ಡಿ ಬಾಸ್ ಕಾಟೇರ ಸಕ್ಸಸ್: ಚಿತ್ರದ ಯಶಸ್ಸಿನ ಹಿಂದಿನ ಶ್ರಮಿಕರಿಗೆ ಕಾರ್​ ಗಿಫ್ಟ್​

ಚಾಲೆಂಜಿಂಗ್​ ಸ್ಟಾರ್​ ದರ್ಶನ್ (Challenging Star Darshan)​ ನಟನೆಯ 'ಕಾಟೇರ' (Katera) ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಧೂಳೆಬ್ಬಿಸಿತು. ಬಾಕ್ಸ್ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ನಟ ದರ್ಶನ್​​ಗೂ ಬಿಗ್ ಸಕ್ಸಸ್​ ತಂದು ಕೊಟ್ಟಿತು. ಇದೀಗ ಸಿನಿಮಾ 100 ದಿನಗಳನ್ನು ಪೂರೈಸಿದ ಖುಷಿಯನ್ನು ಚಿತ್ರತಂಡ ವಿಶೇಷವಾಗಿ ಸಂಭ್ರಮಿಸಿದೆ.

ಚಿತ್ರ ಶತದಿನೋತ್ಸವ ಕಂಡ ಬೆನ್ನಲ್ಲೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rock Line Venkatesh) ಅವರು ರಾಕ್​ಮಾಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರು ಮಾತನಾಡಿ, ಎಲ್ಲರೂ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದರು. ಅದೇ ರೀತಿ ಸೂರಜ್​ ಕೂಡ ಒಳ್ಳೆಯ ಪಾತ್ರ ಮಾಡಿದರು. ಆದರೆ ಚಿತ್ರೀಕರಣ ಮುಗಿದ ಬಳಿಕ ಅವರಿಗೆ ಅಪಘಾತ ಸಂಭವಿಸಿತು.

Rockline Venkatesh Gifted Maruti swift

ಜಡೇಶ್​, ಮಾಸ್ತಿ ಮತ್ತು ಸೂರಜ್​ ಅವರನ್ನು ಗಮನದಲ್ಲಿ ಇಟ್ಟುಕೊಂಡು ಇವರಿಗೆ ಕಾರುಗಳನ್ನು ಉಡುಗೊರೆ ನಾನು, ದರ್ಶನ್​ ಮತ್ತು ತರುಣ್​ ಸೇರಿ ನಿರ್ಧಾರಕ್ಕೆ ಬಂದೆವು. 100 ದಿನದ ಸಂಭ್ರಮವನ್ನು ಎಲ್ಲೋ ಆಡಿಟೋರಿಯಂನಲ್ಲಿ ಮಾಡುವ ಬದಲು ಈ ಮೂವರಿಗೆ ಕಾರು ನೀಡಿ ಸಂಭ್ರಮಿಸೋಣ ಎಂದು ನಮಗೆ ಅನಿಸಿತು. ಮಾಸ್ತಿ, ಜಡೇಶ್​ ಹಾಗೂ ಸೂರಜ್​ ಅವರಿಗೆ ಶುಭವಾಗಲಿ. ಅವರು ಶ್ರದ್ಧೆಯಿಂದ ಮಾಡಿದ ಕೆಲಸಕ್ಕಾಗಿ ಅವರಿಗೆ ಚಿಕ್ಕ ಕಾಣಿಕೆ' ಎಂದು ರಾಕ್​ಲೈನ್​ ವೆಂಕಟೇಶ್​ ಹೇಳಿದರು.

