ಸೂಪರ್‌ಬೈಕಿನ ಎಂಜಿನ್‌ನಿಂದ ಅಭಿವೃದ್ಧಿಗೊಂಡ ಮಾನವರಹಿತ ಹೆಲಿಕಾಪ್ಟರ್

ಖ್ಯಾತ ಬೈಕ್ ತಯಾರಕ ಕಂಪನಿಯಾದ ಕವಾಸಕಿ ಹೊಸ ಮಾನವರಹಿತ ಹೆಲಿಕಾಪ್ಟರ್ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಕವಾಸಕಿ ಕಂಪನಿಯು ಈ ಹೆಲಿಕಾಪ್ಟರ್ ನಲ್ಲಿ ತನ್ನ ನಿಂಜಾ ಹೆಚ್ 2 ಆರ್ ಸೂಪರ್‌ಬೈಕ್ ಎಂಜಿನ್‌ ಅನ್ನು ಅಳವಡಿಸಿದೆ.

ಸೂಪರ್‌ಬೈಕಿನ ಎಂಜಿನ್‌ನಿಂದ ಅಭಿವೃದ್ಧಿಗೊಂಡ ಮಾನವರಹಿತ ಹೆಲಿಕಾಪ್ಟರ್

ಕೆ-ರೇಜರ್ ಎಂದು ಕರೆಯಲ್ಪಡುವ ಈ ಹೆಲಿಕಾಪ್ಟರ್ ಅನ್ನು ಹಲವಾರು ರೀತಿಯ ವಿನೂತನ ಫೀಚರ್'ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಹೊಸ ಹೆಲಿಕಾಪ್ಟರ್ ಪರೀಕ್ಷೆಯ ಆರಂಭಿಕ ಹಂತವು ಮಹತ್ವದ್ದಾಗಿದೆ ಎಂದು ಕವಾಸಕಿ ಕಂಪನಿ ಹೇಳಿದೆ.

ಸೂಪರ್‌ಬೈಕಿನ ಎಂಜಿನ್‌ನಿಂದ ಅಭಿವೃದ್ಧಿಗೊಂಡ ಮಾನವರಹಿತ ಹೆಲಿಕಾಪ್ಟರ್

ಈ ಹೆಲಿಕಾಪ್ಟರ್ ನಲ್ಲಿ ಇತರ ಹೆಲಿಕಾಪ್ಟರ್‌ಗಳಂತೆ 4 ಮೀಟರ್ ರೋಟರ್ ಅನ್ನು ಮೇಲ್ಮೈಯಲ್ಲಿ ಜೋಡಿಸಲಾಗಿದೆ. ಆದರೆ ಹಿಂಭಾಗದಲ್ಲಿ ಯಾವುದೇ ರೋಟರ್ ಅಳವಡಿಸಿಲ್ಲ. ಬದಲಿಗೆ ಒಂದು ರೆಕ್ಕೆಯನ್ನು ನೀಡಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸೂಪರ್‌ಬೈಕಿನ ಎಂಜಿನ್‌ನಿಂದ ಅಭಿವೃದ್ಧಿಗೊಂಡ ಮಾನವರಹಿತ ಹೆಲಿಕಾಪ್ಟರ್

ಈ ಹೆಲಿಕಾಪ್ಟರ್ ಅನ್ನು ಸಣ್ಣ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಮಿಶ್ರಣದಂತೆ ವಿನ್ಯಾಸಗೊಳಿಸಲಾಗಿದೆ. ಮೇಲ್ಭಾಗದಲ್ಲಿರುವ ರೋಟರ್ ಜೊತೆಗಿರುವ ಲ್ಯಾಟರಲ್ ರೋಟರ್‌ಗಳು ಮುಂದೆ ಚಲಿಸುವ ಸಾಮರ್ಥ್ಯವನ್ನು ನೀಡುತ್ತವೆ.

ಸೂಪರ್‌ಬೈಕಿನ ಎಂಜಿನ್‌ನಿಂದ ಅಭಿವೃದ್ಧಿಗೊಂಡ ಮಾನವರಹಿತ ಹೆಲಿಕಾಪ್ಟರ್

ಈ ಹೊಸ ಕೆ ರೇಜರ್ ಹೆಲಿಕಾಪ್ಟರ್‌ನಲ್ಲಿರುವ ಪ್ರಮುಖ ಲಕ್ಷಣವೆಂದರೆ ಕವಾಸಕಿಯ ಜನಪ್ರಿಯ ನಿಂಜಾ ಹೆಚ್ 2 ಆರ್ ಬೈಕಿನಲ್ಲಿರುವ ಎಂಜಿನ್ ಅನ್ನು 300 ಹೆಚ್‌ಪಿಗೆ ಸರಿ ಹೊಂದುವ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸೂಪರ್‌ಬೈಕಿನ ಎಂಜಿನ್‌ನಿಂದ ಅಭಿವೃದ್ಧಿಗೊಂಡ ಮಾನವರಹಿತ ಹೆಲಿಕಾಪ್ಟರ್

ಈ ರೀತಿಯ ಹೆಲಿಕಾಪ್ಟರ್ ಹೊಸ ರೋಟರ್ ವ್ಯವಸ್ಥೆಯ ಮೂಲಕ ಸಾಮಾನ್ಯ ಹೆಲಿಕಾಪ್ಟರ್'ಗಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವ ಅವಕಾಶವನ್ನು ಒದಗಿಸುತ್ತದೆ ಎಂದು ವರದಿಯಾಗಿದೆ.

ಸೂಪರ್‌ಬೈಕಿನ ಎಂಜಿನ್‌ನಿಂದ ಅಭಿವೃದ್ಧಿಗೊಂಡ ಮಾನವರಹಿತ ಹೆಲಿಕಾಪ್ಟರ್

ಈ ಹೆಲಿಕಾಪ್ಟರ್ ನ ಪರೀಕ್ಷೆಗಳು ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರವೇ ಈ ಹೆಲಿಕಾಪ್ಟರ್ ಎಷ್ಟು ವೇಗದ ಟಚ್ ಪವರ್ ಹೊಂದಿದೆ ಎಂದು ಕಂಡು ಬರಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸೂಪರ್‌ಬೈಕಿನ ಎಂಜಿನ್‌ನಿಂದ ಅಭಿವೃದ್ಧಿಗೊಂಡ ಮಾನವರಹಿತ ಹೆಲಿಕಾಪ್ಟರ್

ಕೆ ರೇಜರ್ ಹೆಲಿಕಾಪ್ಟರ್ ಅನ್ನು ಸದ್ಯಕ್ಕೆ ಡೆಮೋ ಮಾದರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹೆಲಿಕಾಪ್ಟರ್ ಅನ್ನು ಮಾನವರಹಿತವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಸೂಪರ್‌ಬೈಕಿನ ಎಂಜಿನ್‌ನಿಂದ ಅಭಿವೃದ್ಧಿಗೊಂಡ ಮಾನವರಹಿತ ಹೆಲಿಕಾಪ್ಟರ್

ನೇರವಾಗಿ ನೆಲದ ಮೇಲೆ ಹಾರುವ ಟೆಕ್ನಾಲಜಿ, ಮಾನವರಹಿತ ವೈಮಾನಿಕ ವಾಹನ ಹಾಗೂ ಪೈಲಟ್-ಚಾಲಿತ ಟೆಕ್ನಾಲಜಿಗಳ ದತ್ತಾಂಶದ ಆಧಾರದ ಮೇಲೆ ನಿರಂತರವಾಗಿ ಪರೀಕ್ಷಿಸಲಾಗುತ್ತಿದೆ ಎಂದು ವರದಿಯಾಗಿದೆ.

Most Read Articles

Kannada
English summary
Kawasaki develops K Racer helicopter with Ninja H2R bike engine. Read in Kannada.
Story first published: Tuesday, November 17, 2020, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X