ಪ್ರಪಂಚ ಸುತ್ತಲು 'Mahindra Scorpio N'ನಲ್ಲಿ ಬೈ ರೋಡ್ ಹೊರಟ ಕನ್ನಡಿಗ: 1 ಲಕ್ಷ ಕಿ.ಮೀ ಗುರಿ

ಪ್ರತಿಯೊಬ್ಬರಿಗೂ ವಿಶ್ವದಲ್ಲಿರುವ ನಾನಾ ದೇಶಗಳನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕೆಂಬ ಕನಸಿರುತ್ತದೆ. ಎಷ್ಟೋ ಮಂದಿ ಅದನ್ನು ನನಸು ಮಾಡಿಕೊಳ್ಳಲು ಪಯತ್ನಿಸಿ, ಅದರಲ್ಲಿ ಸಫಲರಾಗುತ್ತಾರೆ. ಬಹುತೇಕರಿಗೆ ಇದು ಸಾಧ್ಯವಾಗುವುದಿಲ್ಲ. ಆದರೆ, ದಕ್ಷಿಣ ಕನ್ನಡದ ಯುವಕನೊಬ್ಬ ರಸ್ತೆ ಮೂಲಕವೇ ಪ್ರಪಂಚ ಸುತ್ತಲು ತೀರ್ಮಾನಿಸಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆಸಿದ್ದಾರೆ.

ಪುತ್ತೂರು ಮೂಲದ ಮುಹಮ್ಮದ್ ಸಿನಾನ್ ಎಂಬ ಯುವಕ ಹೊಸದೊಂದು ದಾಖಲೆ ಬರೆಯಲು ಮುಂದಾಗಿದ್ದಾರೆ. ಇದೇ ತಿಂಗಳ 29ರಿದ ತಮ್ಮ ಪ್ರಯಾಣವನ್ನು ಶುರು ಮಾಡಲಿದ್ದು, ಮಂಗಳೂರು ಮೂಲಕ ದುಬೈಗೆ ತೆರಳಲಿದ್ದಾರೆ. ಆ ನಂತರ, ಬರೋಬ್ಬರಿ 74 ದೇಶಗಳನ್ನು ಬೈ ರೋಡ್ ನಲ್ಲಿಯೇ ಸುತ್ತಲಿದ್ದು, ಸುಮಾರು 2 ವರ್ಷಗಳ ಅವಧಿಗೆ 1 ಲಕ್ಷಕ್ಕೂ ಹೆಚ್ಚು ಕಿಲೋಮೀಟರ್ ಕ್ರಮಿಸಲು ಗುರಿ ಹಾಕಿಕೊಂಡಿದ್ದಾರೆ. ಇದಕ್ಕೆ 1 ಕೋಟಿ ವ್ಯಯಿಸಲಿದ್ದಾರಂತೆ.

ಪ್ರಪಂಚ ಸುತ್ತಲು Mahindra Scorpio Nನಲ್ಲಿ ಬೈ ರೋಡ್ ಹೊರಟ ಕನ್ನಡಿಗ: 1 ಲಕ್ಷ ಕಿ.ಮೀ ಗುರಿ

ಸುಧೀರ್ಘ ಸುತ್ತಾಟಕ್ಕೆ ಸಿನಾನ್ ಅವರು, ವಿಶೇಷವಾಗಿ ಭಾರತದ ಜನಪ್ರಿಯ ಎಸ್‌ಯುವಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಬಳಕೆ ಮಾಡುತ್ತಿದ್ದಾರೆ. ಇದನ್ನು ಕೊಂಚ ಬದಲಾವಣೆ ಮಾಡಿದ್ದು, ಕಾರಿನ ಸೈಡ್ ನಲ್ಲಿ ಕಾಫಿ ತೋಟ, ಗೊಳಗುಮ್ಮಟ, ಹಂಪಿಯ ಕಲ್ಲಿನ ರಥ, ತಾಜ್ ಮಹಲ್ ಇರುವ ಚಿತ್ರಗಳನ್ನು ಅಂಟಿಸಿದ್ದಾರೆ. ಹಿಂಭಾಗದಲ್ಲಿ 'ಕರ್ನಾಟಕದಿಂದ ಲಂಡನ್ ಗೆ ಪ್ರಯಾಣ' ಎಂದು ಬರೆಯಲಾಗಿದೆ.