ಕಾಟೇರ ಚಿತ್ರಕಥೆ ಬರೆದ ಜಡೇಶ್ ಹಂಪಿ, ಸಂಭಾಷಣೆಗಾರ ಮಾಸ್ತಿ, ಹಾಗೂ ನಟ ಸೂರಜ್ ಅವರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರು ನೀಡಿದ್ದಾರೆ. ಕಾಟೇರ ಸಿನಿಮಾ ಒಟಿಟಿಗೆ ಬಂದಿದ್ದು, ಸಿನಿಮಾ ನೋಡಿ ಜನರು ಎಂಜಾಯ್ ಮಾಡುತ್ತಿದ್ದಾರೆ. ಕಾಟೇರ ಸಿನಿಮಾ ಸೂಪರ್​ ಹಿಟ್ ಆದ ಬಳಿಕ ಕಾಟೇರ 2 ಬರುತ್ತಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದಕ್ಕೆ ಕಾಟೇರ 2 ಬರಲ್ಲ ಎಂದು ನಟ ದರ್ಶನ್ ಉತ್ತರಿಸಿದ್ದಾರೆ.

Rockline Venkatesh Gifted Maruti swift

ರಾಕ್​ಲೈನ್​ ವೆಂಕಟೇಶ್​​ ಕಲಾವಿದರಿಗೆ ಕೊಟ್ಟ ಕಾರು ಬಗ್ಗೆ ಹೇಳುವುದಾದರೆ, ಇದು ಮಾರುತಿ ಸ್ವಿಫ್ಟ್ ಆಗಿದೆ. ಈ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.624,451 ಆಗಿದ್ದರೆ, ಆನ್ ರೋಡ್ ಬೆಲೆಯು ರೂ.7,57,226 ಆಗಿದೆ. ಇನ್ನು ಇದರ ಇತರ ರೂಪಾಂತರ ಬೆಲೆಗಳು ಇನ್ನು ದುಬಾರಿಯಾಗಿದೆ. ಅವರು ಸ್ವಿಫ್ಟ್ ಕಾರಿನ ಯಾವ ರೂಪಾಂತರವನ್ನು ನೀಡಿದ್ದಾರ್ ಎಂಬ ಮಾಹಿತಿ ಇಲ್ಲ.

ಈ ಮಾರುತಿ ಸ್ವಿಫ್ಟ್ (Maruti swift) ಕಾರು ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಸಾಲಿಡ್ ಫೈರ್ ರೆಡ್ ಸೇರಿದಂತೆ 3 - ಡುಯಲ್ ಟೋನ್, 6 - ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಜೊತೆಗೆ 5 ಸೀಟ್ ವ್ಯವಸ್ಥೆಯನ್ನು ಹೊಂದಿದೆ. ಈ ಮಾರುತಿ ಸ್ವಿಫ್ಟ್ ಕಾರು, 1.2 - ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ.

Rockline Venkatesh Gifted Maruti swift

ಇದು ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್, 5 - ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಸ್ವಿಫ್ಟ್ ಪೆಟ್ರೋಲ್ ರೂಪಾಂತರಗಳು 22.38 ಕಿ.ಮೀ - 22.56 ಕಿ.ಮೀ, ಸಿಎನ್‌ಜಿ ರೂಪಾಂತರಗಳು 30.90 ಕಿ.ಮೀ ಮೈಲೇಜ್ ನೀಡುತ್ತವೆ. ಇದರೊಂದಿಗೆ 268 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಈ ಮಾರುತಿ ಸ್ವಿಫ್ಟ್ ವಿನ್ಯಾಸ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿದ್ದು, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೈಟ್ - ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿವೆ. ಸುರಕ್ಷತೆಯಲ್ಲಿಯೂ ಮಾರುತಿ ಸುಜುಕಿ ಸ್ವಿಫ್ಟ್ ಅತ್ಯಾಧುನಿಕವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್, EBD, ABS, ಹಿಲ್-ಹೋಲ್ಡ್ ಕಂಟ್ರೋಲ್‌, ESC, ಫ್ರಂಟ್ & ರೇರ್ ಪಾರ್ಕಿಂಗ್ ಸೇನಾರ್ಸ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, May 3, 2024, 13:42 [IST]
English summary
Katera producer rockline venkatesh gifted maruti swift car for artists details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+