ರೆ ಆಡಿ ಕ್ಯೂ7. ದೇಶದ ಹಲವು ಸೆಲೆಬ್ರಿಟಿಗಳು ಆಡಿ ಕ್ಯೂ7 ಕಾರನ್ನು ಈಗಾಗಲೇ ಖರೀದಿಸಿದ್ದಾರೆ. ಈ ಪೈಕಿ ಬಾಲಿವುಡ್‌ನ ಜಾಬ್ ಅಬ್ರಹಾಂ ಹಾಗೂ ಬಿಪಾಶಾ ಬಸು ಪ್ರಮುಖರಾಗಿದ್ದಾರೆ. ಆಡಿ ಕ್ಯೂ7 2007ನೇ ಇಸವಿಯಲ್ಲಿ ಜಾಗತಿಕ ಮಾರುಕಟ್ಟೆಗೆ ಮೊದಲ ಬಾರಿಗೆ ಲಗ್ಗೆಯಿಟ್ಟಿತ್ತು.

ಆಡಿ ಕ್ಯೂ7 ಕಾರಿನ ದರ ಸುಮಾರು 75 ಲಕ್ಷ ರುಪಾಯಿಗಳಾಗಿವೆ. ಇದು ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಪೆಟ್ರೊಲ್ ಆವೃತ್ತಿ ಮೂರು ಲೀಟರ್ ಎಂಜಿನ್ ಹೊಂದಿದೆ. ಡೀಸೆಲ್ ಆವೃತ್ತಿಗಳೆರಡು ಮೂರು ಲೀಟರ್ ಟಿಡಿಐ ಮತ್ತು 4.2 ಲೀಟರ್ ಟಿಡಿಐ ಎಂಜಿನ್ ಹೊಂದಿವೆ.

ಪ್ರಮುಖವಾಗಿಯೂ ಐಷಾರಾಮಿ ಕಾರುಗಳನ್ನು ಇಷ್ಟಪಡುವ ಭಾರತೀಯರಿಗೆ ಆಡಿ ಕ್ಯೂ7 ತಯಾರಿಸಲಾಗಿದೆ. ಹೆಚ್ಚಿನ ಸ್ಥಳವಾಕಾಶ, ಆರಾಮದಾಯಕ ಪಯಣ ಹಾಗೂ ಐಷಾರಾಮಿ ಸೌಲಭ್ಯಗಳು ಕಾರಿನ ವೈಶಿಷ್ಟ್ಯಗಳಾಗಿವೆ.

ರಿಯರ್ ಕ್ಯಾಮೆರಾ ಪಾರ್ಕಿಂಗ್ ಸಿಸ್ಟಂ, ಸುಪಿರೀಯರ್ ಬೋಸ್ ಸೌರಂಡ್ ಆಡಿಯೋ ಸಿಸ್ಟಂ, ರೆಡಿಯೋ ಎಫ್‌ಎಂ, ಆಕ್ಸ್-ಇನ್, ಯುಎಸ್‌ಬಿ, ಬ್ಲೂಟೂತ್, ಆಟೋಮ್ಯಾಟಿಕ್ ಎಸಿಗಳಂತಹ ಆಕರ್ಷಕ ಫೀಚರ್ಸ್‌ಗಳು ಖರೀದಿಗಾರರ ಗಮನ ಸೆಳೆಯುತ್ತಿದೆ.

ಆಡಿ ಕ್ಯೂ7 ಕಾರಿನಲ್ಲಿ ಭದ್ರತೆಗೂ ಹೆಚ್ಚಿನ ಮಹತ್ವ ಕೊಡಲಾಗಿದೆ. ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜತೆಗೆ ಎಲೆಕ್ಟ್ರಿಕ್ ಬ್ರೇಕ್ ಫೋರ್ಸ್ ವಿತರಣೆ, ಟ್ರಾಕ್ಷನ್ ಕಂಟ್ರೋಲ್, ಆಂಟಿ ಸ್ಲಿಪ್ ರೆಗ್ಯೂಲೆಷನ್ ಕೂಡಾ ಒಳಗೊಂಡಿದೆ. 18 ಇಂಚು ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 17 ಇಂಚು ವೆಂಟಿಲೇಟಡ್ ಡಿಸ್ಕ್ ಬ್ರೇಕ್ ಕಾರು ಹ್ಯಾಂಡ್ಲಿಂಗ್ ಸುಲಲಿತವಾಗಿಸಿದೆ. ಇದರಲ್ಲಿ ವಿದ್ಯುತ್ ನಿಯಂತ್ರಿತ ಸಸ್ಷೆಷನ್ ಕೂಡಾ ಇದೆ. ಕಾರು ಒಟ್ಟು 2.5 ಟನ್ ಭಾರವಿದ್ದು, ದೇಶ ಹಾಗೂ ವಿಶ್ವದಲ್ಲೇ ಅತಿ ಹೆಚ್ಚು ತೂಕದ ಎಸ್‌ಯುವಿ ಪಟ್ಟ ಪಡೆದಿದೆ.

ಇನ್ನು CRDi ಇಂಧನ ಸರಬರಾಜು ವ್ಯವಸ್ಥೆ ಹೊಂದಿರುವ ಆಡಿ ಕ್ಯೂ7ನ 3.0 ಲೀಟರ್ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 12.07 ಕೀ.ಮೀ. ಹಾಗೂ 4.2 ಡೀಸೆಲ್ ಎಂಜಿನ್ 10.87 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 12.07 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವನ್ನು ಪಡೆದುಕೊಳ್ಳಲಾಗಿದೆ. ಇನ್ನು ಗರಿಷ್ಠ ವೇಗ ಪ್ರತಿ ಗಂಟೆಗೆ 215 ಕೀ.ಮೀ. ಆಗಿದೆ.

ಆಡಿ ಎಕ್ಸ್‌ಟೀರಿಯರ್ ಡಿಸೈನ್ ಆಕರ್ಷಕವಾಗಿದೆ. ದೊಡ್ಡದಾದ ಏರೋಡೈನಾಮಿಕ್ ದೇಹ ರಚನೆ ಹಾಗೂ ಬೃಹತಾಕಾರಾದ ಫ್ರಂಟ್ ಗ್ರಿಲ್ ಕಾರಿನ ಅಂದತೆಯನ್ನು ಹೆಚ್ಚಿಸಿದೆ. ಇನ್ನು ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಭಾರತೀಯ ರಸ್ತೆಗಳಲ್ಲಿ ಮಿನುಗು ತಾರೆ ಎನಿಸಿಕೊಳ್ಳಲಿದೆ. ಮ್ಯಾಸಿವ್ ಬಾಡಿ ಕಲರ್ ಫ್ರಂಟ್ ಬಂಪರ್, ವೃತ್ತಕಾರಾದ ಫಾಗ್ ಲ್ಯಾಂಪ್ ಯಾವುದೇ ಹವಾಮಾನ ಪರಿಸ್ಥಿತಿಯಲ್ಲಿ ಕಾರಿನ ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಇದರಲ್ಲಿ ಸ್ಪೇರ್ ವೀಲ್ ಕೂಡಾ ಸೌಲಭ್ಯವಿದೆ.

ಆಡಿ ಕ್ಯೂ7 ಐಷಾರಾಮಿ ಲುಕ್

ಆಡಿ ಕ್ಯೂ7 ಐಷಾರಾಮಿ ಲುಕ್

ಆಡಿ ಕ್ಯೂ7 ಐಷಾರಾಮಿ ಲುಕ್

ಆಡಿ ಕ್ಯೂ7 ಐಷಾರಾಮಿ ಲುಕ್

ಆಡಿ ಕ್ಯೂ7 ಐಷಾರಾಮಿ ಲುಕ್

ಆಡಿ ಕ್ಯೂ7 ಐಷಾರಾಮಿ ಲುಕ್



Click it and Unblock the Notifications