ಕಾರಿನ ಒಳಭಾಗದ ಕ್ಯಾಬಿನ್ ವಿನ್ಯಾಸದಲ್ಲೂ ಪ್ರವಾಸಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಫ್ರಂಟ್ ಎರಡು ಸೀಟುಗಳಿವೆ. ರೇರ್ ಭಾಗದಲ್ಲಿ ಇರುವ ಸೀಟ್ ಗಳನ್ನು ತೆಗೆದು ನಿದ್ರಿಸಲು ಹಾಗೂ ಲೆಗೇಜ್ ಇಟ್ಟುಕೊಳ್ಳಲು ಸಾಧ್ಯವಾಗುವಂತೆ ರೆಡಿ ಮಾಡಲಾಗಿದೆ. ಕೆಲವೊಂದು ದೇಶಗಳಿಗೆ ತೆರಳಿದಾಗ ವಸತಿ ಗೃಹಗಳ ಸಮಸ್ಯೆ ಎದುರಾದ್ರೆ ಕಾರಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಪ್ರಪಂಚ ಸುತ್ತಲು Mahindra Scorpio Nನಲ್ಲಿ ಬೈ ರೋಡ್ ಹೊರಟ ಕನ್ನಡಿಗ: 1 ಲಕ್ಷ ಕಿ.ಮೀ ಗುರಿ

'ಯಾರು ಕೂಡ ಈವರೆಗೆ ಒಂದೇ ಸಮನೇ ಕಾರಿನಲ್ಲಿ ಇಷ್ಟೊಂದು ದೇಶಗಳಿಗೆ ಪ್ರಯಾಣ ಮಾಡಿಲ್ಲ. ನಾನು ಈ ಕೆಲಸಕ್ಕೆ ಕೈ ಹಾಕಿದ್ದೇನೆ. ಸುತ್ತಾಟದಲ್ಲಿ ಹಲವು ಸವಾಲುಗಳಿವೆ. ಅದನ್ನೆಲ್ಲ ಎದುರಿಸುತ್ತೇನೆ ಎಂಬ ನಂಬಿಕೆ ಇದೆ' ಎಂದು ಮುಹಮ್ಮದ್ ಸಿನಾನ್ ಹೇಳುತ್ತಾರೆ. ವೃತ್ತಿಯಲ್ಲಿ ಇಂಟಿರಿಯರ್‌ ಡಿಸೈನರ್ ಆಗಿರುವ ಇವರು, ಯುಕೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಪಂಚ ಸುತ್ತಲೂ ಕಳೆದ ಎರಡು ತಿಂಗಳಿಂದ ತಯಾರಿ ನಡೆಸುತ್ತಿದ್ದಾರೆ.

ಮುಹಮ್ಮದ್ ಸಿನಾನ್ ವಿಶ್ವಪರ್ಯಟನೆಗೆ ಆಯ್ಕೆ ಮಾಡಿಕೊಂಡಿರುವ ಮಹೀಂದ್ರಾ ಸ್ಕಾರ್ಪಿಯೋ ಎನ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, ಇದು ರೂ.13.05 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಟಾಪ್ ಎಂಡ್ ಮಾದರಿ ರೂ.24.51 ಲಕ್ಷ ಬೆಲೆಯನ್ನು ಹೊಂದಿದೆ. 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್, 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಇನ್ನು, ಪುತ್ತೂರು ಮೂಲದ ಈ ಯುವಕ ಮುಹಮ್ಮದ್ ಸಿನಾನ್ ಪ್ರಪಂಚ ಸುತ್ತುವ ಮೂಲಕ ಕರ್ನಾಟಕದ ಹಿರಿಮೆಯನ್ನು ಸಾರುವ ಬಯಕೆಯನ್ನು ಹೊಂದಿದ್ದಾರೆ. ಅದಕ್ಕಾಗಿ ಅತ್ಯಾಧುನಿಕವಾಗಿ ಸೌಲಭ್ಯವುಳ್ಳ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಆಯ್ಕೆ ಮಾಡಿರುವುದು ಮತ್ತಷ್ಟು ವಿಶೇಷವಾಗಿದೆ. 2018ರಲ್ಲಿ ವಿಶ್ವಪರ್ಯಟನೆ ಮಾಡುವ ಕನಸು ಕಂಡಿದ್ದ ಸಿನಾನ್ ಅವರಿಗೆ ಕೊರೋನಾ ಸೋಂಕಿನ ಕಾರಣ, ಅದು ತಡವಾಗಿದೆಯಂತೆ. ಹೋಗುವ ಎಲ್ಲ ದೇಶಗಳಲ್ಲಿ ಕನ್ನಡದ ಕಂಪು ಹರಡಲಿ ಎಂದು ಆಶಿಸೋಣ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, May 4, 2023, 10:57 [IST]
English summary
Karnataka to london trip by road mahindra scorpio n details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+