ಟೊಮೆಟೊ ಮಾರಿ ದುಬಾರಿ ಮಹೀಂದ್ರಾ ಕಾರು ಖರೀದಿ: ರೈತನಿಗೆ ಹೆಣ್ಣು ಕೊಡೋಲ್ಲ ಅನ್ನುವವರೇ ಈಗ ಏನಂತೀರಾ?

ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಟೊಮೆಟೊ ಬೆಳೆದ ಲ್ಲ ರೈತರೂ ಕೂಡ ಲಕ್ಷಾಧಿಪತಿಗಳಾಗಿದ್ದಾರೆ. ಚಾಮರಾಜನಗರದ ಲಕ್ಷ್ಮೀಪುರ ಎಂಬ ಹಳ್ಳಿಯ ರಾಜೇಶ್ ಎಂಬ ರೈತ ತನ್ನ 12 ಹೊಲದಲ್ಲಿ ಟೊಮೆಟೊ ಬೆಳೆದು ಕಳೆದ ಆರು ತಿಂಗಳಲ್ಲಿ ಬರೊಬ್ಬರಿ ರೂ.1 ಕೋಟಿ ಗಳಿಸಿದ್ದಾರೆ. ಇದರಲ್ಲಿ ತಮ್ಮೆಲ್ಲಾ ಖರ್ಚು ವೆಚ್ಚಗಳನ್ನು ಕಳೆದು ಹೊಸ ಐಷಾರಾಮಿ ಮಹಿಂದ್ರಾ ಕಾರನ್ನು ಖರೀದಿಸಿದ್ದಾರೆ.

ಹಳ್ಳಿಯ ರೈತ (Farmer) ರಾಜೇಶ್ ಹೊಸ ಮಹೀಂದ್ರಾ XUV700 (Mahindra XUV700) ಎಸ್‍ಯುವಿಯನ್ನು ಖರೀದಿಸುವುದರ ಹಿಂದೆ ಒಂದು ಸ್ವಾಭಿಮಾನದ ಕಥೆಯಿದೆ. ರಾಜ್ಯದಲ್ಲಿ ರೈತಾಪಿ ವರ್ಗದ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಇದೇ ರಿತಿ ತ ರಾಜೇಶ್ ಕೂಡ ಹೆಣ್ಣು ನೋಡಲು ಹೋದಾಗ ರೈತ ಎಂದು ಗೊತ್ತಾದಾಗ ಯಾರೂ ಹೆಣ್ಣುಕೊಡಲು ಮುಂದೆ ಬಂದಿರಲಿಲ್ಲ. ಅವರಿಗೆ ಸೆಡ್ಡು ಹೊಡೆಯುವುದಕ್ಕೋಸ್ಕರ ಈಗ ಈ ರೈತ ಕಾರು ಖರೀದಿ ಮಾಡಿದ್ದಾರೆ.

Tomatoes

ರಾಜೇಶ್ ತನ್ನ ಹೊಲದಲ್ಲಿ ಕಳೆದ ಆರೇಳು ವರ್ಷಗಳಿಂದ ಟೊಮೆಟೊ ಬೇಸಾಯ ಮಾಡಿಕೊಂಡಿದ್ದಾನೆ. ಕಳೆದ ಒಂದೆರಡು ವರ್ಷಗಳಿಂದ ಈತನ ಮನೆಯವರು ಈತನಿಗೆ ಹೆಣ್ಣು ನೋಡಲು ಪ್ರಯತ್ನಿಸುತ್ತಿದ್ದರು. ಆದರೆ, ರೈತ ಎಂಬ ಕಾರಣಕ್ಕೆ ಇವರನ್ನು ನಿರಾಕರಿಸುತ್ತಿದ್ದರು. ರಾಜೇಶ್ ಹೆಣ್ಣು ಕೇಳುವುದಕ್ಕೆ ಬೈಕ್‌ನಲ್ಲಿ ಹೋದಾಗ ರೈತನಿಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳಿದ್ದರು. ಈ ಮಾತು ಕೇಳಿ ದುಃಖದಿಂದ ಕೂರುಗಿ ಕೂರಲಿಲ್ಲ.

