ಇಲ್ಲಿಂದ ಹೊರಡಲಿವೆ ಪಲ್ಲಕ್ಕಿ ನಾನ್-ಎಸಿ ಬಸ್‌ಗಳು.. ಬೇಗ ನಿಮ್ಮೂರಿಗೆ ಹೋಗಬಹುದು, ಕಡಿಮೆ ಟಿಕೆಟ್ ಖರ್ಚು!

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ - NWKRTC) ತನ್ನ ಪ್ರಯಾಣಿಕರಿಗೆ ದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ. ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಮಾರ್ಗಗಳಲ್ಲಿ ಪಲ್ಲಕ್ಕಿ ನಾನ್-ಎಸಿ ಸ್ಲೀಪರ್ ಬಸ್‌ ಸೇವೆಯನ್ನು ಆರಂಭಿಸಿದೆ. ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಕೂಡ ಪೋಸ್ಟ್ ಮಾಡಿದೆ.

ಹುಬ್ಬಳ್ಳಿ-ಶಿರಡಿ, ಬೆಳಗಾವಿ-ಲಾತೂರ್, ರಾಮದುರ್ಗ-ಬೆಂಗಳೂರು, ಮುರುಡೇಶ್ವರ-ಬೆಂಗಳೂರು ಹಾಗೂ ಬೀಳಗಿ-ಬೆಂಗಳೂರು ನಡುವೆ ಎನ್‌ಡಬ್ಲ್ಯೂಕೆಆರ್‌ಟಿಸಿಯ ಪಲ್ಲಕ್ಕಿ (Pallakki) ನಾನ್-ಎಸಿ ಸ್ಲೀಪರ್ ಬಸ್‌ಗಳು ಸಂಚಾರವನ್ನು ನಡೆಸಲಿವೆ. ಹುಬ್ಬಳ್ಳಿಯಿಂದ ರಾತ್ರಿ 8.08ಕ್ಕೆ ಹೊರಡುವ ಈ ಬಸ್, ಮರುದಿನ ಬೆಳಗ್ಗೆ 8.44ರ ಸುಮಾರಿಗೆ ಶಿರಡಿಯನ್ನು ತಲುಪುತ್ತದೆ. ಧಾರವಾಡ, ಬೆಳಗಾವಿ, ಪುಣೆ ಹಾಗೂ ಅಹಮದ್ ನಗರ ಮಾರ್ಗವಾಗಿ ಹೋಗುತ್ತದೆ.

Karnataka NWKRTC Starts Pallakki Bus Service Five routes Low Ticket Price

ಶಿರಡಿಯಿಂದ ರಾತ್ರಿ 8 ಗಂಟೆಗೆ ಸಂಚಾರವನ್ನು ಆರಂಭಿಸಲಿದ್ದು, ಬೆಳಗ್ಗೆ 8.45ರ ಸುಮಾರಿಗೆ ಹುಬ್ಬಳ್ಳಿಗೆ ಬರುತ್ತದೆ. ರೂ.1300 ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ. ಬೆಳಗಾವಿ-ಲಾತೂರ್ ಮಧ್ಯೆ ಕಾರ್ಯಾಚರಣೆಯನ್ನು ನಡೆಸುವ ಪಲ್ಲಕ್ಕಿ ಬಸ್, ಬೆಳಗಾವಿಯಿಂದ ರಾತ್ರಿ 8 ಗಂಟೆಗೆ ಹೊರಡಲಿದೆ. ಬೆಳಗ್ಗೆ 6.20ಕ್ಕೆ ಲಾತೂರ್ ತಲುಪುತ್ತದೆ. ಲೋಕಾಪುರ, ಜಮಖಂಡಿ, ವಿಜಯಪುರ, ಸೊಲ್ಲಾಪುರ, ತುಳಜಾಪುರ ಮಾರ್ಗವಾಗಿ ಸಂಚರಿಸುತ್ತದೆ.

ಲಾತೂರ್ ನಿಂದ 7.30ಕ್ಕೆ ಪ್ರಯಾಣವನ್ನು ಶುರು ಮಾಡಲಿದ್ದು, ಬೆಳಗ್ಗೆ 5.30ರ ಸುಮಾರಿಗೆ ಬೆಳಗಾವಿಗೆ ಬರುತ್ತದೆ. ಟಿಕೆಟ್ ವೊಂದಕ್ಕೆ ರೂ.924 ದರವಿದೆ. ರಾಮದುರ್ಗ-ಬೆಂಗಳೂರು ಮಾರ್ಗದಲ್ಲಿ ಕೂಡ ಪಲ್ಲಕ್ಕಿ ಬಸ್ ಓಡಾಟವನ್ನು ನಡೆಸುತ್ತಿದ್ದು, ರಾತ್ರಿ, 8.03ಕ್ಕೆ ರಾಮದುರ್ಗ ನಿಲ್ದಾಣದಿಂದ ಸಂಚಾರವನ್ನು ಆರಂಭಿಸಲಿದೆ. ಮರುದಿನ ಬೆಳಗ್ಗೆ 6.20ರ ಸುಮಾರಿಗೆ ಬೆಂಗಳೂರನ್ನು ತಲುಪುತ್ತದೆ. ನರಗುಂದ, ನವಲಗುಂದ, ಹುಬ್ಬಳ್ಳಿ, ಹಾವೇರಿ ಹಾಗೂ ರಾಣೇಬೆನ್ನೂರು ಮುಖಾಂತರ ಚಲಿಸುತ್ತದೆ.

ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಡಲಿದ್ದು, ರಾಮದುರ್ಗಕ್ಕೆ ಬೆಳಗ್ಗೆ 7.30ರ ಸುಮಾರಿಗೆ ಬರುತ್ತದೆ. ರೂ.1070 ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಎನ್‌ಡಬ್ಲ್ಯೂಕೆಆರ್‌ಟಿಸಿ ಮುರುಡೇಶ್ವರ-ಬೆಂಗಳೂರು ಮಾರ್ಗವಾಗಿಯೂ ಪಲ್ಲಕ್ಕಿ ಬಸ್ ಸೇವೆಯನ್ನು ಒದಗಿಸುತ್ತಿದೆ. ಈ ಬಸ್, ಸಂಜೆ 7.15ಕ್ಕೆ ಮುರುಡೇಶ್ವರದಿಂದ ಹೊರಡಲಿದೆ.ಮರುದಿನ ಬೆಳಗ್ಗೆ 6.30ರ ಸುಮಾರಿಗೆ ಬೆಂಗಳೂರನ್ನು ತಲುಪುತ್ತದೆ.

ಬೆಂಗಳೂರಿನಿಂದ ಸಂಜೆ 7.15ಕ್ಕೆ ಸಂಚಾರವನ್ನು ಪ್ರಾರಂಭಿಸಲಿದ್ದು, ಬೆಳಗ್ಗೆ 7ರ ಸುಮಾರಿಗೆ ಮುರುಡೇಶ್ವರಕ್ಕೆ ಹೋಗುತ್ತದೆ. ಭಟ್ಕಳ, ಬೈಂದೂರು, ಕೊಲ್ಲೂರು, ಹೊಸನಗರ ಮಾರ್ಗವಾಗಿ ಚಲಿಸಲಿದ್ದು, ರೂ.1018 ಪ್ರಯಾಣ ದರವಿದೆ. ಬೀಳಗಿ-ಬೆಂಗಳೂರು ಮಾರ್ಗವಾಗಿಯೂ ಪಲ್ಲಕ್ಕಿ ಬಸ್ ಓಡಾಟವನ್ನು ಮಾಡುತ್ತಿದೆ. ಸಂಜೆ 7.13ಕ್ಕೆ ಬೀಳಗಿಯಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6 ಗಂಟೆಗೆ ಬೆಂಗಳೂರಿಗೆ ತೆರಳುತ್ತದೆ.

ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಸಂಚಾರವನ್ನು ಆರಂಭಿಸಲಿದ್ದು, ಬೆಳಗ್ಗೆ 7.45ಕ್ಕೆ ಬೀಳಗಿಯನ್ನು ತಲುಪುತ್ತದೆ. ಗದ್ದನಕೇರಿ ಕ್ರಾಸ್, ಬಾಗಲಕೋಟೆ, ಹುನಗುಂದ, ಇಳಕಲ್, ಕುಷ್ಟಗಿ ಮಾರ್ಗವಾಗಿ ಓಡಾಟವನ್ನು ನಡೆಸಲಿದ್ದು, ಟಿಕೆಟ್ ವೊಂದಕ್ಕೆ ರೂ.897 ದರವನ್ನು ನಿಗದಿಸಪಡಿಸಲಾಗಿದೆ. ಪ್ರಯಾಣಿಕರು https://www.ksrtc.in/oprs-web/ ವೆಬ್‌ಸೈಟ್‌ಗೆ ಭೇಟಿ ನೀಡಿ ಆಸನವನ್ನು ಕಾಯ್ದಿರಿಸಬಹುದು.

ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಬಸ್‌ಗಳು 30 ಬರ್ತ್‌ ಗಳನ್ನು ಹೊಂದಿವೆ. ಈ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇವು ವಿಶೇಷ ಅಗ್ನಿ ನಿರೋಧಕ ಸಾಧನವನ್ನು ಪಡೆದಿವೆ. ಜೊತೆಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಪೋರ್ಟ್‌ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 29, 2024, 18:16 [IST]
English summary
Karnataka nwkrtc starts pallakki bus service five routes low ticket price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+