ಕುಡಿದ ಮತ್ತಿನಲ್ಲಿ ಸೂಪರ್ ಬೈಕ್ ಸವಾರನಿಗೆ ಸವಾಲೊಡ್ಡಿದ ಸ್ಕೂಟರ್ ಸವಾರ

ಭಾರತದಲ್ಲಿ ಸೂಪರ್ ಬೈಕ್ ಅಥವಾ ಸೂಪರ್ ಕಾರುಗಳನ್ನು ಚಾಲನೆ ಮಾಡುವುದು ಸವಾಲಿನ ಕೆಲಸ. ಸೂಪರ್ ಬೈಕ್ ಅಥವಾ ಸೂಪರ್ ಕಾರುಗಳನ್ನು ಕಂಡೊಡನೆ ಜನರು ಅವುಗಳಿಗೆ ಸವಾಲೊಡ್ಡುತ್ತಾರೆ. ಸಾರ್ವಜನಿಕ ರಸ್ತೆಗಳ ಮೇಲೆ ರೇಸ್ ಮಾಡುವುದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ.

ಕುಡಿದ ಮತ್ತಿನಲ್ಲಿ ಸೂಪರ್ ಬೈಕ್ ಸವಾರನಿಗೆ ಸವಾಲೊಡ್ಡಿದ ಸ್ಕೂಟರ್ ಸವಾರ

ಕೆಲವೊಮ್ಮೆ ರೇಸ್‌ಗಿಳಿಯುವ ಜನರ ಮಧ್ಯೆ ಮಾತಿನ ಚಕಮಕಿ ನಡೆದು ಜಗಳವಾಗುವ ಸಾಧ್ಯತೆಗಳಿರುತ್ತವೆ. ಈಗ ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ವೀಡಿಯೊದಲ್ಲಿ ಹೋಂಡಾ ಆಕ್ಟಿವಾ ಚಾಲಕ ಕವಾಸಕಿ ನಿಂಜಾ ಸೂಪರ್ ಬೈಕಿಗೆ ಸವಾಲೊಡ್ಡಿದ್ದಾನೆ. ನಂತರ ಬೈಕ್ ಸವಾರನನ್ನು ಬೆದರಿಸಿ, ನಿಂದಿಸಿದ್ದಾನೆ.

ಕುಡಿದ ಮತ್ತಿನಲ್ಲಿ ಸೂಪರ್ ಬೈಕ್ ಸವಾರನಿಗೆ ಸವಾಲೊಡ್ಡಿದ ಸ್ಕೂಟರ್ ಸವಾರ

ಈ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವೀಡಿಯೊವನ್ನು ಬೈಕ್ ಸವಾರ ರೆಕಾರ್ಡ್ ಮಾಡಿದ್ದು, ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾನೆ. ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿರುವ ಇಬ್ಬರು, ಬೈಕ್‌ ಸವಾರನಿಗೆ ಸವಾಲೊಡ್ಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕುಡಿದ ಮತ್ತಿನಲ್ಲಿ ಸೂಪರ್ ಬೈಕ್ ಸವಾರನಿಗೆ ಸವಾಲೊಡ್ಡಿದ ಸ್ಕೂಟರ್ ಸವಾರ

ಸ್ಕೂಟರ್ ಸವಾರನು ಹಲವು ಬಾರಿ ಬೈಕ್ ಸವಾರನನ್ನು ತಡೆದು ಪದೇ ಪದೇ ಮುಂದೆ ಬರುತ್ತಾನೆ. ಕವಾಸಕಿ ನಿಂಜಾ ಬೈಕ್ ಸವಾರ ಹಾಗೂ ಸ್ಕೂಟರ್‌ನಲ್ಲಿರುವವರ ಮಧ್ಯೆ ಹಲವು ಬಾರಿ ಮಾತಿನ ಚಕಮಕಿ ನಡೆಯುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ಸಮಯದಲ್ಲಿ ಅಲ್ಲಿಗೆ ಬರುವ ಪೊಲೀಸರು ಇಬ್ಬರನ್ನೂ ಸಮಾಧಾನ ಪಡಿಸಲು ಯತ್ನಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಸೂಪರ್ ಬೈಕ್ ಸವಾರನಿಗೆ ಸವಾಲೊಡ್ಡಿದ ಸ್ಕೂಟರ್ ಸವಾರ

ಸ್ಕೂಟರ್ ಸವಾರನು ಕುಡಿದು ಗಲಾಟೆ ಮಾಡಿ ಬೈಕ್ ಸವಾರನನ್ನು ಅಡ್ಡಗಟ್ಟಿದ್ದಾನೆ. ಬೈಕ್ ಸವಾರ ತನ್ನ ಮೊಬೈಲ್ ಫೋನ್‌ನಿಂದ 100ಕ್ಕೆ ಡಯಲ್ ಮಾಡಿದರೂ ಸಂಪರ್ಕ ಸಾಧ್ಯವಾಗಿಲ್ಲ. 5 ಲಕ್ಷ ಬೆಲೆ ಬಾಳುವ ಬೈಕ್ ತನ್ನ ತನ್ನ ಸ್ಕೂಟರ್ ಮುಂದೆ ಸೋಲುತ್ತಿದೆ ಎಂದು ಸ್ಕೂಟರ್ ಸವಾರನು ಪದೇ ಪದೇ ಬೈಕ್ ಸವಾರನನ್ನು ಛೇಡಿಸುತ್ತಾನೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಬೈಕ್ ಸವಾರ 100ಕ್ಕೆ ಕರೆ ಮಾಡುವುದನ್ನು ನೋಡಿದ ಸ್ಕೂಟರ್ ಸವಾರನು ಅಲ್ಲಿಂದ ಹೊರಟು ಹೋಗುತ್ತಾನೆ. ಹೋಗುವ ಮುನ್ನ ಬೈಕ್ ಸವಾರನಿಗೆ ಸಾಹಿಬ್ ಗುರುದ್ವಾರದಲ್ಲಿ ಪಾಠ ಕಲಿಸುವುದಾಗಿ ಹೇಳುತ್ತಾನೆ.

ಕುಡಿದ ಮತ್ತಿನಲ್ಲಿ ಸೂಪರ್ ಬೈಕ್ ಸವಾರನಿಗೆ ಸವಾಲೊಡ್ಡಿದ ಸ್ಕೂಟರ್ ಸವಾರ

ಇದು ಈ ಸೂಪರ್ ಬೈಕ್‌ ಸವಾರನೊಬ್ಬನ ಕಥೆಯಲ್ಲ. ಬಹುತೇಕ ಬೈಕ್ ಸವಾರರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನೀವು ಸೂಪರ್ ಬೈಕ್ ಚಾಲನೆ ಮಾಡುತ್ತಿದ್ದರೆ, ಯಾರೊಂದಿಗೂ ಸ್ಪರ್ಧೆಗಿಳಿಯದಿರುವುದು ಉತ್ತಮ. ಈ ರೇಸ್ ರಸ್ತೆಯಲ್ಲಿ ಓಡುವ ಇತರರ ಜೀವಕ್ಕೆ ಅಪಾಯವನ್ನುಂಟು ಮಾಡಬಲ್ಲದು. ಸವಾಲೊಡ್ಡುವವರನ್ನು ನಿರ್ಲಕ್ಷಿಸುವುದು ಒಳ್ಳೆಯದು.

Article Published On: Sunday, June 14, 2020, 10:55 [IST]
English summary
Kawasaki Ninja Super Bike rider challenged by drunken Honda Activa rider. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+