ಎಲೆಕ್ಟ್ರಿಕ್ ವಾಹನ ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸಿದ ಸಿದ್ದು ಸರ್ಕಾರ: ಕಾರಣವೇನು?

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನ ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್ ಮಹಿಳೆಯರಿಗೆ ಸುರಕ್ಷಿತವಲ್ಲ, ಜೊತೆಗೆ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ, ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಹೇಳಿ ಕರ್ನಾಟಕ ಸರ್ಕಾರ ಈ ಎಲೆಕ್ಟ್ರಿಕ್ ಟ್ಯಾಕ್ಸಿ ಯೋಜನೆ 2021 ಅನ್ನು ರದ್ದುಗೊಳಿಸಿದೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ವರದಿಯನ್ನು ಉಲ್ಲೇಖಿಸಿ ರಾಜ್ಯ ಸಾರಿಗೆ ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಪ್ರಸ್ತುತ, ಕೆಲವು ಖಾಸಗಿ ಅಪ್ಲಿಕೇಶನ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಇದರಲ್ಲಿ ಹೇಳಲಾಗಿದೆ.

karnataka-government-cancels-electric-vehicle-taxi-service-details

ಈ ಕುರಿತು ಈ ಹಿಂದೆಯೇ ಹಲವರು ಪ್ರಕರಣಗಳು ಕಾಣಿಸಿಕೊಂಡಿವೆ. ಖಾಸಗಿ ಸಾರಿಗೆ ವಲಯದಲ್ಲಿ, ಇತರ ಆಟೋ ರಿಕ್ಷಾ, ಟ್ಯಾಕ್ಸಿ ಕ್ಯಾಬ್ ಮತ್ತು ಟ್ಯಾಕ್ಸಿ ಸಂಘಗಳು / ಚಾಲಕರು, ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ಅನೇಕ ಸಂಘರ್ಷಗಳು, ಮೊಕದ್ದಮೆಗಳು ದಾಖಲಾಗಿವೆ. ಜೊತೆಗೆ ಸಾರಿಗೆಯೇತರ ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ಅಕ್ರಮವಾಗಿ ಬಳಸುತ್ತಿರುವುದು ಕಂಡುಬಂದಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದರ ಪರಿಣಾಮವಾಗಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ. ಈ ಯೋಜನೆ ಮಹಿಳೆಯರಿಗೆ ಅಸುರಕ್ಷಿತವಾಗಿದೆ. ಈ ಯೋಜನೆಯು ಸಾರಿಗೆ ಇಲಾಖೆಗೆ ಆದಾಯ ಮತ್ತು ಪ್ರಚಾರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಕಷ್ಟಕರವಾಗಿದೆ. ಎಲ್ಲವನ್ನು ನಿಯಂತ್ರಣಕ್ಕೆ ತರಬೇಕಾದರೆ ಈ ಕ್ರಮವು ಅನಿವಾರ್ಯ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

karnataka-government-cancels-electric-vehicle-taxi-service-details

ಓಲಾ, ಉಬರ್ ಮತ್ತು ರ್ಯಾಪಿಡೊ ರಾಜ್ಯದಲ್ಲಿ ಬೈಕ್ - ಟ್ಯಾಕ್ಸಿ ಸೇವೆಗಳನ್ನು ನಡೆಸುವ ರೈಡ್ - ಹೇಲಿಂಗ್ ಪ್ಲಾಟ್ ಫಾರ್ಮ್‌ಗಳಾಗಿವೆ. ಕಳೆದ ವರ್ಷ ಓಲಾ ತನ್ನ ಬೈಕ್ ಟ್ಯಾಕ್ಸಿಯನ್ನು ಸಂಪೂರ್ಣ ಎಲೆಕ್ಟ್ರಿಕ್ ಆಗಿ ಪ್ರಾರಂಭಿಸಿತು. ಈ ಮಧ್ಯೆ, ರ್ಯಾಪಿಡೊ ಮತ್ತು ಉಬರ್ ಕೂಡ ಎಲೆಕ್ಟ್ರಿಕ್ ಬೈಕ್‌ಗಳು ಮತ್ತು ಇಂಧನ ಚಾಲಿತ ಬೈಕ್‌ಗಳನ್ನು ಓಡಿಸುತ್ತಿವೆ. ಸದ್ಯ ರ್ಯಾಪಿಡೊ ಈ ವಿಭಾಗದಲ್ಲಿ ಟಾಪ್‌ನಲ್ಲಿದೆ.

ರ್ಯಾಪಿಡೊ ಕೇವಲ ಕರ್ನಾಟಕ ಮಾತ್ರವಲ್ಲದೇ ಭಾರತದ ಇತರ ರಾಜ್ಯಗಳಲ್ಲೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದ್ದು, ಶೇ60 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇನ್ನು ಬೈಕ್ ಟ್ಯಾಕ್ಸಿ ವಿಭಾಗಕ್ಕೆ ಕರ್ನಾಟಕವು ಅತಿದೊಡ್ಡ ಮಾರುಕಟ್ಟೆಯಾಗಿ ಉಳಿದಿದೆ. ಇದೀಗ ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶಕ್ಕೆ ರ್ಯಾಪಿಡೊ ವಕ್ತಾರರು ಪ್ರತಿಕ್ರಿಯಿಸಿ, ಆದೇಶವು ನಮ್ಮ ಬೈಕ್ ಟ್ಯಾಕ್ಸಿಗೆ ಸಂಬಂಧಿಸಿಲ್ಲ. ಎಂದಿನಂತೆ ರ್ಯಾಪಿಡೊ ಸೇವೆ ಸಲ್ಲಿಸಲಿದೆ ಎಂದು ಹೇಳಿದ್ದರು.

karnataka-government-cancels-electric-vehicle-taxi-service-details

ಇತ್ತ ಓಲಾ ಹಾಗೂ ಊಬರ್ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇನ್ನು ಅಕ್ರಮ ಬೈಕ್ ಟ್ಯಾಕ್ಸಿ ಸೇವೆಗಳನ್ನು ಕೊನೆಗೊಳಿಸುವುದಾಗಿ ಸರ್ಕಾರ ಹೇಳಿದೆಯಾದ್ರೂ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಕರ್ನಾಟಕ ಹೈಕೋರ್ಟ್‌ನಲ್ಲಿ ರ್ಯಾಪಿಡೊಗೆ ಸಂಬಧಿಸಿದ ಪ್ರಕರಣಗಳನ್ನು ಮೊದಲು ವಿಲೇವಾರಿ ಮಾಡಬೇಕಿದೆ. ಬೈಕ್ ಟ್ಯಾಕ್ಸಿಗಳ ಕುರಿತು ನಿಮ್ಮ ಅಭಿಪ್ರಯಾಗಳನ್ನು ಕಮೆಂಟ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, March 9, 2024, 17:57 [IST]
English summary
Karnataka government cancels electric vehicle taxi service details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+