Vande Bharat Express: ಕರ್ನಾಟಕದ ಈ ಮಾರ್ಗಗಳಲ್ಲಿ ಶೀಘ್ರ ವಂದೇ ಭಾರತ್ ಸಂಚಾರ, ನಿಮ್ಮ ಊರಿಗೂ ಬರುತ್ತೆ!
ಕರ್ನಾಟಕ (Karnataka) ಶೀಘ್ರದಲ್ಲಿಯೇ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express)ಗೆ ಸಾಕ್ಷಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ವರ್ಷ ಅಂತ್ಯದೊಳಗೆ ಹೊಸ ರೈಲುಗಳು ಸಂಚಾರ ಆರಂಭಿಸಲಿವೆ. ರಾಜ್ಯದ ಯಾವ ಮಾರ್ಗದಲ್ಲಿ ಓಡಾಟ ನಡೆಸುವ ಸಾಧ್ಯತೆಯಿದೆ ಎಂಬುದರ ಬಗ್ಗೆ ತಿಳಿಯೋಣ.
ಬೆಂಗಳೂರು - ಹೈದರಾಬಾದ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಈ ರೈಲು, ಕಲಬುರಗಿಯ ಸೇಡಂ ಮತ್ತು ರಾಯಚೂರು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಇವೆರೆಡು ಐಟಿ ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಆರಂಭಿಸುವುದರಿಂದ 618 ಕಿಲೋಮೀಟರ್ ದೂರವನ್ನು ಕೇವಲ 7 - 8 ಗಂಟೆಗಳಲ್ಲಿ ಕ್ರಮಿಸಬಹುದು ಎಂದು ಹೇಳಲಾಗಿದೆ.

ಸದ್ಯ, ಹೈದರಾಬಾದ್ - ಬೆಂಗಳೂರು ಮಧ್ಯೆ ಓಡಾಟ ನಡೆಸುವ ಸಾಮಾನ್ಯ ರೈಲುಗಳು, ಏನಿಲ್ಲ ಅಂದರೂ 11 - 12 ಗಂಟೆ ತೆಗೆದುಕೊಳ್ಳುತ್ತವೆ. ಈ ಮಾರ್ಗದಲ್ಲಿ ಸಂಚರಿಸುವ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, 16 ಬೋಗಿಗಳನ್ನು ಹೊಂದಿರಲಿದೆ. ಅದರಲ್ಲಿ 2 ಎಕ್ಸಿಕ್ಯೂಟಿವ್ ಉಳಿವು ಸಾಮಾನ್ಯ ಬೋಗಿಗಳು. ಈ ರೈಲು ಇಂದಿನಿಂದ ಕಾರ್ಯಚರಣೆ ಶುರು ಮಾಡಲಿದೆ. ಟಿಕೆಟ್ ದರಗಳು ಎಷ್ಟಿರಲಿದೆ. ಎಲ್ಲಿ ನಿಲುಗಡೆಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ತಿರುವನಂತಪುರಂ ಹಾಗೂ ಮಂಗಳೂರು ನಗರದ ಮಧ್ಯೆ ಶೀಘ್ರದಲ್ಲಿಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ಆರಂಭ ಮಾಡಲಿದೆ. ಪ್ರಸ್ತುತ, ತಿರುವನಂತಪುರಂ - ಕಾಸರಗೋಡು ನಡುವೆ ಈ ರೈಲು ಕಾರ್ಯಚರಣೆ ನಡೆಸುತ್ತಿದ್ದು, ಅದನ್ನು ಮಂಗಳೂರು ತನಕ ವಿಸ್ತರಣೆ ಮಾಡಲಾಗುತ್ತದೆ. ಇದಕ್ಕಾಗಿ, ರೈಲ್ವೆ ಇಲಾಖೆ ಅಗತ್ಯ ಸಿದ್ಧತೆ ನಡೆಸಿದ್ದು, ಲೋಕೋ ಪೈಲೆಟ್ ಗಳಿಗೂ ತರಬೇತಿ ಆರಂಭಿಸಲಾಗಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.
ಜುಲೈ ತಿಂಗಳು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್, 'ವಿದ್ಯುದ್ದೀಕರಣ ಕಾಮಗಾರಿ ಮುಗಿದ ಬಳಿಕ, ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಸಂಚಾರಿಸಲಿದೆ. ಜೊತೆಗೆ ಮಂಗಳೂರು-ಗೋವಾ ನಡುವೆಯೂ ಓಡಾಟ ನಡೆಸಲು ರೈಲ್ವೆ ಇಲಾಖೆ ಅನುಮತಿ ಕೊಟ್ಟಿದೆ' ಎಂದಿದ್ದರು. ಸದ್ಯ, ಬೆಂಗಳೂರಿನಿಂದ ರಾತ್ರಿ 8.15ಕ್ಕೆ ಸಂಚಾರ ಆರಂಭಿಸುವ ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್', ಮರುದಿನ ಬೆಳಗ್ಗೆ 8.15ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತದೆ.
ಈಗಾಗಲೇ, ನೂತನ ಏರ್ಪೋರ್ಟ್ ನಲ್ಲಿ ವಿಮಾನ ಸೇವೆ ಶುರುವಾಗಿ ಖುಷಿಯಲ್ಲಿರುವ ಶಿವಮೊಗ್ಗ ಜಿಲ್ಲೆಯ ಜನರಿಗೂ ರೈಲ್ವೆ ಇಲಾಖೆಯಿಂದ ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆ. ಡಿಸೆಂಬರ್ ವೇಳೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಆರಂಭಿಸಬಹುದು. ಅದಕ್ಕಾಗಿ ಎಲ್ಲ ಸಿದ್ದತೆಗಳು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ, ಮಲೆನಾಡಿನ ಜನರಿಗೆ ಸಾಕಷ್ಟು ಪ್ರಯಾಣದ ಸಮಯ ಉಳಿತಾಯವಾಗುತ್ತದೆ.
ಪ್ರಸ್ತುತ ಕರ್ನಾಟಕದಲ್ಲಿ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಗಳೂರು - ಹುಬ್ಬಳ್ಳಿ - ಧಾರವಾಡ ನಡುವೆ ಒಂದು ರೈಲು ಸಂಚರಿಸುತ್ತಿದೆ ಮತ್ತೊಂದು, ಚೆನ್ನೈ - ಬೆಂಗಳೂರು - ಮೈಸೂರು ಮಾರ್ಗದಲ್ಲಿ ಓಡಾಡುತ್ತಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಾಕಷ್ಟು ಅತ್ಯಾಧುನಿಕವಾಗಿದ್ದು, ಸ್ವಯಂಚಾಲಿತ ಬಾಗಿಲು ಹಾಗೂ ಸಂಪೂರ್ಣ ಎಸಿ ವ್ಯವಸ್ಥೆಯನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications