ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ 1 ಕೋಟಿ ನಗದು, ಕಾರು ಗೆದ್ದ ಮೊದಲ ಮಹಿಳೆ

ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ ಕೋಟಿ ರೂಪಾಯಿಗಳನ್ನು ಬಹುಮಾನದ ಮೊತ್ತವಾಗಿ ನೀಡಲಾಗುತ್ತದೆ, ಈ ಬಾರಿಯ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ರಿಯಾಲಿಟಿ ಶೋನಲ್ಲಿ ಕವಿತಾ ಚಾವ್ಲಾ ಎಂಬ ಮಹಿಳೆ 1 ಕೋಟಿ ರೂ. ಗೆದ್ದಿದ್ದಾರೆ.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

ಈ ಸೀಸನ್ ನಲ್ಲಿ 1 ಕೋಟಿ ರೂ. ಗೆದ್ದ ಮೊದಲ ವ್ಯಕ್ತಿ ಇವರೇ ಎಂದು ಶೋನ ನಿರೂಪಕರಾದ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಹೇಳಿದ್ದಾರೆ. ಕವಿತಾ ಚಾವ್ಲಾ ಅವರು 1 ಕೋಟಿ ರೂ. ಜೊತೆ ಹೊಚ್ಚಹೊಸ ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್ ಅನ್ನು ಸಹ ಗೆದ್ದಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದ ಈ ಗೃಹಿಣಿ,ಕೆಬಿಸಿ ಶುರುವಾದಾಗಿನಿಂದಲೂ ಈ ಶೋನಲ್ಲಿ ಭಾಗವಹಿಸಬೇಕು ಎಂದು ಕನಸು ಕಾಣುತ್ತಿದ್ದರಂತೆ. ಕಳೆದ ವರ್ಷದ ಆಡಿಷನ್ ನಲ್ಲಿ ಭಾಗವಹಿಸಿದ್ದರೂ ಅಂತಿಮ ಸುತ್ತಿಗೆ ಪ್ರವೇಶ ಸಿಕ್ಕಿರಲಿಲ್ಲ. ಆದರೆ ಅಂದೇ ಅವರು ಕೆಬಿಸಿಯಲ್ಲಿ ಕೋಟಿ ರೂ. ಗೆಲ್ಲಲೇಬೇಕು ಎಂಬ ದೃಢ ನಿರ್ಧಾರ ಈಗ ನನಸಾಗಿದೆ.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

1 ಕೋಟಿ ರೂ. ಗೆದ್ದ ಕೂಡಲೇ ಅವರಿಗೆ ಬಂದಿದ್ದು ಏಳೂವರೆ ಕೋಟಿಯ ಪ್ರಶ್ನೆ. ಈ ಪ್ರಶ್ನೆಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕವಿತಾ ಚಾವ್ಲಾ, ನನಗೆ ಕ್ರಿಕೆಟ್ ಬಗ್ಗೆ ಹೆಚ್ಚು ಗೊತ್ತಿಲ್ಲ. ಹಾಗಾಗಿ, ನಾನು ಕ್ವಿಟ್ ಮಾಡುತ್ತೇನೆ ಎಂದರು. ಈ ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದರೆ ಅವರ ಬಹುಮಾನದ ಮೊತ್ತ 75 ಲಕ್ಷ ರೂ.ಗಳಿಗೆ ಇಳಿಯುತ್ತಿತ್ತು.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

1 ಕೋಟಿ ರೂ. ಬಹುಮಾನದ ಸಾಧನೆ ಮಾಡಿದ್ದಕ್ಕಾಗಿ ಶೋನ ನಿಯಮದಂತೆ ಅವರಿಗೆ ಹುಂಡೈ ಐ20 ಕಾರನ್ನು ಕೂಡ ಬಹುಮಾನವಾಗಿ ನೀಡಲಾಯಿತು. ಕವಿತಾ ಚಾವ್ಲಾ ಅವರು ಈ ಶೋಗೆ ಬರುವುದಕ್ಕಿಂತ ಮುಂಚೆ ಈ ಶೋನಲ್ಲಿ ಗೆದ್ದು ಬರುವ ಹಣದಲ್ಲಿ ಕಾರು ಖರೀದಿಸಬೇಕು ಎಂದು ಅಂಡುಕೊಂಡಿದ್ದರು. ಅದನ್ನೂ ನೀವೇ ಕೊಟ್ಟುಬಿಟ್ಟಿರಿ ಎಂದು ಬಚ್ಚನ್ ಅವರಿಗೆ ಹೇಳಿದರು.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

ಕವಿತಾ ಚಾವ್ಲಾ ಅವರು ಬಹುಮಾನವಾಗಿ ಪಡೆದುಕೊಂಡ ಹ್ಯುಂಡೈ ಐ20 ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರು ಹೆಚ್ಚು ಸ್ಪೋರ್ಟಿ ಮತ್ತು ಬೋಲ್ಡ್ ಲುಕ್ ಅನ್ನು ಹೊಂದಿದೆ. ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್‌ ಕಾರಿನ ಹಿಂದಿನ ಮಾದರಿಯು ಕೂಡ ಆಕರ್ಷಕ ಲುಕ್ ಅನ್ನು ಹೊಂದಿತ್ತು. ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಹ್ಯುಂಡೈ ಐ20 ಗ್ರಾಹಕರನ್ನು ತನ್ನತ ಸೆಳೆಯುವಂತಹ ಆಕರ್ಷಕ ಲುಕ್ ಮತ್ತು ಸ್ಟೈಲಿಶ್ ನಿಂದ ಹೆಚ್ಚು ಜನಪ್ರಿಯವಾಗಿದೆ.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

ಈ ಹ್ಯುಂಡೈ ಐ20 ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಹೊಂದಿದೆ.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

ಈ ಹುಂಡೈ ಐ20 ಕಾರಿನ ಪಿಲ್ಲರ್‍‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ರೆಡ್ ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇ‍ಲ್‍ಇಡಿ ಟೇಲ್‍‍ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಿದೆ.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

ಈ ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 83 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

ಇನ್ನು ಇದರೊಂದಿಗೆ 1.0ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯು ಕೂಡ ಲಭ್ಯವಿದೆ.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

ಈ ಜನಪ್ರಿಯ ಹ್ಯುಂಡೈ ಐ20 ಕಾರು ಅತ್ಯಾಧುನಿಕ ಫೀಚರ್, ಆಕರ್ಷಕ ವಿನ್ಯಾಸ ಮತ್ತು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ. ಈ ಎಲ್ಲಾ ಕಾರಣದಿಂದ ಈ ಹೊಸ ಹ್ಯುಂಡೈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಇನ್ನು ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಕ್ರೆಟಾ ಎಸ್‍ಯುವಿ ಮತ್ತು ಐ20 ಹ್ಯಾಚ್‌ಬ್ಯಾಕ್ ಇತ್ತೀಚೆಗೆ ಗ್ಲೋಬಲ್ ಎನ್‌ಸಿಎಪಿ (ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದೆ. ಈ ಕ್ರ್ಯಾಶ್ ಟೆಸ್ಟ್‌ನಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿ ಮತ್ತು ಐ20 ಹ್ಯಾಚ್‌ಬ್ಯಾಕ್ 3 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿವೆ.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

ಇನ್ನು ಹುಂಡೈ ಐ20 ಒಟ್ಟು 17 ಅಂಕಗಳಲ್ಲಿ 8.84 ಅಂಕಗಳನ್ನು ಗಳಿಸಿತು. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 3 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಬಾಡಿಶೆಲ್ ಮತ್ತು ಫುಟ್‌ವೆಲ್ ಪ್ರದೇಶವು ಅಸ್ಥಿರವಾಗಿ ಕಂಡುಬಂದಿದೆ ಮತ್ತು ಹೆಚ್ಚಿನ ಹೊರೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ. ಐ20 ಚಾಲಕನ ಎದೆಗೆ ದುರ್ಬಲ ರಕ್ಷಣೆಯನ್ನು ನೀಡುತ್ತದೆ ಮತ್ತು ಚಾಲಕ ಮತ್ತು ಸಹ-ಪ್ರಯಾಣಿಕರ ಮೊಣಕಾಲುಗಳಿಗೆ ಕನಿಷ್ಠ ರಕ್ಷಣೆ ನೀಡುತ್ತದೆ.

ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್‌ನಲ್ಲಿ ರೂ.1 ಕೋಟಿ, ಕಾರು ಗೆದ್ದ ಮೊದಲ ಮಹಿಳೆ

ಈ ಜನಪ್ರಿಯ ಹ್ಯುಂಡೈ ಐ20 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ, ಟಾಟಾ ಆಲ್ಟ್ರೋಜ್, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Kbc contestant kavita chawla won rs 1 crore prize new hyundai i20 hatchback details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X