ಅವಮಾನವನ್ನೇ ಸವಾಲಾಗಿ ಸ್ವೀಕರಿಸಿ 12 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದಾನೆ. 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆಗೆ ಬಂಪರ್ ಬೆಲೆ ಲಭಿಸಿದೆ. ಕಳೆದ ಆರು ತಿಂಗಳಲ್ಲಿ ಹಂತಹಂತವಾಗಿ ಮಾಡಿದ ಟೊಮೊಟೊ ವ್ಯಾಪಾರದಿಂದಾಗಿ ರೂ.1 ಕೋಟಿಗಿಂತ ಅಧಿಕ ಆದಾಯ ಗಳಿಸಿದ್ದಾರೆ. ಇವರಿಗೆ ಬಂದ ಅದಾಯದಲ್ಲಿ ಕೈ ಸಾಲಗಳು, ಬ್ಯಾಂಕ್ ಸಾಲಗಳು, ಖರ್ಚುಗಳು ಎಲ್ಲವನ್ನೂ ಕಳೆದು ಉಳಿದ ದುಡ್ಡಿನಲ್ಲಿ ಒಂದಿಷ್ಟು ಹಣವನ್ನು ಸೇವಿಂಗ್ಸ್ ಮಾಡಿ ಇಟ್ಟಿದ್ದಾರೆ.

Mahindra XUV700

ನಂತರ ಉಳಿದ ಹಣದಲ್ಲಿ ದುಬಾರಿ ಮಹೀಂದ್ರಾ XUV700 ಎಸ್‍ಯುವಿ ಖರೀದಿಸಿದ್ದಾರೆ. ಈ ಮಹೀಂದ್ರಾ XUV700 ಎಸ್‍ಯುವಿ ಬಗ್ಗೆ ಹೇಳುವುದಾದರೆ, ಮಹೀಂದ್ರಾ ಕಂಪನಿ XUV700 ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಅಂದಿನಿಂದ ಇಂದಿನವರೆಗೆ ಕೇವಲ 20 ತಿಂಗಳಲ್ಲಿ ಬರೋಬ್ಬರಿ ಒಂದು ಲಕ್ಷ ಕಾರುಗಳನ್ನು ವಿತರಣೆ ಮಾಡಿ, ದೊಡ್ಡದೊಂದು ದಾಖಲೆ ಮಾಡಿದೆ.

ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಲಾಂಚ್ ಆಗಿ ಮೊದಲ 12 ತಿಂಗಳಲ್ಲಿಯೇ ಕಂಪನಿಯು 50,000 ಯುನಿಟ್ XUV700 ಎಸ್‌ಯುವಿಗಳನ್ನು ಡಿಲೆವರಿ ಮಾಡಿತ್ತು. ಅಂತೂ ಒಂದು ಲಕ್ಷ ಕಾರುಗಳನ್ನು ವಿತರಣೆ ಮಾಡಿ, ಸಖತ್ ಜೋಶ್ ನಲ್ಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಡಿಲೆವರಿಯನ್ನು ವೇಗಗೊಳಿಸಲು ಹೆಚ್ಚಿನ XUV700 ಎಸ್‌ಯುವಿಗಳನ್ನು ಉತ್ಪಾದನೆ ಮಾಡಲು ನಿರ್ಧರಿಸಿದೆ. ಈ ಕಾರನ್ನು ಗ್ರಾಹಕರು, ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಯಾಗಲು ಒಂದಷ್ಟು ತಿಂಗಳು ಕಾಯಲೇಬೇಕು.

ಇನ್ನು ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ XUV700 ಎಸ್‌ಯುವಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಪ್ರಮುಖವಾಗಿ ಡೀಸೆಲ್ ಎಂಜಿನ್ ಚಾಲಿತ ರೂಪಾಂತರ ಜಿಪ್, ಜ್ಯಾಪ್, ಜೂಮ್ ಮತ್ತು ಕಸ್ಟಮ್ ಎಂಬ ಡ್ರೈವ್ ಮೋಡ್ ಹೊಂದಿದೆ. ಇದರ 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 hp ಪವರ್, 380 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಮತ್ತೊಂದು 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 155 hp ಪವರ್, 360 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಇವೆರೆಡು ಎಂಜಿನ್ 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿವೆ. ಸುರಕ್ಷತೆಯ ದೃಷ್ಟಿಯಿಂದ ಮಹೀಂದ್ರಾ XUV700 ಅತ್ಯುತ್ತಮ ಎಸ್‌ಯುವಿ ಎಂದು ಖ್ಯಾತಿಗಳಿಸಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ.

ಮಹೀಂದ್ರಾ XUV700 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕರ್ಸ್, TPMS ( ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಮಹೀಂದ್ರಾ XUV700 ಎಸ್‌ಯುವಿ ಯುವ ಗ್ರಾಹಕರನ್ನು ಆಕರ್ಷಿಸುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ ಡಿಜಿಟಲ್ ಸ್ಕ್ರೀನ್ಸ್, ಅತ್ಯಾಧುನಿಕ ಸನ್ ರೂಫ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.

Article Published On: Monday, August 7, 2023, 18:36 [IST]
English summary
Karnataka farmer buys mahindra xuv700 suv after selling tomatoes details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+